Bible

Isaiah 26 - BBE (Kannada)

1 In that day will this song be made in the land of Judah: We have a strong town; he will make salvation our walls and towers.ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಹಾಡನ್ನು ಹಾಡುವರು; ನಮಗೆ ಬಲ ವಾದ ಪಟ್ಟಣವಿದೆ. ರಕ್ಷಣೆಯನ್ನು ಕೋಟೆಯನ್ನಾ ಗಿಯೂ ಹೊರಪೌಳಿಯನ್ನಾಗಿಯೂ ದೇವರು ಮಾಡು ವನು.

2 Let the doors be open, so that the upright nation which keeps faith may come in.ಬಾಗಿಲುಗಳನ್ನು ತೆರೆಯಿರಿ. ಸತ್ಯವನ್ನು ಕೈಕೊ ಳ್ಳುವ ನೀತಿಯುಳ್ಳ ಜನಾಂಗವು ಒಳಗೆ ಪ್ರವೇಶಿಸಲಿ.

3 The man whose heart is unmoved you will keep in peace, because his hope is in you.ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.

4 Let your hope be in the Lord for ever: for the Lord Jah is an unchanging Rock.ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.

5 For he has made low those who are lifted up, all the people of the town of pride: he makes it low, crushing it down to the earth; he makes it low in the dust.ಆತನು ಎತ್ತರದಲ್ಲಿ ವಾಸಿಸುವವರನ್ನು ಇಳಿಸಿದ್ದಾ. ಉನ್ನತ ದಲ್ಲಿರುವ ಪಟ್ಟಣವನ್ನು ತಗ್ಗಿಸಿದ್ದಾನೆ. ಅದನ್ನು ಕೆಡವಿ ನೆಲಸಮಮಾಡಿ ದೂಳಿಗೆ ತಂದಿದ್ದಾನೆ.

6 It will be crushed under the feet of the poor and the steps of those who are in need.ಕಾಲು ತುಳಿ ತಕ್ಕೆ ಈಡಾಗಿದೆ, ಬಡವರ ಕಾಲುಗಳೂ ದೀನರ ಪಾದಗಳೂ ಅದನ್ನು ತುಳಿಯುವವು;

7 The way of the good man is straight; the road of the upright is made smooth by you.ನೀತಿವಂತನ ಮಾರ್ಗವು ಯಥಾರ್ಥವಾಗಿದೆ. ನೀನು ಅತ್ಯಧಿಕ ವಾದ ಯಥಾರ್ಥವಂತನು; ನೀತಿವಂತನ ದಾರಿಯನ್ನು ತೂಗಿ ನೋಡುತ್ತೀ;

8 We have been waiting for you, O Lord; the desire of our soul is for the memory of your name.ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.

9 In the night the desire of my soul has been for you; early will my spirit be searching for you; for when your punishments come on the earth, the people of the world will get the knowledge of righteousness.ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಬಯಸಿದ್ದೇನೆ, ಹೌದು, ನನ್ನಲ್ಲಿ ರುವ ನನ್ನ ಆತ್ಮದೊಂದಿಗೆ ನಿನ್ನನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ; ಭೂಮಿಗೆ ನಿನ್ನ ನ್ಯಾಯತೀರ್ವಿಕೆ ಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.

10 Even if you are kind to the evil-doer, he will not go after righteousness; even in the land of the upright he will still go on in his wrongdoing, and will not see the glory of the Lord.ದುಷ್ಟನಿಗೆ ಕನಿಕರ ತೋರಿಸಿದಾಗ್ಯೂ ನೀತಿಯನ್ನು ಅವನು ಕಲಿಯಲಾರನು. ಯಥಾರ್ಥವಂತನ ದೇಶದಲ್ಲಿ ಅವನು ಅನ್ಯಾ ಯವನ್ನಾಚರಿಸುವನು ಮತ್ತು ಕರ್ತನ ಮಹತ್ವವನ್ನು ಲಕ್ಷಿಸುವದಿಲ್ಲ.

11 Lord, your hand is lifted up, but they do not see: let them see ... yes, your haters will be burned up in the fire.ಕರ್ತನೇ, ನಿನ್ನ ಕೈ ಎತ್ತಿರಲು ಅವರು ನೋಡುವದಿಲ್ಲ, ಆದರೆ ಅವರು ನೋಡಿ ನಿನ್ನ ಜನರಿಗೋಸ್ಕರ ಹೊಟ್ಟೆಕಿಚ್ಚು ಪಟ್ಟದ್ದಕ್ಕೆ ನಾಚಿಕೆ ಪಡುವರು. ಹೌದು, ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.

12 Lord, you will give us peace: for all our works are the outcome of your purpose.ಕರ್ತನೇ, ನಮಗೆ ಸಮಾಧಾನ ವನ್ನು ವಿಧಿಸುವಿ. ನೀನೇ ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀ.

13 O Lord, our God, other lords than you have had rule over us; but in you only is our salvation, and no other name will we take on our lips.ಓ ಕರ್ತನೇ, ನಮ್ಮ ದೇವರೇ, ನಿನ್ನ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು. ಆದರೆ ನಿನ್ನಿಂದ ಮಾತ್ರವೇ ನಿನ್ನ ನಾಮವನ್ನು ನಾವು ಜ್ಞಾಪಿಸಿ ಕೊಳ್ಳುವಂತಾಯಿತು.

14 The dead will not come back to life: their spirits will not come back to earth; for this cause you have sent destruction on them, so that the memory of them is dead.ಅವರು ಸತ್ತರು ಬದುಕುವ ದಿಲ್ಲ; ಆದ್ದರಿಂದ ನೀನು ಅವರನ್ನು ಸಂದರ್ಶಿಸಿ ನಾಶ ಮಾಡಿ ಅವರ ಎಲ್ಲಾ ಜ್ಞಾಪಕಗಳನ್ನು ಅಳಿಸಿಬಿಟ್ಟಿದ್ದೀ.

15 You have made the nation great, O Lord, you have made it great; glory is yours: you have made wide the limits of the land.ಜನಾಂಗವನ್ನು ಹೆಚ್ಚಿಸಿದ್ದೀ, ಓ ಕರ್ತನೇ, ಜನಾಂಗ ವನ್ನು ಹೆಚ್ಚಿಸಿದ್ದೀ, ನೀನು ಮಹಿಮೆ ಹೊಂದಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆ ಯ ವರೆಗೂ ವಿಸ್ತರಿಸಿದ್ದೀ.

16 Lord, in trouble our eyes have been turned to you, we sent up a prayer when your punishment was on us.ಕರ್ತನೇ, ಇಕ್ಕಟ್ಟಿನಲ್ಲಿ ಅವರು ನಿನ್ನನ್ನು ಹುಡುಕಿದರು, ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿ ದರು.

17 As a woman with child, whose time is near, is troubled, crying out in her pain; so have we been before you, O Lord.ಓ ಕರ್ತನೇ, ಬಸುರಾದ ಸ್ತ್ರೀಯು ಹೆರುವ ದಕ್ಕೆ ಸವಿಾಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆ ಯಲ್ಲಿ ಅರಚುವಂತೆ ಓ ಕರ್ತನೇ, ನಾವು ನಿನ್ನ ಸಮ್ಮುಖದಲ್ಲಿದ್ದೆವು.

18 We have been with child, we have been in pain, we have given birth to wind; no salvation has come to the earth through us, and no children have come into the world.ನಾವು ಗರ್ಭಧರಿಸಿ ವೇದನೆಪಟ್ಟು ಗಾಳಿಯನ್ನು ಹೆತ್ತಂತಾಯಿತು, ಭೂಮಿಗೆ ನಮ್ಮಿಂದ ಯಾವ ಬಿಡು ಗಡೆಯೂ ಆಗಲಿಲ್ಲ. ಇಲ್ಲವೇ ಭೂಲೋಕದ ನಿವಾಸಿ ಗಳು ಬೀಳಲಿಲ್ಲ.

19 Your dead will come back; their dead bodies will come to life again. Those in the dust, awaking from their sleep, will send out a song; for your dew is a dew of light, and the earth will give birth to the shades.ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.

20 Come, my people, into your secret places, and let your doors be shut: keep yourself safe for a short time, till his wrath is over.ನನ್ನ ಜನರೇ, ಬನ್ನಿರಿ, ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಲನ್ನು ಮುಚ್ಚಿಕೊಳ್ಳಿರಿ; ಸ್ವಲ್ಪ ಹೊತ್ತು ಅಡಗಿಕೊಂಡು ರೋಷವು ಹಾದುಹೋಗುವ ತನಕ ಇರ್ರಿ.

21 For the Lord is coming out of his place to send punishment on the people of the earth for their evil-doing: the earth will let the blood drained out on her be seen, and will keep her dead covered no longer.ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು.

Kannada Bible