Bible

Isaiah 7 - YLT (Kannada)

1 And it cometh to pass in the days of Ahaz, son of Jotham, son of Uzziah, king of Judah, gone up hath Rezin king of Aram, and Pekah, son of Remaliah, king of Israel, to Jerusalem, to battle against it, and he is not able to fight against it.ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ.

2 And it is declared to the house of David, saying, `Aram hath been led towards Ephraim,' And his heart and the heart of his people is moved, like the moving of trees of a forest by the presence of wind.ಸಿರಿಯಾದವರು ಎಫ್ರಾಯಾಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂದು ದಾವೀದನ ಮನೆಗೆ ತಿಳಿದಾಗ ಅವನ ಹೃದಯವು ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು.

3 And Jehovah saith unto Isaiah, `Go forth, I pray thee, to meet Ahaz, thou, and Shear-Jashub thy son, unto the end of the conduit of the upper pool, unto the highway of the fuller's field,ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್‌ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು--

4 and thou hast said unto him: `Take heed, and be quiet, fear not, And let not thy heart be timid, Because of these two tails of smoking brands, For the fierceness of the anger of Rezin and Aram, And the son of Remaliah.ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.

5 Because that Aram counselled against thee evil, Ephraim and the son of Remaliah, saying:ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ,

6 We go up into Judah, and we vex it, And we rend it unto ourselves, And we cause a king to reign in its midst -- The son of Tabeal.ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು

7 Thus said the Lord Jehovah: It doth not stand, nor shall it be!ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ.

8 For the head of Aram `is' Damascus, And the head of Damascus `is' Rezin, And within sixty and five years Is Ephraim broken from `being' a people.ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು.

9 And the head of Ephraim `is' Samaria, And the head of Samaria `is' the son of Remaliah. If ye do not give credence, Surely ye are not stedfast.'ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.

10 And Jehovah addeth to speak unto Ahaz, saying:ಇದಲ್ಲದೆ ಕರ್ತನು ಆಹಾಜನಿಗೆ --

11 `Ask for thee a sign from Jehovah thy God, Make deep the request, or make `it' high upwards.'ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು.

12 And Ahaz saith, `I do not ask nor try Jehovah.'ಆದರೆ ಆಹಾಜನು -- ನಾನು ಕೇಳಿಕೊಳ್ಳುವದಿಲ್ಲ; ಇಲ್ಲವೆ ಕರ್ತನನ್ನು ಪರೀಕ್ಷಿಸುವದಿಲ್ಲ ಅಂದನು.

13 And he saith, `Hear, I pray you, O house of David, Is it a little thing for you to weary men, That ye weary also my God?ಅದಕ್ಕೆ (ಯೆಶಾಯನು) ದಾವೀದನ ಮನೆಯ ವರೇ, ಈಗ ಕೇಳಿರಿ, ಮನುಷ್ಯರನ್ನು ಬೇಸರಗೊಳಿ ಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವ ರನ್ನೂ ಬೇಸರಗೊಳಿಸುವಿರಾ?

14 Therefore the Lord Himself giveth to you a sign, Lo, the Virgin is conceiving, And is bringing forth a son, And hath called his name Immanuel,ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್‌ ಎಂದು ಕರೆಯುವರು.

15 Butter and honey he doth eat, When he knoweth to refuse evil, and to fix on good.ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವ ಳಿಕೆಯು ಬರುವ ತನಕ ಬೆಣ್ಣೆ ಮತ್ತು ಜೇನನ್ನು ತಿನ್ನುವನು.

16 For before the youth doth know To refuse evil, and to fix on good, Forsaken is the land thou art vexed with, because of her two kings.ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.

17 Jehovah bringeth on thee, and on thy people, And on the house of thy father, Days that have not come, Even from the day of the turning aside of Ephraim from Judah, By the king of Asshur.ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.

18 And it hath come to pass, in that day, Jehovah doth hiss for a fly that `is' in the extremity of the brooks of Egypt, And for a bee that `is' in the land of Asshur.ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು.

19 And they have come, and rested all of them in the desolate valleys, And in holes of the rocks, and on all the thorns, And on all the commendable things.ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವವು.

20 In that day doth the Lord shave, By a razor that is hired beyond the river, By the king of Asshur, The head, and the hair of the feet, Yea, also the beard it consumeth.ಅದೇ ದಿನದಲ್ಲಿ ಕರ್ತನು ನದಿಯ ಆಚೆಗಿರುವ ಅಶ್ಯೂರದ ರಾಜನೆಂಬವನಿಂದ ಬಾಡಿಗೆ ಕ್ಷೌರದ ಕತ್ತಿ ಯಿಂದ (ಯೆಹೂದದ) ತಲೆಯನ್ನು ಕಾಲುಕೂದ ಲನ್ನು ಬೋಳಿಸುವನು ಗಡ್ಡವನ್ನು ತೆಗೆದುಬಿಡುವನು.

21 And it hath come to pass, in that day, A man keepeth alive a heifer of the herd, And two of the flock,ಆ ದಿನದಲ್ಲಿ ಮನುಷ್ಯನು ಒಂದು ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು.

22 And it hath come to pass, From the abundance of the yielding of milk he eateth butter, For butter and honey doth every one eat Who is left in the heart of the land.ಆಗ ಅವು ಸಮೃದ್ಧಿಯಾಗಿ ಹಾಲನ್ನು ಕೊಡುವದರಿಂದ ಅವನು ಬೆಣ್ಣೆಯನ್ನು ತಿನ್ನುವನು; ಆ ದೇಶದಲ್ಲಿ ಉಳಿದಿರುವ ವರೆಲ್ಲರೂ ಬೆಣ್ಣೆಯನ್ನು ಮತ್ತು ಜೇನು ತುಪ್ಪವನ್ನು ತಿನ್ನುವರು.

23 And it hath come to pass, in that day, Every place where there are a thousand vines, At a thousand silverlings, Is for briers and for thorns.ಆ ದಿನದಲ್ಲಿ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿ ಗಳಿಂದ ತುಂಬಿರುವದು.

24 With arrows and with bow he cometh thither, Because all the land is brier and thorn.ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು.

25 And all the hills that with a mattock are kept in order, Thither cometh not the fear of brier and thorn, And it hath been for the sending forth of ox, And for the treading of sheep!'ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ; ಆದರೆ ಅದು ಎತ್ತುಗಳನ್ನು ಬಿಡುವದಕ್ಕೂ ಚಿಕ್ಕ ಕರುಗಳು ತುಳಿದಾಡುವದಕ್ಕೂ ಎಡೆಯಾಗುವದು.

Kannada Bible