Bible

James 3 - ASV (Kannada)

1 Be not many `of you' teachers, my brethren, knowing that we shall receive heavier judgment.ನನ್ನ ಸಹೋದರರೇ, ಬೋಧಕರಾದ ನಮಗೆ ದೊಡ್ಡ ದಂಡನೆಯಾಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ.

2 For in many things we all stumble. If any stumbleth not in word, the same is a perfect man, able to bridle the whole body also.ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.

3 Now if we put the horses' bridles into their mouths that they may obey us, we turn about their whole body also.ಇಗೋ, ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವು ಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ.

4 Behold, the ships also, though they are so great and are driven by rough winds, are yet turned about by a very small rudder, whither the impulse of the steersman willeth.ಹಡಗುಗಳನ್ನು ಸಹ ನೋಡಿರಿ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿ ಕೊಂಡು ಹೋಗುತ್ತವೆ. ಆದಾಗ್ಯೂ ಬಹು ಸಣ ಚುಕಾಣಿಯಿಂದ ಅವುಗಳನ್ನು ನಡಿಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ.

5 So the tongue also is a little member, and boasteth great things. Behold, how much wood is kindled by how small a fire!ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ.

6 And the tongue is a fire: the world of iniquity among our members is the tongue, which defileth the whole body, and setteth on fire the wheel of nature, and is set on fire by hell.ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ. ಹೀಗೆ ಅದು ನಮ್ಮ ಅಂಗಗಳಲ್ಲಿ ಇದ್ದು ದೇಹವನ್ನೆಲ್ಲಾ ಹೊಲೆಮಾಡಿ ಪ್ರಕೃತಿಯ ಕ್ರಮಕ್ಕೆ ಬೆಂಕಿ ಹಚ್ಚುವ ಹಾಗೆಯೂ ನರಕದ ಬೆಂಕಿಯನ್ನು ಹಚ್ಚಿಕೊಳ್ಳುವ ದಾಗಿಯೂ ಇದೆ.

7 For every kind of beasts and birds, of creeping things and things in the sea, is tamed, and hath been tamed by mankind.ಮನುಷ್ಯ ಜಾತಿಯು ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು.

8 But the tongue can no man tame; `it is' a restless evil, `it is' full of deadly poison.ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋ ಟಿಗೆ ತರಲಾರನು. ಅದು ಸ್ವಾಧೀನವಾಗದ ಕೆಡುಕಾ ಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ.

9 Therewith bless we the Lord and Father; and therewith curse we men, who are made after the likeness of God:ಅದೇ ನಾಲಿಗೆಯಿಂದ ತಂದೆಯಾದ ದೇವರನ್ನು ಕೊಂಡಾಡುತ್ತೇವೆ; ಆದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ.

10 out of the same mouth cometh forth blessing and cursing. My brethren, these things ought not so to be.ಅದೇ ಬಾಯಿಂದ ಆಶೀರ್ವಾದ ಮತ್ತು ಶಾಪ ಬರುತ್ತವೆ; ನನ್ನ ಸಹೋದರರೇ, ಇವುಗಳು ಹೀಗಿರಬಾರದು.

11 Doth the fountain send forth from the same opening sweet `water' and bitter?ಒಂದೇ ಊಟೆಯು ಸಿಹಿನೀರನ್ನೂ ಕಹಿನೀರನ್ನೂ ಒಂದೇ ಸ್ಥಳದಿಂದ ಹೊರಡುವದುಂಟೇ?

12 Can a fig tree, my brethren, yield olives, or a vine figs? Neither `can' salt water yield sweet.ನನ್ನ ಸಹೋದರರೇ, ಅಂಜೂರದ ಮರವು ಎಣ್ಣೇಮರದ ಕಾಯಿ ಬಿಡುವದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಹಾಗೆಯೇ ಯಾವ ಊಟೆಯೂ ಉಪ್ಪು ನೀರನ್ನೂ ಸಿಹಿ ನೀರನ್ನೂ ಕೊಡಲಾರದು.

13 Who is wise and understanding among you? let him show by his good life his works in meekness of wisdom.ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಸಾತ್ವಿಕತ್ವದಲ್ಲಿ ತನ್ನ ಕ್ರಿಯೆಗಳನ್ನು ತೋರಿಸಲಿ.

14 But if ye have bitter jealousy and faction in your heart, glory not and lie not against the truth.ಆದರೆ ಕಹಿಯಾದ ಹಗೆತನ ಮತ್ತು ಜಗಳ ನಿಮ್ಮ ಹೃದಯ ಗಳೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.

15 This wisdom is not `a wisdom' that cometh down from above, but is earthly, sensual, devilish.ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧ ವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು.

16 For where jealousy and faction are, there is confusion and every vile deed.ಹೊಟ್ಟೇಕಿಚ್ಚೂ ಜಗಳವೂ ಇರುವ ಕಡೆ ಗಲಿಬಿಲಿಯೂ ಸಕಲವಿಧವಾದ ಕೆಟ್ಟ ಕೃತ್ಯವೂ ಇರುವವು.

17 But the wisdom that is from above is first pure, then peaceable, gentle, easy to be entreated, full of mercy and good fruits, without variance, without hypocrisy.ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.

18 And the fruit of righteousness is sown in peace for them that make peace.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.

Kannada Bible