Bible

Job 4 - WEB (Kannada)

1 Then Eliphaz the Temanite answered,ತೇಮಾನ್ಯನಾದ ಎಲೀಫಜನು ಉತ್ತರ ಕೊಟ್ಟು--

2 "If someone ventures to talk with you, will you be grieved? But who can withhold himself from speaking?ನಿನಗೆ ಮಾತನ್ನು ಹೇಳತೊಡ ಗಿದರೆ ನಿನಗೆ ದುಃಖವೋ? ಆದಾಗ್ಯೂ ಮಾತನಾಡು ವದನ್ನು ಯಾವನು ಬಿಗಿ ಹಿಡಿಯಬಲ್ಲನು?

3 Behold, you have instructed many, You have strengthened the weak hands.ಇಗೋ, ಅನೇಕರನ್ನು ಶಿಕ್ಷಿಸಿದಿ; ಬಲಹೀನವಾದ ಕೈಗಳನ್ನು ಬಲ ಪಡಿಸಿದಿ.

4 Your words have supported him who was falling, You have made firm the feeble knees.ಎಡವಿ ಬೀಳುವವನನ್ನು ನಿನ್ನ ನುಡಿಗಳು ನಿಲ್ಲಿಸಿದವು. ಬಲಹೀನವಾದ ಮೊಣಕಾಲುಗಳನ್ನು ಬಲ ಪಡಿಸಿದಿ.

5 But now it is come to you, and you faint; It touches you, and you are troubled.ಈಗ ಅದು ನಿನ್ನ ಮೇಲೆ ಬಂದದ್ದರಿಂದ ನೀನು ದಣಿಯುತ್ತೀ; ನಿನ್ನನ್ನೂ ಅದು ಮುಟ್ಟಿದ್ದರಿಂದ ಕಳವಳಪಡುತ್ತೀ;

6 Isn't your piety your confidence, The integrity of your ways your hope?ನಿನ್ನ ಭಯವೂ ಭರವಸೆಯೂ ನಿನ್ನ ನಿರೀಕ್ಷೆಯೂ ನಿನ್ನ ಮಾರ್ಗಗಳ ಯಥಾರ್ಥ ತೆಯೂ ಇವೇ ಅಲ್ಲವೋ?

7 "Remember, now, whoever perished, being innocent? Or where were the upright cut off?ನೆನಪುಮಾಡಿಕೋ, ನಿರಪರಾಧಿಯಾಗಿ ನಾಶವಾದವನು ಯಾವನು? ನೀತಿ ವಂತರು ಕಡಿಯಲ್ಪಟ್ಟದ್ದು ಎಲ್ಲಿ?

8 According to what I have seen, those who plow iniquity, And sow trouble, Reap the same.ನಾನು ಕಂಡ ಹಾಗೆ ದುಷ್ಟತನವನ್ನು ಉಳುವವರೂ ದುಷ್ಟತನವನ್ನು ಬಿತ್ತುವ ವರೂ ಅದನ್ನೇ ಕೊಯ್ಯುತ್ತಾರೆ.

9 By the breath of God they perish, By the blast of his anger are they consumed.ದೇವರ ಸಿಡಿತದಿಂದ ಅವರು ನಾಶವಾಗುತ್ತಾರೆ. ಆತನ ಮೂಗಿನ ಉಸಿರಿ ನಿಂದ ಅವರು ಕ್ಷಯಿಸಿಹೋಗುತ್ತಾರೆ,

10 The roaring of the lion, and the voice of the fierce lion, The teeth of the young lions, are broken.ಸಿಂಹದ ಘರ್ಜನೆಯೂ ಕ್ರೂರಸಿಂಹದ ಶಬ್ದವೂ ಸಿಂಹದ ಮರಿ ಗಳ ಹಲ್ಲುಗಳೂ ಮುರಿಯಲ್ಪಟ್ಟಿವೆ.

11 The old lion perishes for lack of prey, The cubs of the lioness are scattered abroad.ಪ್ರಾಯದ ಸಿಂಹವು ಕೊಳ್ಳೆ ಇಲ್ಲದರಿಂದ ನಾಶವಾಗುತ್ತದೆ. ಸಿಂಹದ ಮರಿಗಳು ಚದುರಿಸಲ್ಪಡುತ್ತವೆ.

12 "Now a thing was secretly brought to me, My ear received a whisper of it.ಒಂದು ಮಾತು ನನಗೆ ಗುಪ್ತವಾಗಿ ಬಂದಿತು. ಅದರಿಂದ ಸ್ವಲ್ಪ ಮಾತ್ರ ನನ್ನ ಕಿವಿಗೆ ಬಿದ್ದಿತು.

13 In thoughts from the visions of the night, When deep sleep falls on men,ರಾತ್ರಿಯ ದರ್ಶನಗಳ ಆಲೋಚನೆಗಳಲ್ಲಿ ಗಾಢ ನಿದ್ರೆಯು ಜನರ ಮೇಲೆ ಬೀಳುವಾಗ

14 Fear came on me, and trembling, Which made all my bones shake.ಭಯವೂ ನಡುಗೂ ನನ್ನನ್ನು ಹಿಡಿದವು; ನನ್ನ ಎಲ್ಲಾ ಎಲುಬು ಗಳನ್ನು ನಡುಗಿಸಿತು.

15 Then a spirit passed before my face; The hair of my flesh stood up.ಒಂದು ಆತ್ಮವು ನನ್ನ ಮುಂದೆ ಹಾದುಹೋಯಿತು. ನನ್ನ ಕೂದಲು ನೆಟ್ಟಗಾಯಿತು.

16 It stood still, but I couldn't discern the appearance of it; A form was before my eyes. Silence, then I heard a voice, saying,ಅದು ಸುಮ್ಮನೆ ನಿಂತಿತು. ಅದರ ರೂಪವನ್ನು ನಾನು ತಿಳುಕೊಳ್ಳಲಿಲ್ಲ. ನನ್ನ ಕಣ್ಣುಗಳ ಮುಂದೆ ವಿಗ್ರಹವಿತ್ತು; ಅಲ್ಲಿ ನಿಶ್ಯಬ್ಧವಿತ್ತು. ಆಗ ಒಂದು ವಾಣಿ ಯಾಯಿತು--

17 'Shall mortal man be more just than God? Shall a man be more pure than his Maker?ದೇವರಿಗಿಂತ ಮನುಷ್ಯನು ಹೆಚ್ಚು ನೀತಿವಂತನೋ? ಪುರುಷನು ತನ್ನನ್ನು ಉಂಟು ಮಾಡಿ ದಾತನಿಗಿಂತಲೂ ಹೆಚ್ಚು ನಿರ್ಮಲನೋ?

18 Behold, he puts no trust in his servants. He charges his angels with error.ಇಗೋ, ತನ್ನ ಸೇವಕರಲ್ಲಿ ಆತನು ನಂಬಿಕೆ ಇಡುವದಿಲ್ಲ; ತನ್ನ ದೂತರಲ್ಲಿ ತಪ್ಪನ್ನೆಣಿಸುತ್ತಾನೆ.

19 How much more, those who dwell in houses of clay, Whose foundation is in the dust, Who are crushed before the moth!ಧೂಳಿನಲ್ಲಿ ಅಸ್ತಿವಾರ ಇರುವ ಮಣ್ಣಿನ ಮನೆಗಳ ನಿವಾಸಿಗಳು ಎಷ್ಟು ಕಡಿಮೆ? ನುಸಿಯ ಮುಂದೆ ಅವರು ಜಜ್ಜಲ್ಪಡುತ್ತಾರೆ.

20 Between morning and evening they are destroyed. They perish forever without any regarding it.ಬೆಳಗಿ ನಿಂದ ಸಂಜೆಯ ವರೆಗೆ ಅವರು ನಾಶವಾಗುತ್ತಾರೆ. ಅವರು ಲಕ್ಷ್ಯವಿಲ್ಲದೆ ನಿತ್ಯ ನಾಶವಾಗುತ್ತಾರೆ.

21 Isn't their tent-cord plucked up within them? They die, and that without wisdom.'ಅವ ರಲ್ಲಿರುವ ಅವರ ಶ್ರೇಷ್ಠತೆ ಹೊರಟು ಹೋಗುವ ದಿಲ್ಲವೋ? ಅವರು ಜ್ಞಾನವಿಲ್ಲದೆ ಸಾಯುತ್ತಾರೆ.

Kannada Bible