Isaiah 2 - ASV (Kannada)
1 The word that Isaiah the son of Amoz saw concerning Judah and Jerusalem.ಆಮೋಚನ ಮಗನಾದ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ:
2 And it shall come to pass in the latter days, that the mountain of Jehovah's house shall be established on the top of the mountains, and shall be exalted above the hills; and all nations shall flow unto it.ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು.
3 And many peoples shall go and say, Come ye, and let us go up to the mountain of Jehovah, to the house of the God of Jacob; and he will teach us of his ways, and we will walk in his paths: for out of Zion shall go forth the law, and the word of Jehovah from Jerusalem.ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.
4 And he will judge between the nations, and will decide concerning many peoples; and they shall beat their swords into plowshares, and their spears into pruning-hooks; nation shall not lift up sword against nation, neither shall they learn war any more.ಆತನು ಅನೇಕ ಜನಾಂಗ ಗಳ ಮಧ್ಯದಲ್ಲಿ ನ್ಯಾಯ ತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವನು; ಅವರು ತಮ್ಮ ಕತ್ತಿಗಳನ್ನು ನೇಗಿಲಿನ ಗುಳಗಳನ್ನಾಗಿಯೂ ತಮ್ಮ ಈಟಿಗಳನ್ನು ಕುಡುಗೋ ಲುಗಳನ್ನಾಗಿಯೂ ಬಡಿಯುವರು; ಜನಾಂಗಕ್ಕೆ ವಿರೋ ಧವಾಗಿ ಜನಾಂಗವು ಕತ್ತಿಯನ್ನು ಎತ್ತದು; ಇಲ್ಲವೆ ಇನ್ನು ಮೇಲೆ ಯುದ್ಧಾಭ್ಯಾಸವು ಇರುವದೇ ಇಲ್ಲ.
5 O house of Jacob, come ye, and let us walk in the light of Jehovah.ಓ ಯಾಕೋಬಿನ ಮನೆತನದವರೇ, ಬನ್ನಿರಿ, ಕರ್ತನ ಬೆಳಕಿನಲ್ಲಿ ನಡೆಯೋಣ.
6 For thou hast forsaken thy people the house of Jacob, because they are filled `with customs' from the east, and `are' soothsayers like the Philistines, and they strike hands with the children of foreigners.ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ.
7 And their land is full of silver and gold, neither is there any end of their treasures; their land also is full of horses, neither is there any end of their chariots.ಅವರ ದೇಶವು ಬೆಳ್ಳಿ ಬಂಗಾರಗ ಳಿಂದಲೂ ತುಂಬಿದೆ, ಅವರ ಬೊಕ್ಕಸಗಳಿಗೆ ಮಿತಿ ಯಿಲ್ಲ; ಅವರ ದೇಶವು ಕುದುರೆಗಳಿಂದಲೂ ತುಂಬಿದೆ, ಅವರ ರಥಗಳಿಗೆ ಮಿತಿಯೇ ಇಲ್ಲ.
8 Their land also is full of idols; they worship the work of their own hands, that which their own fingers have made.ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ; ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನೇ ಆರಾಧಿಸುವರು.
9 And the mean man is bowed down, and the great man is brought low: therefore forgive them not.ನೀಚನು ಹಿಗ್ಗಿಕೊಳ್ಳುತ್ತಾನೆ, ಉತ್ತಮನು ತಗ್ಗಿಸಿಕೊಳ್ಳು ತ್ತಾನೆ; ಆದಕಾರಣ ಅವರನ್ನು ಮನ್ನಿಸಬೇಡ.
10 Enter into the rock, and hide thee in the dust, from before the terror of Jehovah, and from the glory of his majesty.ಕರ್ತನ ಭಯಕ್ಕೂ ಆತನ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ, ದೂಳಿನಲ್ಲಿ ನೀನು ಅಡಗಿಕೋ.
11 The lofty looks of man shall be brought low, and the haughtiness of men shall be bowed down, and Jehovah alone shall be exalted in that day.ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು.
12 For there shall be a day of Jehovah of hosts upon all that is proud and haughty, and upon all that is lifted up; and it shall be brought low;ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು.
13 and upon all the cedars of Lebanon, that are high and lifted up, and upon all the oaks of Bashan,ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ ಮತ್ತು ಬಾಷಾನಿನ ಎಲ್ಲಾ ಏಲಾಮರಗಳ ಮೇಲೆಯೂ
14 and upon all the high mountains, and upon all the hills that are lifted up,ಎಲ್ಲಾ ಎತ್ತರವಾದ ಪರ್ವತಗಳ ಮತ್ತು ಎತ್ತರವಾಗಿ ರುವ ಗುಡ್ಡಗಳ ಮೇಲೆಯೂ
15 and upon every lofty tower, and upon every fortified wall,ಎಲ್ಲಾ ಎತ್ತರವಾದ ಗೋಪುರಗಳ ಭದ್ರವಾದ ಎಲ್ಲಾ ಗೋಡೆಗಳ ಮೇಲೆ ಯೂ
16 and upon all the ships of Tarshish, and upon all pleasant imagery.ಎಲ್ಲಾ ತಾರ್ಷೀಷ್ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಎಲ್ಲಾ ಚಿತ್ರಗಳ ಮೇಲೆಯೂ ಆ ದಿನವು ಬರುವದು.
17 And the loftiness of man shall be bowed down, and the haughtiness of men shall be brought low; and Jehovah alone shall be exalted in that day.ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು.
18 And the idols shall utterly pass away.ಆತನು ವಿಗ್ರಹಗಳನ್ನು ಸಂಪೂರ್ಣ ವಾಗಿ ಇಲ್ಲದಂತೆ ಮಾಡಿಬಿಡುವನು.
19 And men shall go into the caves of the rocks, and into the holes of the earth, from before the terror of Jehovah, and from the glory of his majesty, when he ariseth to shake mightily the earth.ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿಸಲು ಏಳು ವಾಗ ಕರ್ತನಿಗೂ ಆತನ ಮಹಿಮೆಗೂ ಆತನ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಭೂಮಿಯ ಗವಿಗ ಳಿಗೂ ಅವರು ಸೇರಿಕೊಳ್ಳುವರು.
20 In that day men shall cast away their idols of silver, and their idols of gold, which have been made for them to worship, to the moles and to the bats;ಆ ದಿನದಲ್ಲಿ ಮನುಷ್ಯನು ಅಡ್ಡಬೀಳುವದಕ್ಕೋಸ್ಕರ ತಾವು ಮಾಡಿ ಕೊಂಡ ಬೆಳ್ಳಿಯ ವಿಗ್ರಹಗಳನ್ನೂ ಚಿನ್ನದ ವಿಗ್ರಹ ಗಳನ್ನೂ ಇಲಿ ಬಾವಲಿಗಳಿಗೆ ಬಿಸಾಡಿಬಿಡುವನು.
21 to go into the caverns of the rocks, and into the clefts of the ragged rocks, from before the terror of Jehovah, and from the glory of his majesty, when he ariseth to shake mightily the earth.ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿ ಸಲು ಏಳುವಾಗ ಕರ್ತನ ಭಯಕ್ಕೂ ಆತನ ಮಹಿ ಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಹೋಗುವರು.
22 Cease ye from man, whose breath is in his nostrils; for wherein is he to be accounted of?ಉಸಿರು ಮೂಗಿನಲ್ಲಿ ಇರುವ ವರೆಗೆ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಎಷ್ಟರವ ನೆಂದು ಎಣಿಸಬಹುದು?
Kannada Bible