Genesis 5 - WEB (Kannada)
1 This is the book of the generations of Adam. In the day that God created man, he made him in God's likeness.ಆದಾಮನ ವಂಶಾವಳಿಯ ಪುಸ್ತಕವು ಇದೇ. ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ತನ್ನ ಹೋಲಿಕೆಯಲ್ಲಿ ಆತನು ಅವನನ್ನು ಉಂಟುಮಾಡಿದನು.
2 He created them male and female, and blessed them, and called their name Adam,{"Adam" and "Man" are spelled with the exact same consonants in Hebrew, so this can be correctly translated either way.} in the day when they were created.ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು; ಅವರು ಸೃಷ್ಟಿಸಲ್ಪಟ್ಟ ದಿನದಲ್ಲಿ ಆತನು ಅವರನ್ನು ಆಶೀರ್ವದಿಸಿ ಅವರನ್ನು ಆದಾಮ ನೆಂದು ಕರೆದನು (ಹೆಸರಿಟ್ಟನು).
3 Adam lived one hundred thirty years, and became the father of a son in his own likeness, after his image, and named him Seth.ಆದಾಮನಿಗೆ ನೂರಮೂವತ್ತು ವರುಷವಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.
4 The days of Adam after he became the father of Seth were eight hundred years, and he became the father of sons and daughters.ಸೇತನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
5 All the days that Adam lived were nine hundred thirty years, then he died.ಆದಾಮನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಮೂವತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
6 Seth lived one hundred five years, and became the father of Enosh.ಸೇತನು ನೂರ ಐದು ವರುಷದವನಾಗಿದ್ದಾಗ ಅವನಿಂದ ಎನೋಷನು ಹುಟ್ಟಿದನು.
7 Seth lived after he became the father of Enosh eight hundred seven years, and became the father of sons and daughters.ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
8 All the days of Seth were nine hundred twelve years, then he died.ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
9 Enosh lived ninety years, and became the father of Kenan.ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.
10 Enosh lived after he became the father of Kenan, eight hundred fifteen years, and became the father of sons and daughters.ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
11 All the days of Enosh were nine hundred five years, then he died.ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
12 Kenan lived seventy years, and became the father of Mahalalel.ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು.
13 Kenan lived after he became the father of Mahalalel eight hundred forty years, and became the father of sons and daughtersಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
14 and all the days of Kenan were nine hundred ten years, then he died.ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
15 Mahalalel lived sixty-five years, and became the father of Jared.ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು.
16 Mahalalel lived after he became the father of Jared eight hundred thirty years, and became the father of sons and daughters.ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು.
17 All the days of Mahalalel were eight hundred ninety-five years, then he died.ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
18 Jared lived one hundred sixty-two years, and became the father of Enoch.ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು.
19 Jared lived after he became the father of Enoch eight hundred years, and became the father of sons and daughters.ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
20 All the days of Jared were nine hundred sixty-two years, then he died.ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
21 Enoch lived sixty-five years, and became the father of Methuselah.ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.
22 Enoch walked with God after he became the father of Methuselah three hundred years, and became the father of sons and daughters.ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
23 all the days of Enoch were three hundred sixty-five years.ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.
24 Enoch walked with God, and he was not, for God took him.ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು.
25 Methuselah lived one hundred eighty-seven years, and became the father of Lamech.ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು.
26 Methuselah lived after he became the father of Lamech seven hundred eighty-two years, and became the father of sons and daughters.ಮೆತೂಷೆಲಹನಿಂದ ಲೆಮೆಕನು ಹುಟ್ಟಿದ ಮೇಲೆ ಅವನ ದಿನಗಳು ಏಳುನೂರ ಎಂಭತ್ತೆರಡು ವರುಷ ಗಳಾಗಿದ್ದವು. ಅವನಿಂದ ಕುಮಾರರೂ ಕುಮಾರ್ತೆ ಯರೂ ಹುಟ್ಟಿದರು.
27 All the days of Methuselah were nine hundred sixty-nine years, then he died.ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
28 Lamech lived one hundred eighty-two years, and became the father of a son,ಲೆಮೆಕನು ನೂರ ಎಂಭತ್ತೆರಡು ವರುಷದವ ನಾಗಿದ್ದಾಗ ಅವನಿಂದ ಒಬ್ಬ ಮಗನು ಹುಟ್ಟಿದನು.
29 and he named him Noah, saying, "This same will comfort us in our work and in the toil of our hands, because of the ground which Yahweh has cursed."ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.
30 Lamech lived after he became the father of Noah five hundred ninety-five years, and became the father of sons and daughters.ಲೆಮೆಕನಿಂದ ನೋಹನು ಹುಟ್ಟಿದ ಮೇಲೆ ಅವನ ದಿನಗಳು ಐನೂರ ತೊಂಭತೈದು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
31 All the days of Lamech were seven hundred seventy-seven years, then he died.ಲೆಮೆಕನ ದಿನಗಳೆಲ್ಲಾ ಒಟ್ಟು ಏಳುನೂರ ಎಪ್ಪತ್ತೇಳು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
32 Noah was five hundred years old, and Noah became the father of Shem, Ham, and Japheth.ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.
Kannada Bible