Isaiah 52:14
ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ
Isaiah 52:14 in Other Translations
King James Version (KJV)
As many were astonied at thee; his visage was so marred more than any man, and his form more than the sons of men:
American Standard Version (ASV)
Like as many were astonished at thee (his visage was so marred more than any man, and his form more than the sons of men),
Bible in Basic English (BBE)
As peoples were surprised at him, And his face was not beautiful, so as to be desired: his face was so changed by disease as to be unlike that of a man, and his form was no longer that of the sons of men.
Darby English Bible (DBY)
As many were astonished at thee -- his visage was so marred more than any man, and his form more than the children of men
World English Bible (WEB)
Like as many were astonished at you (his visage was so marred more than any man, and his form more than the sons of men),
Young's Literal Translation (YLT)
As astonished at thee have been many, (So marred by man his appearance, And his form by sons of men.)
| As | כַּאֲשֶׁ֨ר | kaʾăšer | ka-uh-SHER |
| many | שָׁמְמ֤וּ | šommû | shome-MOO |
| were astonied | עָלֶ֙יךָ֙ | ʿālêkā | ah-LAY-HA |
| at | רַבִּ֔ים | rabbîm | ra-BEEM |
| visage his thee; | כֵּן | kēn | kane |
| was so | מִשְׁחַ֥ת | mišḥat | meesh-HAHT |
| marred | מֵאִ֖ישׁ | mēʾîš | may-EESH |
| man, any than more | מַרְאֵ֑הוּ | marʾēhû | mahr-A-hoo |
| and his form | וְתֹאֲר֖וֹ | wĕtōʾărô | veh-toh-uh-ROH |
| sons the than more | מִבְּנֵ֥י | mibbĕnê | mee-beh-NAY |
| of men: | אָדָֽם׃ | ʾādām | ah-DAHM |
Cross Reference
ಯೆಶಾಯ 53:2
ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.
ಮತ್ತಾಯನು 26:67
ಆಮೇಲೆ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಬೇರೆ ಕೆಲವರು ಆತನನ್ನು ಹೊಡೆದರು.
ಕೀರ್ತನೆಗಳು 22:17
ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ.
ಮಾರ್ಕನು 6:51
ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬಂದನು; ಆಗ ಗಾಳಿಯು ನಿಂತಿತು; ಅವರು ಅತ್ಯಧಿಕವಾಗಿ ತಮ್ಮೊಳಗೆ ದಿಗ್ಭ್ರಮೆಯುಳ್ಳವರಾಗಿ ಆಶ್ಚರ್ಯಪಟ್ಟರು.
ಮಾರ್ಕನು 7:37
ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು.
ಮಾರ್ಕನು 10:26
ಅದಕ್ಕೆ ಅವರು ಮಿತಿವಿಾರಿ ಆಶ್ಚರ್ಯಪಟ್ಟು ತಮ್ಮೊಳಗೆ--ಹಾಗಾದರೆ ರಕ್ಷಿಸಲ್ಪಡುವದು ಯಾರಿಗೆ ಸಾಧ್ಯ ಎಂದು ಅಂದು ಕೊಂಡರು.
ಮಾರ್ಕನು 10:32
ಆಗ ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು; ಮತ್ತು ಯೇಸು ಅವರ ಮುಂದಾಗಿ ಹೋದದ್ದರಿಂದ ಅವರು ಆಶ್ಚರ್ಯಪಟ್ಟರು; ಮತ್ತು ಆತನನ್ನು ಹಿಂಬಾಲಿಸುತ್ತಿದ್ದಾಗ ಭಯಪಟ್ಟರು. ಆತನು ತನ್ನ ಹನ್ನೆರಡು ಮಂದಿಯನ್ನು ತಿರಿಗಿ ಕರೆದು ತನಗೆ ಸಂಭವಿಸುವವುಗಳು ಯಾವವೆಂದು ಅವರಿ
ಲೂಕನು 2:47
ಆತನು ಆಡಿದ ಮಾತುಗಳನ್ನು ಕೇಳಿದ ವರೆಲ್ಲರು ಆತನ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾ ದರು.
ಲೂಕನು 22:64
ಇದಲ್ಲದೆ ಅವರು ಆತನ ಕಣ್ಣುಕಟ್ಟಿ ಆತನ ಮುಖದ ಮೇಲೆ ಹೊಡೆದು ಆತನಿಗೆ--ನಿನ್ನನ್ನು ಹೊಡೆದವರು ಯಾರು? ಪ್ರವಾ ದನೆ ಹೇಳು ಎಂದು ಕೇಳಿದರು.
ಮಾರ್ಕನು 5:42
ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು.
ಮತ್ತಾಯನು 27:29
ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು.
ಮತ್ತಾಯನು 27:14
ಆತನು ಒಂದು ಮಾತಿಗಾದರೂ ಅವನಿಗೆ ಉತ್ತರಕೊಡದೆ ಇದ್ದದರಿಂದ ಅಧಿಪತಿಯು ಅತ್ಯಾಶ್ಚರ್ಯಪಟ್ಟನು.
ಕೀರ್ತನೆಗಳು 22:6
ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ.
ಕೀರ್ತನೆಗಳು 22:15
ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ.
ಕೀರ್ತನೆಗಳು 71:7
ಅನೇಕರಿಗೆ ನಾನು ಆಶ್ಚರ್ಯದಂತಿದ್ದೇನೆ. ಆದರೆ ನೀನು ನನ್ನ ಬಲವಾದ ಆಶ್ರಯವಾಗಿದ್ದೀ.
ಕೀರ್ತನೆಗಳು 102:3
ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ.
ಯೆಶಾಯ 50:6
ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
ಮತ್ತಾಯನು 7:28
ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.
ಮತ್ತಾಯನು 22:22
ಇವುಗಳನ್ನು ಅವರು ಕೇಳಿದಾಗ ಆಶ್ಚರ್ಯಪಟ್ಟರು; ಮತ್ತು ಆತನನ್ನು ಬಿಟ್ಟು ಹೊರಟುಹೋದರು.
ಲೂಕನು 5:26
ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.
ಲೂಕನು 4:36
ಆಗ ಅವರೆ ಲ್ಲರೂ ಬೆರಗಾಗಿ--ಇದೆಂಥ ಮಾತಾಗಿದೆ! ಈತನು ಅಧಿಕಾರದಿಂದಲೂ ಬಲದಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆ ಕೊಡಲು ಅವು ಹೊರಗೆ ಬರುತ್ತವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.