Isaiah 62 - ASV (Kannada)
1 For Zion's sake will I not hold my peace, and for Jerusalem's sake I will not rest, until her righteousness go forth as brightness, and her salvation as a lamp that burneth.ಚೀಯೋನಿಗೋಸ್ಕರ ನಾನು ಮೌನವಾಗಿರುವದಿಲ್ಲ; ಯೆರೂಸಲೇಮಿಗೋಸ್ಕರ ಅದರ ನೀತಿ ಪ್ರಕಾಶದಂತೆಯೂ ಅದರ ರಕ್ಷಣೆಯು ಉರಿಯುವ ದೀವಿಗೆಯಂತೆಯೂ ಹೊರಡುವ ವರೆಗೆ ನಾನು ವಿಶ್ರಾಂತಿಯಿಂದ ಇರುವದಿಲ್ಲ.
2 And the nations shall see thy righteousness, and all kings thy glory, and thou shalt be called by a new name, which the mouth of Jehovah shall name.ಆಗ ಅನ್ಯ ಜನಾಂಗಗಳು ನಿನ್ನ ನೀತಿಯನ್ನು ಅರಸರೆಲ್ಲರು ನಿನ್ನ ಮಹಿಮೆಯನ್ನು ನೋಡುವರು; ಕರ್ತನ ಬಾಯಿ ಉಚ್ಚರಿಸುವ ಹೊಸ ಹೆಸರಿನಿಂದ ನೀನು ಕರೆಯ ಲ್ಪಡುವಿ.
3 Thou shalt also be a crown of beauty in the hand of Jehovah, and a royal diadem in the hand of thy God.ಕರ್ತನ ಕೈಯಲ್ಲಿ ಮಹಿಮೆಯ ಕಿರೀಟ ವಾಗಿಯೂ ನಿನ್ನ ದೇವರ ಅಂಗೈಯಲ್ಲಿ ರಾಜತ್ವದ ಕಿರೀಟವಾಗಿಯೂ ಇರುವಿ.
4 Thou shalt no more be termed Forsaken; neither shall thy land any more be termed Desolate: but thou shalt be called Hephzi-bah, and thy land Beulah; for Jehovah delighteth in thee, and thy land shall be married.ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
5 For as a young man marrieth a virgin, so shall thy sons marry thee; and as the bridegroom rejoiceth over the bride, so shall thy God rejoice over thee.ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
6 I have set watchmen upon thy walls, O Jerusalem; they shall never hold their peace day nor night: ye that are Jehovah's remembrancers, take ye no rest,ಓ ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲಿ ನಲ್ಲೂ ರಾತ್ರಿಯಲ್ಲೂ ಮೌನವಾಗಿರುವದೇ ಇಲ್ಲ. ಕರ್ತನನ್ನು ಜ್ಞಾಪಕಪಡಿಸುವವರೇ, ಸುಮ್ಮನಿರಬೇಡಿರಿ.
7 and give him no rest, till he establish, and till he make Jerusalem a praise in the earth.ಆತನು ಯೆರೂಸಲೇಮನ್ನು ಸ್ಥಾಪಿಸಿ ಅದು ಭೂಮಿಯಲ್ಲಿ ಸ್ತುತಿಸಲ್ಪಡುವಂತೆ ಮಾಡುವವರೆಗೂ ಆತನಿಗೆ ವಿಶ್ರಾಂತಿ ಕೊಡಬೇಡಿರಿ.
8 Jehovah hath sworn by his right hand, and by the arm of his strength, Surely I will no more give thy grain to be food for thine enemies; and foreigners shall not drink thy new wine, for which thou hast labored:ಕರ್ತನು ತನ್ನ ಬಲಗೈ ಯಿಂದಲೂ ತನ್ನ ತ್ರಾಣವುಳ್ಳ ತೋಳಿನಿಂದಲೂ ಆಣೆ ಯಿಟ್ಟುಕೊಂಡದ್ದೇನಂದರೆ--ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವದಿಲ್ಲ, ಮತ್ತು ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ಅನ್ಯರ ಪುತ್ರರು ಕುಡಿಯುವದಿಲ್ಲ;
9 but they that have garnered it shall eat it, and praise Jehovah; and they that have gathered it shall drink it in the courts of my sanctuary.ಆದರೆ ಅದನ್ನು ಕೂಡಿಸಿದವರು ಅದನ್ನು ತಿಂದು ಕರ್ತನನ್ನು ಸ್ತುತಿಸುವರು; ಅದನ್ನು ಸೇರಿಸಿ ತಂದವರು ನನ್ನ ಪರಿಶುದ್ಧ ಅಂಗಳಗಳಲ್ಲಿ ಅದನ್ನು ಕುಡಿಯುವರು.
10 Go through, go through the gates; prepare ye the way of the people; cast up, cast up the highway; gather out the stones; lift up an ensign for the peoples.ಹಾದುಹೋಗಿರಿ, ಬಾಗಿಲುಗಳನ್ನು ಹಾದು ಹೋಗಿರಿ. ಜನರಿಗೆ ದಾರಿಯನ್ನು ಸಿದ್ಧಮಾಡಿರಿ; ಎತ್ತರ ಮಾಡಿರಿ, ರಾಜ ಮಾರ್ಗವನ್ನು ಎತ್ತರಮಾಡಿರಿ; ಕಲ್ಲುಗಳನ್ನು ಆಯ್ದು ಕೂಡಿಸಿರಿ; ಜನಗಳಿಗೋಸ್ಕರ ಧ್ವಜವನ್ನು ಎತ್ತಿರಿ.
11 Behold, Jehovah hath proclaimed unto the end of the earth, Say ye to the daughter of Zion, Behold, thy salvation cometh; behold, his reward is with him, and his recompense before him.ಇಗೋ, ಕರ್ತನು ಭೂಮಿಯ ಅಂತ್ಯದ ವರೆಗೆ ಪ್ರಕಟಿಸಿದ್ದಾನೆ. ಚೀಯೋನಿನ ಕುಮಾ ರಿಯೇ--ಇಗೋ, ನಿನ್ನ ರಕ್ಷಣೆಯು ಬರುತ್ತದೆ; ಆತನ ಬಹುಮಾನವು ಆತನ ಸಂಗಡವೂ ಆತನ ಕೆಲಸವು ಆತನ ಮುಂದೆಯೂ ಅದೆ ಎಂದು ಹೇಳಿರಿ.
12 And they shall call them The holy people, The redeemed of Jehovah: and thou shalt be called Sought out, A city not forsaken.ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.
Kannada Bible