Job 14 - WEB (Kannada)
1 "Man, who is born of a woman, Is of few days, and full of trouble.1 ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಕಡಿಮೆದಿವಸದವನೂ ಕಳವಳದಿಂದ ತುಂಬಿದ ವನೂ ಆಗಿದ್ದಾನೆ.
2 He comes forth like a flower, and is cut down. He also flees like a shadow, and doesn't continue.ಅವನು ಹೂವಿನ ಹಾಗೆ ಅರಳು ತ್ತಾನೆ ಮತ್ತು ಕೊಯ್ಯಲ್ಪಡುತ್ತಾನೆ; ಅವನು ನೆರಳಿನಂತೆ ಓಡಿಹೋಗುತ್ತಾನೆ, ಹಾಗೂ ಮುಂದುವರೆಯುವ ದಿಲ್ಲ.
3 Do you open your eyes on such a one, And bring me into judgment with you?ಹಾಗಾದರೆ ಇಂಥವನ ಮೇಲೆ ನಿನ್ನ ಕಣ್ಣುಗಳನ್ನು ತೆರೆಯುತ್ತೀಯೋ? ನನ್ನನ್ನು ನಿನ್ನ ಸಂಗಡ ನ್ಯಾಯಕ್ಕೆ ಬರಮಾಡುತ್ತೀಯೋ?
4 Who can bring a clean thing out of an unclean? Not one.ಅಪವಿತ್ರವಾದದ್ದರಿಂದ ಶುದ್ಧ ವಾದದ್ದನ್ನು ತರುವವನಾರು? ಒಬ್ಬನೂ ಇಲ್ಲ.
5 Seeing his days are determined, The number of his months is with you, And you have appointed his bounds that he can't pass;ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ.
6 Look away from him, that he may rest, Until he shall accomplish, as a hireling, his day.ಹೀಗಿರುವ ದರಿಂದ ಅವನು ಕೂಲಿಯವನ ಹಾಗೆ ತನ್ನ ದಿವಸದಲ್ಲಿ ವಿಶ್ರಾಂತಿ ಪಡೆಯುವಂತೆ ಅವನು ಪೂರೈಸುವ ವರೆಗೆ ಅವನಿಂದ ತಿರುಗು.
7 "For there is hope for a tree, If it is cut down, that it will sprout again, That the tender branch of it will not cease.ಮರಕ್ಕೆ ನಿರೀಕ್ಷೆಯುಂಟು; ಅದು ಕೊಯ್ಯಲ್ಪಟ್ಟರೆ ಮತ್ತೆ ಚಿಗುರುವದು. ಚಿಗುರುವದನ್ನು ನಿಲ್ಲಿಸುವದೇ ಇಲ್ಲ.
8 Though the root of it grows old in the earth, And the stock of it dies in the ground;ಅದರ ಬೇರು ಭೂಮಿಯಲ್ಲಿ ಹಳೆಯದಾದರೂ ನೆಲದಲ್ಲಿ ಅದರ ಬುಡವು ಸತ್ತರೂ
9 Yet through the scent of water it will bud, And put forth boughs like a plant.ನೀರಿನ ವಾಸನೆಯಿಂದ ಚಿಗುರಿ ಸಸಿಯ ಹಾಗೆ ಕೊಂಬೆ ಗಳನ್ನು ಬಿಡುವದು.
10 But man dies, and is laid low. Yes, man gives up the spirit, and where is he?ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು?
11 As the waters fail from the sea, And the river wastes and dries up,ಹೇಗೆ ನೀರು ಸಮುದ್ರ ದಿಂದ ಮುಗಿದು ಹೋಗುತ್ತದೋ ಪ್ರವಾಹವು ಆರಿ ಬತ್ತಿಹೋಗುತ್ತದೆ ಹಾಗೆ ಮನುಷ್ಯನು ಮಲಗುತ್ತಾನೆ,
12 So man lies down and doesn't rise; Until the heavens are no more, they shall not awake, Nor be roused out of their sleep.ಏಳುವದೇ ಇಲ್ಲ; ಆಕಾಶಗಳು ಇಲ್ಲದೆ ಹೋಗುವ ವರೆಗೆ ಅವರು ಎಚ್ಚರಗೊಳ್ಳುವದಿಲ್ಲ. ನಿದ್ರೆಯಿಂದ ಎಬ್ಬಿಸಲ್ಪಡುವದೂ ಇಲ್ಲ.
13 "Oh that you would hide me in Sheol, That you would keep me secret, until your wrath is past, That you would appoint me a set time, and remember me!ನೀನು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿನ್ನ ಕೋಪವು ತಿರುಗುವ ವರೆಗೂ ನನ್ನನ್ನು ಅಡಗಿಸಿ ನನಗೆ ನೇಮಕವಾದ ಸಮಯವನ್ನು ನೇಮಿಸಿ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು.
14 If a man dies, shall he live again? All the days of my warfare would I wait, Until my release should come.ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ನನಗೆ ನೇಮಕ ಮಾಡಿದ ಸಮಯದ ದಿನಗಳೆಲ್ಲಾ ನನಗೆ ಬದಲು ಬರುವ ವರೆಗೆ ನಾನು ಕಾದುಕೊಂಡಿರುವೆನು.
15 You would call, and I would answer you. You would have a desire to the work of your hands.ನೀನು ಕರೆಯುವಿ, ನಾನು ನಿನಗೆ ಉತ್ತರಕೊಡುವೆನು; ನಿನ್ನ ಕೈಕೆಲಸವನ್ನು ಬಯಸುವಿ.
16 But now you number my steps. Don't you watch over my sin?ಈಗ ನನ್ನ ಹೆಜ್ಜೆಗಳನ್ನು ಎಣಿಕೆ ಮಾಡುತ್ತೀ; ನೀನು ನನ್ನ ಪಾಪವನ್ನು ನೋಡಿ ಕೊಳ್ಳುತ್ತೀಯಲ್ಲವೋ?
17 My disobedience is sealed up in a bag. You fasten up my iniquity.ನನ್ನ ದ್ರೋಹವನ್ನು ಚೀಲ ದಲ್ಲಿ ಮುದ್ರಿಸಿದ್ದಿ; ನನ್ನ ಅಕ್ರಮವನ್ನು ಮುಚ್ಚಿ ಹೊಲಿ ದಿದ್ದೀ.
18 "But the mountain falling comes to nothing; The rock is removed out of its place;ಆದರೂ ಬೆಟ್ಟವು ಬಿದ್ದು ಹಾಳಾಗುವದು; ಬಂಡೆಯು ತನ್ನ ಸ್ಥಳದಿಂದ ಜರಗುವದು.
19 The waters wear the stones; The torrents of it wash away the dust of the earth: So you destroy the hope of man.ನೀರು ಕಲ್ಲುಗಳನ್ನು ಕೊರೆಯುವದು. ಭೂಮಿಯ ಧೂಳಿನಿಂದ ಬೆಳೆದು ಬರುವವುಗಳನ್ನು ನೀನು ತೊಳೆದುಬಿಡುತ್ತೀ; ಮನುಷ್ಯನ ನಿರೀಕ್ಷೆಯನ್ನು ನಾಶಮಾಡುತ್ತೀ.
20 You forever prevail against him, and he passes; You change his face, and send him away.ನೀನು ಅವನಿಗೆ ನಿತ್ಯಕ್ಕೂ ಮೇಲುಗೈ ಆಗಿರುವಿ; ಅವನು ಹೊರಟು ಹೋಗುವನು; ಅವನ ಮುಖಭಾವವನ್ನು ಮಾರ್ಪಡಿಸಿ ಅವನನ್ನು ಕಳುಹಿಸಿ ಬಿಡುತ್ತೀ.
21 His sons come to honor, and he doesn't know it; They are brought low, but he doesn't perceive it of them.ಅವನ ಮಕ್ಕಳು ಘನತೆಗೆ ಬರುತ್ತಾರೆ; ಅದು ಅವನಿಗೆ ತಿಳಿಯುವದಿಲ್ಲ; ಅವರು ಹೀನರಾಗುತ್ತಾರೆ, ಅವನು ಗ್ರಹಿಸಿಕೊಳ್ಳುವದಿಲ್ಲ.
22 But his flesh on him has pain; His soul within him mourns."ಆದರೆ ಅವನ ಮೇಲಿರುವ ಮಾಂಸವು ನೋಯುವದು; ಅವನಲ್ಲಿರುವ ಅವನ ಆತ್ಮವು ದುಃಖಪಡುವದು.
Kannada Bible