Bible

Jeremiah 13 - BBE (Kannada)

1 This is what the Lord said to me: Go and get yourself a linen band and put it round you and do not put it in water.1 ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು;

2 So, as the Lord said, I got a band for a price and put it round my body.ಆಗ ಕರ್ತನ ಮಾತಿನ ಪ್ರಕಾರ ನಾನು ಆ ದಟ್ಟಿಯನ್ನು ತಕ್ಕೊಂಡು ನನ್ನ ನಡುವಿಗೆ ಕಟ್ಟಿಕೊಂಡೆನು.

3 And the word of the Lord came to me a second time, saying,ಆಗ ಕರ್ತನ ವಾಕ್ಯವು ನನಗೆ ಎರಡನೇ ಸಾರಿ ಉಂಟಾಗಿ ಹೇಳಿದ್ದೆನಂದರೆ--ನೀನು ನಿನ್ನ ನಡುವಿನಲ್ಲಿರುವ

4 Take the band which you got for a price, which is round your body, and go to Parah and put it in a secret place there in a hole of the rock.ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್‌ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು.

5 So I went and put it in a secret place by Parah, as the Lord had said to me.ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್‌ ಬಳಿ ಯಲ್ಲಿ ಅಡಗಿಸಿದೆನು.

6 Then after a long time, the Lord said to me, Up! go to Parah and get the band which I gave you orders to put there.ಬಹಳ ದಿವಸಗಳಾದ ಮೇಲೆ ಕರ್ತನು ನನಗೆ--ನೀನು ಎದ್ದು ಯೂಫ್ರೆಟೀ ಸ್‌ಗೆ ಹೋಗಿ ಅಲ್ಲಿ ಅಡಗಿಸಬೇಕೆಂದು ನಾನು ಆಜ್ಞಾಪಿಸಿದ ದಟ್ಟಿಯನ್ನು ಅಲ್ಲಿಂದ ತಕ್ಕೋ ಅಂದನು.

7 So I went to Parah and, uncovering the hole, took the band from the place where I had put it away: and the band was damaged and of no use for anything.ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು.

8 Then the word of the Lord came to me, saying,ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--

9 The Lord has said, In this way I will do damage to the pride of Judah and to the great pride of Jerusalem.ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು.

10 These evil people who say they will not give ear to my words, who go on in the pride of their hearts and have become servants and worshippers of other gods, will become like this band which is of no use for anything.ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.

11 For as a band goes tightly round a man's body, so I made all the people of Israel and all the people of Judah tightly united to me; so that they might be a people for me and a name and a praise and a glory: but they would not give ear.ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.

12 So you are to say this word to them: This is the word of the Lord, the God of Israel: Every skin bottle will be full of wine; and they will say to you, Is it not quite clear to us that every skin bottle will be full of wine?ಆದದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವು; ಆಗ ಅವರು ನಿನಗೆ--ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ ಎಂದು ನಿನಗೆ ಹೇಳುವರು.

13 Then you are to say to them, The Lord has said, I will make all the people of this land, even the kings seated on David's seat, and the priests and the prophets and all the people of Jerusalem, overcome with strong drink.ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕೂಡ್ರುವ ಅರಸುಗಳನ್ನೂ ಯಾಜಕರನ್ನೂ ಪ್ರವಾದಿ ಗಳನ್ನೂ ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.

14 I will have them smashed against one another, fathers and sons together, says the Lord: I will have no pity or mercy, I will have no feeling for them to keep me from giving them to destruction.ಅವರ ತಂದೆಗಳನ್ನೂ ಮಕ್ಕಳನ್ನೂ ಕೂಡ ಒಬ್ಬನ ಮೇಲೊಬ್ಬನನ್ನು ಅಪ್ಪಳಿಸು ವೆನು. ನಾನು ಅವರನ್ನು ಕನಿಕರಿಸುವದಿಲ್ಲ, ಕರುಣಿಸು ವದಿಲ್ಲ ಅಂತಃಕರುಣೆಪಡುವದಿಲ್ಲ ಅವರನ್ನು ಕೆಡಿಸು ವೆನು ಎಂದು ಕರ್ತನು ಅನ್ನುತ್ತಾನೆ.

15 Give ear and let your ears be open; be not lifted up: for these are the words of the Lord.ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಕರ್ತನು ಮಾತನಾಡಿದ್ದಾನೆ.

16 Give glory to the Lord your God, before he makes it dark, and before your feet are slipping on the dark mountains, and, while you are looking for a light, he makes it into deep dark, into black night.ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ.

17 But if you do not give ear to it, my soul will be weeping in secret for your pride; my eye will be weeping bitterly, streaming with water, because the Lord's flock has been taken away as prisoners.ಆದರೆ ನೀವು ಅದನ್ನು ಕೇಳದೆ ಹೋದರೆ ನನ್ನ ಪ್ರಾಣವು ನಿಮ್ಮ ಗರ್ವದ ನಿಮಿತ್ತ ಅಂತರಂಗದ ಸ್ಥಳಗಳಲ್ಲಿ ಅಳು ವದು. ನನ್ನ ಆತ್ಮವು ಬಹಳವಾಗಿ ದುಃಖಿಸುವದು; ಕಣ್ಣೀರು ಬಹಳವಾಗಿ ಸುರಿಸುವದು; ಕರ್ತನ ಮಂದೆಯು ಸೆರೆಯಾಗಿ ಒಯ್ಯಲ್ಪಟ್ಟಿದೆ.

18 Say to the king and to the queen-mother, Make yourselves low, be seated on the earth: for the crown of your glory has come down from your heads.ಅರಸನಿಗೂ ರಾಣಿಗೂ ನೀನು ಹೇಳತಕ್ಕದ್ದೇ ನಂದರೆ--ನೀವು ತಗ್ಗಿಸಿಕೊಂಡು ಕೂತುಕೊಳ್ಳಿರಿ; ನಿಮ್ಮ ದೊರೆತನಗಳು ಅಂದರೆ ನಿಮ್ಮ ಗೌರವದ ಕಿರೀಟವು ಕೆಳಗೆ ಬರುವದು.

19 The towns of the south are shut up, and there is no one to make them open: Judah is taken away as prisoners; all Judah is taken away as prisoners.ದಕ್ಷಿಣದ ಪಟ್ಟಣಗಳು ತೆರೆಯುವ ವನಿಲ್ಲದೆ ಮುಚ್ಚಲ್ಪಡುವವು, ಯೆಹೂದವೆಲ್ಲವೂ ಸಂಪೂರ್ಣವಾಗಿ ಸೆರೆಯಾಗಿ ಒಯ್ಯಲ್ಪಡುವದು.

20 Let your eyes be lifted up (O Jerusalem), and see those who are coming from the north. Where is the flock which was given to you, your beautiful flock?ನಿಮ್ಮ ಕಣ್ಣುಗಳನ್ನು ಎತ್ತಿ ಉತ್ತರದಿಂದ ಬರುವವ ರನ್ನು ನೋಡಿರಿ; ನಿನಗೆ ಕೊಡಲ್ಪಟ್ಟ ಹಿಂಡೂ ನನ್ನ ಶೃಂಗಾರದ ಮಂದೆಯೂ ಎಲ್ಲಿ?

21 What will you say when he puts over you those whom you yourself have made your friends? will not pains take you like a woman in childbirth?ಆತನು ನಿನ್ನನ್ನು ಶಿಕ್ಷಿಸುವಾಗ ಏನು ಹೇಳುವಿ? ನಿನ್ನ ಮೇಲೆ ಅವರು ಮುಖ್ಯ ಪ್ರಭುಗಳೂ ಮುಖ್ಯಸ್ಥರೂ ಆಗಿರುವದಕ್ಕೆ ನೀನೇ ಅವರಿಗೆ ಕಲಿಸಿದಿಯಲ್ಲಾ? ಹೆರುವ ಸ್ತ್ರೀಯ ಪ್ರಕಾರ ನಿನ್ನನ್ನು ದುಃಖಗಳು ಹಿಡಿಯುವವಲ್ಲವೋ?

22 And if you say in your heart, Why have these things come on me? because of the number of your sins, your skirts have been uncovered and violent punishment overtakes you.ಇವು ನನಗೆ ಯಾಕೆ ಸಂಭವಿಸಿದವೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ, ಬಹಳವಾದ ನಿನ್ನ ಅಕ್ರಮದ ನಿಮಿತ್ತ ನಿನ್ನ ಬಟ್ಟೆಗಳು ತೆಗೆಯಲ್ಪಟ್ಟು ನಿನ್ನ ಹಿಮ್ಮಡಿಗಳು ಬೆತ್ತಲೆಯಾದವು.

23 Is it possible for the skin of the Ethiopian to be changed, or the markings on the leopard? Then it might be possible for you to do good, who have been trained to do evil.ಕೂಷ್ಯನು ತನ್ನ ಚರ್ಮವನ್ನೂ ಚಿರತೆಯು ತನ್ನ ಮಚ್ಚೆಗಳನ್ನೂ ಮಾರ್ಪಡಿಸುವದಕ್ಕಾಗುವದೋ? ಹಾಗಾದರೆ ಕೆಟ್ಟ ತನದ ಅಭ್ಯಾಸವುಳ್ಳವರಾದ ನೀವು ಸಹ ಒಳ್ಳೆದನ್ನು ಹೇಗೆ ಮಾಡುವದಕ್ಕಾದೀತು.

24 So I will send them in all directions, as dry grass is taken away by the wind of the waste land.ಆದಕಾರಣ ಅಡವಿಯ ಗಾಳಿಯಿಂದ ಹಾರಿ ಹೋಗುವ ಹುಲ್ಲಿನಂತೆ ಅವರನ್ನು ಚದರಿಸುವೆನು.

25 This is your fate, the part measured out to you by me, says the Lord, because you have put me out of your memory and put your faith in what is false.ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು ಎಂದು ಕರ್ತನು ಅನ್ನುತ್ತಾನೆ; ನನ್ನನ್ನು ಮರೆತುಬಿಟ್ಟು ಸುಳ್ಳಿನಲ್ಲಿ ಭರವಸವಿಟ್ಟಿದ್ದಿ.

26 So I will have your skirts uncovered before your face, in order that your shame may be seen.ಆದದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ ನಿನ್ನ ಮುಖದ ಮೇಲೆ ಎತ್ತುವೆನು.

27 I have seen your disgusting acts, even your false behaviour and your cries of desire and your loose ways on the hills in the field. Unhappy are you, O Jerusalem, you have no desire to be made clean; how long will you be in turning back to me?ನಿನ್ನ ವ್ಯಭಿಚಾರಗಳನ್ನೂ ಬುಸುಗುಟ್ಟು ವಿಕೆಗಳನ್ನೂ ಸೂಳೆತನದ ದೋಷವನ್ನೂ ಹೊಲಗಳ ಲ್ಲಿರುವ ಗುಡ್ಡಗಳ ಮೇಲೆ ಆಗುವ ನಿನ್ನ ಅಸಹ್ಯಗಳನ್ನೂ ನೋಡಿದ್ದೇನೆ, ಓ ಯೆರೂಸಲೇಮೇ, ನಿನಗೆ ಅಯ್ಯೋ, ನೀನು ಶುದ್ಧವಾಗುವದಿಲ್ಲವೋ? ಒಂದು ಸಾರಿ ಇದು ಯಾವಾಗ ಆದೀತು?

Kannada Bible