Psalm 84 - WEB (Kannada)
1 > How lovely are your dwellings, Yahweh of Hosts!ಸೈನ್ಯಗಳ ಓ ಕರ್ತನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!
2 My soul longs, and even faints for the courts of Yahweh. My heart and my flesh cry out for the living God.ಕರ್ತನ ಅಂಗಳ ಗಳಿಗಾಗಿ ನನ್ನ ಪ್ರಾಣವು ಬಯಸಿ, ಹೌದು, ಅದು ಕುಂದುತ್ತದೆ; ನನ್ನ ಹೃದಯವೂ ಶರೀರವೂ ಜೀವ ವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.
3 Yes, the sparrow has found a home, And the swallow a nest for herself, where she may have her young, Near your altars, Yahweh of Hosts, my King, and my God.ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ.
4 Blessed are those who dwell in your house. They are always praising you. Selah.ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು; ಇನ್ನೂ ನಿನ್ನನ್ನು ಅವರು ಸ್ತುತಿಸುವರು ಸೆಲಾ.
5 Blessed are those whose strength is in you; Who have set their hearts on a pilgrimage.ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು.
6 Passing through the valley of Weeping, they make it a place of springs. Yes, the autumn rain covers it with blessings.ಬಾಕಾ ತಗ್ಗನ್ನು ದಾಟುವಾಗ ಅದನ್ನು ಬುಗ್ಗೆಯಾಗಿ ಮಾಡುತ್ತಾರೆ; ಮಳೆಯು ಕೊಳಗಳನ್ನು ತುಂಬುತ್ತದೆ.
7 They go from strength to strength. Everyone of them appears before God in Zion.ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.
8 Yahweh, God of hosts, hear my prayer. Listen, God of Jacob. Selah.ಸೈನ್ಯಗಳ ದೇವರಾದ ಓ ಕರ್ತನೇ, ನನ್ನ ಪ್ರಾರ್ಥನೆ ಯನ್ನು ಕೇಳು; ಯಾಕೋಬನ ಓ ದೇವರೇ, ಕಿವಿ ಗೊಡು ಸೆಲಾ.
9 Behold, God our shield, Look at the face of your anointed.ನಮ್ಮ ಗುರಾಣಿಯಾಗಿರುವ ಓ ದೇವರೇ, ನೋಡು; ನಿನ್ನ ಅಭಿಷಿಕ್ತನ ಮುಖವನ್ನು ದೃಷ್ಟಿಸು.
10 For a day in your courts is better than a thousand. I would rather be a doorkeeper in the house of my God, Than to dwell in the tents of wickedness.ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು.
11 For Yahweh God is a sun and a shield. Yahweh will give grace and glory. He withholds no good thing from those who walk blamelessly.ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.
12 Yahweh of Hosts, Blessed is the man who trusts in you.ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
Kannada Bible