Job 21 - BBE (Kannada)
1 Then Job made answer and said,ಯೋಬನು ಉತ್ತರಕೊಟ್ಟು ಹೇಳಿದ್ದೇನಂದರೆ--
2 Give attention with care to my words; and let this be your comfort.ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ; ಇವು ನಿಮ್ಮ ಆದರಣೆಗಳಾಗಿರಲಿ.
3 Let me say what is in my mind, and after that, go on making sport of me.ನನ್ನನ್ನು ತಾಳಿಕೊಳ್ಳಿರಿ, ನಾನು ಮಾತನಾಡುವೆನು; ನಾನು ಮಾತ ನಾಡಿದ ಮೇಲೆ ಹಾಸ್ಯ ಮಾಡಬಹುದು.
4 As for me, is my outcry against man? is it then to be wondered at if my spirit is troubled?ನಾನಾದರೆ ಮನುಷ್ಯನಿಗೆ ನನ್ನ ದೂರು ಹೇಳುವೆನೋ? ಹೇಳಿ ದರೂ ನನ್ನ ಆತ್ಮವು ಯಾಕೆ ವ್ಯಾಕುಲಪಡಬಾರದು?
5 Take note of me and be full of wonder, put your hand on your mouth.ನನ್ನನ್ನು ಗಮನಿಸಿ ಆಶ್ಚರ್ಯಪಡಿರಿ; ಬಾಯಿಯ ಮೇಲೆ ಕೈ ಇಟ್ಟುಕೊಳ್ಳಿರಿ.
6 At the very thought of it my flesh is shaking with fear.ನಾನು ನೆನಪು ಮಾಡಿಕೊಂಡರೆ ತಲ್ಲಣ ಪಡುತ್ತೇನೆ; ನಡುಗುವಿಕೆಯು ನನ್ನ ಮಾಂಸವನ್ನು ಹಿಡಿಯುತ್ತದೆ.
7 Why is life given to the evil-doers? why do they become old and strong in power?ದುಷ್ಟರು ಯಾಕೆ ಬದುಕಿ ಮುದುಕರಾಗಿ ಹೌದು, ತ್ರಾಣದಿಂದ ಬಲಗೊಳ್ಳುತ್ತಾರೆ?
8 Their children are ever with them, and their offspring before their eyes.ಅವರ ಸಂತಾನದವರು ಅವರ ಮುಂದೆ ಅವರ ಸಂಗಡ ದೃಢವಾಗಿದ್ದಾರೆ; ಅವರ ಸಂತಾನದವರು ಅವರ ಕಣ್ಣು ಗಳ ಮುಂದೆ ಇದ್ದಾರೆ.
9 Their houses are free from fear, and the rod of God does not come on them.ಅವರ ಮನೆಗಳು ಅಂಜಿಕೆ ಇಲ್ಲದೆ ಸಮಾಧಾನವಾಗಿವೆ; ದೇವರ ಕೋಲು ಅವರ ಮೇಲೆ ಇಲ್ಲ.
10 Their ox is ready at all times to give seed; their cow gives birth, without dropping her young.ಅವನ ಗೂಳಿ ಹೇಸದೆ ಬಸುರು ಮಾಡುತ್ತದೆ; ಅವನ ಆಕಳು ತಪ್ಪದೆ ಈಯುತ್ತದೆ;
11 They send out their young ones like a flock, and their children have pleasure in the dance,ತಮ್ಮ ಚಿಕ್ಕವರನ್ನು ಮಂದೆಯ ಹಾಗೆ ಕಳುಹಿಸು ತ್ತಾರೆ; ಅವರ ಮಕ್ಕಳು ಕುಣಿದಾಡುತ್ತಾರೆ.
12 They make songs to the instruments of music, and are glad at the sound of the pipe.ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ.
13 Their days come to an end without trouble, and suddenly they go down to the underworld.ಸಂಪತ್ತಿನಲ್ಲಿ ತಮ್ಮ ದಿವಸ ಗಳನ್ನು ಕಳೆಯುತ್ತಾರೆ; ಕ್ಷಣದಲ್ಲಿ ಪಾತಾಳಕ್ಕೆ ಇಳಿ ಯುತ್ತಾರೆ.
14 Though they said to God, Go away from us, for we have no desire for the knowledge of your ways.ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ.
15 What is the Ruler of all, that we may give him worship? and what profit is it to us to make prayer to him?ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.
16 Truly, is not their well-being in their power? (The purpose of the evil-doers is far from me.)ಇಗೋ, ಅವರ ಸುಖವು ಅವರ ಕೈಯಲ್ಲಿ ಇಲ್ಲ; ದುಷ್ಟರ ಆಲೋಚನೆ ನನಗೆ ದೂರ ವಾಗಿದೆ.
17 How frequently is the light of the evil-doers put out, or does trouble come on them? how frequently does his wrath take them with cords?ಎಷ್ಟು ಸಾರಿ ದುಷ್ಟರ ದೀಪವು ಆರಿ ಹೋಗುತ್ತದೆ; ಅವರ ನಾಶನವು ಅವರ ಮೇಲೆ ಬರುತ್ತದೆ; ದೇವರು ವೇದನೆಗಳನ್ನು ತನ್ನ ಕೋಪ ದಿಂದ ಹಂಚುತ್ತಾನೆ.
18 How frequently are they as dry stems before the wind, or as grass taken away by the storm-wind?ಅವರು ಗಾಳಿಯ ಮುಂದೆ ಇರುವ ಹುಲ್ಲಿನ ಹಾಗೆಯೂ ಬಿರುಗಾಳಿಯು ಬಡ ಕೊಂಡು ಹೋಗುವ ಹೊಟ್ಟಿನ ಹಾಗೆಯೂ ಇದ್ದಾರೆ.
19 You say, God keeps punishment stored up for his children. Let him send it on the man himself, so that he may have the punishment of it!ದೇವರು ಅವನ ಮಕ್ಕಳಿಗೆ ಅವನ ಅಪರಾಧವನ್ನು ಇಡುತ್ತಾನೆ; ಅವನು ತಿಳುಕೊಳ್ಳುವ ಹಾಗೆ ಅವನಿಗೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.
20 Let his eyes see his trouble, and let him be full of the wrath of the Ruler of all!ಅವನ ಕಣ್ಣುಗಳು ಅವನ ನಾಶನವನ್ನು ನೋಡುವವು; ಸರ್ವಶಕ್ತನ ಉಗ್ರವನ್ನು ಅವನು ಕುಡಿಯುವನು.
21 For what interest has he in his house after him, when the number of his months is ended?ಅವನ ಬಳಿಕ ಅವನ ತಿಂಗಳಲೆಕ್ಕ ಮಧ್ಯದಲ್ಲಿ ಹರಿದ ಮೇಲೆ ಅವನ ಮನೆಯಲ್ಲಿ ಅವನಿಗೆ ಏನು ಸಂತೋಷ?
22 Is anyone able to give teaching to God? for he is the judge of those who are on high.ದೇವರಿಗೆ ತಿಳುವಳಿಕೆಯನ್ನು ಕಲಿಸುವದುಂಟೇ? ಉನ್ನತವಾದವರಿಗೆ ಆತನೇ ನ್ಯಾಯತೀರಿಸುತ್ತಾನಲ್ಲಾ!
23 One comes to his end in complete well-being, full of peace and quiet:ಎಲ್ಲಾ ಶಾಂತವಾಗಿಯೂ ಸುಖವಾಗಿಯೂ ಇರು ವಾಗಲೇ ಒಬ್ಬನು ತನ್ನ ಬಲ ಸಂಪೂರ್ಣತ್ವದಲ್ಲಿ ಸಾಯುತ್ತಾನೆ.
24 His buckets are full of milk, and there is no loss of strength in his bones.ಅವನ ತೊಟ್ಟಿಗಳು ಹಾಲು ತುಂಬಿ ಯವೆ, ಅವನ ಎಲುಬುಗಳು ಮಜ್ಜೆಯಿಂದ ಹಸಿ ಯಾಗಿವೆ.
25 And another comes to his end with a bitter soul, without ever tasting good.ಮತ್ತೊಬ್ಬನು ಕಹಿಯಾದ ಪ್ರಾಣದಿಂದ ಸಾಯುತ್ತಾನೆ; ಅವನು ಸಂತೋಷದಲ್ಲಿ ಏನೂ ಉಣ್ಣು ವದಿಲ್ಲ.
26 Together they go down to the dust, and are covered by the worm.ಧೂಳಿನಲ್ಲಿ ಮಲಗುತ್ತಾರೆ; ಹುಳಗಳು ಅವರನ್ನು ಅಡಗಿಸುತ್ತವೆ.
27 See, I am conscious of your thoughts, and of your violent purposes against me;ಇಗೋ, ನಿಮ್ಮ ಆಲೋಚನೆಗಳನ್ನೂ ನೀವು ನನ್ನ ಮೇಲೆ ಬಲಾತ್ಕಾರಿಗಳಾಗಿ ಮಾಡುವ ಯೋಚನೆ ಗಳನ್ನೂ ತಿಳಿದಿದ್ದೇನೆ.
28 For you say, Where is the house of the ruler, and where is the tent of the evil-doer?ನೀವು ಅನ್ನುತ್ತೀರಿ--ಪ್ರಧಾನಿಯ ಮನೆ ಎಲ್ಲಿ? ದುಷ್ಟರ ನಿವಾಸಗಳ ಗುಡಾ ರವು ಎಲ್ಲಿ?
29 Have you not put the question to the travellers, and do you not take note of their experience?ಮಾರ್ಗದಲ್ಲಿ ಹಾದುಹೋಗುವ ವರನ್ನು ಕೇಳಲಿಲ್ಲವೋ? ಅವರ ಗುರುತುಗಳನ್ನು ನೀವು ಗೊತ್ತುಮಾಡಲಿಲ್ಲವೋ?
30 How the evil man goes free in the day of trouble, and has salvation in the day of wrath?ಆಪತ್ತಿನ ದಿವಸಕ್ಕೆ ಕೆಟ್ಟ ವನು ಇರಿಸಲ್ಪಟ್ಟಿದ್ದಾನೆ. ಉಗ್ರದ ದಿವಸಕ್ಕೆ ಹೊರಗೆ ತರಲ್ಪಡುವನು.
31 Who will make his way clear to his face? and if he has done a thing, who gives him punishment for it?ಅವನ ಮಾರ್ಗವನ್ನು ಮುಖಾ ಮುಖಿಯಾಗಿ ಅವನಿಗೆ ತೋರಿಸಿ ಅವನು ಮಾಡಿದ್ದ ಕ್ಕೋಸ್ಕರ ಅವನಿಗೆ ಮುಯ್ಯಿಗೆಮುಯ್ಯಿ ಕೊಡುವವನು ಯಾರು?
32 He is taken to his last resting-place, and keeps watch over it.ಅವನು ಸಮಾಧಿಗಳಿಗೆ ಒಯ್ಯಲ್ಪಡು ವನು; ಗೋರಿಯ ಮೇಲೆ ಇರುವನು.
33 The earth of the valley covering his bones is sweet to him, and all men come after him, as there were unnumbered before him.ತಗ್ಗಿನ ಗಡ್ಡೆಗಳು ಅವನಿಗೆ ರಮ್ಯವಾಗಿರುವವು; ಎಲ್ಲಾ ಮನು ಷ್ಯರನ್ನು ತನ್ನ ಹಿಂದೆ ಎಳೆಯುತ್ತಾನೆ; ಅವನ ಮುಂದಿನ ವರಿಗೆ ಲೆಕ್ಕವಿಲ್ಲ.
34 Why then do you give me comfort with words in which there is no profit, when you see that there is nothing in your answers but deceit?ವ್ಯರ್ಥತ್ವದಿಂದ ನೀವು ನನ್ನನ್ನು ಸಂತೈಸುವದು ಹೇಗೆ? ನಿಮ್ಮ ಉತ್ತರಗಳಲ್ಲಿ ಸುಳ್ಳು ಉಳುಕೊಳ್ಳುವದು.
Kannada Bible