Jeremiah 2 - DBY (Kannada)
1 And the word of Jehovah came to me, saying,ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
2 Go and cry in the ears of Jerusalem, saying, Thus saith Jehovah: I remember for thee the kindness of thy youth, the love of thine espousals, when thou wentest after me in the wilderness, in a land not sown.ನೀನು ಹೋಗಿ ಯೆರೂಸಲೇಮಿನ ಕಿವಿಗಳಲ್ಲಿ ಕೂಗಿ ಹೇಳ ಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ನಾನು ನಿನ್ನನ್ನು ನಿನ್ನ ಯೌವನದ ವಾತ್ಸಲ್ಯವನ್ನೂ ನಿನ್ನ ನಿಶ್ಚಿತಾರ್ಥದ ಪ್ರೀತಿಯನ್ನೂ ನೀನು ಅರಣ್ಯದಲ್ಲಿ ಬಿತ್ತಲ್ಪಡದ ದೇಶದಲ್ಲಿ ನನ್ನನ್ನು ಹಿಂಬಾಲಿಸಿದ್ದನ್ನೂ ಜ್ಞಾಪಕಮಾಡಿಕೊಳ್ಳುತ್ತೇನೆ.
3 Israel was holiness unto Jehovah, the first-fruits of his increase: all that devour him are guilty; evil shall come upon them, saith Jehovah.ಇಸ್ರಾಯೇಲು ಕರ್ತನಿಗೆ ಪರಿಶುದ್ಧವೂ ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿತ್ತು; ಅದನ್ನು ತಿಂದುಬಿಟ್ಟವರೆಲ್ಲರೂ ಅಪರಾಧಿ ಗಳಾಗುವರು; ಅವರಿಗೆ ಕೇಡು ಬರುವದೆಂದು ಕರ್ತನು ಅನ್ನುತ್ತಾನೆ.
4 Hear the word of Jehovah, house of Jacob, and all the families of the house of Israel.ಓ ಯಾಕೋಬಿನ ಮನೆತನವೇ, ಇಸ್ರಾಯೇಲಿನ ಮನೆತನದ ಎಲ್ಲಾ ಕುಟುಂಬಗಳೇ, ಕರ್ತನ ವಾಕ್ಯವನ್ನು ನೀವು ಕೇಳಿರಿ.
5 Thus saith Jehovah: What injustice have your fathers found in me, that they are gone far from me, and have walked after vanity, and become vain?ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ?
6 And they said not, Where is Jehovah, that brought us up out of the land of Egypt, that led us in the wilderness, in a land of deserts and of pits, in a land of drought and of the shadow of death, in a land that no one passeth through, and where no man dwelleth?ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.
7 And I brought you into a fruitful land, to eat the fruit thereof and the good thereof; and ye entered and defiled my land, and made my heritage an abomination.ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಫಲವನ್ನೂ ಮೇಲನ್ನೂ ತಿನ್ನುವ ಹಾಗೆ ಕರಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸ್ವಾಸ್ತ್ಯವನ್ನು ಅಸಹ್ಯ ಮಾಡಿದಿರಿ.
8 The priests said not, Where is Jehovah? and they that handled the law knew me not; and the shepherds transgressed against me; and the prophets prophesied by Baal, and walked after [things that] do not profit.ಯಾಜಕರು--ಕರ್ತನು ಎಲ್ಲಿದ್ದಾನೆ ಎಂದು ಹೇಳಲಿಲ್ಲ; ನ್ಯಾಯ ಪ್ರಮಾಣವನ್ನು ಉಪಯೋಗಿಸುವವರು ನನ್ನನ್ನು ತಿಳಿಯಲಿಲ್ಲ; ಪಾಲಕರು ನನಗೆ ವಿರೋಧವಾಗಿ ದ್ರೋಹಮಾಡಿದರು; ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು; ಪ್ರಯೋಜನವಿಲ್ಲದವುಗಳನ್ನು ಹಿಂದ ಟ್ಟಿದರು.
9 Therefore will I yet plead with you, saith Jehovah, and with your children's children will I plead.ಆದದರಿಂದ ಇನ್ನು ನಿಮ್ಮ ಸಂಗಡ ವ್ಯಾಜ್ಯ ವಾಡುವೆನೆಂದು ಕರ್ತನು ಅನ್ನುತ್ತಾನೆ; ಇದಲ್ಲದೆ ನಿಮ್ಮ ಮಕ್ಕಳ ಮಕ್ಕಳ ಸಂಗಡ ವ್ಯಾಜ್ಯವಾಡುವೆನು.
10 For pass over to the isles of Chittim, and see; and send unto Kedar, and consider diligently, and see if there have been such a thing.ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ; ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳುಕೊಳ್ಳಿರಿ; ಅಂಥದ್ದು (ಎಲ್ಲಿಯಾದರೂ) ಉಂಟೋ? ನೋಡಿರಿ.
11 Hath a nation changed [its] gods? and they are no gods; -- but my people have changed their glory for that which doth not profit.ಜನಾಂ ಗವು ತಮ್ಮ ದೇವರುಗಳನ್ನು ಅವು ದೇವರುಗಳಲ್ಲದೆ ಇದ್ದಾಗ್ಯೂ ಬದಲು ಮಾಡಿದ್ದುಂಟೋ? ಆದರೆ ನನ್ನ ಜನರು ತಮ್ಮ ವೈಭವವನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ.
12 Be astonished, ye heavens, at this, and shudder; be amazed very much, saith Jehovah.ಓ ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ ಎಂದು ಕರ್ತನು ಅನ್ನುತ್ತಾನೆ.
13 For my people have committed two evils: they have forsaken me, the fountain of living waters, to hew them out cisterns, broken cisterns that hold no water.ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ; ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು ತಮಗೆ ತೊಟ್ಟಿಗಳನ್ನು ನೀರು ಹಿಡಿಯಲಾರದ ಒಡಕು ತೊಟ್ಟಿಗಳನ್ನು ಕೆತ್ತಿಕೊಂಡಿದ್ದಾರೆ.
14 Is Israel a bondman? Is he a home-born [slave]? Why is he become a spoil?ಇಸ್ರಾಯೇಲನು ಸೇವಕನೋ? ಮನೆಯಲ್ಲಿ ಹುಟ್ಟಿದ ಗುಲಾಮನೋ? ಅವನು ಯಾಕೆ ಸುಲಿಗೆಯಾದನು?
15 The young lions roared against him, they gave forth their voice, and they made his land desolate: his cities are burned, without inhabitant.ಪ್ರಾಯದ ಸಿಂಹಗಳು ಅವನಿಗೆ ವಿರೋಧವಾಗಿ ಘರ್ಜಿಸಿ, ಅಬ್ಬ ರಿಸುತ್ತವೆ. ಅವನ ದೇಶವನ್ನು ಹಾಳುಮಾಡುತ್ತವೆ; ಅವನ ಪಟ್ಟಣಗಳು ನಿವಾಸವಿಲ್ಲದೆ ಸುಟ್ಟುಹೋಗಿವೆ.
16 Even the children of Noph and Tahapanes have fed on the crown of thy head.ನೋಫ್ ಮತ್ತು ತಪನೆಯ ಮಕ್ಕಳೂ ಸಹ ನಿನ್ನ ತಲೆಯ ಕಿರೀಟವನ್ನು ಮುರಿದುಬಿಟ್ಟಿದ್ದಾರೆ.
17 Hast thou not procured this unto thyself, in that thou hast forsaken Jehovah thy God, at the time he was leading thee in the way?ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ?
18 And now, what hast thou to do with the way of Egypt, to drink the waters of Shihor? And what hast thou to do with the way of Assyria, to drink the waters of the River?ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ?
19 Thine own wickedness chastiseth thee, and thy backslidings reprove thee: know then and see that it is an evil thing and bitter that thou hast forsaken Jehovah thy God, and that my fear is not in thee, saith the Lord, Jehovah of hosts.ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
20 For of old thou hast broken thy yoke, [and] burst thy bands; and thou saidst, I will not serve. For upon every high hill, and under every green tree, thou bowest down, playing the harlot.ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.
21 And I, -- I had planted thee a noble vine, wholly a right seed; how then art thou turned into the degenerate shoots of a strange vine unto me?ಆದಾಗ್ಯೂ ನಾನು ನಿನ್ನನ್ನು ಉತ್ತಮ ದ್ರಾಕ್ಷೇಬಳ್ಳಿಯಾಗಿಯೂ ಪೂರ್ಣ ವಾಗಿ ನಿಜ ಬೀಜವಾಗಿಯೂ ನೆಟ್ಟಿದ್ದೆನು; ಆದರೆ ನೀನು ಹೀಗೆ ನನಗೆ ಅನ್ಯ ದ್ರಾಕ್ಷೇ ಬಳ್ಳಿಯ ಹಾಗೆ ಕೆಟ್ಟುಹೋಗಿ ಬದಲಾದಿ?
22 For though thou wash thee with nitre, and take thee much potash, thine iniquity is marked before me, saith the Lord Jehovah.ನೀನು ಸೌಳಿನಿಂದ ತೊಳಕೊಂಡರೂ ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ ಎಂದು ಕರ್ತನಾದ ದೇವರು ಅನ್ನುತ್ತಾನೆ.
23 How sayest thou, I am not defiled, I have not gone after the Baals? See thy way in the valley, acknowledge what thou hast done -- a swift dromedary traversing her ways!ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ ಎಂದು ನೀನು ಹೇಳುವದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು; ನೀನು ಮಾಡಿದ್ದನ್ನು ತಿಳುಕೋ; ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ;
24 -- a wild ass, used to the wilderness, that snuffeth up the wind in her desire! In her ardour, who shall turn her away? All they that seek her will not weary themselves; in her month they shall find her.ಅರಣ್ಯದ ಅಭ್ಯಾಸ ವುಳ್ಳ ಕಾಡುಕತ್ತೆಯೇ; ಅವಳ ಅತ್ಯಾಶೆಯಲ್ಲಿ ಗಾಳಿ ಯನ್ನು ಹೀರಿಕೊಳ್ಳುತ್ತಾಳೆ; ಅವಳ ಮದವನ್ನು ಯಾರು ತಡೆಯುವರು? ಅವಳನ್ನು ಹುಡುಕುವವ ರೆಲ್ಲರೂ ಆಯಾಸಪಡುವದಿಲ್ಲ; ಅವಳ ತಿಂಗಳಲ್ಲಿ ಅವಳನ್ನು ಕಾಣುವರು.
25 Withhold thy foot from being unshod, and thy throat from thirst. But thou saidst, There is no hope; no, for I love strangers, and after them will I go.ನಿನ್ನ ಕಾಲು ಬರೀ ಕಾಲಾ ಗದ ಹಾಗೆಯೂ ನಿನ್ನ ಗಂಟಲು ನೀರಡಿಕೆ ಪಡದ ಹಾಗೆಯೂ ಹಿಂತೆಗೆ; ಆದರೆ ನೀನು--ಇಲ್ಲ, ನಿರೀಕ್ಷೆ ಯಿಲ್ಲ, ಯಾಕಂದರೆ ನಾನು ಅನ್ಯರನ್ನು ಪ್ರೀತಿ ಮಾಡಿದ್ದೇನೆ. ಅವರ ಹಿಂದೆ ನಾನು ಹೋಗುತ್ತೇನೆ ಎಂದು ನೀನು ಹೇಳಿದಿ.
26 As a thief is ashamed when he is found, so shall the house of Israel be ashamed -- they, their kings, their princes, and their priests, and their prophets --ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲಿನ ಮನೆತನ ದವರಿಗೆ ನಾಚಿಕೆಯಾಯಿತು; ಅವರಿಗೂ ಅವರ ಅರಸರಿಗೂ ಸಾಮಂತರಿಗೂ ಯಾಜಕರಿಗೂ ಅವರ ಪ್ರವಾದಿಗಳಿಗೂ ನಾಚಿಕೆಯಾಯಿತು.
27 saying to a stock, Thou art my father; and to a stone, Thou hast brought me forth; for they have turned the back unto me, and not the face; and in the time of their trouble they will say, Arise, and save us!ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು.
28 Where then are thy gods that thou hast made for thyself? let them arise, if they can save thee in the time of thy trouble: for as the number of thy cities, are thy gods, O Judah.ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟ ಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಯಾಕಂದರೆ ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.
29 Wherefore would ye contend with me? Ye all have transgressed against me, saith Jehovah.ಏಕೆ ನನ್ನ ಸಂಗಡ ವಾದಿಸುತ್ತೀರಿ? ನೀವೆಲ್ಲರು ನನಗೆ ವಿರೋಧವಾಗಿ ದ್ರೋಹಮಾಡಿ ದ್ದೀರಿ ಎಂದು ಕರ್ತನು ಅನ್ನುತ್ತಾನೆ.
30 In vain have I smitten your children: they received no correction. Your own sword hath devoured your prophets, like a destroying lion.ನಾನು ನಿಮ್ಮ ಮಕ್ಕಳನ್ನು ಹೊಡೆದದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತಕ್ಕೊಳ್ಳಲಿಲ್ಲ. ನಿಮ್ಮ ಸ್ವಂತ ಕತ್ತಿಯು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
31 O generation, mark ye the word of Jehovah. Have I been a wilderness unto Israel, or a land of thick darkness? Wherefore say my people, We have dominion; we will come no more unto thee?ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.
32 Doth a virgin forget her ornaments, a bride her attire? But my people have forgotten me days without number.ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
33 How dost thou trim thy way to seek love! Therefore hast thou also accustomed thy ways to wickedness.ಪ್ರೀತಿಯನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಯಾಕೆ ಚಂದ ಮಾಡಿಕೊಳ್ಳುತ್ತೀ? ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
34 Yea, in thy skirts is found the blood of the souls of the innocent poor, whom thou didst not encounter breaking in, but [it is found] upon all these.ಇದಲ್ಲದೆ ನಿನ್ನ ಸೆರಗುಗಳಲ್ಲಿ ಅಪರಾಧವಿಲ್ಲದ ಬಡಪ್ರಾಣಿಗಳ ರಕ್ತವು ಸಿಕ್ಕಿದೆ; ಅಂತರಂಗದ ಶೋಧನೆಯಿಂದಲ್ಲ, ಆದರೆ ಇವರೆಲ್ಲರ ಮೇಲೆಯೇ ಅದನ್ನು ಕಂಡಿದ್ದೇನೆ.
35 And thou sayest, Indeed I am innocent; his anger will turn from me. Behold, I will enter into judgment with thee because thou sayest, I have not sinned.ಆದಾಗ್ಯೂ ನೀನು--ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ಆತನ ಕೋಪವು ನನ್ನನ್ನು ಬಿಟ್ಟು ತಿರುಗುವದೆಂದು ಹೇಳುತ್ತೀ; ನಾನು ಪಾಪ ಮಾಡಲಿಲ್ಲವೆಂದು ನೀನು ಹೇಳುವದ ರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.
36 Why dost thou gad about so much, and change thy way? Thou shalt also be brought to shame by Egypt, as thou wast brought to shame by Assyria.ನಿನ್ನ ಮಾರ್ಗವನ್ನು ಬೇರೆಮಾಡಿಕೊಳ್ಳುವಷ್ಟು ಏಕೆ ತಿರುಗಾಡುತ್ತೀ? ನೀನು ಅಶ್ಶೂರಿನ ನಿಮಿತ್ತ ನಾಚಿಕೆ ಪಟ್ಟ ಹಾಗೆ ಐಗುಪ್ತದ ನಿಮಿತ್ತವೂ ನಾಚಿಕೆಪಡುವಿ.
37 Thou shalt indeed go forth from her with thy hands upon thy head; for Jehovah hath rejected those thou confidest in, and thou shalt not prosper by them.ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟುಹೋಗುವಿ; ಕರ್ತನು ನಿನ್ನ ಭರವಸೆಗಳನ್ನು ತಿರಸ್ಕರಿಸಿದ್ದಾನೆ, ಅವುಗಳಲ್ಲಿ ನಿನಗೆ ಸಫಲವಾಗುವದಿಲ್ಲ.
Kannada Bible