Hebrews 13 - WEB (Kannada)
1 Let brotherly love continue.ಸಹೋದರ ಪ್ರೀತಿಯು ನೆಲೆಯಾಗಿರಲಿ.
2 Don't forget to show hospitality to strangers, for in doing so, some have entertained angels without knowing it.ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
3 Remember those who are in bonds, as bound with them; and those who are ill-treated, since you are also in the body.ಸೆರೆಯವರ ಸಂಗಡ ನೀವೂ ಬಂಧಿಸಲ್ಪಟ್ಟವರೆಂದು ಅವರನ್ನು ಜ್ಞಾಪಕ ಮಾಡಿಕೊಳ್ಳಿರಿ. ನೀವು ಶರೀರದಲ್ಲಿರುವ ದರಿಂದ ಕಷ್ಟವನ್ನು ಅನುಭವಿಸುವವರನ್ನು ನೆನಸಿರಿ.
4 Let marriage be held in honor among all, and let the bed be undefiled: but God will judge the sexually immoral and adulterers.ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.
5 Be free from the love of money, content with such things as you have, for he has said, "I will in no way leave you, neither will I in any way forsake you."ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ.
6 So that with good courage we say, "The Lord is my helper. I will not fear. What can man do to me?"ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
7 Remember your leaders, men who spoke to you the word of God, and considering the results of their conduct, imitate their faith.ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಅಂತ್ಯದ ವರೆಗೆ ಯಾವ ರೀತಿಯಿಂದ ನಡೆದುಕೊಂಡರೆಂದು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.
8 Jesus Christ is the same yesterday, today, and forever.ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.
9 Don't be carried away by various and strange teachings, for it is good that the heart be established by grace, not by food, through which those who were so occupied were not benefited.ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ಯಾಕಂದರೆ ಕೃಪೆಯೊಂದಿಗೆ ಹೃದಯವನ್ನು ದೃಢ ಮಾಡಿಕೊಳ್ಳುವದು ಉತ್ತಮವೇ; ಭೋಜನ ಪದಾರ್ಥಗಳಲ್ಲಿ ಮಗ್ನರಾದವರು ಅವುಗಳಲ್ಲಿ ಏನೂ ಪ್ರಯೋಜನ ಹೊಂದಲಿಲ್ಲ.
10 We have an altar from which those who serve the holy tabernacle have no right to eat.ನಮಗೊಂದು ಯಜ್ಞವೇದಿ ಉಂಟು, ಅದರ ಪದಾರ್ಥವನ್ನು ತಿನ್ನುವದಕ್ಕೆ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.
11 For the bodies of those animals, whose blood is brought into the holy place by the high priest as an offering for sin, are burned outside of the camp.ಮಹಾಯಾಜಕನು ಪಾಪದ ನಿಮಿತ್ತವಾಗಿ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗಲು ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲಾ;
12 Therefore Jesus also, that he might sanctify the people through his own blood, suffered outside of the gate.ಅದರಂತೆ ಯೇಸು ಕೂಡ ತನ್ನ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಊರ ಬಾಗಿಲ ಹೊರಗೆ ಶ್ರಮೆಪಟ್ಟನು.
13 Let us therefore go forth to him outside of the camp, bearing his reproach.ಆದದರಿಂದ ನಾವು ಆತನ ನಿಮಿತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ ಪಾಳೆಯದ ಆಚೆ ಆತನ ಬಳಿಗೆ ಹೊರಟು ಹೋಗೋಣ.
14 For we don't have here an enduring city, but we seek that which is to come.ಯಾಕಂದರೆ ಶಾಶ್ವತವಾದ ಪಟ್ಟಣವು ಇಲ್ಲಿ ನಮ್ಮಗಿಲ್ಲ; ಮುಂದೆ ಬರುವ ಪಟ್ಟಣವನ್ನು ಹುಡು ಕುತ್ತಾ ಇದ್ದೇವೆ.
15 Through him, then, let us offer up a sacrifice of praise to God continually, that is, the fruit of lips which make confession to his name.ಆದದರಿಂದ ಆತನ ಮೂಲಕ ವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆ ಬಿಡದೆ ಸಮರ್ಪಿಸೋಣ, ಅಂದರೆ ನಮ್ಮ ತುಟಿಗಳಿಂದ ಆತನ ನಾಮಕ್ಕೆ ಸಲ್ಲಿಸುವ ಸ್ತೋತ್ರಗಳ ಫಲವೇ ಆದಾಗಿದೆ.
16 But don't forget to be doing good and sharing, for with such sacrifices God is well pleased.ಇದಲ್ಲದೆ ಒಳ್ಳೆಯದನ್ನು ಮಾಡುವದನ್ನೂ ಉದಾರವಾಗಿ ಕೊಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
17 Obey your leaders and submit to them, for they watch on behalf of your souls, as those who will give account, that they may do this with joy, and not with groaning, for that would be unprofitable for you.ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರ್ರಿ. ಯಾಕಂದರೆ ಅವರು ಲೆಕ್ಕ ಒಪ್ಪಿಸಬೇಕಾ ದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.
18 Pray for us, for we are persuaded that we have a good conscience, desiring to live honorably in all things.ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳ ಬೇಕೆಂದು ಅಪೇಕ್ಷಿಸುವವರಾದ ನಮಗೆ ಒಳ್ಳೇ ಮನಸ್ಸಾಕ್ಷಿ ಇದೆಯೆಂದು ನಂಬಿದ್ದೇವೆ.
19 I strongly urge you to do this, that I may be restored to you sooner.ನೀವು ಇದನು ಮಾಡುವಂತೆ ನಾನು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ; ಇದರ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.
20 Now may the God of peace, who brought again from the dead the great shepherd of the sheep with the blood of an eternal covenant, our Lord Jesus,ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
21 make you complete in every good work to do his will, working in you that which is well pleasing in his sight, through Jesus Christ, to whom be the glory forever and ever. Amen.ನಿಮ್ಮನ್ನು ಸಕಲ ಸತ್ಕಾರ್ಯಗಳಲ್ಲಿ ಆತನ ಚಿತ್ತವನ್ನು ಮಾಡುವಂತೆ ಪರಿಪೂರ್ಣ ಮಾಡಲಿ. ತನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದ ದ್ದನ್ನು ಯೇಸು ಕ್ರಿಸ್ತನ ಮೂಲಕ ನಿಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
22 But I exhort you, brothers, endure the word of exhortation, for I have written to you in few words.ಸಹೋದರರೇ, ಈ ಎಚ್ಚರಿಕೆಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.
23 Know that our brother Timothy has been freed, with whom, if he comes shortly, I will see you.ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬದು ನಿಮಗೆ ತಿಳಿದಿರಲಿ; ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
24 Greet all of your leaders and all the saints. The Italians greet you.ನಿಮ್ಮ ಸಭಾನಾಯಕರೆಲ್ಲರಿಗೆ ಮತ್ತು ಪರಿಶುದ್ಧರೆಲ್ಲರಿಗೆ ವಂದನೆ. ಇತಾಲ್ಯದವರು ನಿಮ್ಮನ್ನು ವಂದಿಸುತ್ತಾರೆ.
25 Grace be with you all. Amen.ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
Kannada Bible