Psalm 100:1
ಸಮಸ್ತ ಭೂಮಿಯೇ, ಕರ್ತನಿಗೆ ಜಯಧ್ವನಿ ಮಾಡಿರಿ,
Psalm 100:1 in Other Translations
King James Version (KJV)
Make a joyful noise unto the LORD, all ye lands.
American Standard Version (ASV)
Make a joyful noise unto Jehovah, all ye lands.
Bible in Basic English (BBE)
<A Psalm of Praise.> Make a glad sound to the Lord, all the earth.
Darby English Bible (DBY)
{A Psalm of thanksgiving.} Shout aloud unto Jehovah, all the earth!
World English Bible (WEB)
> Shout for joy to Yahweh, all you lands!
Young's Literal Translation (YLT)
A Psalm of Thanksgiving. Shout to Jehovah, all the earth.
| Make a joyful noise | הָרִ֥יעוּ | hārîʿû | ha-REE-oo |
| Lord, the unto | לַ֝יהוָ֗ה | layhwâ | LAI-VA |
| all | כָּל | kāl | kahl |
| ye lands. | הָאָֽרֶץ׃ | hāʾāreṣ | ha-AH-rets |
Cross Reference
ಕೀರ್ತನೆಗಳು 98:4
ಸಮಸ್ತ ಭೂಮಿಯೇ; ಕರ್ತನಿಗೆ ಉತ್ಸಾಹಧ್ವನಿ ಮಾಡಿರಿ, ಗಟ್ಟಿಯಾದ ಧ್ವನಿಯಿಂದ ಸಂತೋಷಿಸಿ ಕೀರ್ತಿಸಿರಿ.
ಚೆಫನ್ಯ 3:14
ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು.
ಕೀರ್ತನೆಗಳು 66:1
ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ;
ರೋಮಾಪುರದವರಿಗೆ 15:10
ಆತನು ತಿರಿಗಿ--ಅನ್ಯಜನರೇ, ಆತನ ಜನರೊಂದಿಗೆ ಸಂತೋಷಿಸಿರಿ ಎಂದು ಹೇಳುತ್ತಾನೆ.
ಲೂಕನು 19:37
ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--
ಕೀರ್ತನೆಗಳು 47:5
ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ.
ಕೀರ್ತನೆಗಳು 32:11
ನೀತಿವಂತರೇ, ಕರ್ತನಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯಉಳ್ಳವರೇ, ಉತ್ಸಾಹ ಧ್ವನಿಮಾಡಿರಿ.
ಯೆಶಾಯ 42:10
ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.
ಯೆಶಾಯ 24:14
ಅವರು ತಮ್ಮ ಸ್ವರವನ್ನೆತ್ತಿ ಕರ್ತನ ಮಹತ್ತಿನ ನಿಮಿತ್ತ ಹಾಡು ವರು, ಸಮುದ್ರದ ಕಡೆಯಿಂದ ಆರ್ಭಟಿಸುವರು.
ಕೀರ್ತನೆಗಳು 145:1
ಓ ಅರಸನಾದ ನನ್ನ ದೇವರೇ, ನಿನ್ನನ್ನು ಘನಪಡಿಸುವೆನು; ನಿನ್ನ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
ಕೀರ್ತನೆಗಳು 117:1
ಎಲ್ಲಾ ಜನಾಂಗಗಳೇ, ಕರ್ತನನ್ನು ಸ್ತುತಿಸಿರಿ; ಸರ್ವಜನರೇ, ಕರ್ತನನ್ನು ಸ್ತುತಿಸಿರಿ.
ಕೀರ್ತನೆಗಳು 95:1
ಬನ್ನಿರಿ, ಕರ್ತನಿಗೆ ಉತ್ಸಾಹ ಧ್ವನಿಮಾಡುವಾ ನಮ್ಮ ರಕ್ಷಣೆಯ ಬಂಡೆಗೆ ಜಯಧ್ವನಿ ಮಾಡೋಣ.
ಕೀರ್ತನೆಗಳು 68:32
ಭೂಮಿಯ ರಾಜ್ಯಗಳೇ, ನೀವು ದೇವರಿಗೆ ಹಾಡಿರಿ; ಕರ್ತನಿಗೆ ಸ್ತುತಿಗಳನ್ನು ಹಾಡಿರಿ. ಸೆಲಾ.
ಕೀರ್ತನೆಗಳು 67:4
ಜನಾಂಗಗಳು ಸಂತೋಷಪಟ್ಟು ಉತ್ಸಾಹಕ್ಕಾಗಿ ಹಾಡಲಿ; ನೀನು ಜನರನ್ನು ನೀತಿಯಿಂದ ನ್ಯಾಯತೀರಿಸಿ ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀ. ಸೆಲಾ.
ಕೀರ್ತನೆಗಳು 66:4
ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.
ಕೀರ್ತನೆಗಳು 47:1
ಎಲ್ಲಾ ಜನರೇ, ನೀವು ನಿಮ್ಮ ಕೈಗಳನ್ನು ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
ಧರ್ಮೋಪದೇಶಕಾಂಡ 32:43
ಓ ಎಲ್ಲಾ ಜನಾಂಗಗಳೇ, ಆತನ ಜನರ ಸಂಗಡ ಹರ್ಷಿಸಿರಿ; ಆತನು ತನ್ನ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುತ್ತಾನೆ; ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ತನ್ನ ದೇಶಕ್ಕೋಸ್ಕರವೂ ತನ್ನ ಜನರಿಗೋಸ್ಕರವೂ ಕರುಣೆಯುಳ್ಳವನಾಗಿರುವನು ಎಂಬದೇ.
ಜೆಕರ್ಯ 14:9
ಕರ್ತನು ಭೂಮಿಗೆಲ್ಲಾ ಅರಸನಾಗಿರುವನು; ಆ ದಿನದಲ್ಲಿ ಕರ್ತನು ಒಬ್ಬನೇ ಇರುವನು; ಆತನ ಹೆಸರು ಒಂದೇ.