Bible

Job 24 - WEB (Kannada)

1 "Why aren't times laid up by the Almighty? Why don't those who know him see his days?ಸರ್ವಶಕ್ತನಿಗೆ ಕಾಲಗಳು ಮರೆಯಾಗದೆ ಇರಲಾಗಿ, ಆತನನ್ನು ತಿಳಿದವರು ಆತನ ದಿವಸಗಳನ್ನು ನೋಡದೆ ಇರುವದು ಯಾಕೆ?

2 There are people who remove the landmarks. They violently take away flocks, and feed them.ಗಡಿ ಗಳನ್ನು ಬದಲಿಸುತ್ತಾರೆ, ಮಂದೆಗಳನ್ನು ಬಲಾತ್ಕಾರ ದಿಂದ ತಕ್ಕೊಂಡು ಅವುಗಳನ್ನು ಸಾಕಿಕೊಳ್ಳುತ್ತಾರೆ.

3 They drive away the donkey of the fatherless, And they take the widow's ox for a pledge.ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ.

4 They turn the needy out of the way. The poor of the earth all hide themselves.ದರಿದ್ರನನ್ನು ಮಾರ್ಗದಿಂದ ತೊಲಗಿಸುತ್ತಾರೆ; ದೇಶದ ದೀನರು ಕೂಡಾ ಅಡಗಿಕೊಳ್ಳುತ್ತಾರೆ.

5 Behold, as wild donkeys in the desert, They go forth to their work, seeking diligently for food; The wilderness yields them bread for their children.ಇಗೋ, ಅವರು ಕಾಡುಕತ್ತೆಗಳ ಹಾಗೆ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಬೆಳಿಗ್ಗೆ ಕೊಳ್ಳೆ ಹುಡುಕುತ್ತಾರೆ; ಅರಣ್ಯವು ಅವರಿಗೂ ಮಕ್ಕಳಿಗೂ ಆಹಾರ ಕೊಡು ತ್ತದೆ.

6 They cut their provender in the field. They glean the vineyard of the wicked.ಹೊಲದಲ್ಲಿ ತಮ್ಮ ತಮ್ಮ ಬೆಳೆಯನ್ನು ಕೊಯ್ದು ದುಷ್ಟನ ದ್ರಾಕ್ಷೆಯ ತೋಟದಲ್ಲಿ ಹಣ್ಣು ಆರಿಸುತ್ತಾರೆ.

7 They lie all night naked without clothing, And have no covering in the cold.ಬೆತ್ತಲೆಯಾಗಿ ಬಟ್ಟೆ ಇಲ್ಲದೆ ಮಲಗುವಂತೆ ಮಾಡುತ್ತಾರೆ. ಚಳಿಯಲ್ಲಿ ಅವರಿಗೆ ಹೊದ್ದು ಕೊಳ್ಳು ವದಕ್ಕೆ ಇಲ್ಲ.

8 They are wet with the showers of the mountains, And embrace the rock for lack of a shelter.ಬೆಟ್ಟಗಳ ಮಳೆಯಿಂದ ತೊಯ್ದಿ ದ್ದಾರೆ; ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುತ್ತಾರೆ.

9 There are those who pluck the fatherless from the breast, And take a pledge of the poor,ದಿಕ್ಕಿಲ್ಲದವರನ್ನು ತಾಯಿಯ ಮೊಲೆಯಿಂದ ಕಸಕೊಳ್ಳುತ್ತಾರೆ; ಬಡವನಿಂದ ಒತ್ತೆಯಾಗಿ ತಕ್ಕೊಳ್ಳು ತ್ತಾರೆ.

10 So that they go around naked without clothing. Being hungry, they carry the sheaves.ವಸ್ತ್ರವಿಲ್ಲದೆ ಬೆತ್ತಲೆಯಾಗಿರುವವರನ್ನು ತಿರು ಗಾಡಿಸುತ್ತಾರೆ; ಹಸಿದವರು ಸೂಡುಗಳನ್ನು ಹೊರು ತ್ತಾರೆ

11 They make oil within the walls of these men. They tread wine presses, and suffer thirst.ಅವರ ಗೋಡೆಗಳ ನಡುವೆ ಇದ್ದುಕೊಂಡು ಎಣ್ಣೆಯನ್ನು ತೆಗೆಯುತ್ತಾರೆ; ತೊಟ್ಟಿಗಳನ್ನು ತುಳಿದು ದಾಹಪಡುತ್ತಾರೆ.

12 From out of the populous city, men groan. The soul of the wounded cries out, Yet God doesn't regard the folly.ಪಟ್ಟಣದೊಳಗಿಂದ ಮನುಷ್ಯರು ನರಳುತ್ತಾರೆ; ಗಾಯಪಟ್ಟವರ ಪ್ರಾಣವು ಕೂಗುತ್ತದೆ; ಆದರೂ ದೇವರು ತಪ್ಪುಹೊರಿಸುವದಿಲ್ಲ.

13 "These are of those who rebel against the light; They don't know the ways of it, Nor abide in the paths of it.ಅವರು ಬೆಳಕಿಗೆ ವಿರೋಧವಾಗಿ ದಂಗೆಎದ್ದಿದ್ದಾರೆ; ಅದರ ಮಾರ್ಗ ಗಳನ್ನು ಅವರು ಅರಿಯರು; ಇಲ್ಲವೆ ಅದರ ದಾರಿಗಳಲ್ಲಿ ವಾಸವಾಗಿರರು.

14 The murderer rises with the light. He kills the poor and needy. In the night he is like a thief.ಬೆಳಿಗ್ಗೆ ಕೊಲೆಗಾರನು ಎದ್ದು ದೀನನನ್ನೂ ದರಿದ್ರನನ್ನೂ ಕೊಲ್ಲುತ್ತಾನೆ; ರಾತ್ರಿ ಯಲ್ಲಿ ಕಳ್ಳನ ಹಾಗೆ ಇದ್ದಾನೆ.

15 The eye also of the adulterer waits for the twilight, Saying, 'No eye shall see me.' He disguises his face.ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.

16 In the dark they dig through houses. They shut themselves up in the daytime. They don't know the light.ಹಗಲು ಹೊತ್ತು ಗೊತ್ತು ಮಾಡಿಕೊಂಡ ಮನೆಗಳನ್ನು ಕತ್ತಲೆಯಲ್ಲಿ ಕೊರೆಯು ತ್ತಾರೆ; ಅವರು ಬೆಳಕನ್ನು ತಿಳಿಯರು.

17 For the morning is to all of them like thick darkness, For they know the terrors of the thick darkness.ಉದಯ ಕಾಲವು ಅವರಿಗೆ ಮರಣದ ನೆರಳಿನ ಹಾಗೆಯೇ ಇರುವದು; ಮರಣದ ನೆರಳಿನ ದಿಗಿಲುಗಳನ್ನು ತಿಳು ಕೊಳ್ಳುತ್ತಾರೆ.

18 "They are foam on the surface of the waters. Their portion is cursed in the earth: They don't turn into the way of the vineyards.ನೀರುಗಳ ಹಾಗೆ ಅವನು ತೀವ್ರವಾಗಿದ್ದಾನೆ; ಅವನ ಭಾಗವು ಭೂಮಿಯ ಮೇಲೆ ಶಪಿಸಲ್ಪಟ್ಟಿದೆ; ಅವನು ದ್ರಾಕ್ಷೇ ತೋಟಗಳ ಮಾರ್ಗಕ್ಕೆ ತಿರುಗು ವದಿಲ್ಲ.

19 Drought and heat consume the snow waters; So does Sheol those who have sinned.ಹಿಮದ ನೀರನ್ನು ಒಣ ಭೂಮಿಯೂ ಬಿಸಿಲೂ ಹೀರಿಕೊಳ್ಳುವಂತೆ ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.

20 The womb shall forget him. The worm shall feed sweetly on him. He shall be no more remembered. Unrighteousness shall be broken as a tree.ಗರ್ಭವು ಅವನನ್ನು ಮರೆತುಬಿಡುವದು; ಹುಳವು ಅವನಲ್ಲಿ ಸವಿ ಊಟ ಹೊಂದುವದು; ಇನ್ನು ಅವನ ನೆನಪು ಇರುವದಿಲ್ಲ; ಮರದ ಹಾಗೆ ಅನ್ಯಾಯವು ಮುರಿಯಲ್ಪಡುವದು.

21 He devours the barren who don't bear. He shows no kindness to the widow.ಹೆರದ ಬಂಜೆಯನ್ನು ಅವನು ಉಪದ್ರವಪಡಿಸಿ ದನು; ವಿಧವೆಗೆ ಉಪಕಾರಮಾಡಲಿಲ್ಲ.

22 Yet God preserves the mighty by his power. He rises up who has no assurance of life.ಬಲಿಷ್ಠರನ್ನು ತನ್ನ ಶಕ್ತಿಯಿಂದ ಎಳೆಯುತ್ತಾನೆ. ಅವನು ಎದ್ದರೆ ಅವನ ಜೀವದಲ್ಲಿ ಯಾವ ಮನುಷ್ಯನಿಗೂ ನಂಬಿಕೆ ಇಲ್ಲ.

23 God gives them security, and they rest in it. His eyes are on their ways.ಅವನನ್ನು ಭದ್ರಪಡಿಸುತ್ತಾನೆ; ಅವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆ; ಆದಾಗ್ಯೂ ಆತನ ಕಣ್ಣುಗಳು ಅವರ ಮಾರ್ಗಗಳ ಮೇಲೆ ಅವೆ.

24 They are exalted; yet a little while, and they are gone. Yes, they are brought low, they are taken out of the way as all others, And are cut off as the tops of the ears of grain.ಸ್ವಲ್ಪಕಾಲ ಅವರು ಉನ್ನತವಾಗಿದ್ದು ಇಲ್ಲದೆ ಹೋಗುತ್ತಾರೆ; ಅವರು ಕುಗ್ಗಿ ಹೋಗುತ್ತಾರೆ; ಎಲ್ಲರ ಹಾಗೆ ಅವರು ಮಾರ್ಗದಿಂದ ತೆಗೆದುಹಾಕಲ್ಪಡುತ್ತಾರೆ; ಅವರು ತೆನೆಗಳ ತಲೆಯಂತೆ ಕೊಯ್ಯಲ್ಪಡುತ್ತಾರೆ.

25 If it isn't so now, who will prove me a liar, And make my speech worth nothing?"ಈಗ ಹೀಗೆ ಇಲ್ಲದಿದ್ದರೆ ಯಾವನು ನನ್ನನ್ನು ಸುಳ್ಳುಗಾರನನ್ನಾಗಿ ಮಾಡಿ ನನ್ನ ನುಡಿಯನ್ನು ವ್ಯರ್ಥ ಮಾಡುವನು?

Kannada Bible