Bible

John 19 - KJV (Kannada)

1 Then Pilate therefore took Jesus, and scourged him.ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಆತನನ್ನು ಕೊರಡೆ ಯಿಂದ ಹೊಡಿಸಿದನು.

2 And the soldiers platted a crown of thorns, and put it on his head, and they put on him a purple robe,ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಊದಾ ಬಣ್ಣದ ನಿಲುವಂಗಿಯನ್ನು ತೊಡಿಸಿ--

3 And said, Hail, King of the Jews! and they smote him with their hands.ಯೆಹೂದ್ಯರ ಅರಸನೇ, ವಂದನೆ! ಎಂದು ಹೇಳಿ ತಮ್ಮ ಕೈಗಳಿಂದ ಆತನನ್ನು ಹೊಡೆದರು.

4 Pilate therefore went forth again, and saith unto them, Behold, I bring him forth to you, that ye may know that I find no fault in him.ಆದದರಿಂದ ಪಿಲಾತನು ತಿರಿಗಿ ಹೊರಕ್ಕೆ ಹೋಗಿ ಅವರಿಗೆ--ಇಗೋ, ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲವೆಂದು ನೀವು ತಿಳಿದುಕೊಳ್ಳುವ ಹಾಗೆ ಆತನನ್ನು ನಿಮ್ಮ ಮುಂದೆ ತರುತ್ತೇನೆ ಅಂದನು.

5 Then came Jesus forth, wearing the crown of thorns, and the purple robe. And Pilate saith unto them, Behold the man!ಆಗ ಯೇಸು ಮುಳ್ಳಿನ ಕಿರೀಟವನ್ನು ಮತ್ತು ಊದಾಬಣ್ಣದ ನಿಲುವಂಗಿಯನ್ನು ಧರಿಸಿಕೊಂಡವನಾಗಿ ಹೊರಗೆ ಬರಲು ಪಿಲಾತನು ಅವರಿಗೆ--ಇಗೋ, ಈ ಮನುಷ್ಯನು! ಅಂದನು.

6 When the chief priests therefore and officers saw him, they cried out, saying, Crucify him, crucify him. Pilate saith unto them, Take ye him, and crucify him: for I find no fault in him.ಪ್ರಧಾನಯಾಜಕರೂ ಅಧಿಕಾರಿಗಳೂ ಆತನನ್ನು ನೋಡಿದಾಗ--ಅವನನ್ನು ಶಿಲುಬೆಗೆ ಹಾಕಿಸು, ಅವ ನನ್ನು ಶಿಲುಬೆಗೆ ಹಾಕಿಸು ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ಹೋಗಿ ಶಿಲುಬೆಗೆ ಹಾಕಿರಿ; ಯಾಕಂದರೆ ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ ಅಂದನು.

7 The Jews answered him, We have a law, and by our law he ought to die, because he made himself the Son of God.ಯೆಹೂದ್ಯರು ಪ್ರತ್ಯುತ್ತರವಾಗಿ ಅವ ನಿಗೆ--ನಮ್ಮಲ್ಲಿ ಒಂದು ನ್ಯಾಯಪ್ರಮಾಣವಿದೆ ಮತ್ತು ನಮ್ಮ ಆ ನ್ಯಾಯಪ್ರಮಾಣದ ಪ್ರಕಾರ ಅವನು ಸಾಯಲೇಬೇಕು; ಯಾಕಂದರೆ ಅವನು ತನ್ನನ್ನು ದೇವರಮಗನೆಂದು ಮಾಡಿಕೊಂಡಿದ್ದಾನೆ ಅಂದರು.

8 When Pilate therefore heard that saying, he was the more afraid;ಪಿಲಾತನು ಈ ಮಾತನ್ನು ಕೇಳಿದಾಗ ಇನ್ನೂ ಬಹಳವಾಗಿ ಭಯಪಟ್ಟನು.

9 And went again into the judgment hall, and saith unto Jesus, Whence art thou? But Jesus gave him no answer.ತಿರಿಗಿ ನ್ಯಾಯಾಲಯ ದೊಳಗೆ ಹೋಗಿ ಯೇಸುವಿಗೆ--ನೀನು ಎಲ್ಲಿಂದ ಬಂದವನು ಎಂದು ಆತನನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರಕೊಡಲಿಲ್ಲ.

10 Then saith Pilate unto him, Speakest thou not unto me? knowest thou not that I have power to crucify thee, and have power to release thee?ಆಗ ಪಿಲಾತನು ಆತನಿಗೆ--ನೀನು ನನ್ನ ಸಂಗಡ ಮಾತ ನಾಡುವದಿಲ್ಲವೋ? ನಾನು ನಿನ್ನನ್ನು ಶಿಲುಬೆಗೆ ಹಾಕಿಸುವದಕ್ಕೂ ನಿನ್ನನ್ನು ಬಿಡಿಸುವದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯುವದಿಲ್ಲವೋ ಎಂದು ಕೇಳಿದನು.

11 Jesus answered, Thou couldest have no power at all against me, except it were given thee from above: therefore he that delivered me unto thee hath the greater sin.ಅದಕ್ಕೆ ಯೇಸು--ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಾದ ಪಾಪ ಉಂಟು ಎಂದು ಉತ್ತರ ಕೊಟ್ಟನು.

12 And from thenceforth Pilate sought to release him: but the Jews cried out, saying, If thou let this man go, thou art not Caesar's friend: whosoever maketh himself a king speaketh against Caesar.ಅಂದಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಪಟ್ಟನು. ಆದರೆ ಯೆಹೂದ್ಯರು--ನೀನು ಈ ಮನುಷ್ಯನನ್ನು ಹೋಗಗೊಡಿಸಿದರೆ ಕೈಸರನಿಗೆ ಸ್ನೇಹಿತನಲ್ಲ; ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳು ವವನು ಕೈಸರನಿಗೆ ವಿರೋಧವಾಗಿ ಮಾತನಾಡುತ್ತಾನೆ ಎಂದು ಕೂಗಿ ಹೇಳಿದರು.

13 When Pilate therefore heard that saying, he brought Jesus forth, and sat down in the judgment seat in a place that is called the Pavement, but in the Hebrew, Gabbatha.ಆದದರಿಂದ ಪಿಲಾತನು ಆ ಮಾತನ್ನು ಕೇಳಿ ಯೇಸುವನ್ನು ಹೊರಗೆ ಕರ ಕೊಂಡು ಬಂದು ಇಬ್ರಿಯ ಮಾತಿನಲ್ಲಿ ಗಬ್ಬಥಾ ಎನಿಸಿಕೊಳ್ಳುವ ಕಲ್ಲು ಹಾಸಿದ ಕಟ್ಟೆ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ನ್ಯಾಯಾಸನದ ಮೇಲೆ ಕೂತುಕೊಂಡನು.

14 And it was the preparation of the passover, and about the sixth hour: and he saith unto the Jews, Behold your King!ಅದು ಪಸ್ಕಕ್ಕೆ ಸಿದ್ಧಮಾಡುವ ದಿನದಲ್ಲಿ ಸುಮಾರು ಆರನೇ ತಾಸಾಗಿತ್ತು; ಅವನು ಯೆಹೂದ್ಯರಿಗೆ--ಇಗೋ, ನಿಮ್ಮ ಅರಸನು ಅಂದನು.

15 But they cried out, Away with him, away with him, crucify him. Pilate saith unto them, Shall I crucify your King? The chief priests answered, We have no king but Caesar.ಆದರೆ ಅವರು--ತೆಗೆದುಹಾಕು, ತೆಗೆದುಹಾಕು, ಅವನನ್ನು ಶಿಲುಬೆಗೆ ಹಾಕು ಅಂದರು. ಅದಕ್ಕೆ ಪಿಲಾತನು ಅವರಿಗೆ--ನಿಮ್ಮ ಅರಸನನ್ನು ಶಿಲುಬೆಗೆ ಹಾಕಲೋ ಅಂದಾಗ ಪ್ರಧಾನಯಾಜಕರು--ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರ ಕೊಟ್ಟರು.

16 Then delivered he him therefore unto them to be crucified. And they took Jesus, and led him away.ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರಿಗೆ ಒಪ್ಪಿಸಲಾಗಿ ಅವರು ಆತನನ್ನು ಸಾಗಿಸಿಕೊಂಡು ಹೋದರು.

17 And he bearing his cross went forth into a place called the place of a skull, which is called in the Hebrew Golgotha:ಆತನು ತನ್ನ ಶಿಲುಬೆಯನ್ನು ಹೊತ್ತುಕೊಂಡು ಕಪಾಲವೆಂದು ಕರೆಯಲ್ಪಟ್ಟ ಸ್ಥಳಕ್ಕೆ ಹೋದನು. ಅದು ಇಬ್ರಿಯ ಭಾಷೆಯಲ್ಲಿ ಗೊಲ್ಗೊಥಾ (ಬುರುಡೆಗಳ ಸ್ಥಳ) ಎಂದು ಕರೆಯಲ್ಪಡುತ್ತದೆ.

18 Where they crucified him, and two other with him, on either side one, and Jesus in the midst.ಅಲ್ಲಿ ಇಬ್ಬರು ಅಂದರೆ ಆ ಕಡೆಗೊಬ್ಬನನ್ನೂ ಈ ಕಡೆಗೊಬ್ಬನನ್ನು ಮಧ್ಯೆ ಯೇಸುವನ್ನೂ ಇರಿಸಿ ಆತನೊಂದಿಗೆ ಶಿಲುಬೆಗೆ ಹಾಕಿದರು.

19 And Pilate wrote a title, and put it on the cross. And the writing was JESUS OF NAZARETH THE KING OF THE JEWS.ಇದಲ್ಲದೆ ಪಿಲಾತನು ಒಂದು ಶಿರೋನಾಮವನ್ನು ಬರೆಯಿಸಿ ಅದನ್ನು ಶಿಲುಬೆಯ ಮೇಲೆ ಇರಿಸಿದನು. ಆ ಬರಹವು ಏನಂದರೆ--ಯೆಹೂದ್ಯರ ಅರಸನಾದ ನಜರೇತಿನ ಯೇಸು ಎಂಬದೇ.

20 This title then read many of the Jews: for the place where Jesus was crucified was nigh to the city: and it was written in Hebrew, and Greek, and Latin.ಈ ಶಿರೋನಾಮ ವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಯೇಸು ಶಿಲುಬೆಗೆ ಹಾಕಲ್ಪಟ್ಟ ಆ ಸ್ಥಳವು ಆ ಪಟ್ಟಣಕ್ಕೆ ಸವಿಾಪವಾಗಿತ್ತು. ಇದು ಇಬ್ರಿಯ ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳಲ್ಲಿ ಬರೆಯಲ್ಪಟ್ಟಿತ್ತು.

21 Then said the chief priests of the Jews to Pilate, Write not, The King of the Jews; but that he said, I am King of the Jews.ಹೀಗಿರಲಾಗಿ ಯೆಹೂದ್ಯರ ಪ್ರಧಾನಯಾಜಕರು ಪಿಲಾತನಿಗೆ-- ಯೆಹೂದ್ಯರ ಅರಸನೆಂದು ಬರೆಯಬೇಡ; ಆದರೆ--ನಾನೇ ಯೆಹೂದ್ಯರ ಅರಸನಾಗಿದ್ದೇನೆ ಎಂದು ಅವನು ಹೇಳಿದನು ಎಂದು ಬರೆ ಅಂದರು.

22 Pilate answered, What I have written I have written.ಪಿಲಾತನು ಪ್ರತ್ಯುತ್ತರವಾಗಿ--ನಾನು ಬರೆದದ್ದು ಬರೆದಾಯಿತು ಅಂದನು.

23 Then the soldiers, when they had crucified Jesus, took his garments, and made four parts, to every soldier a part; and also his coat: now the coat was without seam, woven from the top throughout.ಸೈನಿಕರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಆತನ ವಸ್ತ್ರಗಳನ್ನು ತೆಗೆದು ಪ್ರತಿಯೊಬ್ಬ ಸೈನಿಕ ನಿಗೆ ಒಂದೊಂದು ಭಾಗದಂತೆ ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡರು. ಆತನ ಮೇಲಂಗಿಯನ್ನು ಸಹ ತಕ್ಕೊಂಡರು; ಆದರೆ ಆ ಅಂಗಿಯು ಹೊಲಿಗೆ ಇಲ್ಲದೆ ಮೇಲಿನಿಂದ ಉದ್ದಕ್ಕೂ ನೇಯ್ದದ್ದಾಗಿತ್ತು.

24 They said therefore among themselves, Let us not rend it, but cast lots for it, whose it shall be: that the scripture might be fulfilled, which saith, They parted my raiment among them, and for my vesture they did cast lots. These things therefore the soldiers did.ಆದದ ರಿಂದ ಅವರು--ನಾವು ಅದನ್ನು ಹರಿಯುವದು ಬೇಡ; ಆದರೆ ಅದು ಯಾರಿಗಾಗುವದೋ ಎಂದು ಅದಕ್ಕೋಸ್ಕರ ಚೀಟು ಹಾಕಿಕೊಳ್ಳೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು; ಹೀಗೆ--ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲುಮಾಡಿ ಕೊಂಡರು; ನನ್ನ ಮೇಲಂಗಿಗೋಸ್ಕರ ಚೀಟು ಹಾಕಿ ದರ

25 Now there stood by the cross of Jesus his mother, and his mother's sister, Mary the wife of Cleophas, and Mary Magdalene.ಆಗ ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ಸಹೋದರಿಯೂ ಕ್ಲೋಫನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.

26 When Jesus therefore saw his mother, and the disciple standing by, whom he loved, he saith unto his mother, Woman, behold thy son!ತನ್ನ ತಾಯಿಯು ಮತ್ತು ತಾನು ಪ್ರೀತಿಸಿದ ಶಿಷ್ಯನು ಹತ್ತಿರದಲ್ಲಿ ನಿಂತಿರುವದನ್ನು ಯೇಸು ನೋಡಿ ತನ್ನ ತಾಯಿಗೆ--ಸ್ತ್ರೀಯೇ, ಇಗೋ, ನಿನ್ನ ಮಗನು ಅಂದನು.

27 Then saith he to the disciple, Behold thy mother! And from that hour that disciple took her unto his own home.ಆಮೇಲೆ ಆತನು ಆ ಶಿಷ್ಯನಿಗೆ--ಇಗೋ, ನಿನ್ನ ತಾಯಿಯು ಅಂದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಸೇರಿಸಿಕೊಂಡನು.

28 After this, Jesus knowing that all things were now accomplished, that the scripture might be fulfilled, saith, I thirst.ಇದಾದ ಮೇಲೆ ಯೇಸು ಆಗ ಎಲ್ಲವೂ ಪೂರೈಸಲ್ಪಟ್ಟಿತೆಂದು ತಿಳಿದು ಬರಹವು ನೆರವೇರು ವಂತೆ--ನನಗೆ ನೀರಡಿಕೆಯಾಗಿದೆ ಅಂದನು.

29 Now there was set a vessel full of vinegar: and they filled a spunge with vinegar, and put it upon hyssop, and put it to his mouth.ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು; ಅವರು ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಹಿಸ್ಸೋಪಿಗೆ ಸಿಕ್ಕಿಸಿ ಆತನ ಬಾಯಿಗೆ ಇಟ್ಟರು.

30 When Jesus therefore had received the vinegar, he said, It is finished: and he bowed his head, and gave up the ghost.ಯೇಸು ಆ ಹುಳಿರಸವನ್ನು ತಕ್ಕೊಂಡ ಮೇಲೆ--ತೀರಿತು ಎಂದು ಹೇಳಿ ತನ್ನ ತಲೆಯನ್ನು ಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು.

31 The Jews therefore, because it was the preparation, that the bodies should not remain upon the cross on the sabbath day, (for that sabbath day was an high day,) besought Pilate that their legs might be broken, and that they might be taken away.ಅದು ಸಿದ್ಧತೆಯ ದಿನವಾದದ್ದರಿಂದ ಸಬ್ಬತ್‌ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರ ದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯರು ಪಿಲಾತನನ್ನು ಬೇಡಿಕೊಂಡರು. (ಯಾಕಂದರೆ ಆ ಸಬ್ಬತ್‌ದಿನವು ವಿಶೇಷವಾದ ದಿನವಾಗಿತ್ತು).

32 Then came the soldiers, and brake the legs of the first, and of the other which was crucified with him.ಆಗ ಸೈನಿಕರು ಬಂದು ಆತನ ಜೊತೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು.

33 But when they came to Jesus, and saw that he was dead already, they brake not his legs:ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಕಂಡು ಆತನ ಕಾಲುಗಳನ್ನು ಮುರಿ ಯಲಿಲ್ಲ.

34 But one of the soldiers with a spear pierced his side, and forthwith came there out blood and water.ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು.

35 And he that saw it bare record, and his record is true: and he knoweth that he saith true, that ye might believe.ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು.

36 For these things were done, that the scripture should be fulfilled, A bone of him shall not be broken.ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು.

37 And again another scripture saith, They shall look on him whom they pierced.ತಿರಿಗಿ ಮತ್ತೊಂದು ಬರಹವು--ಅವರು ತಾವು ಇರಿದವನನ್ನು ನೋಡುವರು ಎಂದು ಹೇಳುತ್ತದೆ.

38 And after this Joseph of Arimathaea, being a disciple of Jesus, but secretly for fear of the Jews, besought Pilate that he might take away the body of Jesus: and Pilate gave him leave. He came therefore, and took the body of Jesus.ತರುವಾಯ ಯೆಹೂದ್ಯರ ಭಯದ ನಿಮಿತ್ತ ದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾ ಯದ ಯೋಸೇಫನು ಯೇಸುವಿನ ದೇಹವನ್ನು ತಾನು ತೆಗೆದುಕೊಂಡು ಹೋಗುವಂತೆ ಪಿಲಾತನನ್ನು ಬೇಡಿ ಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಆತನ ದೇಹವನ್ನು ತೆಗೆದುಕೊಂಡು

39 And there came also Nicodemus, which at the first came to Jesus by night, and brought a mixture of myrrh and aloes, about an hundred pound weight.ಇದಲ್ಲದೆ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.

40 Then took they the body of Jesus, and wound it in linen clothes with the spices, as the manner of the Jews is to bury.ಆಗ ಅವರು ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರು ಬಟ್ಟೆಗಳಲ್ಲಿ ಸುತ್ತಿದರು.

41 Now in the place where he was crucified there was a garden; and in the garden a new sepulchre, wherein was never man yet laid.ಆತನು ಶಿಲುಬೆಗೆ ಹಾಕಲ್ಪಟ್ಟ ಸ್ಥಳದಲ್ಲಿ ಒಂದು ತೋಟವಿತ್ತು; ಆ ತೋಟದಲ್ಲಿ ಯಾರನ್ನೂ ಇಡದೆ ಇದ್ದ ಒಂದು ಸಮಾಧಿಯು ಇತ್ತು.

42 There laid they Jesus therefore because of the Jews' preparation day; for the sepulchre was nigh at hand.ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದ ಅವರು ಯೇಸುವನ್ನು ಸಮಾಧಿಯಲ್ಲಿ ಇಟ್ಟರು. ಯಾಕಂದರೆ ಆ ಸಮಾಧಿಯು ಸವಿಾಪದಲ್ಲಿತ್ತು.

Kannada Bible