Hosea 9 - BBE (Kannada)
1 Have no joy, O Israel, and do not be glad like the nations; for you have been untrue to your God; your desire has been for the loose woman's reward on every grain-floor.ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.
2 The grain-floor and the place where the grapes are crushed will not give them food; there will be no new wine for them.ಕಣವು ಮತ್ತು ದ್ರಾಕ್ಷೆಯ ತೋಟವು ಅವರನ್ನು ಪೋಷಿಸುವದಿಲ್ಲ; ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವದು.
3 They will have no resting-place in the Lord's land, but Ephraim will go back to Egypt, and they will take unclean food in Assyria.ಅವರು ಕರ್ತನ ದೇಶದಲ್ಲಿ ನೆಲೆಸುವದಿಲ್ಲ; ಆದರೆ ಎಫ್ರಾಯಾಮು ಐಗುಪ್ತಕ್ಕೆ ತಿರುಗುವದು; ಅವರು ಅಶ್ಯೂರಿನಲ್ಲಿ ಅಶುದ್ಧ ವಾದವುಗಳನ್ನು ತಿನ್ನುವರು.
4 They will give no wine offering to the Lord, they will not make offerings ready for him; their bread will be like the bread of those in sorrow; all who take it will be unclean, because their bread will be only for their desire, it will not come into the house of the Lord.ಅವರು ದ್ರಾಕ್ಷಾರಸ ವನ್ನು ಕಾಣಿಕೆಯಾಗಿ ಕರ್ತನಿಗೆ ಅರ್ಪಿಸುವದಿಲ್ಲ, ಇಲ್ಲವೆ ಅವರು ಆತನಿಗೆ ಮೆಚ್ಚಿಕೆಯಾಗಿರುವದಿಲ್ಲ; ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿ ರುವವು; ಅದನ್ನು ತಿನ್ನುವವರೆಲ್ಲರೂ ಅಪವಿತ್ರ ರಾಗುವರು. ಅವರ ಪ್ರಾಣಕ್ಕಾಗಿರುವ ಅವರ ರೊಟ್ಟಿಯು ಕರ್ತನ ಆಲಯಕ್ಕೆ ಬರುವದಿಲ್ಲ.
5 What will you do on the day of worship, and on the day of the feast of the Lord?ಪರಿಶುದ್ಧದಿನದ ಲ್ಲಿಯೂ ಕರ್ತನ ಹಬ್ಬದ ದಿನದಲ್ಲಿಯೂ ನೀವು ಏನು ಮಾಡುತ್ತೀರಿ?
6 For see, they are going away into Assyria; Egypt will get them together, Memphis will be their last resting-place; their fair silver vessels will be covered over with field plants, and thorns will come up in their tents.ಅವರು ಹಾಳಾದ ದೇಶವನ್ನು ಬಿಟ್ಟು ಹೋಗುವರು; ಐಗುಪ್ತವು ಅವರನ್ನು ಕೂಡಿಸುವದು, ಮೋಫ್ ಪಟ್ಟಣವು ಅವರನ್ನು ಹೂಣುವದು; ಅಪೇಕ್ಷಿ ಸಲ್ಪಟ್ಟ ಅವರ ಬೆಳ್ಳಿಯ ಒಡವೆಗಳು ದಬ್ಬೆಗಳ್ಳಿಗಳ ಪಾಲಾಗುವವು. ತುರುಚಿಯ ಗಿಡಗಳು ಅವರನ್ನು ಆವರಿಸಿಕೊಂಡಿವೆ; ಮುಳ್ಳುಗಳು ಅವರ ಗುಡಾರಗಳಲ್ಲಿ ಇರುವವು.
7 The days of punishment, the days of reward are come; Israel will be put to shame; the prophet is foolish, the man who has the spirit is off his head, because of your great sin.ವಿಚಾರಣೆಯ ದಿನಗಳು ಬಂದಿವೆ, ಮುಯ್ಯಿ ತೀರಿಸುವ ದಿನಗಳೂ ಬಂದಿವೆ. ಇಸ್ರಾ ಯೇಲು ಅದನ್ನು ತಿಳಿದುಕೊಳ್ಳುವದು, ನಿನ್ನ ಅಕ್ರಮ ಗಳು ಬಹಳವಾಗಿರುವದರಿಂದಲೂ ಹಗೆತನವು ಹೆಚ್ಚಾ ಗಿರುವದರಿಂದಲೂ ಪ್ರವಾದಿ ಮೂರ್ಖನೂ ಆತ್ಮೀಯ ಮನುಷ್ಯನೂ ಹುಚ್ಚನೂ ಎಂದು ಇಸ್ರಾಯೇಲು ತಿಳಿದುಕೊಳ್ಳುತ್ತದೆ.
8 There is great hate against the watchman of Ephraim, the people of my God; as for the prophet, there is a net in all his ways, and hate in the house of his God.ಎಫ್ರಾಯಾಮಿನ ಕಾವಲುಗಾ ರನು ನನ್ನ ದೇವರೊಂದಿಗೆ ಇದ್ದನು; ಆದರೆ ಪ್ರವಾ ದಿಯು ತನ್ನ ಎಲ್ಲಾ ದಾರಿಗಳಲ್ಲಿ ಬೇಟೆಯ ಬಲೆಯಾಗಿ ದ್ದಾನೆ; ಅವನ ದೇವರ ಆಲಯದಲ್ಲಿ ಹಗೆತನವು ಉಂಟು.
9 They have gone deep in evil as in the days of Gibeah; he will keep in mind their wrongdoing, he will give them punishment for their sins.ಗಿಬ್ಯದ ದಿನಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ; ಆದದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕಮಾಡಿಕೊಳ್ಳುವನು, ಅವರ ಪಾಪಗಳನ್ನು ವಿಚಾರಿಸುವನು.
10 I made discovery of Israel as of grapes in the waste land; I saw your fathers as the first-fruits of the fig-tree in her early fruit time; but they came to Baal-peor, and made themselves holy to the thing of shame, and became disgusting like that to which they gave their love.ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.
11 As for Ephraim, their glory will go in flight like a bird: there will be no birth and no one with child and no giving of life.ಎಫ್ರಾಯಾಮ್ಯರ ಘನತೆಯು ಹಾರಿಹೋಗುವ ಪಕ್ಷಿಯ ಹಾಗೆ ಇದೆ. ಜನ್ಮವಾಗಲಿ, ಗರ್ಭಧರಿಸುವದಾಗಲಿ ಉತ್ಪತ್ತಿಯಾಗಲಿ ಅವರಿಗೆ ಇರು ವದಿಲ್ಲ.
12 Even though their children have come to growth I will take them away, so that not a man will be there; for their evil-doing will be complete and they will be put to shame because of it.ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
13 As I have seen a beast whose young have been taken from her, so Ephraim will give birth to children only for them to be put to death.ನಾನು ತೂರನ್ನು ನೊಡಿದಂತೆ ಎಫ್ರಾಯಾಮು ರಮ್ಯ ಸ್ಥಳದಲ್ಲಿ ನೆಡಲ್ಪಟ್ಟಿದೆ; ಆದರೆ ಎಫ್ರಾಯಾಮು ಕೊಲ್ಲುವವನಿಗೆ ತನ್ನ ಮಕ್ಕಳನ್ನು ಹೊರಗೆ ತರುವದು.
14 O Lord, what will you give them? Give them bodies which may not give birth and breasts without milk.ಓ ಕರ್ತನೇ, ಅವರಿಗೆ ಕೊಡು; ಅವರಿಗೆ ನೀನು ಏನು ಕೊಡುತ್ತೀ? ಗರ್ಭಸ್ರಾವವನ್ನು ಮಾಡು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡು.
15 All their evil-doing is in Gilgal; there I had hate for them; because of their evil-doing I will send them out of my house; they will no longer be dear to me; all their rulers are uncontrolled.ಅವರ ಕೆಟ್ಟತನ ವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ನಾನು ಅವರನ್ನು ಹಗೆ ಮಾಡಿದ್ದೇನೆ. ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ ಅವ ರನ್ನು ಇನ್ನು ಪ್ರೀತಿಮಾಡುವದೇ ಇಲ್ಲ; ಅವರ ಪ್ರಭು ಗಳೆಲ್ಲಾ ತಿರುಗಿ ಬೀಳುವವರೇ.
16 The rod has come on Ephraim, their root is dry, let them have no fruit; even though they give birth, I will put to death the dearest fruit of their bodies.ಎಫ್ರಾಯಾಮ್ಯರು ಹೊಡೆಯಲ್ಪಟ್ಟಿದ್ದಾರೆ, ಅವರ ಬೇರು ಒಣಗಿ ಹೋಗಿದೆ, ಅವರು ಫಲವನ್ನು ಕೊಡುವದಿಲ್ಲ; ಹೌದು, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.
17 My God will give them up because they did not give ear to him; they will be wandering among the nations.ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನಿಗೆ ಕಿವಿಗೊಡಲಿಲ್ಲ; ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.
Kannada Bible