Hebrews 7 - YLT (Kannada)
1 For this Melchisedek, king of Salem, priest of God Most High, who did meet Abraham turning back from the smiting of the kings, and did bless him,ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದು ರಾಜರನ್ನು ಸಂಹರಿಸಿ ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶಿರ್ವದಿಸಿದನು.
2 to whom also a tenth of all did Abraham divide, (first, indeed, being interpreted, `King of righteousness,' and then also, King of Salem, which is, King of Peace,)ಅಬ್ರಹಾಮನು ಎಲ್ಲವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನು. ಆತನ ಹೆಸರಿಗೆ ಮೊದಲನೆಯದಾಗಿ ನೀತಿರಾಜನೆಂದು ತರುವಾಯ ಸಾಲೇಮಿನರಾಜ ಅಂದರೆ ಸಮಾಧಾನದ ರಾಜನೆಂದು ಅರ್ಥ.
3 without father, without mother, without genealogy, having neither beginning of days nor end of life, and being made like to the Son of God, doth remain a priest continually.ಆತನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ದಿವಸಗಳ ಆರಂಭವೂ ಜೀವದ ಅಂತ್ಯವೂ ಇಲ್ಲ. ಆದರೆ ಆತನು ದೇವರ ಮಗನಿಗೆ ಹೋಲಿಕೆಯಾಗಿ ಮಾಡಲ್ಪಟ್ಟಿದ್ದಾನೆ. ಇದಲ್ಲದೆ ಆತನು ನಿರಂತರವಾಗಿ ಯಾಜಕನಾಗಿದ್ದಾನೆ.
4 And see how great this one `is', to whom also a tenth Abraham the patriarch did give out of the best of the spoils,ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.
5 and those, indeed, out of the sons of Levi receiving the priesthood, a command have to take tithes from the people according to the law, that is, their brethren, even though they came forth out of the loins of Abraham;ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು.
6 and he who was not reckoned by genealogy of them, received tithes from Abraham, and him having the promises he hath blessed,ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
7 and apart from all controversy, the less by the better is blessed --ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ.
8 and here, indeed, men who die do receive tithes, and there `he', who is testified to that he was living,ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
9 and so to speak, through Abraham even Levi who is receiving tithes, hath paid tithes,ಇದು ಮಾತ್ರವಲ್ಲದೆ ದಶಮಭಾಗ ಗಳನ್ನು ತಕ್ಕೊಳ್ಳುವ ಲೇವಿಯೂ ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿ ತೆಂದು ನಾನು ಹೇಳಬಹುದು;
10 for he was yet in the loins of the father when Melchisedek met him.ಹೇಗೆಂದರೆ ಮೆಲ್ಕಿಜೆದೇಕನು ಲೇವಿಯ ಮೂಲ ಪುರಷನನ್ನು ಎದುರುಗೊಂಡಾಗ ಇವನಲ್ಲಿ ಲೇವಿಯು ಅಡಕ ವಾಗಿದ್ದನು.
11 If indeed, then, perfection were through the Levitical priesthood -- for the people under it had received law -- what further need, according to the order of Melchisedek, for another priest to arise, and not to be called according to the order of Aaron?ಲೇವಿಯ ಯಾಜಕತ್ವದಿಂದ ಸಂಪೂರ್ಣ ಸಿದ್ಧಿ ಉಂಟಾಗಿದ್ದರೆ ಆರೋನನ ತರಹದವನಾಗಿರದೆ ಮೆಲ್ಕಿ ಜೆದೇಕನ ತರಹದ ಬೇರೊಬ್ಬ ಯಾಜಕನು ಎದ್ದೇಳು ವದು ಅವಶ್ಯವೇನಿತ್ತು? (ಅದರಲ್ಲಿ ಜನರು ನ್ಯಾಯ ಪ್ರಮಾಣವನ್ನು ಹೊಂದಿದರು).
12 for the priesthood being changed, of necessity also, of the law a change doth come,ಯಾಜಕತ್ವವು ಬೇರೆಯಾದರೆ ನ್ಯಾಯಪ್ರಮಾಣವು ಕೂಡ ಬೇರೆ ಯಾಗುವದು ಅಗತ್ಯ.
13 for he of whom these things are said in another tribe hath had part, of whom no one gave attendance at the altar,ಇವು ಯಾವಾತನ ವಿಷಯ ದಲ್ಲಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸಂಬಂಧಪಟ್ಟವನು; ಆ ಗೋತ್ರದವರಲ್ಲಿ ಒಬ್ಬನೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ.
14 for `it is' evident that out of Judah hath arisen our Lord, in regard to which tribe Moses spake nothing concerning priesthood.ನಮ್ಮ ಕರ್ತನು ಯೂದಾ ಗೋತ್ರದಲ್ಲಿ ಜನಿಸಿದಾತನೆಂಬದು ಸ್ಪಷ್ಟವಾಗಿದೆಯಷ್ಟೆ; ಈ ಗೋತ್ರದ ವಿಷಯದಲ್ಲಿ ಮೋಶೆಯು ಯಾಜಕರ ಸಂಬಂಧವಾಗಿ ಏನೂ ಹೇಳಲಿಲ್ಲ.
15 And it is yet more abundantly most evident, if according to the similitude of Melchisedek there doth arise another priest,ಮೆಲ್ಕಿಜೆದೇಕನ ಹೋಲಿಕೆಗನುಸಾರ ಇನ್ನೊಬ್ಬ ಯಾಜಕನು ಏಳುತ್ತಾನೆಂಬದು ಇನ್ನು ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.
16 who came not according to the law of a fleshly command, but according to the power of an endless life,ಆತನು ಶಾರೀರಕವಾದ ಆಜ್ಞೆಯ ನಿಯಮಕ್ಕನುಸಾರ ಅಲ್ಲದೆ ನಿರ್ಲಯವಾದ ಜೀವದ ಶಕ್ತಿಗನುಸಾರವಾಗಿ ಮಾಡಲ್ಪಟ್ಟಿದ್ದಾನೆ.
17 for He doth testify -- `Thou `art' a priest -- to the age, according to the order of Melchisedek;'ಆತನ ವಿಷಯದಲ್ಲಿ--ನೀನು ಸದಾಕಾಲವು ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದೀ ಎಂದು ಆತನು ಸಾಕ್ಷಿ ಕೊಡುತ್ತಾನೆ.
18 for a disannulling indeed doth come of the command going before because of its weakness, and unprofitableness,ಮೊದಲಿದ್ದ ಆಜ್ಞೆಯು ನಿರ್ಬಲವಾಗಿಯೂ ನಿಷ್ಪ್ರಯೋಜಕವಾಗಿಯೂ ಇದ್ದು ನಿಜವಾಗಿಯೂ ರದ್ದಾಗಿಹೋಯಿತು.
19 (for nothing did the law perfect) and the bringing in of a better hope, through which we draw nigh to God.ನ್ಯಾಯ ಪ್ರಮಾಣವು ಯಾವದನ್ನೂ ಸಿದ್ದಿಗೆ ತಾರದಿರುವ ದರಿಂದ ಉತ್ತಮವಾಗಿರುವ ನಿರೀಕ್ಷೆಯು ಸಿದ್ಧಿಗೆ ತಂದಿತು. ಇದರಿಂದ ನಾವು ದೇವರ ಸವಿಾಪಕ್ಕೆ ಸೇರುತ್ತೇವೆ.
20 And inasmuch as `it is' not apart from oath, (for those indeed apart from oath are become priests,ಆತನು ಆಣೆಯಿಲ್ಲದೆ ಯಾಜಕನಾಗಲೇ ಇಲ್ಲ.
21 and he with an oath through Him who is saying unto him, `The Lord sware, and will not repent, Thou `art' a priest -- to the age, according to the order of Melchisedek;')(ಆ ಯಾಜಕರೂ ಆಣೆಯಿಲ್ಲದೆ ಯಾಜಕರಾದರು); ಈತನಾದರೊ--ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದೀ ಎಂದು ಆತನಿಗೆ ಹೇಳಿದ ಕರ್ತನು ಆಣೆಯಿಟ್ಟು ನುಡಿದನು, ಪಶ್ಚಾತ್ತಾಪಪಡುವದಿಲ್ಲ.
22 by so much of a better covenant hath Jesus become surety,ಇದರಿಂದಲೇ ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು.
23 and those indeed are many who have become priests, because by death they are hindered from remaining;ಅವರು (ಲೇವಿಯರು) ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣ ಕಾರಣದಿಂದ ನಿಜವಾಗಿಯೂ ಅವರಲ್ಲಿ ಯಾಜಕರಾದವರು ಅನೇಕರು;
24 and he, because of his remaining -- to the age, hath the priesthood not transient,ಈತನಾ ದರೋ ಸದಾಕಾಲವಿರುವದರಿಂದ ಬದಲಾವಣೆಯಾ ಗದ ಯಾಜಕತ್ವವನ್ನು ಹೊಂದಿದ್ದಾನೆ.
25 whence also he is able to save to the very end, those coming through him unto God -- ever living to make intercession for them.ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
26 For such a chief priest did become us -- kind, harmless, undefiled, separate from the sinners, and become higher than the heavens,ಇಂಥವನೇ ನಮಗೆ ಬೇಕಾದ ಮಹಾ ಯಾಜಕನು. ಈತನು ಪರಿಶುದ್ಧನೂ ಕೇಡು ಮಾಡ ದವನೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವಾತನು ಆಕಾಶಗಳಿಗಿಂತ ಉನ್ನತವಾಗಿ ಮಾಡಲ್ಪಟ್ಟಾತನೂ ಆಗಿದ್ದಾನೆ.
27 who hath no necessity daily, as the chief priests, first for his own sins to offer up sacrifice, then for those of the people; for this he did once, having offered up himself;ಮೊದಲು ತನ್ನ ಸ್ವಂತ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪ ಪರಿಹಾರಕ್ಕಾಗಿ ಯಜ್ಞಾರ್ಪಣೆ ಮಾಡುವ ಮಹಾ ಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸ ಬೇಕಾದ ಅವಶ್ಯವಿಲ್ಲ. ಯಾಕಂದರೆ ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
28 for the law doth appoint men chief priests, having infirmity, but the word of the oath that `is' after the law `appointeth' the Son -- to the age having been perfected.ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.
Kannada Bible