Daniel 9 - BENGALI (Kannada)
1 বাবিলের রাজা দারিয়াবসের রাজত্বের প্রথম বছরে এই ঘটনাগুলি ঘটেছিল| দারিয়াবস ছিলেন মাদীয় বংশজাত| দারিয়াবস ছিলেন অহশ্বেরশের পুত্র|ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಕಸ್ದೀಯ ರಾಜ್ಯದ ಅರ ಸನೂ ಆದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ
2 তাঁর রাজত্বের প্রথম বছরে আমি, দানিয়েল কয়েকটি বই পড়েছিলাম| আমি বই পড়ে জানতে পেরেছিলাম য়ে প্রভু যিরমিয়কে বলেছিলেন 70 বছর পর আবার জেরুশালেম পুননির্মাণ হবে|ಅವನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಾದ ನಾನು ಕರ್ತನು ತನ್ನ ವಾಕ್ಯವನ್ನು ಪ್ರವಾದಿಯಾದ ಯೆರೆವಿಾಯನಿಗೆ ದಯಪಾಲಿಸಿದ ಹಾಗೆ ತಾನು ಯೆರೂಸಲೇಮಿಗೆ ಹಾಳು ಬೀಳುವಿಕೆಗಳಲ್ಲಿ ಎಪ್ಪತ್ತು ವರುಷಗಳನ್ನು ಸಂಪೂರ್ಣಮಾಡುವ ಹಾಗೆ ವರುಷಗಳ ಲೆಕ್ಕವನ್ನು ಪುಸ್ತಕದಿಂದ ತಿಳಿದುಕೊಂಡೆನು.
3 তখন আমি ঈশ্বর, আমার প্রভুর কাছে সাহায্য এবং করুণার জন্য প্রার্থনা করেছিলাম| প্রার্থনার সময় আমি উপোস করে, শোক পোশাক পরে এবং মাথায় ছাই মেখে বসেছিলাম|ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದು ಕೊಂಡು, ದೇವರಾದ ಕರ್ತನನ್ನು ಹುಡುಕುವದಕ್ಕಾಗಿ ಪ್ರಾರ್ಥನೆಗಳಿಂದಲೂ ವಿಜ್ಞಾಪನೆ ಗಳಿಂದಲೂ ಆತನ ಕಡೆಗೆ ನನ್ನ ಮುಖವನ್ನು ತಿರುಗಿ ಸಿದೆನು.
4 আমি আমার ঈশ্বর, প্রভুর কাছে প্রার্থনা করে সমস্ত পাপ স্বীকার করে বলেছিলাম, “প্রভু, তুমিই সেই মহান ঈশ্বর| তুমি যাদের ভালোবাসো এবং যারা তোমার আদেশ পালন করে তাদের সঙ্গে তোমার করুণা ও চুক্তি অব্যাহত রাখো|”ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ,
5 “কিন্তু প্রভু, আমরা পাপ করেছি, অনেক খারাপ কাজ করেছি| আমরা তোমার বিরুদ্ধাচরণ করেছি| আমরা তোমার আজ্ঞা এবং সঠিক সিদ্ধান্তের বিরোধিতা করেছি|ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ.
6 আমরা ভাব্বাদীদের কথা শুনিনি| আমরা কেউই তোমার সেবক, ভাব্বাদীদের কথা শুনিনি| তারা তোমার হয়ে কথা বলে| তারা আমাদের রাজাদের সঙ্গে, নেতাদের সঙ্গে এবং পিতামহদের সঙ্গে কথা বলেছিল| তারা ইস্রায়েলের সমস্ত লোকের সঙ্গে কথা বলেছিল| কিন্তু আমরা ঐ ভাব্বাদীদের কথা বিন্দুমাত্র শুনিনি|ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ.
7 “প্রভু, তুমিই ঠিক এবং ধার্মিকতা তোমারই! আমাদের যিহূদা ও জেরুশালেমের লোকদের লজ্জা হওয়া উচিত্| আমাদের, ইস্রায়েলের লোকদের যাদের তুমি কাছের এবং দূরের দেশগুলিতে ছড়িয়ে দিয়েছ, তাদের লজ্জা হওয়া উচিত্| কেন? কারণ আমরা তোমার বিরুদ্ধে বিদ্রোহ করেছিলাম|ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ.
8 “প্রভু তোমার বিরুদ্ধে পাপাচারে মেতে ওঠার জন্য আমাদের প্রত্যেকের লজ্জিত হওয়া উচিত্| আমাদের রাজাদের, নেতাদের এবং পূর্বপুরুষদের লজ্জিত হওয়া উচিত্|ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.
9 “কিন্তু প্রভু, তুমি সত্যিই দয়ালু| তুমি লোকদের খারাপ কাজ ক্ষমা কর| এবং আমরা সত্যিই তোমার বিরুদ্ধে চলে গিয়েছিলাম|ನಾವು ಆತನಿಗೆ ವಿರುದ್ಧ ವಾಗಿ ತಿರುಗಿಬಿದ್ದಿದ್ದರೂ ಕರ್ತನಾದ ನಮ್ಮ ದೇವರ ಕರುಣೆಯೂ ಮತ್ತು ಕ್ಷಮೆಯೂ ನಮಗಿದೆ.
10 আমরা আমাদের প্রভু ঈশ্বরকে অমান্য করেছি| প্রভুর অনুগামীসমূহ, ভাব্বাদীদের মাধ্যমে আমাদের জন্য যা বিধি করেছিলেন তা আমরা কেউই মেনে চলিনি| আমরা প্রভুর নিয়ম এবং বিধিকে অমান্য করেছিলাম|ನಾವು ನಮ್ಮ ದೇವರಾದ ಕರ್ತನ ಸ್ವರಕ್ಕೆ ಕಿವಿಗೊಡದೆ ಆತನು ನಮ್ಮ ಮುಂದೆ ಇಟ್ಟ ಆತನ ಸೇವಕರಾದ ಪ್ರವಾದಿಗಳ ನ್ಯಾಯಪ್ರಮಾಣದಂತೆ ನಡೆಯಲಿಲ್ಲ.
11 ইস্রায়েলের এক জন মানুষও তোমার শিক্ষাকে মান্য করেনি| তারা প্রত্যেকে তোমাকে অমান্য করে তোমার বিরুদ্ধে চলে গিয়েছিল| প্রভুকে অমান্য করার শাস্তির বিধান সমস্ত লিখিত প্রতিশ্রুতি মোশির বিধিপুস্তকে (মোশি ঈশ্বরের দাস) লেখা ছিল| আইনকে অমান্য করার ফল আমরা ভুগছি| প্রভুর বিরুদ্ধে করা সমস্ত পাপাচারের শাস্তি অভিশাপ হিসেবে আমাদের জীবনে বর্ষিত হয়েছে|ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ.
12 “প্রভু আমাদের ও আমাদের নেতাদের জীবনে যা যা ঘটাবার কথা বলেছিলেন তাই তিনি ঘটিযেছেন| তিনি আমাদের ওপর ভয়ঙ্কর অমঙ্গল এনেছেন| জেরুশালেমের মতো দুরবস্থা আর কোন শহরের হয় নি|ಆತನು ನಮಗೂ ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾನು ಹೇಳಿದ ಮಾತುಗಳನ್ನು ನೆರವೇರಿಸಿ; ನಮ್ಮ ಮೇಲೆ ದೊಡ್ಡ ಕೇಡು ಬರುವ ಹಾಗೆ ಮಾಡಿದ್ದಾನೆ; ಯೆರೂಸಲೇಮಿನಲ್ಲಿ ನಡೆದ ಹಾಗೆ ಪೂರ್ಣ ಆಕಾಶದ ಕೆಳಗೆಲ್ಲಾ (ಭೂಮಂಡಲದ ಮೇಲೆ) ಎಲ್ಲಿಯೂ ನಡೆಯಲಿಲ್ಲ.
13 মোশির বিধি পুস্তকে য়েমনটি লেখা আছে তেমনি সমস্ত অমঙ্গল আমাদের জীবনে ঘটে গিয়েছে| কিন্তু তবু আমরা প্রভুকে সাহায্য করার জন্য প্রার্থনা করিনি| তবু আমরা পাপাচার থেকে নিজেদের সরিয়ে নিইনি| তবু আমরা প্রভুর সততার দিকে মন দিইনি|ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಈ ಕೇಡು ನಮ್ಮ ಮೇಲೆ ಬಂತು, ಆದಾಗ್ಯೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿನ್ನ ಸತ್ಯವನ್ನು ತಿಳಿದುಕೊಳ್ಳುವ ಹಾಗೆ, ನಮ್ಮ ದೇವರಾದ ಕರ್ತನ ಮುಂದೆ ನಾವು ಪ್ರಾರ್ಥನೆ ಗಳನ್ನು ಮಾಡಲಿಲ್ಲ.
14 প্রভু আমাদের জন্য সমস্ত অমঙ্গল তৈরী করে রেখেছিলেন| এবং সেইগুলিই আমাদের জীবনে ঘটিয়েছেন| প্রভু সঠিক কাজটাই করেছিলেন কিন্তু আমরা তবুও তাঁর কথা শুনিনি|ಆದದರಿಂದ ಕರ್ತನು ಕೇಡಿ ಗಾಗಿ ಕಾದುಕೊಂಡು ಅದನ್ನು ನಮ್ಮ ಮೇಲೆ ತಂದಿ ದ್ದಾನೆ. ನಮ್ಮ ದೇವರಾದ ಕರ್ತನು ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ನೀತಿವಂತನೇ; ನಾವಾದರೋ ಆತನ ಸ್ವರಕ್ಕೆ ವಿಧೇಯರಾಗಲಿಲ್ಲ.
15 “প্রভু, আমাদের ঈশ্বর তুমি তোমার ক্ষমতা প্রয়োগ করে আমাদের মিশর থেকে নিয়ে এসেছো| আমরা তোমার লোক| তুমি আজও সেই জন্য বিখ্যাত| প্রভু, আমরা পাপ করেছি এবং কুকর্ম করেছি|ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ.
16 প্রভু, তোমার পবিত্র পর্বতের ওপর অবস্থিত তোমার পবিত্র শহর জেরুশালেমের প্রতি তোমার ক্রোধ নিবৃত্ত হোক| জেরুশালেমের ওপর ক্রোধ থেকে বিরত হও কারণ তুমি দয়ালু এবং উদার| আমরা এবং আমাদের পূর্বপুরুষরা তোমার বিরুদ্ধে পাপ করেছিলাম বলে, আমাদের চার পাশের লোকরা তোমার লোকেদের নিয়ে উপহাস করে|ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ.
17 “প্রভু তোমার দাসের প্রার্থনা শোন| সাহায্যের জন্য আমার প্রার্থনা শোন| তোমার নিজের জন্য তোমার পবিত্র মন্দিরটির দিকে, য়েটি ধ্বংসপ্রাপ্ত হয়েছে, অনুগ্রহের দৃষ্টি দাও|ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು.
18 আমার ঈশ্বর, আমার কথা শোন! চোখ খুলে দেখ আমাদের জীবনে কি কি ভয়ঙ্কর ঘটনা ঘটেছে! দেখো তোমার নামাঙ্কিত শহরের কি দুরাবস্থা! আমি বলছি না য়ে আমরা ভাল মানুষ| সে জন্য আমি তোমাকে এ কথাগুলি বলছি না| আমি তোমাকে এ কথাগুলো বলছি কারণ আমি জানি তুমি দয়ালু|ಓ ನನ್ನ ದೇವರೇ, ನೀನು ಕಿವಿಗೊಟ್ಟು ಕೇಳು; ಇಗೋ, ನಿನ್ನ ಕಣ್ಣುಗಳನ್ನು ತೆರೆದು ನಾವು ಹಾಳಾದ ದ್ದನ್ನೂ ನಿನ್ನ ಹೆಸರಿನಿಂದ ಕರೆಯಲ್ಪಡುವ ಪಟ್ಟಣವನ್ನೂ ನೋಡು ಯಾಕಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿನ್ನ ಮಹಾ ಕೃಪೆಗೋಸ್ಕರವೇ ನಮ್ಮ ವಿಜ್ಞಾಪನೆಗಳನ್ನು ನಿನ್ನ ಮುಂದೆ ಅರ್ಪಿಸುತ್ತೇವೆ.
19 প্রভু, আমাদের কথা শোন! প্রভু আমাদের ক্ষমা করো! প্রভু আমার কথা শোন! তোমার নিজের জন্য, আর দেরী করো না কারণ তোমার লোকরা আর তোমার শহর তোমার নামে পরিচিত|”ಓ ದೇವರೇ, ನಿನ್ನ ಪಟ್ಟಣವೂ ನಿನ್ನ ಜನರೂ ನಿನ್ನ ಹೆಸರಿನಿಂದ ಕರೆಯಲ್ಪಟ್ಟ ಕಾರಣ ಓ ಕರ್ತನೇ, ತಡಮಾಡದೆ ಕಿವಿಗೊಡು, ಓ ಕರ್ತನೇ, ಕ್ಷಮಿಸು; ಓ ಕರ್ತನೇ ಲಾಲಿಸು.
20 এই ভাবে আমি ঈশ্বরকে আমার প্রার্থনার মধ্যে দিয়ে ওই কথাগুলি বলছিলাম| আমি আমার পাপসমূহ এবং ইস্রায়েলের লোকদের পাপসমূহ স্বীকার করছি| আমি ঈশ্বরের পবিত্র পর্বতের জন্য প্রার্থনা করছিলাম|ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು.
21 আমার প্রার্থনা কালে গাব্রিযেল নামে এক ব্যক্তি এসে উপস্থিত হয়েছিল| এ ছিল সেই গাব্রিয়েল যাকে পূর্বে আমি আমার স্বপ্নদর্শনে দেখেছিলাম| গাব্রিয়েল য়েন হাওয়ায় উড়ে এসেছিল| সন্ধ্যা-কালীন নৈবেদ্যর সময় সে এসেছিল|ಹೌದು, ನಾನು ಪ್ರಾರ್ಥನೆಯಲ್ಲಿ ಮಾತನಾಡುತ್ತಿ ರುವಾಗ ನಾನು ಮೊದಲಿನ ದರ್ಶನದಲ್ಲಿ ಕಂಡ ಗಬ್ರಿಯೇಲನೆಂಬ ಮನುಷ್ಯನು ಬೇಗನೆ ಹಾರಿಬಂದು ಸುಮಾರು ಸಾಯಂಕಾಲದ ಕಾಣಿಕೆಯನ್ನು ಅರ್ಪಿಸುವ ಹೊತ್ತಿನಲ್ಲಿ ನನ್ನನ್ನು ಮುಟ್ಟಿದನು.
22 সে আমার সঙ্গে কথা বলল এবং আমি যাতে বুঝতে পারি সেই রকম ভাবে সাহায্য করল| গাব্রিয়েল বলল, “দানিয়েল, আমি তোমাকে বেশী জ্ঞান দিতে এসেছি|ಅವನು ನನಗೆ ತಿಳಿಸಿ ನನ್ನೊಡನೆ ಮಾತಾಡಿ ಹೇಳಿದ್ದೇನಂದರೆ--ಓ ದಾನಿಯೇಲನೇ, ನಿನಗೆ ವಿವೇಕವನ್ನೂ ಬುದ್ಧಿಯನ್ನೂ ಕೊಡುವದಕ್ಕೆ ಈಗ ನಾನು ಬಂದಿದ್ದೇನೆ.
23 তুমি যখন প্রথম প্রার্থনা করতে শুরু করেছিলে তখন ঈশ্বর আমাকে আজ্ঞা দিয়েছিলেন তোমাকে শেখাবার জন্য| তাই আমি তোমাকে জানাতে এসেছি কারণ ঈশ্বর তোমাকে খুব ভালবাসেন! তুমি এই আজ্ঞা বুঝবে, তারপর তুমি স্বপ্নদর্শনও বুঝতে পারবে|ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ಆಜ್ಞೆಯು ಬಂದಿತು. ಅದನ್ನು ನಿನಗೆ ತಿಳಿಸುವದಕ್ಕೆ ನಾನು ಬಂದಿದ್ದೇನೆ; ನೀನು ಅತಿಪ್ರಿಯನಾಗಿರುವಿ. ಆದದರಿಂದ ವಿಷಯ ವನ್ನು ಗ್ರಹಿಸಿಕೊಂಡು ದರ್ಶನವನ್ನು ಆಲೋಚಿಸು.
24 “ঈশ্বর তোমার জাতি এবং তোমার পবিত্র শহরের জন্য 70 সপ্তাহ নির্ধারণ করেছেন| এই বিষয়গুলির জন্য 70 সপ্তাহ সময়ের আদেশ দেওয়া হয়েছে: সমস্ত খারাপ কাজ বন্ধ করবার জন্য, পাপ কাজ বন্ধ করবার জন্য, লোকদের শুদ্ধ করবার জন্য, ধার্মিকতাকে আনবার জন্য য়েটা চিরকালের জন্য অব্যাহত থাকবে, স্বপ্নদর্শন ও ভাব্বাদীদের ওপর শীলমোহর করা এবং খুব পবিত্র স্থানটি উত্সর্গ করা|ಅಕ್ರಮಗಳನ್ನು ಮುಗಿಸುವದಕ್ಕೂ ಪಾಪಗಳನ್ನು ಮುಚ್ಚುವದಕ್ಕೂ ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡು ವದಕ್ಕೂ ನಿತ್ಯವಾದ ನೀತಿಯನ್ನು ಬರಮಾಡುವದಕ್ಕೂ ಆ ದರ್ಶನಕ್ಕೂ ಪ್ರವಾದಿಗೂ ಮುದ್ರೆಹಾಕುವದಕ್ಕೂ ಅತಿಪರಿಶುದ್ಧನನ್ನು ಅಭಿಷೇಕ ಮಾಡುವದಕ್ಕೂ ನಿನ್ನ ಜನರ ಮೇಲೆಯೂ ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ನೇಮಿಸಲ್ಪಟ್ಟಿವೆ.
25 “দানিয়েল এই বিষয়গুলি বুঝে নাও, জেনে নাও| জেরুশালেমকে পুননির্মাণ করার জন্য একটা বার্তা আসবে| ঐ বার্তাটি আসার সাত সপ্তাহ পরে এক জন নেতা নির্বাচন করা হবে| তারপর জেরুশালেম পুননির্মিত হবে| জেরুশালেমে আবার একটি উন্মুক্ত বর্গক্ষেত্র থাকবে এবং শহরের সুরক্ষার জন্য তার চারি দিকে একটি পরিখা থাকবে| 62 সপ্তাহের মধ্যে জেরুশালেম পুনরায তৈরী হবে| কিন্তু ওই সময় অনেক সঙ্কটের মুখে পড়তে হবে|ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು.
26 বাষট্টি সপ্তাহের পর নির্বাচিত ব্যক্তিকে হত্যা করা হবে এবং তাঁর কিছুই থাকবে না| তারপর ভবিষ্যত্ নেতার লোকরা শহরটি এবং তার পবিত্র স্থান ধ্বংস করে দেবে| সমাপ্তি আসবে বন্যার মতো| সব শেষ না হওয়া পর্য়ন্ত যুদ্ধ চলবে| এই স্থানটি সম্পূর্ণরূপে ধ্বংসপ্রাপ্ত হবে|ಅರವತ್ತೆರಡು ವಾರಗಳಾದ ಮೇಲೆ ಮೆಸ್ಸೀಯನು ಛೇದಿಸಲ್ಪಡುವನು. ಆದರೆ ತನಗೆ ಅಲ್ಲ; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವದು. ಅಂತ್ಯದ ವರೆಗೂ ಯುದ್ಧವಾಗಿ ನಾಶನಗಳು ಸಂಭವಿಸುವವು.
27 “তখন ভবিষ্যতের শাসক অনেক লোকের সঙ্গে একটি চুক্তি করবে| ঐ চুক্তিটি এক সপ্তাহ পর্য়ন্ত অব্যাহত থাকবে| অর্ধেক সপ্তাহের জন্য উত্সর্গ এবং নৈবেদ্যসমূহ বন্ধ হবে| এবং এক জন ধ্বংসকারী আসবে| কিন্তু ঈশ্বর আদেশ দিয়েছেন সে ভয়ঙ্কর ধ্বংসের কাজ করবে| য়ে ধ্বংসকারীটি সম্পূর্ণরূপে ধ্বংস হবে|”ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
Kannada Bible