Bible

Psalm 16 - WEB (Kannada)

1 > Preserve me, God, for in you do I take refuge.ಓ ದೇವರೇ, ನನ್ನನ್ನು ಕಾಪಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ.

2 My soul, you have said to Yahweh, "You are my Lord. Apart from you I have no good thing."ನೀನೇ ನನ್ನ ಕರ್ತನು; ನನ್ನ ಒಳ್ಳೇತನ ನಿನಗೆ ಮಾತ್ರವಲ್ಲದೆ

3 As for the saints who are in the earth, They are the excellent ones in whom is all my delight.ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.

4 Their sorrows shall be multiplied who give gifts to another god. Their drink-offerings of blood I will not offer, Nor take their names on my lips.ಬೇರೆ ದೇವ ರಗಳ ಹಿಂದೆ ತ್ವರೆಪಡುವವರ ವ್ಯಥೆಗಳು ಹೆಚ್ಚಾಗು ವವು. ಅವರ ರಕ್ತದ ಅರ್ಪಣೆಗಳನ್ನು ನಾನು ಅರ್ಪಿ ಸುವದಿಲ್ಲ, ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಎತ್ತೆನು.

5 Yahweh assigned my portion and my cup. You made my lot secure.ಕರ್ತನು ನನ್ನ ಪಾಲಿನ ಮತ್ತು ನನ್ನ ಪಾತ್ರೆಯ ಭಾಗವಾಗಿದ್ದಾನೆ; ನೀನು ನನ್ನ ಸ್ವಾಸ್ತ್ಯವನ್ನು ಸ್ಥಿರವಾಗಿ ಕಾಪಾಡುತ್ತೀ.

6 The lines have fallen to me in pleasant places. Yes, I have a good inheritance.ರಮ್ಯ ಸ್ಥಳಗಳಲ್ಲಿ ನನಗೆ ಪಾಲು ಸಿಕ್ಕಿತು, ಹೌದು, ರಮಣೀಯವಾದ ಬಾಧ್ಯತೆ ನನಗೆ ಅದೆ.

7 I will bless Yahweh, who has given me counsel. Yes, my heart instructs me in the night seasons.ನನಗೆ ಆಲೋಚನೆ ಹೇಳಿದ ಕರ್ತನನ್ನು ನಾನು ಸ್ತುತಿಸುವೆನು, ರಾತ್ರಿಯಲ್ಲಿಯೂ ನನ್ನ ಅಂತರಿಂದ್ರಿ ಯಗಳು ನನಗೆ ಬೋಧಿಸುತ್ತವೆ.

8 I have set Yahweh always before me. Because he is at my right hand, I shall not be moved.ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.

9 Therefore my heart is glad, and my tongue rejoices. My body shall also dwell in safety.ಆದದರಿಂದ ನನ್ನ ಹೃದಯವು ಸಂತೋಷಿಸಿ ನನ್ನ ಹೆಮ್ಮೆಯು ಉಲ್ಲಾಸಪಡುತ್ತದೆ; ನನ್ನ ಶರೀರವು ಸಹ ನಿರೀಕ್ಷೆಯಿಂದ ವಿಶ್ರಾಂತಿಸುವದು.

10 For you will not leave my soul in Sheol, Neither will you allow your holy one to see corruption.ಯಾಕಂದರೆ ನೀನು ನನ್ನ ಆತ್ಮವನ್ನು ನರಕದಲ್ಲಿ ಬಿಟ್ಟುಬಿಡುವದಿಲ್ಲ; ನಿನ್ನ ಪರಿಶುದ್ಧನ ಕೊಳೆಯುವಿಕೆಯನ್ನು ನೋಡ ಗೊಡಿಸುವದಿಲ್ಲ.

11 You will show me the path of life. In your presence is fullness of joy. In your right hand there are pleasures forevermore.ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.

Kannada Bible