Proverbs 29 - WEB (Kannada)
1 He who is often rebuked and stiffens his neck Will be destroyed suddenly, with no remedy.ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
2 When the righteous thrive, the people rejoice; But when the wicked rule, the people groan.ನೀತಿವಂತರು ಅಧಿಕಾರದಲ್ಲಿ ದ್ದಾಗ ಜನರು ಹರ್ಷಿಸುತ್ತಾರೆ; ದುಷ್ಟನು ಆಳಿದರೆ ಜನರು ಶೋಕಿಸುತ್ತಾರೆ.
3 Whoever loves wisdom brings joy to his father; But a companion of prostitutes squanders his wealth.ಜ್ಞಾನವನ್ನು ಪ್ರೀತಿಸುವವನು ತನ್ನ ತಂದೆಯನ್ನು ಹರ್ಷಗೊಳಿಸುತ್ತಾನೆ; ವೇಶ್ಯೆಯ ರೊಂದಿಗೆ ಸಹವಾಸ ಮಾಡುವವನು ತನ್ನ ಆಸ್ತಿಯನ್ನು ವೆಚ್ಚಮಾಡುತ್ತಾನೆ.
4 The king by justice makes the land stable, But he who takes bribes tears it down.ನ್ಯಾಯತೀರ್ಪಿನಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ; ಲಂಚಗಳನ್ನು ಸ್ವೀಕರಿಸು ವವನು ಅದನ್ನು ಕೆಡವಿಹಾಕುತ್ತಾನೆ.
5 A man who flatters his neighbor, Spreads a net for his feet.ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ.
6 An evil man is snared by his sin, But the righteous can sing and be glad.ಕೆಟ್ಟವನ ದೋಷದಲ್ಲಿ ಉರ್ಲು ಇದೆ; ನೀತಿವಂತನು ಹಾಡಿ ಹರ್ಷಿಸುತ್ತಾನೆ.
7 The righteous care about justice for the poor. The wicked aren't concerned about knowledge.ಬಡವರ ನಿಮಿತ್ತ ನೀತಿವಂತನು ಯೋಚಿಸುತ್ತಾನೆ; ದುಷ್ಟನು ಅದನ್ನು ತಿಳುಕೊಳ್ಳುವಂತೆ ಲಕ್ಷ್ಯಕ್ಕೆ ತರುವ ದಿಲ್ಲ.
8 Mockers stir up a city, But wise men turn away anger.ಪರಿಹಾಸ್ಯಗಾರರು ಪಟ್ಟಣಕ್ಕೆ ಉರ್ಲನ್ನು ಒಡ್ಡು ತ್ತಾರೆ; ಜ್ಞಾನಿಗಳು ಕೋಪವನ್ನು ತಿರುಗಿಸುವರು.
9 If a wise man goes to court with a foolish man, The fool rages or scoffs, and there is no peace.ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯ ಮಾಡಿ ದರೆ ಅವನು ರೇಗಿದರೂ ನಕ್ಕರೂ ಶಮನವಾಗುವು ದಿಲ್ಲ.
10 The bloodthirsty hate a man of integrity; And they seek the life of the upright.ಕೊಲೆಪಾತಕರು ನೀತಿವಂತರನ್ನು ದ್ವೇಷಿಸು ತ್ತಾರೆ; ಯಥಾರ್ಥವಂತರು ಅವನ ಪ್ರಾಣವನ್ನು ಹುಡು ಕುತ್ತಾರೆ.
11 A fool vents all of his anger, But a wise man brings himself under control.ಮೂಢನು ತನ್ನ ಮನಸ್ಸನ್ನೆಲ್ಲಾ ಹೊರ ಪಡಿಸುತ್ತಾನೆ; ಜ್ಞಾನಿಯು ಅದನ್ನು ಕಾಯುತ್ತಾನೆ.
12 If a ruler listens to lies, All of his officials are wicked.ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.
13 The poor man and the oppressor have this in common: Yahweh gives sight to the eyes of both.ಬಡವರೂ ಮೋಸಗಾರರೂ ಒಟ್ಟಾಗಿ ಸಂಧಿಸುತ್ತಾರೆ; ಕರ್ತನು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುತ್ತಾನೆ.
14 The king who fairly judges the poor, His throne shall be established forever.ಬಡವರಿಗೆ ನಂಬಿಕೆಯಿಂದ ನ್ಯಾಯತೀರಿಸುವ ಅರಸನ ಸಿಂಹಾ ಸನವು ಎಂದೆಂದಿಗೂ ಸ್ಥಿರಗೊಳ್ಳುವದು.
15 The rod of correction gives wisdom, But a child left to himself causes shame to his mother.ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
16 When the wicked increase, sin increases; But the righteous will see their downfall.ದುಷ್ಟರು ವೃದ್ಧಿಯಾದಾಗ ದೋಷವು ಹೆಚ್ಚುತ್ತದೆ; ನೀತಿವಂತರು ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
17 Correct your son, and he will give you peace; Yes, he will bring delight to your soul.ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು.
18 Where there is no revelation, the people cast off restraint; But one who keeps the law is blessed.ದರ್ಶನವಿಲ್ಲದಿರುವಲ್ಲಿ ಜನರು ನಾಶವಾಗುತ್ತಾರೆ; ನ್ಯಾಯಪ್ರಮಾಣವನ್ನು ಕೈಕೊಳ್ಳುವವನು ಧನ್ಯನು.
19 A servant can't be corrected by words. Though he understands, yet he will not respond.ಮಾತುಗಳಿಂದ ಸೇವಕನು ಶಿಕ್ಷಿಸಲ್ಪಡುವದಿಲ್ಲ; ಅವನು ತಿಳಿದುಕೊಂಡರೂ ಉತ್ತರಿಸುವದಿಲ್ಲ.
20 Do you see a man who is hasty in his words? There is more hope for a fool than for him.ತನ್ನ ಮಾತುಗಳಲ್ಲಿ ದುಡುಕುವವನನ್ನು ನೀನು ನೋಡಿದ್ದೀಯೋ? ಅವನಿಗಿಂತಲೂ ಬುದ್ದಿಹೀನನ ವಿಷಯ ದಲ್ಲಿ ಹೆಚ್ಚು ನಿರೀಕ್ಷೆ ಇದೆ.
21 He who pampers his servant from youth Will have him become a son in the end.ಬಾಲ್ಯದಿಂದ ತನ್ನ ಸೇವಕನನ್ನು ಕೋಮಲವಾಗಿ ಸಾಕುವವನು ತರುವಾಯ ತನಗೆ ಮಗನಂತೆ ಆಗುವನು.
22 An angry man stirs up strife, And a wrathful man abounds in sin.ಕೋಪಿಷ್ಠನು ಜಗಳ ವನ್ನೆಬ್ಬಿಸುತ್ತಾನೆ; ರೋಷಗೊಂಡವನು ದೋಷದಲ್ಲಿ ತುಂಬಿರುತ್ತಾನೆ.
23 A man's pride brings him low, But one of lowly spirit gains honor.ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
24 Whoever is an accomplice of a thief is an enemy of his own soul. He takes an oath, but dares not testify.ಕಳ್ಳರೊಂದಿಗೆ ಪಾಲು ಗಾರನು ತನ್ನನ್ನು ತಾನೇ ಹಗೆಮಾಡುತ್ತಾನೆ; ಅವನು ಶಾಪವನ್ನು ಕೇಳಿತಿಳಿಸುವದಿಲ್ಲ.
25 The fear of man proves to be a snare, But whoever puts his trust in Yahweh is kept safe.ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು.
26 Many seek the ruler's favor, But a man's justice comes from Yahweh.ಅನೇಕರು ಅಧಿ ಪತಿಯ ದಯೆಯನ್ನು ಹುಡುಕುತ್ತಾರೆ; ಕರ್ತನಿಂದಲೇ ಪ್ರತಿಯೊಬ್ಬನ ನ್ಯಾಯತೀರ್ಪು ಬರುತ್ತದೆ.
27 A dishonest man detests the righteous, And the upright in their ways detest the wicked.ಅನೀತಿ ವಂತನು ನೀತಿವಂತರಿಗೆ ಅಸಹ್ಯ; ತನ್ನ ಮಾರ್ಗದಲ್ಲಿ ಯಥಾರ್ಥವಾಗಿರುವವನು ದುಷ್ಟರಿಗೆ ಅಸಹ್ಯ.
Kannada Bible