Job 21 - YLT (Kannada)
1 And Job answereth and saith: --ಯೋಬನು ಉತ್ತರಕೊಟ್ಟು ಹೇಳಿದ್ದೇನಂದರೆ--
2 Hear ye diligently my word, And this is your consolation.ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ; ಇವು ನಿಮ್ಮ ಆದರಣೆಗಳಾಗಿರಲಿ.
3 Bear with me, and I speak, And after my speaking -- ye may deride.ನನ್ನನ್ನು ತಾಳಿಕೊಳ್ಳಿರಿ, ನಾನು ಮಾತನಾಡುವೆನು; ನಾನು ಮಾತ ನಾಡಿದ ಮೇಲೆ ಹಾಸ್ಯ ಮಾಡಬಹುದು.
4 I -- to man `is' my complaint? and if `so', wherefore May not my temper become short?ನಾನಾದರೆ ಮನುಷ್ಯನಿಗೆ ನನ್ನ ದೂರು ಹೇಳುವೆನೋ? ಹೇಳಿ ದರೂ ನನ್ನ ಆತ್ಮವು ಯಾಕೆ ವ್ಯಾಕುಲಪಡಬಾರದು?
5 Turn unto me, and be astonished, And put hand to mouth.ನನ್ನನ್ನು ಗಮನಿಸಿ ಆಶ್ಚರ್ಯಪಡಿರಿ; ಬಾಯಿಯ ಮೇಲೆ ಕೈ ಇಟ್ಟುಕೊಳ್ಳಿರಿ.
6 Yea, if I have remembered, then I have been troubled. And my flesh hath taken fright.ನಾನು ನೆನಪು ಮಾಡಿಕೊಂಡರೆ ತಲ್ಲಣ ಪಡುತ್ತೇನೆ; ನಡುಗುವಿಕೆಯು ನನ್ನ ಮಾಂಸವನ್ನು ಹಿಡಿಯುತ್ತದೆ.
7 Wherefore do the wicked live? They have become old, Yea, they have been mighty in wealth.ದುಷ್ಟರು ಯಾಕೆ ಬದುಕಿ ಮುದುಕರಾಗಿ ಹೌದು, ತ್ರಾಣದಿಂದ ಬಲಗೊಳ್ಳುತ್ತಾರೆ?
8 Their seed is established, Before their face with them, And their offspring before their eyes.ಅವರ ಸಂತಾನದವರು ಅವರ ಮುಂದೆ ಅವರ ಸಂಗಡ ದೃಢವಾಗಿದ್ದಾರೆ; ಅವರ ಸಂತಾನದವರು ಅವರ ಕಣ್ಣು ಗಳ ಮುಂದೆ ಇದ್ದಾರೆ.
9 Their houses `are' peace without fear, Nor `is' a rod of God upon them.ಅವರ ಮನೆಗಳು ಅಂಜಿಕೆ ಇಲ್ಲದೆ ಸಮಾಧಾನವಾಗಿವೆ; ದೇವರ ಕೋಲು ಅವರ ಮೇಲೆ ಇಲ್ಲ.
10 His bullock hath eaten corn, and doth not loath. His cow bringeth forth safely, And doth not miscarry.ಅವನ ಗೂಳಿ ಹೇಸದೆ ಬಸುರು ಮಾಡುತ್ತದೆ; ಅವನ ಆಕಳು ತಪ್ಪದೆ ಈಯುತ್ತದೆ;
11 They send forth as a flock their sucklings, And their children skip,ತಮ್ಮ ಚಿಕ್ಕವರನ್ನು ಮಂದೆಯ ಹಾಗೆ ಕಳುಹಿಸು ತ್ತಾರೆ; ಅವರ ಮಕ್ಕಳು ಕುಣಿದಾಡುತ್ತಾರೆ.
12 They lift `themselves' up at timbrel and harp, And rejoice at the sound of an organ.ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ.
13 They wear out in good their days, And in a moment `to' Sheol go down.ಸಂಪತ್ತಿನಲ್ಲಿ ತಮ್ಮ ದಿವಸ ಗಳನ್ನು ಕಳೆಯುತ್ತಾರೆ; ಕ್ಷಣದಲ್ಲಿ ಪಾತಾಳಕ್ಕೆ ಇಳಿ ಯುತ್ತಾರೆ.
14 And they say to God, `Turn aside from us, And the knowledge of Thy ways We have not desired.ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ.
15 What `is' the Mighty One that we serve Him? And what do we profit when we meet with Him?'ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.
16 Lo, not in their hand `is' their good, (The counsel of the wicked Hath been far from me.)ಇಗೋ, ಅವರ ಸುಖವು ಅವರ ಕೈಯಲ್ಲಿ ಇಲ್ಲ; ದುಷ್ಟರ ಆಲೋಚನೆ ನನಗೆ ದೂರ ವಾಗಿದೆ.
17 How oft is the lamp of the wicked extinguished, And come on them doth their calamity? Pangs He apportioneth in His anger.ಎಷ್ಟು ಸಾರಿ ದುಷ್ಟರ ದೀಪವು ಆರಿ ಹೋಗುತ್ತದೆ; ಅವರ ನಾಶನವು ಅವರ ಮೇಲೆ ಬರುತ್ತದೆ; ದೇವರು ವೇದನೆಗಳನ್ನು ತನ್ನ ಕೋಪ ದಿಂದ ಹಂಚುತ್ತಾನೆ.
18 They are as straw before wind, And as chaff a hurricane hath stolen away,ಅವರು ಗಾಳಿಯ ಮುಂದೆ ಇರುವ ಹುಲ್ಲಿನ ಹಾಗೆಯೂ ಬಿರುಗಾಳಿಯು ಬಡ ಕೊಂಡು ಹೋಗುವ ಹೊಟ್ಟಿನ ಹಾಗೆಯೂ ಇದ್ದಾರೆ.
19 God layeth up for his sons his sorrow, He giveth recompense unto him -- and he knoweth.ದೇವರು ಅವನ ಮಕ್ಕಳಿಗೆ ಅವನ ಅಪರಾಧವನ್ನು ಇಡುತ್ತಾನೆ; ಅವನು ತಿಳುಕೊಳ್ಳುವ ಹಾಗೆ ಅವನಿಗೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.
20 His own eyes see his destruction, And of the wrath of the Mighty he drinketh.ಅವನ ಕಣ್ಣುಗಳು ಅವನ ನಾಶನವನ್ನು ನೋಡುವವು; ಸರ್ವಶಕ್ತನ ಉಗ್ರವನ್ನು ಅವನು ಕುಡಿಯುವನು.
21 For what `is' his delight in his house after him, And the number of his months cut off?ಅವನ ಬಳಿಕ ಅವನ ತಿಂಗಳಲೆಕ್ಕ ಮಧ್ಯದಲ್ಲಿ ಹರಿದ ಮೇಲೆ ಅವನ ಮನೆಯಲ್ಲಿ ಅವನಿಗೆ ಏನು ಸಂತೋಷ?
22 To God doth `one' teach knowledge, And He the high doth judge?ದೇವರಿಗೆ ತಿಳುವಳಿಕೆಯನ್ನು ಕಲಿಸುವದುಂಟೇ? ಉನ್ನತವಾದವರಿಗೆ ಆತನೇ ನ್ಯಾಯತೀರಿಸುತ್ತಾನಲ್ಲಾ!
23 This `one' dieth in his perfect strength, Wholly at ease and quiet.ಎಲ್ಲಾ ಶಾಂತವಾಗಿಯೂ ಸುಖವಾಗಿಯೂ ಇರು ವಾಗಲೇ ಒಬ್ಬನು ತನ್ನ ಬಲ ಸಂಪೂರ್ಣತ್ವದಲ್ಲಿ ಸಾಯುತ್ತಾನೆ.
24 His breasts have been full of milk, And marrow his bones doth moisten.ಅವನ ತೊಟ್ಟಿಗಳು ಹಾಲು ತುಂಬಿ ಯವೆ, ಅವನ ಎಲುಬುಗಳು ಮಜ್ಜೆಯಿಂದ ಹಸಿ ಯಾಗಿವೆ.
25 And this `one' dieth with a bitter soul, And have not eaten with gladness.ಮತ್ತೊಬ್ಬನು ಕಹಿಯಾದ ಪ್ರಾಣದಿಂದ ಸಾಯುತ್ತಾನೆ; ಅವನು ಸಂತೋಷದಲ್ಲಿ ಏನೂ ಉಣ್ಣು ವದಿಲ್ಲ.
26 Together -- on the dust they lie down, And the worm doth cover them over.ಧೂಳಿನಲ್ಲಿ ಮಲಗುತ್ತಾರೆ; ಹುಳಗಳು ಅವರನ್ನು ಅಡಗಿಸುತ್ತವೆ.
27 Lo, I have known your thoughts, And the devices against me ye do wrongfully.ಇಗೋ, ನಿಮ್ಮ ಆಲೋಚನೆಗಳನ್ನೂ ನೀವು ನನ್ನ ಮೇಲೆ ಬಲಾತ್ಕಾರಿಗಳಾಗಿ ಮಾಡುವ ಯೋಚನೆ ಗಳನ್ನೂ ತಿಳಿದಿದ್ದೇನೆ.
28 For ye say, `Where `is' the house of the noble? And where the tent -- The tabernacles of the wicked?'ನೀವು ಅನ್ನುತ್ತೀರಿ--ಪ್ರಧಾನಿಯ ಮನೆ ಎಲ್ಲಿ? ದುಷ್ಟರ ನಿವಾಸಗಳ ಗುಡಾ ರವು ಎಲ್ಲಿ?
29 Have ye not asked those passing by the way? And their signs do ye not know?ಮಾರ್ಗದಲ್ಲಿ ಹಾದುಹೋಗುವ ವರನ್ನು ಕೇಳಲಿಲ್ಲವೋ? ಅವರ ಗುರುತುಗಳನ್ನು ನೀವು ಗೊತ್ತುಮಾಡಲಿಲ್ಲವೋ?
30 That to a day of calamity is the wicked spared. To a day of wrath they are brought.ಆಪತ್ತಿನ ದಿವಸಕ್ಕೆ ಕೆಟ್ಟ ವನು ಇರಿಸಲ್ಪಟ್ಟಿದ್ದಾನೆ. ಉಗ್ರದ ದಿವಸಕ್ಕೆ ಹೊರಗೆ ತರಲ್ಪಡುವನು.
31 Who doth declare to his face his way? And `for' that which he hath done, Who doth give recompence to him?ಅವನ ಮಾರ್ಗವನ್ನು ಮುಖಾ ಮುಖಿಯಾಗಿ ಅವನಿಗೆ ತೋರಿಸಿ ಅವನು ಮಾಡಿದ್ದ ಕ್ಕೋಸ್ಕರ ಅವನಿಗೆ ಮುಯ್ಯಿಗೆಮುಯ್ಯಿ ಕೊಡುವವನು ಯಾರು?
32 And he -- to the graves he is brought. And over the heap a watch is kept.ಅವನು ಸಮಾಧಿಗಳಿಗೆ ಒಯ್ಯಲ್ಪಡು ವನು; ಗೋರಿಯ ಮೇಲೆ ಇರುವನು.
33 Sweet to him have been the clods of the valley, And after him every man he draweth, And before him there is no numbering.ತಗ್ಗಿನ ಗಡ್ಡೆಗಳು ಅವನಿಗೆ ರಮ್ಯವಾಗಿರುವವು; ಎಲ್ಲಾ ಮನು ಷ್ಯರನ್ನು ತನ್ನ ಹಿಂದೆ ಎಳೆಯುತ್ತಾನೆ; ಅವನ ಮುಂದಿನ ವರಿಗೆ ಲೆಕ್ಕವಿಲ್ಲ.
34 And how do ye comfort me `with' vanity, And in your answers hath been left trespass?ವ್ಯರ್ಥತ್ವದಿಂದ ನೀವು ನನ್ನನ್ನು ಸಂತೈಸುವದು ಹೇಗೆ? ನಿಮ್ಮ ಉತ್ತರಗಳಲ್ಲಿ ಸುಳ್ಳು ಉಳುಕೊಳ್ಳುವದು.
Kannada Bible