Joshua 22 - WEB (Kannada)
1 Then Joshua called the Reubenites, and the Gadites, and the half-tribe of Manasseh,ಆಗ ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರ ದವರನ್ನೂ ಕರಿಸಿ ಅವರಿಗೆ--
2 and said to them, You have kept all that Moses the servant of Yahweh commanded you, and have listened to my voice in all that I commanded you:ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ನೀವು ಕೈಕೊಂಡು ನಾನು ನಿಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನನ್ನ ಮಾತಿಗೆ ವಿಧೇಯರಾದಿರಿ.
3 you have not left your brothers these many days to this day, but have kept the charge of the commandment of Yahweh your God.ನೀವು ಬಹಳ ದಿವಸ ಗಳಿಂದ ಇಂದಿನ ವರೆಗೂ ನಿಮ್ಮ ಸಹೋದರರನ್ನು ಕೈ ಬಿಡದೆ ನಿಮ್ಮ ದೇವರಾದ ಕರ್ತನು ಆಜ್ಞಾಪಿಸಿದ ಅಪ್ಪಣೆಯನ್ನು ಕೈಕೊಂಡಿರಿ.
4 Now Yahweh your God has given rest to your brothers, as he spoke to them: therefore now turn you, and get you to your tents, to the land of your possession, which Moses the servant of Yahweh gave you beyond the Jordan.ಈಗ ನಿಮ್ಮ ದೇವರಾದ ಕರ್ತನು ಅವರಿಗೆ ವಾಗ್ದಾನಮಾಡಿದ ಪ್ರಕಾರ ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟನು. ಮತ್ತು ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ನಿಮಗೆ ಕೊಟ್ಟ ಸ್ವಾಸ್ತ್ಯವಾದ ನಿಮ್ಮ ದೇಶದಲ್ಲಿರುವ ನಿಮ್ಮ ಡೇರೆಗಳಿಗೆ ತಿರಿಗಿ ಹೋಗಿರಿ.
5 Only take diligent heed to do the commandment and the law which Moses the servant of Yahweh commanded you, to love Yahweh your God, and to walk in all his ways, and to keep his commandments, and to cleave to him, and to serve him with all your heart and with all your soul.ಆದರೆ ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಆಜ್ಞೆ ಯನ್ನೂ ನ್ಯಾಯಪ್ರಮಾಣವನ್ನೂ ಜಾಗ್ರತೆಯಾಗಿ ಕೈಕೊಂಡು ನಡೆದು ನಿಮ್ಮ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಆತನ ಆಜ್ಞೆಗಳನ್ನು ಕೈಕೊಂಡು ಆತನನ್ನು ಅಂಟಿ ಕೊಂಡು ಆತನನ್ನು ನಿಮ್ಮ ಪೂರ್ಣಹೃದಯ ದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸಿರಿ ಎಂದು ಹೇಳಿದನು.
6 So Joshua blessed them, and sent them away; and they went to their tents.ಯೆಹೋಶುವನು ಅವರನ್ನು ಆಶೀರ್ವದಿಸಿ ಕಳುಹಿಸಿದ ಮೇಲೆ ಅವರು ತಮ್ಮ ಡೇರೆಗಳಿಗೆ ಹೋದರು.
7 Now to the one half-tribe of Manasseh Moses had given [inheritance] in Bashan; but to the other half gave Joshua among their brothers beyond the Jordan westward; moreover when Joshua sent them away to their tents, he blessed them,ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಬಾಷಾನಿನಲ್ಲಿ ಸ್ವಾಸ್ತ್ಯ ಕೊಟ್ಟಿದ್ದನು. ಆದರೆ ಅವರ ಉಳಿದ ಅರ್ಧ ಗೋತ್ರಕ್ಕೆ ಯೆಹೋ ಶುವನು ಯೊರ್ದನಿನ ಪಶ್ಚಿಮಕ್ಕೆ ಅವರ ಸಹೋದರರ ನಡುವೆ ಸ್ವಾಸ್ತ್ಯವನ್ನು ಕೊಟ್ಟನು. ಇದಲ್ಲದೆ ಯೆಹೋ ಶುವನು ಅವರನ್ನು ಅವರ ಡೇರೆಗಳಿಗೆ ಕಳುಹಿಸಿ ಬಿಡುವಾಗ ಅವರನ್ನು ಆಶೀರ್ವದಿಸಿದನು.
8 and spoke to them, saying, Return with much wealth to your tents, and with very much cattle, with silver, and with gold, and with brass, and with iron, and with very much clothing: divide the spoil of your enemies with your brothers.ಅವ ರೊಂದಿಗೆ ಮಾತನಾಡಿ--ನೀವು ಬಹು ಆಸ್ತಿಯುಳ್ಳವ ರಾಗಿ ಪಶುಕುರಿ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣವನ್ನು ಬಹು ಹೆಚ್ಚಾದ ವಸ್ತ್ರಗಳೊಂದಿಗೆ ಹಿಂತಿರುಗಿ ನಿಮ್ಮ ಡೇರೆಗಳಿಗೆ ಹೋಗಿ ನಿಮ್ಮ ಶತ್ರುಗಳ ಕೊಳ್ಳೆಯನ್ನು ನಿಮ್ಮ ಸಹೋದರರ ಸಂಗಡ ಹಂಚಿಕೊಳ್ಳಿರಿ ಅಂದನು.
9 The children of Reuben and the children of Gad and the half-tribe of Manasseh returned, and departed from the children of Israel out of Shiloh, which is in the land of Canaan, to go to the land of Gilead, to the land of their possession, which they owned, according to the commandment of Yahweh by Moses.ಕರ್ತನು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ತಾವು ವಶಮಾಡಿಕೊಂಡ ತಮ್ಮ ಸ್ವಾಸ್ತ್ಯದ ದೇಶವಾಗಿರುವ ಗಿಲ್ಯಾದ್ ದೇಶಕ್ಕೆ ಹೋಗುವದಕ್ಕೆ ಕಾನಾನ್ ದೇಶದಲ್ಲಿರುವ ಶೀಲೋ ವನ್ನೂ ಇಸ್ರಾಯೇಲ್ ಮಕ್ಕಳನ್ನೂ ಬಿಟ್ಟು ತಿರಿಗಿ ಹೋದರು.
10 When they came to the region about the Jordan, that is in the land of Canaan, the children of Reuben and the children of Gad and the half-tribe of Manasseh built there an altar by the Jordan, a great altar to look on.ಕಾನಾನ್ ದೇಶದಲ್ಲಿರುವ ಯೊರ್ದನಿನ ಪ್ರಾಂತ್ಯಕ್ಕೆ ಬಂದಾಗ ಅದರ ಬಳಿಯಲ್ಲಿ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರ ದವರೂ ನೋಟಕ್ಕೆ ದೊಡ್ಡದಾದ ಯಜ್ಞವೇದಿಯನ್ನು ಕಟ್ಟಿದರು.
11 The children of Israel heard say, Behold, the children of Reuben and the children of Gad and the half-tribe of Manasseh have built an altar in the forefront of the land of Canaan, in the region about the Jordan, on the side that pertains to the children of Israel.ಇಗೋ, ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧಗೋತ್ರದವರೂ ಕಾನಾನ್ ದೇಶಕ್ಕೆ ಎದುರಾಗಿ ಇಸ್ರಾಯೇಲ್ ಮಕ್ಕಳು ದಾಟಿ ಬಂದ ಯೊರ್ದನಿನ ಪ್ರಾಂತ್ಯದಲ್ಲಿ ಯಜ್ಞವೇದಿಯನ್ನು ಕಟ್ಟಿದರೆಂದು ಇಸ್ರಾಯೇಲ್ ಮಕ್ಕಳಿಗೂ ಕೇಳಿ ಬಂತು.
12 When the children of Israel heard of it, the whole congregation of the children of Israel gathered themselves together at Shiloh, to go up against them to war.ಇಸ್ರಾಯೇಲ್ ಮಕ್ಕಳು ಅದನ್ನು ಕೇಳಿದಾಗ ಸಭೆಯಲ್ಲಾ ಒಟ್ಟಾಗಿ ಅವರಿಗೆ ವಿರೋಧವಾಗಿ ಯುದ್ಧ ಮಾಡುವದಕ್ಕೆ ಶೀಲೋವಿನಲ್ಲಿ ಕೂಡಿದರು.
13 The children of Israel sent to the children of Reuben, and to the children of Gad, and to the half-tribe of Manasseh, into the land of Gilead, Phinehas the son of Eleazar the priest,ಗಿಲ್ಯಾದ್ ದೇಶದಲ್ಲಿರುವ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಯಾಜಕನಾದ ಎಲಿಯಾ ಜರನ ಮಗನಾದ ಫಿನೇಹಾಸನನ್ನೂ
14 and with him ten princes, one prince of a fathers' house for each of the tribes of Israel; and they were everyone of them head of their fathers' houses among the thousands of Israel.ಅವನ ಸಂಗಡ ಇಸ್ರಾಯೇಲಿನ ಎಲ್ಲಾ ಗೋತ್ರಗಳ ಪ್ರತಿ ತಂದೆ ಮನೆಯ ಮುಖ್ಯಸ್ಥನ ಪ್ರಕಾರ ಹತ್ತುಮಂದಿ ಪ್ರಧಾನ ರನ್ನೂ ಕಳುಹಿಸಿದರು. ಇವರಲ್ಲಿ ಪ್ರತಿ ಮನುಷ್ಯನು ಇಸ್ರಾಯೇಲ್ ಸಹಸ್ರಗಳಲ್ಲಿ ತನ್ನ ತನ್ನ ತಂದೆಯ ಮನೆಗೆ ಮುಖ್ಯಸ್ಥನಾಗಿದ್ದನು.
15 They came to the children of Reuben, and to the children of Gad, and to the half-tribe of Manasseh, to the land of Gilead, and they spoke with them, saying,ಇವರು ಗಿಲ್ಯಾದ್ ದೇಶದಲ್ಲಿ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಬಂದು ಅವರ ಸಂಗಡ ಮಾತನಾಡಿ
16 Thus says the whole congregation of Yahweh, What trespass is this that you have committed against the God of Israel, to turn away this day from following Yahweh, in that you have built you an altar, to rebel this day against Yahweh?ಕರ್ತನ ಸಭೆಯೆಲ್ಲಾ ಹೇಳುವದೇನಂದರೆ, ನೀವು ಈ ಹೊತ್ತು ಕರ್ತನ ಕಡೆಗೆ ತಿರುಗದೆ ಆತನಿಗೆ ವಿರೋಧವಾಗಿ ತಿರುಗಿ ಬೀಳುವ ಹಾಗೆ ನಿಮಗೆ ಒಂದು ಯಜ್ಞವೇದಿ ಯನ್ನು ಕಟ್ಟಿಕೊಂಡು ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು?
17 Is the iniquity of Peor too little for us, from which we have not cleansed ourselves to this day, although there came a plague on the congregation of Yahweh,ಪೆಗೋರದಲ್ಲಿ ಆದ ದುಷ್ಟ ತನವು ನಮಗೆ ಅಲ್ಪವೋ? ಕರ್ತನ ಸಭೆಯ ಮೇಲೆ ವ್ಯಾಧಿ ಬಂದಾಗ್ಯೂ ಈ ದಿನದ ವರೆಗೂ ಅದರಿಂದ ನಾವು ಶುದ್ಧವಾಗಲಿಲ್ಲ.
18 that you must turn away this day from following Yahweh? and it will be, seeing you rebel today against Yahweh, that tomorrow he will be angry with the whole congregation of Israel.ಈಹೊತ್ತು ಕರ್ತನ ಕಡೆ ಯಿಂದ ತಿರಿಗಿ ಹೋಗುತ್ತೀರಲ್ಲಾ? ಈಹೊತ್ತು ಕರ್ತ ನಿಗೆ ವಿರೋಧವಾಗಿ ತಿರುಗಿ ಬಿದ್ದಾಗ ನಾಳೆ ಆತನು ಇಸ್ರಾಯೇಲ್ ಸಭೆಯಲ್ಲಾದರ ಮೇಲೆ ರೌದ್ರವುಳ್ಳವ ನಾಗುವನು.
19 However, if the land of your possession be unclean, then pass over to the land of the possession of Yahweh, in which Yahweh's tent dwells, and take possession among us: but don't rebel against Yahweh, nor rebel against us, in building you an altar besides the altar of Yahweh our God.ನಿಮ್ಮ ಸ್ವಾಸ್ತ್ಯದ ದೇಶವು ಅಶುದ್ಧ ವಾಗಿದ್ದರೆ ಕರ್ತನ ಗುಡಾರವಿರುವ ಕರ್ತನ ಸ್ವಾಸ್ತ್ಯದ ದೇಶಕ್ಕೆ ನೀವು ದಾಟಿ ಬಂದು ನಮ್ಮ ಮಧ್ಯದಲ್ಲಿ ಸ್ವಾಸ್ತ್ಯವನ್ನು ತೆಗೆದುಕೊಳ್ಳಿರಿ. ಕರ್ತನ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವದರಿಂದ ನೀವು ಕರ್ತನಿಗೂ ನಮಗೂ ವಿರೋಧವಾಗಿ ತಿರುಗಿಬೀಳಬೇಡಿರಿ;
20 Didn't Achan the son of Zerah commit a trespass in the devoted thing, and wrath fell on all the congregation of Israel? and that man didn't perish alone in his iniquity.ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
21 Then the children of Reuben and the children of Gad and the half-tribe of Manasseh answered, and spoke to the heads of the thousands of Israel,ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ಇಸ್ರಾಯೇಲ್ ಸಹಸ್ರ ಮುಖ್ಯಸ್ಥರಿಗೆ ಪ್ರತ್ಯುತ್ತರವಾಗಿ--
22 The Mighty One, God, Yahweh, the Mighty One, God, Yahweh, he knows; and Israel he shall know: if it be in rebellion, or if in trespass against Yahweh (don't save us this day),ದೇವಾದಿ ದೇವರಾದ ಕರ್ತನೇ, ದೇವಾದಿ ದೇವರಾದ ಕರ್ತನೇ ತಿಳಿದಿದ್ದಾನೆ. ಇಸ್ರಾಯೇಲ್ಯರಿಗೂ ತಿಳಿಯುವದು. ಇದು ತಿರುಗಿ ಬೀಳುವದರಿಂದಲಾದರೂ ಕರ್ತನಿಗೆ ವಿರೋಧವಾಗಿ ಅಪರಾಧಮಾಡುವದರಿಂದಲಾದರೂ ಆಗಿದ್ದರೆ ನಮ್ಮನ್ನು ಈಹೊತ್ತು ರಕ್ಷಿಸಬಾರದು.
23 that we have built us an altar to turn away from following Yahweh; or if to offer thereon burnt offering or meal-offering, or if to offer sacrifices of peace-offerings thereon, let Yahweh himself require it;ನಾವು ಕರ್ತನ ಕಡೆಗೆ ತಿರುಗಿಕೊಂಡು ದಹನಬಲಿಗಳ ನ್ನಾದರೂ ಆಹಾರ ಸಮರ್ಪಣೆಯನ್ನಾದರೂ ಸಮಾ ಧಾನದ ಬಲಿಗಳನ್ನಾದರೂ ಅದರ ಮೇಲೆ ಅರ್ಪಿಸುವ ದಕ್ಕೋಸ್ಕರ ಯಜ್ಞವೇದಿಯನ್ನು ನಮಗಾಗಿ ಕಟ್ಟಿದ್ದರೆ ಕರ್ತನು ಅದನ್ನು ವಿಚಾರಿಸಲಿ.
24 and if we have not [rather] out of carefulness done this, [and] of purpose, saying, In time to come your children might speak to our children, saying, What have you to do with Yahweh, the God of Israel?ಆದರೆ ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ--ಇಸ್ರಾಯೇಲಿನ ದೇವರಾದ ಕರ್ತನಿಗೂ ನಿಮಗೂ ಏನು?
25 for Yahweh has made the Jordan a border between us and you, you children of Reuben and children of Gad; you have no portion in Yahweh: so might your children make our children cease from fearing Yahweh.ರೂಬೇನನ ಮಕ್ಕಳೇ, ಗಾದನ ಮಕ್ಕಳೇ, ಕರ್ತನು ನಿಮಗೂ ನಮಗೂ ಯೊರ್ದನನ್ನು ಮೇರೆ ಮಾಡಿದ್ದರಿಂದ ಕರ್ತನ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲವೆಂದು ಹೇಳಿ ನಮ್ಮಲ್ಲಿ ನಿಮಗೆ ಭಾಗವು ಇಲ್ಲ ವೆಂದು ಹೇಳಿ ನಮ್ಮ ಮಕ್ಕಳನ್ನು ಕರ್ತನಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು;
26 Therefore we said, Let us now prepare to build us an altar, not for burnt offering, nor for sacrifice:ಆದದರಿಂದ ನಾವು ದಹನಬಲಿ ಗೋಸ್ಕರವಾದರೂ ಬಲಿಗೋಸ್ಕರವಾದರೂ ಅಲ್ಲ, ಬರುವಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆಕರ್ತನಲ್ಲಿ ನಿಮಗೆ ಭಾಗವಿಲ್ಲವೆಂದು ಹೇಳದೆ ಇರುವ ಹಾಗೆಯೂ
27 but it shall be a witness between us and you, and between our generations after us, that we may do the service of Yahweh before him with our burnt offerings, and with our sacrifices, and with our peace-offerings; that your children may not tell our children in time to come, You have no portion in Yahweh.ನಾವು ಕರ್ತನ ಸನ್ನಿಧಿಯಲ್ಲಿ ದಹನ ಬಲಿಗಳಿಂದಲೂ ಯಜ್ಞಗಳಿಂದಲೂ ಸಮಾಧಾನದ ಬಲಿಗಳಿಂದಲೂ ಆತನನ್ನು ಸೇವಿಸುವ ಹಾಗೆಯೂ ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿ ಯವರಿಗೂ ಮಧ್ಯದಲ್ಲಿ ಸಾಕ್ಷಿ ಉಂಟಾಗುವ ಹಾಗೆ ಯಜ್ಞವೇದಿಯನ್ನು ಕಟ್ಟಿಕೊಳ್ಳುವದಕ್ಕೆ ಮಾಡಿದೆವು.
28 Therefore said we, It shall be, when they so tell us or to our generations in time to come, that we shall say, Behold the pattern of the altar of Yahweh, which our fathers made, not for burnt offering, nor for sacrifice; but it is a witness between us and you.ನಾವು ಅಂದುಕೊಂಡದ್ದೇನಂದರೆ--ಮುಂದೆ ನಮ ಗಾದರೂ ನಮ್ಮ ಸಂತತಿಯವರಿಗಾದರೂ ಹಾಗೆ ಹೇಳಿದರೆ ಆಗ ದಹನಬಲಿಗಳಿಗಾದರೂ ಬಲಿ ಗಳಿಗಾದರೂ ಅಲ್ಲ, ನಮಗೂ ನಿಮಗೂ ನಡುವೆ ಸಾಕ್ಷಿಗೋಸ್ಕರ ನಮ್ಮ ತಂದೆಗಳು ಮಾಡಿದ ಕರ್ತನ ಬಲಿಪೀಠದ ಹೋಲಿಕೆಯಾದ ಯಜ್ಞವೇದಿಯನ್ನು ನೋಡಿರಿ ಎಂದು ಹೇಳುವರು.
29 Far be it from us that we should rebel against Yahweh, and turn away this day from following Yahweh, to build an altar for burnt-offering, for meal-offering, or for sacrifice, besides the altar of Yahweh our God that is before his tent.ನಮ್ಮ ದೇವರಾದ ಕರ್ತನ ಗುಡಾರದ ಮುಂದೆ ಇರುವ ಆತನ ಯಜ್ಞ ವೇದಿಯನ್ನು ಹೊರತಾಗಿ ನಾವು ದಹನಬಲಿಗಳಿ ಗೋಸ್ಕರವಾಗಿಯೂ ಆಹಾರ ಸಮರ್ಪಣೆಗಳಿ ಗೋಸ್ಕರವಾಗಿಯೂ ಬಲಿಗಳಿಗೋಸ್ಕರವಾಗಿಯೂ ಮತ್ತೊಂದು ಯಜ್ಞವೇದಿಯನ್ನು ಕಟ್ಟಿ ಕರ್ತನಿಗೆ ವಿರೋಧವಾಗಿ ತಿರುಗಿ ಬೀಳುವದೂ ಆತನ ಕಡೆ ಯಿಂದ ಹಿಂತಿರುಗಿ ಹೋಗುವದೂ ನಮಗೆ ದೂರ ವಾಗಿರಲಿ ಅಂದರು.
30 When Phinehas the priest, and the princes of the congregation, even the heads of the thousands of Israel that were with him, heard the words that the children of Reuben and the children of Gad and the children of Manasseh spoke, it pleased them well.ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್ ಸಹಸ್ರಗಳ ಮುಖ್ಯಸ್ಥರೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಮಕ್ಕಳೂ ಹೇಳಿದ ಮಾತುಗಳನ್ನು ಕೇಳಿ ದಾಗ ಅವರಿಗೆ ಮೆಚ್ಚಿಕೆಯಾಯಿತು.
31 Phinehas the son of Eleazar the priest said to the children of Reuben, and to the children of Gad, and to the children of Manasseh, This day we know that Yahweh is in the midst of us, because you have not committed this trespass against Yahweh: now have you delivered the children of Israel out of the hand of Yahweh.ಯಾಜಕ ನಾಗಿರುವ ಎಲ್ಲಾಜಾರನ ಕುಮಾರನಾದ ಫೀನೆಹಾಸನು ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಮನಸ್ಸೆಯ ಮಕ್ಕಳಿಗೂ--ನೀವು ಕರ್ತನಿಗೆ ವಿರೋಧವಾಗಿ ಈ ಅಪರಾಧವನ್ನು ಮಾಡದೆ ಇರುವದರಿಂದ ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೆಂದು ಇಂದು ಅರಿತಿದ್ದೇವೆ. ಈಗ ನೀವು ಇಸ್ರಾಯೇಲ್ ಮಕ್ಕಳನ್ನು ಕರ್ತನ ಕೈಗೆ ತಪ್ಪಿಸಿದ್ದೀ ಅಂದನು.
32 Phinehas the son of Eleazar the priest, and the princes, returned from the children of Reuben, and from the children of Gad, out of the land of Gilead, to the land of Canaan, to the children of Israel, and brought them word again.ಯಾಜಕನಾದ ಎಲಿಯಾಜರನ ಮಗನಾದ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್ ದೇಶದಲ್ಲಿರುವ ರೂಬೇನನ ಮಕ್ಕಳನ್ನೂ ಗಾದನ ಮಕ್ಕಳನ್ನೂ ಬಿಟ್ಟು ಕಾನಾನ್ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ಬಳಿಗೆ ತಿರಿಗಿ ಬಂದು ಅವರಿಗೆ ವರ್ತಮಾನವನ್ನು ತಂದರು.
33 The thing pleased the children of Israel; and the children of Israel blessed God, and spoke no more of going up against them to war, to destroy the land in which the children of Reuben and the children of Gad lived.ಆ ಮಾತು ಇಸ್ರಾ ಯೇಲ್ ಮಕ್ಕಳಿಗೆ ಮೆಚ್ಚಿಗೆಯಾಯಿತು. ಆದದರಿಂದ ಇಸ್ರಾಯೇಲ್ ಮಕ್ಕಳೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ನಿವಾಸವಾಗಿದ್ದ ದೇಶವನ್ನು ನಾಶಮಾಡ ಬೇಕೆಂದು ಅವರ ಮೇಲೆ ಯುದ್ಧಕ್ಕೆ ಹೋಗಬೇಕೆಂಬ ಮಾತನ್ನು ಬಿಟ್ಟು ದೇವರನ್ನು ಕೊಂಡಾಡಿದರು.
34 The children of Reuben and the children of Gad called the altar [Ed]: For, [said they], it is a witness between us that Yahweh is God.ರೂಬೇನನ ಮಕ್ಕಳೂ ಗಾದನ ಮಕ್ಕಳೂ ಆ ಯಜ್ಞವೇದಿಗೆ ಸಾಕ್ಷಿ ಎಂಬ ಅರ್ಥವಾಗುವ ಏದ್ ಎಂದು ಹೆಸರಿಟ್ಟರು. ನಮ್ಮ ಮಧ್ಯ ಕರ್ತನೇ ದೇವರಾಗಿ ದ್ದಾನೆ ಎಂದು ಅದೇ ಸಾಕ್ಷಿಯಾಗಿರುವದು.
Kannada Bible