Luke 18 - BBE (Kannada)
1 And he made a story for them, the point of which was that men were to go on making prayer and not get tired;ಜನರು ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸತಕ್ಕದ್ದೆಂದು ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು--
2 Saying, There was a judge in a certain town, who had no fear of God or respect for man:ಒಂದಾನೊಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಭಯಪಡದವನೂ ಮನುಷ್ಯರನ್ನು ಲಕ್ಷ್ಯ ಮಾಡದವನೂ ಆಗಿದ್ದನು.
3 And there was a widow in that town, and she kept on coming to him and saying, Give me my right against the man who has done me wrong.ಆ ಪಟ್ಟಣದಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಬಂದು--ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು.
4 And for a time he would not: but later, he said to himself, Though I have no fear of God or respect for man,ಅವನು ಸ್ವಲ್ಪಕಾಲದವರೆಗೆ ಮನಸ್ಸಿಲ್ಲ ದವನಾಗಿದ್ದನು; ತರುವಾಯ ಅವನು ತನ್ನೊಳಗೆ--ನಾನು ದೇವರಿಗೆ ಭಯಪಡುವದಿಲ್ಲ, ಮನುಷ್ಯರನ್ನು ಲಕ್ಷ್ಯಮಾಡುವದೂ ಇಲ್ಲ.
5 Because this widow is a trouble to me, I will give her her right; for if not, I will be completely tired out by her frequent coming.ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು.
6 And the Lord said, Give ear to the words of the evil judge.ಕರ್ತನು--ಈ ಅನ್ಯಾಯಗಾರನಾದ ನ್ಯಾಯಾಧಿ ಪತಿಯು ಅಂದುಕೊಂಡದ್ದನ್ನು ಕೇಳಿರಿ.
7 And will not God do right in the cause of his saints, whose cries come day and night to his ears, though he is long in doing it?ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?
8 I say to you that he will quickly do right in their cause. But when the Son of man comes, will there be any faith on earth?ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.
9 And he made this story for some people who were certain that they were good, and had a low opinion of others:ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.
10 Two men went up to the Temple for prayer; one a Pharisee, and the other a tax-farmer.ಇಬ್ಬರು ಪ್ರಾರ್ಥನೆ ಮಾಡುವದಕ್ಕೆ ದೇವಾಲಯದೊಳಗೆ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು.
11 The Pharisee, taking up his position, said to himself these words: God, I give you praise because I am not like other men, who take more than their right, who are evil-doers, who are untrue to their wives, or even like this tax-farmer.ಫರಿಸಾಯನು ನಿಂತುಕೊಂಡು ತನ್ನೊಳಗೆ ಹೀಗೆ ಪ್ರಾರ್ಥಿಸುತ್ತಾ--ದೇವರೇ, ಸುಲು ಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದವರಂತೆ ಇಲ್ಲವೆ ಈ ಸುಂಕದವನ ಹಾಗೆ ನಾನು ಅಲ್ಲ, ಆದದರಿಂದ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.
12 Twice in the week I go without food; I give a tenth of all I have.ನಾನು ವಾರದಲ್ಲಿ ಎರಡು ಸಾರಿ ಉಪವಾಸ ಮಾಡುತ್ತೇನೆ; ನನಗಿರುವದೆ ಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ ಎಂದು ಹೇಳಿದನು.
13 The tax-farmer, on the other hand, keeping far away, and not lifting up even his eyes to heaven, made signs of grief and said, God, have mercy on me, a sinner.ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು.
14 I say to you, This man went back to his house with God's approval, and not the other: for everyone who makes himself high will be made low and whoever makes himself low will be made high.ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
15 And they took their children to him, so that he might put his hands on them: but when the disciples saw it, they said sharp words to themತರುವಾಯ ಚಿಕ್ಕಮಕ್ಕಳನ್ನು ಸಹ ಯೇಸು ಮುಟ್ಟುವಂತೆ ಜನರು ಅವುಗಳನ್ನು ಆತನ ಬಳಿಗೆ ತಂದಾಗ ಆತನ ಶಿಷ್ಯರು ಇದನ್ನು ನೋಡಿ ಅವರನು ಗದರಿಸಿದರು.
16 But Jesus sent for them, saying, Let the children come to me, and do not keep them away, for of such is the kingdom of heaven.ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರುವಂತೆ ಬಿಡಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ದೇವರ ರಾಜ್ಯವು ಅಂಥವರದೇ.
17 Truly I say to you, Whoever does not put himself under the kingdom of God like a little child, will not come into it at all.ಯಾವನಾದರೂ ಈ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿರುವನೋ ಅವನು ಅದರೊಳಗೆ ಸೇರುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
18 And a certain ruler put a question to him, saying, Good Master, what have I to do so that I may have eternal life?ಆಗ ಒಬ್ಬಾನೊಬ್ಬ ಅಧಿಕಾರಿಯು ಆತನಿಗೆ--ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.
19 And Jesus said to him, Why do you say that I am good? No one is good, but only God.ಅದಕ್ಕೆ ಯೇಸು ಅವನಿಗೆ--ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಒಳ್ಳೆಯವನು ಯಾವನೂ ಇಲ್ಲ.
20 You have knowledge of what the law says: Do not be untrue to your wife, Do not put anyone to death, Do not take what is not yours, Do not give false witness, Give honour to your father and mother.ವ್ಯಭಿಚಾರ ಮಾಡಬೇಡ, ನರಹತ್ಯ ಮಾಡ ಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆಯನ್ನು ಮತ್ತು ನಿನ್ನ ತಾಯಿಯನ್ನು ಸನ್ಮಾನಿಸಬೇಕು ಎಂಬ ಆಜ್ಞೆಗಳನ್ನು ನೀನು ಬಲ್ಲವನಾಗಿದ್ದೀ ಅಂದನು.
21 And he said, All these things I have done from the time when I was a boy.ಅದಕ್ಕವನು--ನನ್ನ ಬಾಲ್ಯದಿಂದ ನಾನು ಇವೆಲ್ಲವು ಗಳನ್ನು ಕೈಕೊಂಡಿದ್ದೇನೆ ಎಂದು ಹೇಳಿದನು.
22 And Jesus, hearing it, said to him, One thing you still have need of; get money for your goods, and give it away to the poor, and you will have wealth in heaven; and come after me.ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು.
23 But at these words he became very sad, for he had great wealth.ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
24 And Jesus, looking at him, said, How hard it is for those who have wealth to get into the kingdom of God!ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ನೋಡಿ--ಐಶ್ವರ್ಯ ವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.
25 It is simpler for a camel to go through the eye of a needle, than for a man who has much money to come into the kingdom of God.ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ತೂರುವದು ಸುಲಭ ಎಂದು ಹೇಳಿದನು.
26 And those who were present said, Then who may have salvation?ಇದನ್ನು ಕೇಳಿದವರು--ಹಾಗಾದರೆ ರಕ್ಷಣೆ ಹೊಂದುವವರು ಯಾರು? ಅಂದರು.
27 But he said, Things which are not possible with man are possible with God.ಅದಕ್ಕೆ ಆತನು--ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ ಎಂದು ಹೇಳಿದನು.
28 And Peter said, See, we have given up what is ours to come after you.ಆಗ ಪೇತ್ರನು--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಿದ್ದಕ್ಕೆ
29 And he said to them, Truly I say to you, There is no man who has given up house or wife or brothers or father or mother or children, because of the kingdom of God,ಆತನು ಅವರಿಗೆ--ಒಬ್ಬನು ಮನೆ ಯನ್ನಾದರೂ ತಂದೆತಾಯಿಗಳನ್ನಾದರೂ ಸಹೋದರರನ್ನಾದರೂ ಹೆಂಡತಿಯನ್ನಾದರೂ ಇಲ್ಲವೆ ಮಕ್ಕಳ ನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು
30 Who will not get much more in this time, and in the world to come, eternal life.ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಲೋಕದಲ್ಲಿ ನಿತ್ಯಜೀವವನ್ನೂ ಹೊಂದಿಯೇ ಹೊಂದು ವನು ಎಂದು ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ ಅಂದನು.
31 And he took with him the twelve and said to them, Now we are going up to Jerusalem, and all the things which were said by the prophets will be done to the Son of man.ಇದಲ್ಲದೆ ಆತನು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ--ಇಗೋ, ನಾವು ಯೆರೂಸ ಲೇಮಿಗೆ ಹೋಗುತ್ತೇವೆ; ಮನುಷ್ಯಕುಮಾರನ ವಿಷಯ ದಲ್ಲಿ ಪ್ರವಾದಿಗಳಿಂದ ಬರೆಯಲ್ಪಟ್ಟವುಗಳೆಲ್ಲವೂ ನೆರವೇರಬೇಕು.
32 For he will be given up to the Gentiles, and will be made sport of and put to shame:ಆತನು ಅನ್ಯಜನಗಳಿಗೆ ಒಪ್ಪಿಸಲ್ಪ ಡುವನು; ಅವರು ಆತನನ್ನು ಹಾಸ್ಯಮಾಡುವವರಾಗಿ ಅವಮಾನ ಮಾಡುತ್ತಾ ಆತನ ಮೇಲೆ ಉಗುಳುವರು.
33 And he will be given cruel blows and put to death, and on the third day he will come back to life.ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
34 But they did not take in the sense of any of these words, and what he said was not clear to them, and their minds were not able to see it.ಆದರೆ ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಲಿಲ್ಲ; ಈ ಮಾತು ಅವರಿಗೆ ಮರೆಯಾಗಿದ್ದದರಿಂದ ಆತನು ಹೇಳಿದವು ಗಳನ್ನು ಅವರು ತಿಳಿಯಲಿಲ್ಲ.
35 And it came about that when he got near Jericho, a certain blind man was seated by the side of the road, making requests for money from those who went by.ಇದಾದ ಮೇಲೆ ಆತನು ಯೆರಿಕೋವಿನ ಸವಿಾಪಕ್ಕೆ ಬಂದಾಗ ಒಬ್ಬಾನೊಬ್ಬ ಕುರುಡನು ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆ ಬೇಡು ತ್ತಿದ್ದನು;
36 And hearing the sound of a great number of people going by, he said, What is this?ಜನಸಮೂಹವು ಹಾದುಹೋಗುವದನ್ನು ಇವನು ಕೇಳಿಸಿಕೊಂಡು ಅದೇನೆಂದು ವಿಚಾರಿಸಿದನು.
37 And they said to him, Jesus of Nazareth is going by.ನಜರೇತಿನವನಾದ ಯೇಸು ಹಾದು ಹೋಗುತ್ತಿದ್ದಾ ನೆಂದು ಅವರು ಅವನಿಗೆ ಹೇಳಿದರು.
38 And he said in a loud voice, Jesus, Son of David, have mercy on me.ಆಗ ಅವನು--ಯೇಸುವೇ, ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಕೂಗಿಕೊಂಡನು.
39 And those who were in front made protests and said to him, Be quiet: but he said all the more, O Son of David, have mercy on me.ಮುಂದೆ ಹೋಗುತ್ತಿದ್ದವರು ಅವನು ಸುಮ್ಮನಿರು ವಂತೆ ಅವನನ್ನು ಗದರಿಸಿದರು. ಆದರೂ ಅವನು--ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.
40 And Jesus, stopping, gave orders that he was to come to him, and when he came near, he said to him,ಆಗ ಯೇಸು ನಿಂತುಕೊಂಡು ಅವನನ್ನು ತನ್ನ ಬಳಿಗೆ ಕರತರುವಂತೆ ಅಪ್ಪಣೆಕೊಟ್ಟನು; ಅವನು ಆತನ ಬಳಿಗೆ ಬಂದಾಗ ಆತನು ಅವನಿಗೆ--
41 What would you have me do for you? And he said, Lord, that I may be able to see again.ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಿದನು. ಅದಕ್ಕವನು--ಕರ್ತನೇ, ನಾನು ದೃಷ್ಟಿಹೊಂದುವಂತೆ ಮಾಡು ಅಂದನು.
42 And Jesus said, See again: your faith has made you well.ಆಗ ಯೇಸು ಅವನಿಗೆ-- ನೀನು ದೃಷ್ಟಿ ಹೊಂದಿದವನಾಗು; ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿಯದೆ ಅಂದನು.
43 And straight away he was able to see, and he went after him, giving glory to God; and all the people when they saw it gave praise to God.ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.
Kannada Bible