Bible

Judges 5 - DBY (Kannada)

1 Then sang Deb'orah and Barak the son of Abin'o-am on that day:ಆ ದಿನದಲ್ಲಿ ದೆಬೋರಳೂ ಅಬೀನೋ ವಮನ ಮಗನಾದ ಬಾರಾಕನೂ ಹಾಡಿ ದ್ದೇನಂದರೆ--

2 "That the leaders took the lead in Israel, that the people offered themselves willingly, bless the LORD!ಜನರು ಸ್ವೇಚ್ಛೆಯಿಂದ ತಮ್ಮನ್ನು ಸಮ ರ್ಪಿಸಿಕೊಂಡಾಗ ಕರ್ತನು ಇಸ್ರಾಯೇಲಿಗೋಸ್ಕರ ಮುಯ್ಯಿಗೆ ಮುಯ್ಯಿ ಮಾಡಿದ್ದರಿಂದ ನೀವು ಆತನನ್ನು ಕೊಂಡಾಡಿರಿ.

3 "Hear, O kings; give ear, O princes; to the LORD I will sing, I will make melody to the LORD, the God of Israel.ಓ ಅರಸರೇ, ಕೇಳಿರಿ; ಓ ಪ್ರಭುಗಳೇ, ಕಿವಿಗೊಡಿರಿ; ನಾನು, ನಾನೇ ಕರ್ತನಿಗೆ ಹಾಡುವೆನು; ಇಸ್ರಾಯೇಲಿನ ದೇವರಾದ ಕರ್ತನನ್ನು ಕೀರ್ತಿಸುವೆನು.

4 "LORD, when thou didst go forth from Se'ir, when thou didst march from the region of Edom, the earth trembled, and the heavens dropped, yea, the clouds dropped water.ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.

5 The mountains quaked before the LORD, yon Sinai before the LORD, the God of Israel.ಕರ್ತನ ಮುಂದೆ ಬೆಟ್ಟಗಳು ಕರಗಿದವು; ಇಸ್ರಾಯೇಲಿನ ದೇವರಾದ ಕರ್ತನ ಮುಂದೆ ಸೀನಾಯಿ ಪರ್ವತವು ಸಹ ಕರಗಿತು.

6 "In the days of Shamgar, son of Anath, in the days of Ja'el, caravans ceased and travelers kept to the byways.ಅನಾತನ ಮಗನಾದ ಶಮ್ಗರನ ದಿವಸಗಳಲ್ಲಿಯೂ ಯಾಯೇಲಳ ದಿವಸಗಳಲ್ಲಿಯೂ ದಾರಿಗಳು ನಿಂತು ಹೋದವು; ಮಾರ್ಗಸ್ಥರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.

7 The peasantry ceased in Israel, they ceased until you arose, Deb'orah, arose as a mother in Israel.ದೆಬೋರಳಾದ ನಾನು ಏಳುವ ಮಟ್ಟಿಗೂ ಇಸ್ರಾಯೇಲಿನಲ್ಲಿ ತಾಯಾಗಿ ನಾನು ಏಳುವ ಮಟ್ಟಿಗೂ ಹಳ್ಳಿಗಳ ನಿವಾಸಿಗಳು ನಿಂತುಹೋದರು; ಇಸ್ರಾಯೇಲಿನಲ್ಲಿ ನಿಂತುಹೋದರು.

8 When new gods were chosen, then war was in the gates. Was shield or spear to be seen among forty thousand in Israel?ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?

9 My heart goes out to the commanders of Israel who offered themselves willingly among the people. Bless the LORD.ಜನರಲ್ಲಿ ಉಚಿತವಾಗಿ ಬಂದ ನ್ಯಾಯಾಧಿಪತಿಗಳ ಮೇಲೆ ನನ್ನ ಹೃದಯ ಅದೆ. ಕರ್ತನನ್ನು ಸ್ತುತಿಸಿರಿ.

10 "Tell of it, you who ride on tawny asses, you who sit on rich carpets and you who walk by the way.ಬಿಳೀ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ನ್ಯಾಯದ ನ್ಯಾಯಾಸನದಲ್ಲಿ ಕುಳಿತಿರು ವವರೇ, ಮಾರ್ಗದಲ್ಲಿ ನಡೆಯುವವರೇ, ಮಾತ ನಾಡಿರಿ.

11 To the sound of musicians at the watering places, there they repeat the triumphs of the LORD, the triumphs of his peasantry in Israel. "Then down to the gates marched the people of the LORD.ನೀರು ಸೇದುವ ಸ್ಥಳಗಳ ಹತ್ತಿರ ಬಿಲ್ಲುಗಾರರ ಶಬ್ದದಿಂದ ತಪ್ಪಿಸಲ್ಪಟ್ಟವರು ಅಲ್ಲಿ ಕರ್ತನ ನೀತಿಯುಳ್ಳ ಕ್ರಿಯೆಗಳನ್ನು ಇಸ್ರಾಯೇಲಿನಲ್ಲಿ ಆತನ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ನೀತಿಯುಳ್ಳ ಕ್ರಿಯೆಗಳನ್ನು ತಿರುತಿರುಗಿ ಪ್ರಕಟಿಸುವರು; ಕರ್ತನ ಜನರು ಬಾಗಲು ಗಳಿಗೆ ಇಳಿದು ಬರುವರು.

12 "Awake, awake, Deb'orah! Awake, awake, utter a song! Arise, Barak, lead away your captives, O son of Abin'o-am.ಎಚ್ಚರವಾಗು, ಎಚ್ಚರ ವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗು, ಹಾಡನ್ನು ಹಾಡು; ಬಾರಾಕನೇ; ಏಳು; ಅಬೀನೋವ ಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡಿಸು.

13 Then down marched the remnant of the noble; the people of the LORD marched down for him against the mighty.ಆಗ ಉಳಿದವನನ್ನು ಆತನು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದನು; ಕರ್ತನು ನನ್ನನ್ನು ಪರಾಕ್ರಮಶಾಲಿಗಳ ಮೇಲೆ ಆಳು ವಂತೆ ಮಾಡಿದನು.

14 From E'phraim they set out thither into the valley, following you, Benjamin, with your kinsmen; from Machir marched down the commanders, and from Zeb'ulun those who bear the marshal's staff;ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯಾಮಿನಿಂದ ಉಂಟಾ ಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾವಿಾನನೂ; ಮಾಕೀರನಲ್ಲಿಂದ ಅಧಿಪತಿಗಳೂ ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವ ವರೂ ಬಂದರು.

15 the princes of Is'sachar came with Deb'orah, and Is'sachar faithful to Barak; into the valley they rushed forth at his heels. Among the clans of Reuben there were great searchings of heart.ಇಸ್ಸಾಕಾರನ ಪ್ರಧಾನರು ದೆಬೋ ರಳ ಸಂಗಡ ಇದ್ದರು; ಇಸ್ಸಾಕಾರನು, ಬಾರಾಕನು ಹಾಗೆಯೇ; ಕಾಲು ನಡೆಯಾಗಿ ತಗ್ಗಿನಲ್ಲಿ ಕಳುಹಿಸ ಲ್ಪಟ್ಟನು. ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಆಲೋಚನೆಗಳು ಇದ್ದವು.

16 Why did you tarry among the sheepfolds, to hear the piping for the flocks? Among the clans of Reuben there were great searchings of heart.ಮಂದೆಗಳ ಕೂಗನ್ನು ಕೇಳಿ ನೀನು ದೊಡ್ಡಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಪರಿಶೋ ಧನೆಗಳು ಇದ್ದವು.

17 Gilead stayed beyond the Jordan; and Dan, why did he abide with the ships? Asher sat still at the coast of the sea, settling down by his landings.ಗಿಲ್ಯಾದನು ಯೊರ್ದನಿಗೆ ಆಚೆ ವಾಸಿಸಿದನು. ದಾನನು ಹಡಗುಗಳಲ್ಲಿ ನಿಂತದ್ದೇನು? ಆಶೇರನು ಸಮುದ್ರದ ದಡದಲ್ಲಿದ್ದು ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು.

18 Zeb'ulun is a people that jeoparded their lives to the death; Naph'tali too, on the heights of the field.ಜೆಬುಲೂನನೂ ನಫ್ತಾ ಲಿಯೂ ಹೊಲದ ಎತ್ತರವಾದ ಸ್ಥಳಗಳಲ್ಲಿ ಮರಣಕ್ಕೂ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಇಟ್ಟ ಜನರಾ ಗಿದ್ದರು.

19 "The kings came, they fought; then fought the kings of Canaan, at Ta'anach, by the waters of Megid'do; they got no spoils of silver.ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ.

20 From heaven fought the stars, from their courses they fought against Sis'era.ಆಕಾಶದಲ್ಲಿ ಇರುವ ವುಗಳು ಯುದ್ಧಮಾಡಿದವು; ನಕ್ಷತ್ರಗಳು ತಮ್ಮ ಓಟಗ ಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧಮಾಡಿದವು.

21 The torrent Kishon swept them away, the onrushing torrent, the torrent Kishon. March on, my soul, with might!ಕೀಷೋನ್‌ ನದಿಯು, ಆ ಹಳೇದಾದ ಕೀಷೋನ್‌ ನದಿಯು ಅವರನ್ನು ಬಡಕೊಂಡು ಹೋಯಿತು. ಓ ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದಿ.

22 "Then loud beat the horses' hoofs with the galloping, galloping of his steeds.ಆಗ ನೆಲವನ್ನು ಘಟ್ಟಿಸಿ ಓಡುವ ಅವರ ಬಲವಾದ ಕುದುರೆಗಳು ತಮ್ಮ ಘಟನೆಯಿಂದ ಗೊರಿಶೇಗಳನ್ನು ಒಡೆದುಬಿಟ್ಟವು.

23 "Curse Meroz, says the angel of the LORD, curse bitterly its inhabitants, because they came not to the help of the LORD, to the help of the LORD against the mighty.ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.

24 "Most blessed of women be Ja'el, the wife of Heber the Ken'ite, of tent-dwelling women most blessed.ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇ ಲಳು ಸ್ತ್ರೀಯರಲ್ಲಿ ಅಧಿಕವಾಗಿ ಆಶೀರ್ವದಿಸಲ್ಪಡು ವಳು; ಸ್ತ್ರೀಯರೊಳಗೆ ಅಧಿಕವಾಗಿ ಗುಡಾರದಲ್ಲಿ ಆಶೀರ್ವದಿಸಲ್ಪಡುವಳು.

25 He asked water and she gave him milk, she brought him curds in a lordly bowl.ಅವನು ನೀರನ್ನು ಕೇಳಿ ದನು; ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.

26 She put her hand to the tent peg and her right hand to the workmen's mallet; she struck Sis'era a blow, she crushed his head, she shattered and pierced his temple.ತನ್ನ ಕೈಯಲ್ಲಿ ಮೊಳೆಯನ್ನು ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆ ಯನ್ನು ತೆಗೆದುಕೊಂಡಳು; ಅವಳು ಸೀಸೆರನನ್ನು ಸುತ್ತಿಗೆ ಯಿಂದ ಹೊಡೆದಳು; ಅವಳು ಅವನ ಕಣತಲೆಯನ್ನು ತಿವಿದು ಹೊಡೆದಳು. ಅವನ ತಲೆಯನ್ನು ಹೊಡೆದು ಬಿಟ್ಟಳು.

27 He sank, he fell, he lay still at her feet; at her feet he sank, he fell; where he sank, there he fell dead.ಅವಳ ಕಾಲುಗಳ ಹತ್ತಿರ ಅವನು ಬೊಗ್ಗಿ ಬಿದ್ದು ಮಲಗಿದನು; ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು; ಎಲ್ಲಿ ಬಾಗಿಬಿದ್ದನೋ ಅಲ್ಲಿಯೇ ಬಿದ್ದು ಸತ್ತನು.

28 "Out of the window she peered, the mother of Sis'era gazed through the lattice: 'Why is his chariot so long in coming? Why tarry the hoofbeats of his chariots?'ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿ ಯಿಂದ ಕೂಗಿದಳು--ಅವನ ರಥವು ಬರುವದಕ್ಕೆ ಇಷ್ಟು ಆಲಸ್ಯವಾದದ್ದೇನು? ಅವನ ರಥಗಳ ಗಾಲಿ ಗಳು ಹಿಂದುಳಿದು ಇರುವದೇನು?

29 Her wisest ladies make answer, nay, she gives answer to herself,ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಪ್ರತ್ಯುತ್ತರಕೊಟ್ಟರು. ಹೌದು, ಅವಳೇ ತನಗೆ ಬದಲು ಮಾತು ಕೇಳಿ ಕೊಂಡಳು.

30 'Are they not finding and dividing the spoil? --A maiden or two for every man; spoil of dyed stuffs for Sis'era, spoil of dyed stuffs embroidered, two pieces of dyed work embroidered for my neck as spoil?'ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?

31 "So perish all thine enemies, O LORD! But thy friends be like the sun as he rises in his might." And the land had rest for forty years.ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.

Kannada Bible