Bible

Isaiah 42 - WEB (Kannada)

1 Behold, my servant, whom I uphold; my chosen, in whom my soul delights: I have put my Spirit on him; he will bring forth justice to the Gentiles.ಇಗೋ, ನಾನು ಆಧಾರವಾಗಿರುವ ನನ್ನ ಸೇವಕನು; ನಾನು ಆದುಕೊಂಡವನಲ್ಲಿ ನನ್ನ ಆತ್ಮ ಆನಂದಿಸುವದು. ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಅನ್ಯಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.

2 He will not cry, nor lift up his voice, nor cause it to be heard in the street.ಅವನು ಕೂಗು ವದಿಲ್ಲ, ಶಬ್ದವನ್ನು ಎತ್ತುವದಿಲ್ಲ ಇಲ್ಲವೆ ಬೀದಿಗಳಲ್ಲಿ ತನ್ನ ಸ್ವರವನ್ನು ಕೇಳಗೊಡಿಸುವದಿಲ್ಲ.

3 A bruised reed will he not break, and a dimly burning wick will he not quench: he will bring forth justice in truth.ಜಜ್ಜಿದ ದಂಟನ್ನು ಮುರಿದುಹಾಕದೆ, ಕಳೆಗುಂದಿದ ದೀಪ ವನ್ನು ನಂದಿಸದೆ, ಸತ್ಯದಿಂದ ನ್ಯಾಯವನ್ನು ಹೊರ ತರುತ್ತಾನೆ.

4 He will not fail nor be discouraged, until he have set justice in the earth; and the isles shall wait for his law.ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.

5 Thus says God Yahweh, he who created the heavens, and stretched them forth; he who spread abroad the earth and that which comes out of it; he who gives breath to the people on it, and spirit to those who walk therein:ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ--

6 I, Yahweh, have called you in righteousness, and will hold your hand, and will keep you, and give you for a covenant of the people, for a light of the Gentiles;ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಬಂದಿ ಗಳನ್ನು ಸೆರೆಯಿಂದಲೂ ಕತ್ತಲೆಯಲ್ಲಿ ವಾಸಿಸುವವ ರನ್ನು ಕಾರಾಗೃಹದಿಂದಲೂ ಹೊರಗೆ ತರಬೇಕು ಎಂದು --

7 to open the blind eyes, to bring out the prisoners from the dungeon, and those who sit in darkness out of the prison-house.ಕರ್ತನಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.

8 I am Yahweh, that is my name; and my glory will I not give to another, neither my praise to engraved images.ನಾನೇ ಕರ್ತನು, ಅದೇ ನನ್ನ ಹೆಸರು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತೋತ್ರ ವನ್ನು ಎರಕದ ವಿಗ್ರಹಗಳಿಗೂ ಕೊಡೆನು.

9 Behold, the former things have happened, and new things do I declare. Before they spring forth I tell you of them.ಇಗೋ, ಹಿಂದಿನವುಗಳು ನೆರವೇರಿವೆ. ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ಹುಟ್ಟುವದಕ್ಕಿಂತ ಮುಂಚೆಯೇ ನಾನು ಅವುಗಳನ್ನು ನಿಮಗೆ ತಿಳಿಸುತ್ತೇನೆ.

10 Sing to Yahweh a new song, and his praise from the end of the earth; you who go down to the sea, and all that is therein, the isles, and the inhabitants of it.ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.

11 Let the wilderness and the cities of it lift up [their voice], the villages that Kedar does inhabit; let the inhabitants of Sela sing, let them shout from the top of the mountains.ಅರಣ್ಯವು ಅದರ ಪಟ್ಟಣಗಳು ಸ್ವರವೆತ್ತಲಿ; ಕೇದಾರ್‌ ಊರಿನ ನಿವಾಸಿಗಳು, ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ; ಅವರು ಪರ್ವತದ ತುದಿಯಲ್ಲಿ ಕೂಗಲಿ,

12 Let them give glory to Yahweh, and declare his praise in the islands.ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.

13 Yahweh will go forth as a mighty man; he will stir up [his] zeal like a man of war: he will cry, yes, he will shout aloud; he will do mightily against his enemies.ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.

14 I have long time held my peace; I have been still, and refrained myself: [now] will I cry out like a travailing woman; I will gasp and pant together.ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನುಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು ನಾನು ನಾಶಮಾಡಿ ಒಂದೇ ಸಾರಿ ನುಂಗಿಬಿಡುವೆನು.

15 I will lay waste mountains and hills, and dry up all their herbs; and I will make the rivers islands, and will dry up the pools.ನಾನು ಬೆಟ್ಟ ಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ, ನದಿ ಗಳನ್ನು ದ್ವೀಪಗಳನ್ನಾಗಿಯೂ ಕೆರೆಗಳನ್ನು ಬತ್ತಿ ಹೋಗುವಂತೆಯೂ ಮಾಡುವೆನು.

16 I will bring the blind by a way that they don't know; in paths that they don't know will I lead them; I will make darkness light before them, and crooked places straight. These things will I do, and I will not forsake them.ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡಿಸುವೆನು; ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವದಿಲ್ಲ.

17 They shall be turned back, they shall be utterly disappointed, who trust in engraved images, who tell molten images, You are our gods.ಕೆತ್ತಿದ ವಿಗ್ರಹಗಳಲ್ಲಿ ನಂಬಿಕೆಯಿಡುವವರು ಎರಕಹೊಯ್ದ ವಿಗ್ರಹಗಳಿಗೆ ನೀವೇ ನಮ್ಮ ದೇವರುಗಳೆಂದು ಹೇಳುವ ವರು ಹಿಂದೆ ಬಿದ್ದು ನಾಚಿಕೆಗೆ ಈಡಾಗುವರು.

18 Hear, you deaf; and look, you blind, that you may see.ಕಿವುಡರೇ, ಕೇಳಿರಿ; ಕುರುಡರೇ ನೀವು ದೃಷ್ಟಿಸಿ ನೋಡಿರಿ.

19 Who is blind, but my servant? or deaf, as my messenger whom I send? Who is blind as he who is at peace, and blind as Yahweh's servant?ನನ್ನ ಸೇವಕನಲ್ಲದೆ ಕುರುಡನು ಯಾರು? ಇಲ್ಲವೆ ನಾನು ಕಳುಹಿಸಿದ ಸೇವಕನಲ್ಲದೇ ಕಿವುಡನು ಯಾರು? ಸಂಪೂರ್ಣನಂತೆ ಕುರುಡನು ಯಾರು? ಕರ್ತನ ಸೇವಕನಂತೆ ಕುರುಡನು ಯಾರು?

20 You see many things, but don't observe. His ears are open, but he doesn't hear.ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ; ಅವನ ಕಿವಿಗಳು ತೆರೆದಿದ್ದರೂ ಕೇಳನು.

21 It pleased Yahweh, for his righteousness' sake, to magnify the law, and make it honorable.ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.

22 But this is a people robbed and plundered; they are all of them snared in holes, and they are hid in prison-houses: they are for a prey, and none delivers; for a spoil, and none says, Restore.ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಅವರೆಲ್ಲರೂ ಹಳ್ಳ ಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ; ಸೆರೆಮನೆಗಳಲ್ಲಿ ಮುಚ್ಚಲ್ಪ ಟ್ಟಿದ್ದಾರೆ; ಅವರು ಸೂರೆಯಾದರೂ ತಪ್ಪಿಸುವವನು ಒಬ್ಬನೂ ಇಲ್ಲ, ಕೊಳ್ಳೆಯಾದದ್ದನ್ನು ತಿರಿಗಿ ಹಿಂದಕ್ಕೆ ಕೊಡು ಎಂದು ಹೇಳುವ ಒಬ್ಬನೂ ಇಲ್ಲ.

23 Who is there among you who will give ear to this? who will listen and hear for the time to come?ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಕೊಡುವರು, ಯಾರು ಇನ್ನು ಮುಂದೆ ಆಲಿಸಿ ಕೇಳುವರು?

24 Who gave Jacob for a spoil, and Israel to the robbers? Didn't Yahweh? he against whom we have sinned, and in whose ways they would not walk, neither were they obedient to his law.ಯಾಕೋಬನ್ನು ಸುಲಿಗೆಗೂ ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿ ದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪವನ್ನು ಮಾಡಿದೆವು, ಅದು ಕರ್ತನಿಗಲ್ಲವೇ? ಅವರು ಆತನ ಮಾರ್ಗದಲ್ಲಿ ನಡೆಯದೆ ಇಲ್ಲವೆ ಆತನ ನ್ಯಾಯಪ್ರಮಾಣಕ್ಕೆ ಅವಿಧೇಯರಾದರಲ್ಲಾ.

25 Therefore he poured on him the fierceness of his anger, and the strength of battle; and it set him on fire round about, yet he didn't know; and it burned him, yet he didn't lay it to heart.ಆದದರಿಂದ ಆತನು ತನ್ನ ಯುದ್ದದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ ಅವನಿಗೆ ತಿಳಿಯಲಿಲ್ಲ; ಅದು ಅವನನ್ನು ಸುಟ್ಟರೂ ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.

Kannada Bible