Jeremiah 27 - WEB (Kannada)
1 In the beginning of the reign of Jehoiakim the son of Josiah, king of Judah, came this word to Jeremiah from Yahweh, saying,ಯೆಹೂದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಆಳಿ ಕೆಯ ಪ್ರಾರಂಭದಲ್ಲಿ ಈ ವಾಕ್ಯವು ಕರ್ತನಿಂದ ಯೆರೆ ವಿಾಯನಿಗೆ ಬಂತು ಯಾವದಂದರೆ
2 Thus says Yahweh to me: Make you bonds and bars, and put them on your neck;ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.
3 and send them to the king of Edom, and to the king of Moab, and to the king of the children of Ammon, and to the king of Tyre, and to the king of Sidon, by the hand of the messengers who come to Jerusalem to Zedekiah king of Judah;ಅವುಗಳನ್ನು ಎದೋಮಿನ ಅರಸನಿಗೂ ಮೋವಾಬಿನ ಅರಸನಿಗೂ ಅಮ್ಮೋನ್ಯರ ಅರಸನಿಗೂ ತೂರಿನ ಅರಸನಿಗೂ ಚೀದೋನಿನ ಅರಸನಿಗೂ ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಬರುವ ಸುದ್ದಿಗಾರರ ಕೈಯಿಂದ ಕಳುಹಿಸು.
4 and give them a charge to their masters, saying, Thus says Yahweh of Hosts, the God of Israel, Thus shall you tell your masters:ಅವರು ತಮ್ಮ ಯಜಮಾನರಿಗೆ ಹೇಳುವದಕ್ಕೆ ನೀನು ಅಪ್ಪಣೆಕೊಡತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳುವದೇನಂದರೆ--ನೀವು ನಿಮ್ಮ ಯಜಮಾನರಿಗೆ ಹೀಗೆ ಹೇಳಬೇಕು--
5 I have made the earth, the men and the animals that are on the surface of the earth, by my great power and by my outstretched arm; and I give it to whom it seems right to me.ನಾನೇ ಭೂಮಿಯನ್ನೂ ಭೂಮಿಯ ಮೇಲಿರುವ ಮನುಷ್ಯರನ್ನೂ ಮೃಗಗಳನ್ನೂ ನನ್ನ ಮಹಾಬಲದಿಂದ ನಾನು ಕೈಚಾಚಿ ಉಂಟು ಮಾಡಿ ನನಗೆ ಸರಿತೋಚಿದವರಿಗೆ ಅದನ್ನು ಕೊಟ್ಟಿ ದ್ದೇನೆ.
6 Now have I given all these lands into the hand of Nebuchadnezzar the king of Babylon, my servant; and the animals of the field also have I given him to serve him.ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ.
7 All the nations shall serve him, and his son, and his son's son, until the time of his own land come: and then many nations and great kings shall make him their bondservant.ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು.
8 It shall happen, that the nation and the kingdom which will not serve the same Nebuchadnezzar king of Babylon, and that will not put their neck under the yoke of the king of Babylon, that nation will I punish, says Yahweh, with the sword, and with the famine, and with the pestilence, until I have consumed them by his hand.ಬಾಬೆಲಿನ ಅರಸನಾದ ನೆಬೂಕ ದ್ನೇಚ್ಚರನಿಗೆ ಸೇವೆಮಾಡದೆ ಬಾಬೆಲಿನ ಅರಸನ ನೊಗಕ್ಕೆ ತನ್ನ ಕುತ್ತಿಗೆಯನ್ನು ಕೊಡದೆ ಇರುವ ಜನಾಂಗವೂ ರಾಜ್ಯವೂ ಯಾವದೋ ಆ ಜನಾಂಗವನ್ನು ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಇವನ ಕೈಯಿಂದ ಅವುಗಳನ್ನು ನಾಶಮಾಡಿಬಿಡುವ ವರೆಗೆ ದಂಡಿಸುವೆನೆಂದು ಕರ್ತನು ಅನ್ನುತ್ತಾನೆ.
9 But as for you, don't you listen to your prophets, nor to your diviners, nor to your dreams, nor to your soothsayers, nor to your sorcerers, who speak to you, saying, You shall not serve the king of Babylon:ಆದ ದರಿಂದ ನೀವು ಬಾಬೆಲಿನ ಅರಸನನ್ನು ಸೇವಿಸಬೇಡಿ ರೆಂದು ನಿಮಗೆ ಹೇಳುವ ನಿಮ್ಮ ಪ್ರವಾದಿಗಳಿಗೂ ಕಣಿಹೇಳುವವರಿಗೂ ಸ್ವಪ್ನಗಾರರಿಗೂ ಮಂತ್ರದ ವರಿಗೂ ನಿಮ್ಮ ಶೂನ್ಯಗಾರರಿಗೂ ಕಿವಿಗೊಡಬೇಡಿರಿ.
10 for they prophesy a lie to you, to remove you far from your land, and that I should drive you out, and you should perish.ನಿಮ್ಮನ್ನು ನಿಮ್ಮ ದೇಶದಿಂದ ದೂರಮಾಡುವ ಹಾಗೆಯೂ ನಾನು ನಿಮ್ಮನ್ನು ಓಡಿಸಿ ಬಿಟ್ಟಮೇಲೆ ನೀವು ನಾಶವಾಗುವ ಹಾಗೆಯೂ ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ.
11 But the nation that shall bring their neck under the yoke of the king of Babylon, and serve him, that [nation] will I let remain in their own land, says Yahweh; and they shall till it, and dwell therein.ಆದರೆ ಬಾಬೆಲಿನ ಅರಸನ ನೊಗದಲ್ಲಿ ತನ್ನ ಕುತ್ತಿಗೆಯನ್ನು ಸೇರಿಸಿ ಅವನಿಗೆ ಸೇವೆ ಮಾಡುವ ಜನಾಂಗವು ಯಾವದೋ ಅದನ್ನು ಸ್ವಂತ ದೇಶದಲ್ಲಿ ನಿಲ್ಲಗೊಡಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಅವರು ಅದನ್ನು ಬೇಸಾಯಮಾಡಿ ಅದರಲ್ಲಿ ವಾಸಮಾಡುವರು.
12 I spoke to Zedekiah king of Judah according to all these words, saying, Bring your necks under the yoke of the king of Babylon, and serve him and his people, and live.ಆಗ ನಾನು ಯೆಹೂದದ ಅರಸನಾದ ಚಿದ್ಕೀ ಯನ ಸಂಗಡ ಈ ವಾಕ್ಯಗಳ ಪ್ರಕಾರ ಮಾತನಾಡಿ ದೆನು--ಬಾಬೆಲಿನ ಅರಸನ ನೊಗಕ್ಕೆ ನಿಮ್ಮ ಹೆಗಲು ಗಳನ್ನು ಕೊಟ್ಟು ಅವನಿಗೂ ಅವನ ಜನರಿಗೂ ಸೇವೆಮಾಡಿ ಬದುಕಿರಿ.
13 Why will you die, you and your people, by the sword, by the famine, and by the pestilence, as Yahweh has spoken concerning the nation that will not serve the king of Babylon?ಬಾಬೆಲಿನ ಅರಸನಿಗೆ ಸೇವೆ ಮಾಡದ ಜನಾಂಗಕ್ಕೆ ವಿರೋಧವಾಗಿ ಕರ್ತನು ಮಾತ ನಾಡಿದ ಪ್ರಕಾರ--ನೀನೂ ನಿನ್ನ ಜನರೂ ಯಾಕೆ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರಿ?
14 Don't listen to the words of the prophets who speak to you, saying, You shall not serve the king of Babylon; for they prophesy a lie to you.ಆದದರಿಂದ ಬಾಬೆಲಿನ ಅರಸನಿಗೆ ನೀವು ಸೇವೆಮಾಡಬೇಡಿರೆಂದು ನಿಮಗೆ ಹೇಳುವ ಪ್ರವಾದಿಗಳ ವಾಕ್ಯಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ.
15 For I have not sent them, says Yahweh, but they prophesy falsely in my name; that I may drive you out, and that you may perish, you, and the prophets who prophesy to you.ನಾನು ಅವರನ್ನು ಕಳುಹಿಸಲಿಲ್ಲವೆಂದು ಕರ್ತನು ಅನ್ನುತ್ತಾನೆ; ಆದಾಗ್ಯೂ ಅವರು ನಾನು ನಿಮ್ಮನ್ನು ಓಡಿಸಿಬಿಡುವ ಹಾಗೆಯೂ ನೀವೂ ನಿಮಗೆ ಪ್ರವಾದಿಸುವ ಪ್ರವಾದಿಗಳೂ ನಾಶವಾಗುವ ಹಾಗೆಯೂ ನನ್ನ ಹೆಸರಿನಲ್ಲಿ ನಿಮಗೆ ಸುಳ್ಳಾಗಿ ಪ್ರವಾದಿಸುತ್ತಾರೆ.
16 Also I spoke to the priests and to all this people, saying, Thus says Yahweh: Don't listen to the words of your prophets who prophesy to you, saying, Behold, the vessels of Yahweh's house shall now shortly be brought again from Babylon; for they prophesy a lie to you.ನಾನು ಯಾಜಕರ ಸಂಗಡಲೂ ಈ ಜನರೆಲ್ಲರ ಸಂಗಡಲೂ ಮಾತನಾಡಿದೆನು; ಏನಂದರೆ, ಕರ್ತನು ಹೀಗೆ ಹೇಳುತ್ತಾನೆ--ಇಗೋ, ಕರ್ತನ ಆಲಯದ ಪಾತ್ರೆಗಳು ಬೇಗ ಬಾಬೆಲಿನಿಂದ ತಿರುಗಿ ತರಲ್ಪಡು ವದೆಂದು ನಿಮಗೆ ಪ್ರವಾದಿಸುವ ನಿಮ್ಮ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ.
17 Don't listen to them; serve the king of Babylon, and live: why should this city become a desolation?ಅವರಿಗೆ ಕಿವಿಗೊಡ ಬೇಡಿರಿ; ಬಾಬೆಲಿನ ಅರಸನಿಗೆ ಸೇವೆಮಾಡಿ ಬದುಕಿರಿ; ಈ ಪಟ್ಟಣವು ಯಾಕೆ ಹಾಳಾಗಬೇಕು?
18 But if they be prophets, and if the word of Yahweh be with them, let them now make intercession to Yahweh of Hosts, that the vessels which are left in the house of Yahweh, and in the house of the king of Judah, and at Jerusalem, don't go to Babylon.ಆದರೆ ಅವರು ಪ್ರವಾದಿಗಳಾಗಿದ್ದರೆ, ದೇವರ ವಾಕ್ಯವು ಅವರ ಸಂಗಡ ಇದ್ದರೆ ಕರ್ತನ ಆಲಯದಲ್ಲಿಯೂ ಯೆಹೂ ದದ ಅರಸನ ಮನೆಯಲ್ಲಿಯೂ ಯೆರೂಸಲೇಮಿ ನಲ್ಲಿಯೂ ಉಳಿದ ಪಾತ್ರೆಗಳು ಬಾಬೆಲಿಗೆ ಹೋಗದ ಹಾಗೆ ಅವರು ಸೈನ್ಯಗಳ ಕರ್ತನಿಗೆ ವಿಜ್ಞಾಪನೆ ಮಾಡಲಿ.
19 For thus says Yahweh of Hosts concerning the pillars, and concerning the sea, and concerning the bases, and concerning the residue of the vessels that are left in this city,ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯಯನನ್ನೂ ಯೆಹೂದದ ಮತ್ತು ಯೆರೂಸ ಲೇಮಿನ ಶ್ರೇಷ್ಠರೆಲ್ಲರನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ
20 which Nebuchadnezzar king of Babylon didn't take, when he carried away captive Jeconiah the son of Jehoiakim, king of Judah, from Jerusalem to Babylon, and all the nobles of Judah and Jerusalem;ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ--
21 yes, thus says Yahweh of Hosts, the God of Israel, concerning the vessels that are left in the house of Yahweh, and in the house of the king of Judah, and at Jerusalem:ಕರ್ತನ ಆಲಯದಲ್ಲಿಯೂ ಯೆಹೂದದ ಮತ್ತು ಯೆರೂಸಲೇಮಿನ ಅರಸನ ಮನೆಯಲ್ಲಿಯೂ ಉಳಿದಿರುವ ಪಾತ್ರೆಗಳ ವಿಷಯವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --
22 They shall be carried to Babylon, and there shall they be, until the day that I visit them, says Yahweh; then will I bring them up, and restore them to this place.ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ.
Kannada Bible