Bible

Isaiah 41 - BBE (Kannada)

1 Come quietly before me, O sea-lands, and let the peoples get together their strength: let them come near; then let them say what they have to say: let us put forward our cause against one another.ಓ ದ್ವೀಪನಿವಾಸಿಗಳೇ, ನನ್ನ ಮುಂದೆ ಮೌನದಿಂದಿರ್ರಿ; ಜನಗಳು ಹೊಸ ಬಲ ವನ್ನು ಹೊಂದಿಕೊಳ್ಳಲಿ; ಅವರು ನನ್ನ ಸವಿಾಪಕ್ಕೆ ಬಂದು ಮಾತಾಡಲಿ; ನ್ಯಾಯತೀರ್ಪಿಗಾಗಿ ಸವಿಾಪಕ್ಕೆ ಒಟ್ಟಾಗಿ ಬರೋಣ.

2 Who sent out from the east one who is right wherever he goes? he gives the nations into his hands, and makes him ruler over kings; he gives them as the dust to his sword, as dry stems before the wind to his bow.ಮೂಡಣದಿಂದ ನೀತಿವಂತ ನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು ಜನಾಂಗಗಳನ್ನು ಅವನ ಮುಂದೆ ಕೊಟ್ಟುಬಿಟ್ಟು ಅವ ನನ್ನು ರಾಜರ ಮೇಲೆ ಆಳುವದಕ್ಕೆ ಮಾಡಿದವನು ಯಾರು? ಅವನ ಕತ್ತಿಗೆ ದೂಳನ್ನಾಗಿಯೂ ಅವನ ಬಿಲ್ಲಿಗೆ ಹಾರಿ ಹೋಗುವ ಹೊಟ್ಟಿನಂತೆಯೂ ಅವ ರನ್ನು ಕೊಟ್ಟನು.

3 He goes after them safely, not touching the road with his feet.ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ ಆತನು ಅವರನ್ನು ಹಿಂದ ಟ್ಟುತ್ತಾ ಹೋದನು.

4 Whose purpose and work was it? His who sent out the generations from the start. I the Lord, the first, and with the last, I am he.ಇದನ್ನೆಲ್ಲಾ ನಡೆಯಿಸಿ ನೆರವೇರಿ ಸಿದವನು ಆದಿಯಿಂದ ತಲತಲಾಂತರಗಳನ್ನು ಬರ ಮಾಡಿದವನು ಯಾರು? ಕರ್ತನಾಗಿರುವ ನಾನೇ ಮೊದಲನೆಯವನು ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.

5 The sea-lands saw it, and were in fear; the ends of the earth were shaking: they came near.ದ್ವೀಪ ನಿವಾಸಿಗಳೆಲ್ಲರೂ ನೋಡಿ ಬೆರಗಾದರು; ಭೂಮಿಯ ಕಟ್ಟಕಡೆಯವರು ನಡುಗಿದರು. ಅವರ ಸವಿಾಪಕ್ಕೆ ಬಂದರು.

6 They gave help everyone to his neighbour; and everyone said to his brother, Take heart!ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯಮಾಡಿ ಮತ್ತು ಪ್ರತಿಯೊಬ್ಬನು ತನ್ನ ಸಹೋದರನಿಗೆ--ಧೈರ್ಯ ವಾಗಿರ್ರಿ ಎಂದು ಹೇಳಲಿ.

7 So the metal-worker put heart into the gold-worker, and he who was hammering the metal smooth said kind words to the iron-worker, saying of the plate, It is ready: and he put it together with nails, so that there might be no slipping.ಹಾಗೆಯೇ ಮರಗೆಲಸ ದವನು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು, ಸುತ್ತಿಗೆಯಿಂದ ಸಮಮಾಡುವವನು ಬಡಿಗಲ್ಲಿನ ಮೇಲೆ ಹೊಡೆಯುವವನನ್ನು ಧೈರ್ಯಪಡಿಸಿದನು; ಬೇಸಿಗೆ ಚೆನ್ನಾಗಿದೆ ಎಂದು ಹೇಳಿ ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.

8 But as for you, Israel, my servant, and you, Jacob, whom I have taken for myself, the seed of Abraham my friend:ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ;

9 You whom I have taken from the ends of the earth, and sent for from its farthest parts, saying to you, You are my servant, whom I have taken for myself, and whom I have not given up:ನಿನ್ನನ್ನು ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ಕೊನೆಯಿಂದ ಕರೆದು--ನೀನು ನನ್ನ ಸೇವಕನು, ನಿನ್ನನ್ನು ನಾನು ಆದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವದಿಲ್ಲ.

10 Have no fear, for I am with you; do not be looking about in trouble, for I am your God; I will give you strength, yes, I will be your helper; yes, my true right hand will be your support.ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.

11 Truly, all those who are angry with you will be made low and put to shame: those desiring to do you wrong will come to nothing and never again be seen.ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು;

12 You will make search for your haters but they will not be there; those who make war against you will be as nothing and will come to destruction.ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.

13 For I, the Lord your God, have taken your right hand in mine, saying to you, Have no fear; I will be your helper.ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.

14 Have no fear, you worm Jacob, and you men of Israel; I will be your helper, says the Lord, even he who takes up your cause, the Holy One of Israel.ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್‌ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!

15 See, I will make you like a new grain-crushing instrument with teeth, crushing the mountains small, and making the hills like dry stems.ಇಗೋ, ನಿನ್ನನ್ನು ಹದವಾದ, ಹೊಸ, ಮೊನೆಹಲ್ಲಿನ ಹಂತಿಕುಂಟೆಯನ್ನಾಗಿ (ಹೊಕ್ಕುವ ಯಂತ್ರ) ಮಾಡು ವೆನು, ನೀನು ಬೆಟ್ಟಗಳನ್ನು ಹೊಕ್ಕು ಪುಡಿಪುಡಿ ಮಾಡಿ ಗುಡ್ಡಗಳನ್ನು ಹೊಟ್ಟಿನಂತೆ ಮಾಡುವಿ.

16 You will send the wind over them, and it will take them away; they will go in all directions before the storm-wind: you will have joy in the Lord, and be glad in the Holy One of Israel.ನೀನು ಅವುಗಳನ್ನು ತೂರಲು ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವದು; ನೀನಂತೂ ಕರ್ತನಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧನಲ್ಲಿ ಮಹಿಮೆಹೊಂದುವಿ.

17 The poor and crushed are looking for water where no water is, and their tongue is dry for need of it: I the Lord will give ear to their prayer, I the God of Israel will not give them up.ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್‌ ದೇವ ರಾಗಿರುವ ನಾನು ಅವರನ್ನು ಕೈಬಿಡೆನು.

18 I will make rivers on the dry mountain-tops, and fountains in the valleys: I will make the waste land a pool of water, and the dry land springs of water.ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.

19 I will put in the waste land the cedar, the acacia, the myrtle, and the olive-tree; and in the lowland will be planted the fir-tree, the plane, and the cypress together:ಅರಣ್ಯದಲ್ಲಿ ದೇವದಾರು, ಜಾಲಿಮರ, ಸುಗಂಧ, ಒಲೀವ ಮರಗಳನ್ನು ನಾನು ನೆಡುವೆನು, ಮರುಭೂಮಿಯಲ್ಲಿ ತುರಾಯಿ, ತಪಸಿಟ್ಟಿ, ತಿಲಕವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.

20 So that they may see and be wise and give their mind to it, and that it may be clear to them all that the hand of the Lord has done this, and that the Holy One of Israel has made it.ಆಗ ಕರ್ತನ ಹಸ್ತವು ಇದನ್ನು ಮಾಡಿದೆ ಎಂದೂ ಇಸ್ರಾ ಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ ಅವರು ನೋಡಿ, ತಿಳಿದು ಮನಸ್ಸಿಗೆ ತಂದು ಗ್ರಹಿಸಿ ಕೊಳ್ಳುವರು.

21 Put forward your cause, says the Lord; let your strong argument come out, says the King of Jacob.ನಿಮ್ಮ ವ್ಯಾಜ್ಯವನ್ನು ತನ್ನಿರಿ ಎಂದು ಕರ್ತನು ಅನ್ನುತ್ತಾನೆ; ನಿಮ್ಮ ಬಲವಾದ ಕಾರಣಗಳನ್ನು ತನ್ನಿರಿ ಎಂದು ಯಾಕೋಬ್ಯರ ಅರಸನು ಹೇಳುತ್ತಾನೆ.

22 Let the future be made clear to us: give us news of the past things, so that we may give thought to them; or of the things to come, so that we may see if they are true.ಅವರು ಅವುಗಳನ್ನು ತಂದು ಮುಂದೆ ಏನಾಗುವದು ಎಂದು ನಮಗೆ ತೋರಿಸಲಿ; ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು ಅವುಗಳ ಪರಿಣಾಮವನ್ನು ಇಲ್ಲವೇ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.

23 Give us word of what will be after this, so that we may be certain that you are gods: yes, do good or do evil, so that we may all see it and be surprised.ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ; ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದ ನ್ನಾಗಲಿ ಕೆಟ್ಟದ್ದನ್ನಾಗಲಿಮಾಡಿರಿ.

24 But you are nothing, and your work is of no value: foolish is he who takes you for his gods.ಇಗೋ, ನೀವು ಶೂನ್ಯವೇ ಮತ್ತು ನಿಮ್ಮ ಕಾರ್ಯವು ಮಟ್ಟಮಾಯವೇ ನಿಮ್ಮನ್ನು ಆರಿಸಿಕೊಂಡವನು ಅಸಹ್ಯನೇ.

25 I have sent for one from the north, and from the dawn he has come; in my name he will get rulers together and go against them; they will be like dust, even as the wet earth is stamped on by the feet of the potter.ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇನೆ, ಸೂರ್ಯೋ ದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸು ವನು; ಅವನು ಜೇಡಿಮಣ್ಣಿನಂತೆಯೂ ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಬರುವನು.

26 Who has given knowledge of it from the first, so that we may be certain of it? and from the start, so that we may say, His word is true? There is no one who gives news, or says anything, or who gives ear to your words.ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸು ವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿನ್ನ ಮಾತನ್ನೂ ಕೇಳುವವನು ಒಬ್ಬನೂ ಇಲ್ಲ.

27 I was the first to give word of it to Zion, and I gave the good news to Jerusalem.ನಾನು ಮೊದಲನೆಯವನಾಗಿ ಚೀಯೋನಿಗೆ ಇಗೋ, ಅವ ರನ್ನು ನೋಡು ಎಂದು ಹೇಳಿ, ಶುಭ ಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.

28 And I saw that there was no man, even no wise man among them, who might give an answer to my questions.ನಾನು ನೋಡಿದಾಗ ಅಲ್ಲಿ ಯಾರೂ ಇಲ್ಲ; ನಾನು ಅವರನ್ನು ಕೇಳುವ ಪ್ರಶ್ನೆಗೆ ಅವರಲ್ಲಿ ಒಂದು ಮಾತನ್ನು ಉತ್ತರಿಸುವ ಸಲಹೆಗಾರನು ಇಲ್ಲವೇ ಇಲ್ಲ.

29 Truly they are all nothing, their works are nothing and of no value: their metal images are of no more use than wind.ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.

Kannada Bible