Bible

Genesis 5 - DBY (Kannada)

1 This is the book of Adam's generations. In the day that God created man, in the likeness of God made he him.ಆದಾಮನ ವಂಶಾವಳಿಯ ಪುಸ್ತಕವು ಇದೇ. ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ತನ್ನ ಹೋಲಿಕೆಯಲ್ಲಿ ಆತನು ಅವನನ್ನು ಉಂಟುಮಾಡಿದನು.

2 Male and female created he them; and blessed them, and called their name Adam, in the day when they were created.ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು; ಅವರು ಸೃಷ್ಟಿಸಲ್ಪಟ್ಟ ದಿನದಲ್ಲಿ ಆತನು ಅವರನ್ನು ಆಶೀರ್ವದಿಸಿ ಅವರನ್ನು ಆದಾಮ ನೆಂದು ಕರೆದನು (ಹೆಸರಿಟ್ಟನು).

3 And Adam lived a hundred and thirty years, and begot [a son] in his likeness, after his image, and called his name Seth.ಆದಾಮನಿಗೆ ನೂರಮೂವತ್ತು ವರುಷವಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.

4 And the days of Adam after he had begotten Seth were eight hundred years; and he begot sons and daughters.ಸೇತನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

5 And all the days of Adam that he lived were nine hundred and thirty years; and he died.ಆದಾಮನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಮೂವತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.

6 And Seth lived a hundred and five years, and begot Enosh.ಸೇತನು ನೂರ ಐದು ವರುಷದವನಾಗಿದ್ದಾಗ ಅವನಿಂದ ಎನೋಷನು ಹುಟ್ಟಿದನು.

7 And Seth lived after he had begotten Enosh eight hundred and seven years, and begot sons and daughters.ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

8 And all the days of Seth were nine hundred and twelve years; and he died.ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.

9 And Enosh lived ninety years, and begot Cainan.ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.

10 And Enosh lived after he had begotten Cainan eight hundred and fifteen years, and begot sons and daughters.ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

11 And all the days of Enosh were nine hundred and five years; and he died.ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.

12 And Cainan lived seventy years, and begot Mahalaleel.ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು.

13 And Cainan lived after he had begotten Mahalaleel eight hundred and forty years, and begot sons and daughters.ಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

14 And all the days of Cainan were nine hundred and ten years; and he died.ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.

15 And Mahalaleel lived sixty-five years, and begot Jared.ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು.

16 And Mahalaleel lived after he had begotten Jared eight hundred and thirty years, and begot sons and daughters.ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು.

17 And all the days of Mahalaleel were eight hundred and ninety-five years; and he died.ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.

18 And Jared lived a hundred and sixty-two years, and begot Enoch.ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು.

19 And Jared lived after he had begotten Enoch eight hundred years, and begot sons and daughters.ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.

20 And all the days of Jared were nine hundred and sixty-two years; and he died.ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.

21 And Enoch lived sixty-five years, and begot Methushelah.ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.

22 And Enoch walked with God after he had begotten Methushelah three hundred years, and begot sons and daughters.ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

23 And all the days of Enoch were three hundred and sixty-five years.ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.

24 And Enoch walked with God; and he was not, for God took him.ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು.

25 And Methushelah lived a hundred and eighty-seven years, and begot Lemech.ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು.

26 And Methushelah lived after he had begotten Lemech seven hundred and eighty-two years, and begot sons and daughters.ಮೆತೂಷೆಲಹನಿಂದ ಲೆಮೆಕನು ಹುಟ್ಟಿದ ಮೇಲೆ ಅವನ ದಿನಗಳು ಏಳುನೂರ ಎಂಭತ್ತೆರಡು ವರುಷ ಗಳಾಗಿದ್ದವು. ಅವನಿಂದ ಕುಮಾರರೂ ಕುಮಾರ್ತೆ ಯರೂ ಹುಟ್ಟಿದರು.

27 And all the days of Methushelah were nine hundred and sixty-nine years; and he died.ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.

28 And Lemech lived a hundred and eighty-two years, and begot a son.ಲೆಮೆಕನು ನೂರ ಎಂಭತ್ತೆರಡು ವರುಷದವ ನಾಗಿದ್ದಾಗ ಅವನಿಂದ ಒಬ್ಬ ಮಗನು ಹುಟ್ಟಿದನು.

29 And he called his name Noah, saying, This [one] shall comfort us concerning our work and concerning the toil of our hands, because of the ground which Jehovah has cursed.ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.

30 And Lemech lived after he had begotten Noah five hundred and ninety-five years, and begot sons and daughters.ಲೆಮೆಕನಿಂದ ನೋಹನು ಹುಟ್ಟಿದ ಮೇಲೆ ಅವನ ದಿನಗಳು ಐನೂರ ತೊಂಭತೈದು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

31 And all the days of Lemech were seven hundred and seventy-seven years; and he died.ಲೆಮೆಕನ ದಿನಗಳೆಲ್ಲಾ ಒಟ್ಟು ಏಳುನೂರ ಎಪ್ಪತ್ತೇಳು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.

32 And Noah was five hundred years old, and Noah begot Shem, Ham, and Japheth.ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್‌ ಹಾಮ್‌ ಯೆಫೆತ್‌ ಎಂಬವರು ಹುಟ್ಟಿದರು.

Kannada Bible