Bible

Proverbs 6:20-34 in Kannada

Proverbs 6:20
ನನ್ನ ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಕಟ್ಟಳೆಯನ್ನು ತ್ಯಜಿಸಬೇಡ.

Proverbs 6:21
ಅವುಗಳನ್ನು ಯಾವಾಗಲೂ ನಿನ್ನ ಹೃದಯಕ್ಕೆ ಬಂಧಿಸು. ನಿನ್ನ ಕಂಠಕ್ಕೆ ಕಟ್ಟಿಕೋ.

Proverbs 6:22
ನೀನು ಹೋಗು ವಾಗ ಅದು ನಿನ್ನನ್ನು ನಡಿಸುವದು; ಮಲಗುವಾಗ ನಿನ್ನನ್ನು ಕಾಯುವದು; ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು.

Proverbs 6:23
ಆಜ್ಞೆಯು ದೀಪವಾಗಿದೆ, ಕಟ್ಟ ಳೆಯು ಬೆಳಕಾಗಿದೆ; ಶಿಕ್ಷಣದ ಗದರಿಕೆಗಳು ಜೀವದ ಮಾರ್ಗವಾಗಿವೆ.

Proverbs 6:24
ಕೆಟ್ಟ ಹೆಂಗಸಿನಿಂದಲೂ ಪರ ಸ್ತ್ರೀಯ ನಾಲಿಗೆಯ ಮುಖಸ್ತುತಿಯಿಂದಲೂ ಅವು ನಿನ್ನನ್ನು ಕಾಪಾಡುವವು.

Proverbs 6:25
ನಿನ್ನ ಹೃದಯದಲ್ಲಿ ಅವಳ ಸೌಂದರ್ಯವನ್ನು ಮೋಹಿಸಬೇಡ; ಇದಲ್ಲದೆ ಅವಳ ಕಣ್ಣುರೆಪ್ಪೆಗಳಿಂದ ನಿನ್ನನ್ನು ಅವಳು ವಶಮಾಡಿಕೊಳ್ಳದೆ ಇರಲಿ.

Proverbs 6:26
ಒಬ್ಬ ವೇಶ್ಯೆಯ ಮೂಲಕ ಮನುಷ್ಯನು ರೊಟ್ಟಿಯ ತುಂಡಿಗೆ ಈಡಾಗುವನು; ವ್ಯಭಿಚಾರಿಣಿಯು ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು.

Proverbs 6:27
ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ತೆಗೆದು ಕೊಂಡರೆ ಅವನ ವಸ್ತ್ರಗಳು ಸುಡುವದಿಲ್ಲವೋ?

Proverbs 6:28
ಒಬ್ಬನು ಧಗಧಗಿಸುವ ಕೆಂಡಗಳ ಮೇಲೆ ನಡೆದರೆ ಅವನ ಪಾದಗಳು ಸುಡುವದಿಲ್ಲವೋ?

Proverbs 6:29
ತನ್ನ ನೆರೆಯವನ ಹೆಂಡತಿಯನ್ನು ಕೂಡುವವನು ಹೀಗೆಯೇ ಇರುವನು; ಅವಳನ್ನು ಮುಟ್ಟುವ ಯಾವನೂ ನಿರಪ ರಾಧಿಯಾಗಿ ಇರನು.

Proverbs 6:30
ಹಸಿದಾಗ ಕಳ್ಳನು ತನ್ನ ಪ್ರಾಣವನ್ನು ತೃಪ್ತಿಪಡಿಸುವದಕ್ಕೆ ಕಳವು ಮಾಡಿದರೆ ಜನರು ಅವನನ್ನು ಹೀಯಾಳಿಸುವದಿಲ್ಲ.

Proverbs 6:31
ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡುವನು; ತನ್ನ ಮನೆಯ ಆಸ್ತಿಯನ್ನೆಲ್ಲಾ ಅವನು ಕೊಡುವನು.

Proverbs 6:32
ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು.

Proverbs 6:33
ಅವ ನಿಗೆ ಗಾಯವೂ ಅವಮಾನವೂ ಆಗುವವು; ಅವನ ನಿಂದೆಯು ಎಂದಿಗೂ ಅಳಿಸಲ್ಪಡದು.

Proverbs 6:34
ಮನುಷ್ಯನ ಕ್ರೋಧವು ಮತ್ಸರವಾಗಿದೆ; ಆದದರಿಂದ ಮುಯ್ಯಿ ತೀರಿಸುವ ದಿನದಲ್ಲಿ ಅವನು ಕ್ಷಮೆತೋರುವದಿಲ್ಲ.

Kannada Bible