Joshua 10

fullscreen29 ಆಗ ಯೆಹೋಶುವನೂ ಅವನ ಸಂಗಡ ಸಮಸ್ತ ಇಸ್ರಾಯೇಲೂ ಮಕ್ಕೇದದಿಂದ ಲಿಬ್ನಕ್ಕೆ ಹೊರಟು ಹೋಗಿ ಲಿಬ್ನದ ಮೇಲೆ ಯುದ್ಧಮಾಡಿದರು.

fullscreen30 ಕರ್ತನು ಅದನ್ನೂ ಅದರ ಅರಸನನ್ನೂ ಇಸ್ರಾ ಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು; ಅವನು ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ನಾಶಮಾಡಿದನು. ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಕತ್ತಿಯಿಂದ ಹೊಡೆದು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆ ಅದರ ಅರಸನಿಗೂ ಮಾಡಿದನು.

fullscreen31 ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಿಬ್ನದಿಂದ ಲಾಕೀಷಿಗೆ ಹೊರಟು ಅದರ ಎದುರಿಗೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧ ಮಾಡಿದನು.

fullscreen32 ಕರ್ತನು ಲಾಕೀಷನ್ನು ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿ ಕೊಟ್ಟನು. ಅವನು ಅದನ್ನು ಎರಡನೇ ದಿನದಲ್ಲಿ ಹಿಡಿದು ಲಿಬ್ನಕ್ಕೆ ಮಾಡಿದಂತೆ ಸರಿಯಾಗಿ ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ಕತ್ತಿ ಯಿಂದ ಹೊಡೆದನು.

fullscreen33 ಆಗ ಗೆಜೆರಿನ ಅರಸನಾದ ಹೋರಾಮನು ಲಾಕೀಷಿಗೆ ಸಹಾಯಮಾಡಲು ಬಂದನು. ಆದರೆ ಒಬ್ಬನಾದರೂ ಉಳಿಯದಂತೆ ಯೆಹೋಶುವನು ಅವನನ್ನೂ ಅವನ ಜನರನ್ನೂ ಹೊಡೆದುಬಿಟ್ಟನು.

fullscreen34 ಯೆಹೋಶುವನೂ ಅವನ ಸಂಗಡ ಸಮಸ್ತ ಇಸ್ರಾಯೇಲೂ ಲಾಕೀಷಿನಿಂದ ಎಗ್ಲೋನಿಗೆ ಹೊರಟು ಅದಕ್ಕೆದುರಾಗಿ ಪಾಳೆಯಮಾಡಿಕೊಂಡು ಅದರ ಮೇಲೆ ಯುದ್ಧಮಾಡಿ

fullscreen35 ಅದೇ ದಿನದಲ್ಲಿ ಅದನ್ನು ಹಿಡಿದು ಅದನ್ನು ಕತ್ತಿಯಿಂದ ಹೊಡೆದರು. ಅವನು ಲಾಕೀಷಿಗೆ ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿ ಅದೇ ದಿನದಲ್ಲಿ ಅದರಲ್ಲಿರುವ ಸಕಲ ಪ್ರಾಣಗಳನ್ನು ಸಂಪೂರ್ಣವಾಗಿ ನಾಶಮಾಡಿದನು.

fullscreen36 ಯೆಹೋಶುವನು ಸಮಸ್ತ ಇಸ್ರಾಯೇಲಿನ ಸಂಗಡ ಎಗ್ಲೋನಿನಿಂದ ಹೆಬ್ರೋನಿಗೆ ಹೊರಟು ಹೋಗಿ ಮೇಲೆ ಯುದ್ಧಮಾಡಿ

fullscreen37 ಅದನ್ನು ಹಿಡಿದು ಅದನ್ನೂ ಅದರ ಅರಸನನ್ನೂ ಅದರ ಸಮಸ್ತ ಪಟ್ಟಣ ಗಳನ್ನೂ ಅವುಗಳಲ್ಲಿರುವ ಸಮಸ್ತ ಪ್ರಾಣಗಳನ್ನೂ ಕತ್ತಿಯಿಂದ ಹೊಡೆದು ಎಗ್ಲೋನಿಗೆ ಮಾಡಿದ್ದೆಲ್ಲಾ ದರ ಹಾಗೆ ಒಬ್ಬನನ್ನಾದರೂ ಉಳಿಸದೆ ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ಸಂಪೂರ್ಣ ನಾಶಮಾಡಿದನು.

fullscreen38 ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ದೆಬೀರಕ್ಕೆ ತಿರುಗಿಕೊಂಡು ಅದರ ಮೇಲೆ ಯುದ್ಧಮಾಡಿ

fullscreen39 ಅದನ್ನೂ ಅದರ ಅರಸನನ್ನೂ ಸಮಸ್ತ ಪಟ್ಟಣ ಗಳನ್ನೂ ಹಿಡಿದು ಅವುಗಳನ್ನು ಕತ್ತಿಯಿಂದ ಹೊಡೆದು ಅದರಲ್ಲಿರುವ ಸಮಸ್ತ ಪ್ರಾಣಗಳನ್ನು ಒಬ್ಬನನ್ನಾ ದರೂ ಉಳಿಸದೆ ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು.

fullscreen40 ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ ತೆಂಕಣ ದೇಶವನ್ನೂ ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸು ಗಳೆಲ್ಲರನ್ನೂ ಒಬ್ಬನನ್ನಾದರೂ ಉಳಿಸದೆ ಹೊಡೆದು ಇಸ್ರಾಯೇಲಿನ ದೇವರಾದ ಕರ್ತನು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶ ಮಾಡಿದನು.

fullscreen41 ಯೆಹೋಶುವನು ಕಾದೇಶ್‌ ಬರ್ನೇಯದಿಂದ ಗಾಜದ ವರೆಗೂ ಇರುವವರನ್ನೂ ಗೋಷೆನಿನ ಸಮಸ್ತ ದೇಶವನ್ನೂ ಗಿಬ್ಯೋನಿನ ವರೆಗೆ ಹೊಡೆದುಬಿಟ್ಟನು.

fullscreen42 ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.