Psalm 75 - WEB (Kannada)
1 > We give thanks to you, God, We give thanks, for your Name is near. Men tell about your wondrous works.ನಿನ್ನನ್ನು ಕೊಂಡಾಡುತ್ತೇವೆ; ಓ ದೇವರೇ, ನಿನ್ನನ್ನು ಕೊಂಡಾಡುತ್ತೇವೆ; ಪ್ರಕಟ ವಾಗುವ ನಿನ್ನ ಅದ್ಭುತ ಕಾರ್ಯಗಳಿಗೆ ನಿನ್ನ ನಾಮವು ಸವಿಾಪವಾಗಿದೆ.
2 When I choose the appointed time, I will judge blamelessly.ನಾನು ಸಭೆಯನ್ನು ಅಂಗೀಕರಿಸು ವಾಗ ಸರಿಯಾಗಿ ನ್ಯಾಯತೀರಿಸುವೆನು;
3 The earth and all its inhabitants quake. I firmly hold its pillars. Selah.ಭೂಮಿಯೂ ಅದರ ನಿವಾಸಿಗಳೆಲ್ಲರೂ ಕರಗಿದ್ದಾರೆ; ನಾನು ಅದರ ಸ್ಥಂಭಗಳನ್ನು ನಿಲ್ಲಿಸುತ್ತೇನೆ ಸೆಲಾ.
4 I said to the arrogant, "Don't boast;" To the wicked, "Don't lift up the horn.ಮೂರ್ಖತನದಿಂದ ವರ್ತಿಸಬೇಡಿರಿ ಎಂದು ಮೂರ್ಖರಿಗೆ ಹೇಳುತ್ತೇನೆ. ಕೊಂಬು ಎತ್ತಬೇಡಿರಿ ಎಂದು ದುಷ್ಟರಿಗೆ ಹೇಳಿದೆನು.
5 Don't lift up your horn on high. Don't speak with a stiff neck."ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ.
6 For neither from the east, nor from the west, Nor yet from the south, comes exaltation.ಉದ್ಧಾರವು ಮೂಡಣದಿಂದಲೂ ಪಡುವಣದಿಂದಲೂ ಅಲ್ಲ; ಇಲ್ಲವೆ ದಕ್ಷಿಣದಿಂದಲೂ ಬರುವದಿಲ್ಲ.
7 But God is the judge. He puts down one, and lifts up another.ಆದರೆ ದೇವರು ನ್ಯಾಯತೀರಿಸುವಾ ತನಾಗಿದ್ದಾನೆ; ಒಬ್ಬನನ್ನು ತಗ್ಗಿಸುತ್ತಾನೆ; ಇನ್ನೊಬ್ಬನನ್ನು ಎತ್ತುತ್ತಾನೆ.
8 For in the hand of Yahweh there is a cup, Full of foaming wine mixed with spices. He pours it out. Indeed the wicked of the earth drink and drink it to its very dregs.ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
9 But I will declare this forever: I will sing praises to the God of Jacob.ಆದರೆ ನಾನು ಎಂದೆಂದಿಗೂ ಪ್ರಕಟಿಸುವೆನು, ಯಾಕೋಬನ ದೇವರ ಸ್ತುತಿಗಳನ್ನು ಹಾಡುವೆನು;
10 I will cut off all the horns of the wicked, But the horns of the righteous shall be lifted up.ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.
Kannada Bible