John 17 - YLT (Kannada)
1 These things spake Jesus, and lifted up his eyes to the heaven, and said -- `Father, the hour hath come, glorify Thy Son, that Thy Son also may glorify Thee,ಯೇಸು ಈ ಮಾತುಗಳನ್ನು ಹೇಳಿ ಪರಲೋಕದ ಕಡೆಗೆ ಕಣ್ಣುಗಳನ್ನೆತ್ತಿ-- ತಂದೆಯೇ, ಈಗ ಗಳಿಗೆ ಬಂದಿದೆ; ನಿನ್ನ ಮಗನನ್ನು ಮಹಿಮೆಪಡಿಸು; ಆಗ ನಿನ್ನ ಮಗನೂ ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು.
2 according as Thou didst give to him authority over all flesh, that -- all that Thou hast given to him -- he may give to them life age-during;ನೀನು ಆತನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರಿಗೆ ಆತನು ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿದ್ದೀ.
3 and this is the life age-during, that they may know Thee, the only true God, and him whom Thou didst send -- Jesus Christ;ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.
4 I did glorify Thee on the earth, the work I did finish that Thou hast given me, that I may do `it'.ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ;
5 `And now, glorify me, Thou Father, with Thyself, with the glory that I had before the world was, with Thee;ಓ ತಂದೆಯೇ, ಹೀಗೆ ಲೋಕವು ಇದ್ದದ್ದಕ್ಕಿಂತ ಮುಂಚೆ ನಿನ್ನೊಂದಿಗೆ ನನಗಿದ್ದ ಮಹಿಮೆಯಿಂದ ನೀನು ಸ್ವತಃ ನನ್ನನ್ನು ಮಹಿಮೆಪಡಿಸು.
6 I did manifest Thy name to the men whom Thou hast given to me out of the world; Thine they were, and to me Thou hast given them, and Thy word they have kept;ಲೋಕದೊಳಗಿಂದ ನೀನು ನನಗೆ ಕೊಟ್ಟ ಮನು ಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರತ್ಯಕ್ಷಪಡಿಸಿದ್ದೇನೆ. ಅವರು ನಿನ್ನವರಾಗಿದ್ದರು; ನೀನು ಅವರನ್ನು ನನಗೆ ಕೊಟ್ಟಿದ್ದೀ; ಇದಲ್ಲದೆ ಅವರು ನಿನ್ನ ವಾಕ್ಯವನ್ನು ಕೈ ಕೊಂಡಿದ್ದಾರೆ.
7 now they have known that all things, as many as Thou hast given to me, are from Thee,ನೀನು ನನಗೆ ಕೊಟ್ಟಿರುವವುಗಳೆಲ್ಲವು ನಿನ್ನವುಗಳೇ ಎಂದು ಈಗ ಅವರು ತಿಳಿದುಕೊಂಡಿದ್ದಾರೆ.
8 because the sayings that Thou hast given to me, I have given to them, and they themselves received, and have known truly, that from Thee I came forth, and they did believe that Thou didst send me.ನೀನು ನನಗೆ ಕೊಟ್ಟ ವಾಕ್ಯಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಅವುಗಳನ್ನು ಅಂಗೀಕರಿಸಿದ್ದಾರೆ; ನಾನು ನಿನ್ನ ಬಳಿಯಿಂದಲೇ ಹೊರಟುಬಂದವನೆಂದು ನಿಶ್ಚಯವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿದ್ದೀ ಯೆಂದು ನಂಬಿದ್ದಾರೆ.
9 `I ask in regard to them; not in regard to the world do I ask, but in regard to those whom Thou hast given to me, because Thine they are,ನಾನು ಅವರಿಗೋಸ್ಕರ ಕೇಳಿ ಕೊಳ್ಳುತ್ತೇನೆ; ನೀನು ನನಗೆ ಕೊಟ್ಟವರಿಗೋಸ್ಕರವೇ ಹೊರತು ನಾನು ಲೋಕಕ್ಕೋಸ್ಕರ ಕೇಳಿಕೊಳ್ಳುವದಿಲ್ಲ; ಯಾಕಂದರೆ ಅವರು ನಿನ್ನವರು.
10 and all mine are Thine, and Thine `are' mine, and I have been glorified in them;ನನ್ನವರೆಲ್ಲರು ನಿನ್ನ ವರೇ; ನಿನ್ನವರು ನನ್ನವರೇ; ಅವರಲ್ಲಿ ಮಹಿಮೆ ಪಟ್ಟಿದ್ದೇನೆ.
11 and no more am I in the world, and these are in the world, and I come unto Thee. Holy Father, keep them in Thy name, whom Thou hast given to me, that they may be one as we;ಇನ್ನು ಮೇಲೆ ನಾನು ಲೋಕದಲ್ಲಿ ಇರುವದಿಲ್ಲ; ಆದರೆ ಇವರು ಲೋಕದಲ್ಲಿದ್ದಾರೆ; ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆಯೇ ಅವರು ಸಹ ಒಂದಾಗಿರುವಂತೆ ನೀನು ನನಗೆ ಕೊಟ್ಟಿರುವವರನ್ನು ನಿನ್ನ ಸ್ವಂತ ಹೆಸರಿನಲ್ಲಿ ಕಾಪಾಡು.
12 when I was with them in the world, I was keeping them in Thy name; those whom Thou hast given to me I did guard, and none of them was destroyed, except the son of the destruction, that the Writing may be fulfilled.ನಾನು ಅವರೊಂದಿಗೆ ಲೋಕದಲ್ಲಿದ್ದಾಗ ನಿನ್ನ ಹೆಸರಿನಲ್ಲಿ ಅವರನ್ನು ಕಾಪಾಡಿದೆನು; ನೀನು ನನಗೆ ಕೊಟ್ಟವರನ್ನು ನಾನು ಕಾಪಾಡಿದ್ದೇನೆ; ಬರಹವು ನೆರವೇರುವ ಹಾಗೆ ಆ ನಾಶನದ ಮಗನೇ ಹೊರತು ಅವರಲ್ಲಿ ಒಬ್ಬನೂ ನಾಶವಾಗಲಿಲ್ಲ.
13 `And now unto Thee I come, and these things I speak in the world, that they may have my joy fulfilled in themselves;ಈಗ ನಾನು ನಿನ್ನ ಬಳಿಗೆ ಬರು ತ್ತೇನೆ ನನ್ನ ಆನಂದವು ಅವರೊಳಗೆ ಈಡೇರುವಂತೆ ನಾನು ಲೋಕದಲ್ಲಿ ಈ ವಿಷಯಗಳನ್ನು ಮಾತನಾಡು ತ್ತೇನೆ.
14 I have given to them Thy word, and the world did hate them, because they are not of the world, as I am not of the world;ನಾನು ನಿನ್ನ ವಾಕ್ಯವನ್ನು ಅವರಿಗೆ ಕೊಟ್ಟಿದ್ದೇನೆ ನಾನು ಲೋಕದವನಲ್ಲದ ಪ್ರಕಾರ ಅವರೂ ಲೋಕದವರಲ್ಲವಾದದರಿಂದ ಲೋಕವು ಅವರನ್ನು ಹಗೆಮಾಡಿಯದೆ.
15 I do not ask that Thou mayest take them out of the world, but that Thou mayest keep them out of the evil.ನೀನು ಅವರನ್ನು ಲೋಕದೊಳಗಿಂದ ತೆಗೆಯಬೇಕೆಂತಲ್ಲ; ಅವರನ್ನು ಕೇಡಿನಿಂದ ಕಾಪಾಡಬೇಕೆಂದು ನಾನು ಕೇಳಿಕೊಳ್ಳು ತ್ತೇನೆ.
16 `Of the world they are not, as I of the world am not;ನಾನು ಲೋಕದವನಲ್ಲದ ಪ್ರಕಾರ ಅವರೂ ಲೋಕದವರಲ್ಲ.
17 sanctify them in Thy truth, Thy word is truth;ನಿನ್ನ ಸತ್ಯದಿಂದ ಅವರನ್ನು ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು
18 as Thou didst send me to the world, I also did send them to the world;ನೀನು ನನ್ನನ್ನು ಲೋಕದೊಳಗೆ ಕಳುಹಿಸಿದ ಹಾಗೆಯೇ ನಾನು ಸಹ ಅವರನ್ನು ಲೋಕದೊಳಗೆ ಕಳುಹಿಸಿದ್ದೇನೆ.
19 and for them do I sanctify myself, that they also themselves may be sanctified in truth.ಅವರು ಸತ್ಯದಲ್ಲಿ ಪ್ರತಿಷ್ಠಿಸಲ್ಪಡುವಂತೆ ನಾನು ನನ್ನನ್ನು ಅವರಿ ಗೋಸ್ಕರ ಪ್ರತಿಷ್ಠಿಸಿಕೊಳ್ಳುತ್ತೇನೆ.
20 `And not in regard to these alone do I ask, but also in regard to those who shall be believing, through their word, in me;ಆದರೆ ಇವರಿಗೊಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನ ಮೇಲೆ ನಂಬಿಕೆಯಿಡುವವರಿಗೋ ಸ್ಕರವೂ ಕೇಳಿಕೊಳ್ಳುತ್ತೇನೆ.
21 that they all may be one, as Thou Father `art' in me, and I in Thee; that they also in us may be one, that the world may believe that Thou didst send me.ಇದಲ್ಲದೆ ಅವರೆಲ್ಲರೂ ನಮ್ಮಲ್ಲಿ ಒಂದಾಗಿರಬೇಕೆಂತಲೂ ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವಂತೆಯೂ ತಂದೆಯಾದ ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆ ಇವರು ಸಹ ನಮ್ಮಲ್ಲಿ ಒಂದಾಗಿರ ಬೇಕೆಂತಲೂ ಕೇಳಿಕೊಳ್ಳುತ್ತೇನೆ.
22 `And I, the glory that thou hast given to me, have given to them, that they may be one as we are one;ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರುವಂತೆ ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.
23 I in them, and Thou in me, that they may be perfected into one, and that the world may know that Thou didst send me, and didst love them as Thou didst love me.ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ (ಇರುವಂತೆ) ಅವರೂ ಒಂದಾಗಿ ಪರಿಪೂರ್ಣರಾಗಿ ರುವರು; ನೀನು ನನ್ನನ್ನು ಕಳುಹಿಸಿದ್ದೀ ಎಂತಲೂ ನನ್ನನ್ನು ಪ್ರೀತಿ ಮಾಡಿದಂತೆ ಅವರನ್ನು ನೀನು ಪ್ರೀತಿಮಾಡಿದ್ದೀ ಎಂತಲೂ ಲೋಕವು ತಿಳಿದುಕೊಳ್ಳುವದು.
24 `Father, those whom Thou hast given to me, I will that where I am they also may be with me, that they may behold my glory that Thou didst give to me, because Thou didst love me before the foundation of the world.ತಂದೆ ಯೇ, ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನೀನು ನನಗೆ ಕೊಟ್ಟವರು ಸಹ ನೋಡುವ ಹಾಗೆಯೂ ನಾನಿರುವಲ್ಲಿ ಅವರು ನನ್ನೊಂದಿಗೆ ಇರುವಂತೆಯೂ ನಾನು ಇಚ್ಛೈಸುತ್ತೇನೆ. ಜಗದುತ್ಪತ್ತಿಗೆ ಮುಂಚೆ ನೀನು ನನ್ನನ್ನು ಪ್ರೀತಿಸಿದಿ.
25 `Righteous Father, also the world did not know Thee, and I knew Thee, and these have known that Thou didst send me,ಓ ನೀತಿಯುಳ್ಳ ತಂದೆಯೇ, ಲೋಕವು ನಿನ್ನನ್ನು ತಿಳಿಯಲಿಲ್ಲ; ಆದರೆ ನಾನು ನಿನ್ನನ್ನು ತಿಳಿದಿದ್ದೇನೆ, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ಇವರು ತಿಳಿದಿದ್ದಾರೆ.
26 and I made known to them Thy name, and will make known, that the love with which Thou lovedst me in them may be, and I in them.'ನೀನು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಅವರಲ್ಲಿ ಇರಬೇಕೆಂತಲೂ ನಾನು ಅವರಲ್ಲಿ ಇರುವಂತೆಯೂ ನಾನು ಅವರಿಗೆ ನಿನ್ನ ಹೆಸರನ್ನು ಪ್ರಕಟಿಸಿದ್ದೇನೆ; ಇನ್ನೂ ಪ್ರಕಟಿಸುವೆನು ಅಂದನು.
Kannada Bible