Isaiah 22 - WEB (Kannada)
1 The burden of the valley of vision. What ails you now, that you are wholly gone up to the housetops?ದಿವ್ಯ ದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ, ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?
2 You that are full of shouting, a tumultuous city, a joyous town; your slain are not slain with the sword, neither are they dead in battle.ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣ ವೇ ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಕೊಂದುಹಾಕಲ್ಪ ಟ್ಟವರು ಕತ್ತಿಯಿಂದ ಕೊಂದುಹಾಕಲ್ಪಟ್ಟವರಲ್ಲ ಅಥವಾ ಯುದ್ಧದಲ್ಲಿ ಸತ್ತವರಲ್ಲ.
3 All your rulers fled away together, they were bound by the archers; all who were found of you were bound together; they fled afar off.ನಿನ್ನ ಅಧಿಕಾರಸ್ಥರೆಲ್ಲರು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದು ನಿನ್ನಲ್ಲಿ ಸಿಕ್ಕಿದವರೆಲ್ಲ ರೊಂದಿಗೆ ಕಟ್ಟುಬಿದ್ದಿದ್ದಾರೆ.
4 Therefore said I, Look away from me, I will weep bitterly; don't labor to comfort me for the destruction of the daughter of my people.ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.
5 For it is a day of confusion, and of treading down, and of perplexity, from the Lord, Yahweh of Hosts, in the valley of vision; a breaking down of the walls, and a crying to the mountains.ಸೈನ್ಯಗಳ ದೇವರಾದ ಕರ್ತನಿಗೆ ದರ್ಶ ನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಗಲಿಬಿಲಿಯ ದಿನವದೆ, ಗೋಡೆ ಒಡೆಯೋಣವು ಪರ್ವತದ ಕಡೆಗೆ ಹೋಗೋಣವು ಉಂಟಾಗುವದು.
6 Elam bore the quiver, with chariots of men [and] horsemen; and Kir uncovered the shield.ಏಲಾಮಿನ ಮನುಷ್ಯರ ಕುದುರೆ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿ ಯನ್ನು ತೆಗೆದರು.
7 It happened that your choicest valleys were full of chariots, and the horsemen set themselves in array at the gate.ನಿಮ್ಮ ಪ್ರಿಯವಾದ ತಗ್ಗುಗಳಲ್ಲಿ ರಥಗಳು ತುಂಬಿರುವವು. ರಾಹುತರು ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
8 He took away the covering of Judah; and you did look in that day to the armor in the house of the forest.ಅವನು ಯೆಹೂ ದದ ಮುಸುಕನ್ನು ತೆಗೆದಿದ್ದಾನೆ. ಆ ದಿವಸದಲ್ಲಿ ಅಡವಿ ಮನೆಯ ಯುದ್ಧಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತಿ.
9 You saw the breaches of the city of David, that they were many; and you gathered together the waters of the lower pool;ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ; ಕೆಳಗಿನ ಕೊಳಕ್ಕೆ ನೀರನ್ನು ಕೂಡಿಸುತ್ತೀರಿ.
10 and you numbered the houses of Jerusalem, and you broke down the houses to fortify the wall;ಯೆರೂಸಲೇಮಿನ ಮನೆಗ ಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿ ಸುವದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
11 you made also a reservoir between the two walls for the water of the old pool. But you didn't look to him who had done this, neither did you have respect for him who purposed it long ago.ಎರಡು ಗೋಡೆಗಳ ನಡುವೆ ಹಳೇ ಕೆರೆಯ ನೀರಿ ಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸಲಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಲ್ಲ.
12 In that day did the Lord, Yahweh of Hosts, call to weeping, and to mourning, and to baldness, and to girding with sackcloth:ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.
13 and behold, joy and gladness, killing oxen and killing sheep, eating flesh and drinking wine: let us eat and drink, for tomorrow we shall die.ಆದರೆ ಇಗೋ, ಉತ್ಸಾ ಹವು ಸಂತೋಷವು, ದನಕೊಯ್ಯುವದು ಕುರಿಕಡಿಯು ವದು ಮಾಂಸವನ್ನು ತಿನ್ನುವದು, ದ್ರಾಕ್ಷಾರಸ ಕುಡಿ ಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯು ವದೇ (ಇವೆ, ನಿಮ್ಮ ಕಾರ್ಯ).
14 Yahweh of Hosts revealed himself in my ears, Surely this iniquity shall not be forgiven you until you die, says the Lord, Yahweh of Hosts.ಆದದರಿಂದ ಸೈನ್ಯ ಗಳ ಕರ್ತನು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದೇನಂದರೆ ನಿಶ್ಚಯವಾಗಿ ಈ ದುಷ್ಕೃತ್ಯಗಳು ನೀವು ಸಾಯುವ ತನಕ ಮನ್ನಿಸಲ್ಪಡುವದೇ ಇಲ್ಲ.
15 Thus says the Lord, Yahweh of Hosts, Go, get yourself to this treasurer, even to Shebna, who is over the house, [and say],ಸೈನ್ಯಗಳ ಕರ್ತನಾದ ದೇವರು ಹೀಗೆ ನುಡಿದಿ ದ್ದಾನೆ--ಹೋಗು, ಅರಮನೆಯ ಉಗ್ರಾಣದವನಾದ ಶೆಬ್ನನೆಂಬ ಈ ಖಜಾಂಚಿ ಬಳಿಗೆ ಹೋಗಿ ಹೀಗೆ ಹೇಳು--
16 "What are you doing here? and who has you here, that you have hewed out a tomb here? Cutting him out a tomb on high, chiseling a habitation for himself in the rock!"ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ತನಗೆ ಸಮಾಧಿ ಯನ್ನು ತೋಡಿಸಿ, ಬಂಡೆಯಲ್ಲಿ ತನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದ್ದಿ ಅಲ್ಲವೆ?
17 Behold, Yahweh, like a [strong] man, will hurl you away violently; yes, he will wrap you up closely.ಇಗೋ, ಕರ್ತನು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯು ವನು.
18 He will surely wind you round and round, [and toss you] like a ball into a large country; there shall you die, and there shall be the chariots of your glory, you shame of your lord's house.ನಿನ್ನನ್ನು ಚೆಂಡಿನಂತೆ ಸುತ್ತಿಸುತ್ತಿ ತಿರುಗಿಸಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು. ಅಲ್ಲೆ ನೀನು ಸಾಯುವಿ, ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ ಅವಮಾನವನ್ನುಂಟು ಮಾಡುವವು.
19 I will thrust you from your office; and from your station shall you be pulled down.ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು. ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
20 It shall happen in that day, that I will call my servant Eliakim the son of Hilkiah:ಆ ದಿನದಲ್ಲಿ ಆಗುವದೇನಂದರೆ--ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,
21 and I will cloth him with your robe, and strengthen him with your belt, and I will commit your government into his hand; and he shall be a father to the inhabitants of Jerusalem, and to the house of Judah.ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ ನಿನ್ನ ನಡುಕಟ್ಟಿ ನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನ ಕೈಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ ಯೆಹೂದದ ಮನೆತನದವರಿಗೂ ತಂದೆಯಾಗಿರುವನು.
22 The key of the house of David will I lay on his shoulder; and he shall open, and none shall shut; and he shall shut, and none shall open.ದಾವೀದನ ಮನೆಯ ಬೀಗ ದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು; ಅವನು ತೆರೆದರೆ ಯಾರು ಮುಚ್ಚರು ಮುಚ್ಚಿದರೆ ಯಾರು ತೆರೆಯರು.
23 I will fasten him as a nail in a sure place; and he shall be for a throne of glory to his father's house.ಭದ್ರವಾದ ಸ್ಥಳದಲ್ಲಿ ಮೊಳೆ ಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು; ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾ ಸನವಾಗಿರುವನು.
24 They shall hang on him all the glory of his father's house, the offspring and the issue, every small vessel, from the cups even to all the pitchers.ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿ ಸುವರು.
25 In that day, says Yahweh of hosts, shall the nail that was fastened in a sure place give way; and it shall be hewn down, and fall; and the burden that was on it shall be cut off; for Yahweh has spoken it.ಆ ದಿನದಲ್ಲಿ ಸೈನ್ಯಗಳ ಕರ್ತನು ಇಂತೆನ್ನುತ್ತಾನೆ--ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಅದು ಕೀಳಲ್ಪಟ್ಟು, ಬೀಳುವದು. ಅದ ರಲ್ಲಿ ಇದ್ದ ಭಾರವೂ ತೆಗೆದುಹಾಕಲ್ಪಡುವದು; ಕರ್ತನೇ ಇದನ್ನು ನುಡಿದಿದ್ದಾನೆ.
Kannada Bible