Bible

Genesis 45 - WEB (Kannada)

1 Then Joseph couldn't control himself before all those who stood before him, and he cried, "Cause every man to go out from me!" There stood no man with him, while Joseph made himself known to his brothers.ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿ ಹಿಡುಕೊಳ್ಳಲಾರದೆ--ಎಲ್ಲರನ್ನೂ ನನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪ್ರಕಟಿಸಿ ಕೊಂಡಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ.

2 He wept aloud. The Egyptians heard, and the house of Pharaoh heard.ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ ಐಗುಪ್ತ್ಯರೂ ಫರೋಹನ ಮನೆಯವರೂ ಕೇಳಿಸಿಕೊಂಡರು.

3 Joseph said to his brothers, "I am Joseph! Does my father still live?" His brothers couldn't answer him; for they were terrified at his presence.ಯೋಸೇಫನು ತನ್ನ ಸಹೋದರರಿಗೆ--ನಾನು ಯೋಸೇಫನು, ನನ್ನ ತಂದೆಯು ಇನ್ನೂ ಬದುಕಿ ದ್ದಾನೋ ಅಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ ಅವನಿಗೆ ಉತ್ತರ ಕೊಡಲಾರದೆ ಹೋದರು.

4 Joseph said to his brothers, "Come near to me, please." They came near. "He said, I am Joseph, your brother, whom you sold into Egypt.ಆಗ ಯೋಸೇಫನು ತನ್ನ ಸಹೋದರರಿಗೆ--ನನ್ನ ಬಳಿಗೆ ಬನ್ನಿರಿ ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು--ನೀವು ಐಗುಪ್ತಕ್ಕೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ.

5 Now don't be grieved, nor angry with yourselves, that you sold me here, for God sent me before you to preserve life.ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟು ಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.

6 For these two years the famine has been in the land, and there are yet five years, in which there will be neither plowing nor harvest.ಈ ಎರಡು ವರುಷಗಳ ವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರುಷಗಳ ವರೆಗೆ ಬಿತ್ತುವದೂ ಕೊಯ್ಯುವದೂ ಇರುವದಿಲ್ಲ.

7 God sent me before you to preserve you a remnant in the earth, and to save you alive by a great deliverance.ಆದದ ರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವ ದಕ್ಕೂ ದೊಡ್ಡ ಬಿಡುಗಡೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸುವದಕ್ಕೂ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.

8 So now it wasn't you who sent me here, but God, and he has made me a father to Pharaoh, lord of all his house, and ruler over all the land of Egypt.ಆದದರಿಂದ ಈಗ ನೀವಲ್ಲ, ದೇವರು ತಾನೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಆತನು ನನ್ನನ್ನು ಫರೋಹನಿಗೆ ತಂದೆಯಾಗಿಯೂ ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಐಗುಪ್ತ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾನೆ.

9 Hurry, and go up to my father, and tell him, 'This is what your son Joseph says, "God has made me lord of all Egypt. Come down to me. Don't wait.ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ ಅವನಿಗೆ--ನಿನ್ನ ಮಗನಾದ ಯೋಸೇಫನು--ದೇವರು ನನ್ನನ್ನು ಐಗುಪ್ತಕ್ಕೆಲ್ಲಾ ಪ್ರಭುವನ್ನಾಗಿ ಮಾಡಿದ್ದಾನೆ; ತಡ ಮಾಡದೆ ನನ್ನ ಬಳಿಗೆ ಇಳಿದು ಬಾ;

10 You shall dwell in the land of Goshen, and you will be near to me, you, your children, your children's children, your flocks, your herds, and all that you have.ಗೋಷೆನ್‌ ದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ ಮೊಮ್ಮಕ್ಕಳೂ ದನ ಕುರಿಗಳೂ ನಿನಗಿದ್ದದ್ದೆಲ್ಲವೂ ನನ್ನ ಸವಿಾಪ ದಲ್ಲಿರಬೇಕು;

11 There I will nourish you; for there are yet five years of famine; lest you come to poverty, you, and your household, and all that you have."'ಅಲ್ಲಿ ನಿನ್ನನ್ನು ಪೋಷಿಸುವೆನು. ಯಾಕಂದರೆ ಇನ್ನೂ ಕ್ಷಾಮದ ಐದು ವರುಷಗಳಿವೆ. ನಿನಗೂ ನಿನ್ನ ಮನೆಗೂ ನಿನಗಿರುವದೆಲ್ಲದಕ್ಕೂ ಬಡತನವಾಗಬಾರದು ಎಂದು ಹೇಳಿರಿ.

12 Behold, your eyes see, and the eyes of my brother Benjamin, that it is my mouth that speaks to you.ಇಗೋ, ನಿಮ್ಮ ಸಂಗಡ ಮಾತನಾಡುವದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ ನನ್ನ ಸಹೋದರನಾದ ಬೆನ್ಯಾವಿಾನನ ಕಣ್ಣುಗಳೂ ನೋಡುತ್ತವೆ.

13 You shall tell my father of all my glory in Egypt, and of all that you have seen. You shall hurry and bring my father down here."ಹೀಗಿರ ಲಾಗಿ ನೀವು ಐಗುಪ್ತದೇಶದಲ್ಲಿ ನನಗಿರುವ ಎಲ್ಲಾ ಘನವನ್ನೂ ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ ಅಂದನು.

14 He fell on his brother Benjamin's neck, and wept, and Benjamin wept on his neck.ಅವನು ತನ್ನ ತಮ್ಮನಾದ ಬೆನ್ಯಾವಿಾನನ ಕೊರಳನ್ನು ಅಪ್ಪಿ ಕೊಂಡು ಅತ್ತನು; ಬೆನ್ಯಾವಿಾನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು.

15 He kissed all his brothers, and wept on them. After that his brothers talked with him.ಇದಲ್ಲದೆ ತನ್ನ ಸಹೋದರ ರಿಗೆಲ್ಲಾ ಮುದ್ದಿಟ್ಟು ಅವರನ್ನು ಹಿಡುಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.

16 The report of it was heard in Pharaoh's house, saying, "Joseph's brothers have come." It pleased Pharaoh well, and his servants.ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ ಅವನ ಸೇವಕರಿಗೂ ಅದು ಮೆಚ್ಚಿಕೆಯಾಗಿತ್ತು.

17 Pharaoh said to Joseph, "Tell your brothers, 'Do this. Load your animals, and go, travel to the land of Canaan.ಫರೋಹನು ಯೋಸೇಫ ನಿಗೆ--ನಿನ್ನ ಸಹೋದರರಿಗೆ--ನೀವು ಹೀಗೆ ಮಾಡಿರಿ; ನಿಮ್ಮ ಪಶುಗಳ ಮೇಲೆ ಸಾಮಾಗ್ರಿಗಳನ್ನು ಹೇರಿ ಕಾನಾನ್‌ ದೇಶಕ್ಕೆ ಹೋಗಿ

18 Take your father and your households, and come to me, and I will give you the good of the land of Egypt, and you will eat the fat of the land.'ನಿಮ್ಮ ತಂದೆಯನ್ನೂ ನಿಮ್ಮ ನಿಮ್ಮ ಮನೆಯವರನ್ನೂ ಕರಕೊಂಡು ನನ್ನ ಬಳಿಗೆ ಬನ್ನಿರಿ. ಐಗುಪ್ತದೇಶದ ಉತ್ತಮವಾದದ್ದನ್ನು ನಾನು ನಿಮಗೆ ಕೊಡುವೆನು. ಈ ದೇಶದ ಸಾರವನ್ನು ಊಟಮಾಡುವಿರಿ.

19 Now you are commanded: do this. Take wagons out of the land of Egypt for your little ones, and for your wives, and bring your father, and come.ಇದನ್ನು ಮಾಡುವಂತೆ ನಿಮಗೆ ಅಪ್ಪಣೆಯಾಯಿತು; ಐಗುಪ್ತದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ ಹೆಂಡತಿಯರಿಗಾಗಿಯೂ ಬಂಡಿ ಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯನ್ನು ಕರಕೊಂಡು ಬನ್ನಿರಿ.

20 Also, don't concern yourselves about your belongings, for the good of all of the land of Egypt is yours."ನಿಮ್ಮ ಸಾಮಾನುಗಳಿಗಾಗಿ ಚಿಂತಿಸಬೇಡಿರಿ; ಐಗುಪ್ತದೇಶದಲ್ಲಿರುವ ಉತ್ತಮ ವಾದದ್ದೆಲ್ಲಾ ನಿಮ್ಮದೇ ಎಂದು ಹೇಳು ಅಂದನು.

21 The sons of Israel did so. Joseph gave them wagons, according to the commandment of Pharaoh, and gave them provision for the way.ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ ಮಾರ್ಗಕ್ಕೋಸ್ಕರ ಆಹಾರ ವನ್ನೂ ಕೊಟ್ಟನು.

22 To all of them he gave each man changes of clothing, but to Benjamin he gave three hundred pieces of silver and five changes of clothing.ಅವರೆಲ್ಲರಿಗೆ ಒಂದೊಂದು ಜೊತೆ ವಸ್ತ್ರಗಳನ್ನೂ ಬೆನ್ಯಾವಿಾನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಐದು ಜೊತೆ ವಸ್ತ್ರಗಳನ್ನೂ ಕೊಟ್ಟನು.

23 To his father, he sent after this manner: ten donkeys loaded with the good things of Egypt, and ten female donkeys loaded with grain and bread and provision for his father by the way.ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಐಗುಪ್ತದ ಶೇಷ್ಠವಾದ ವುಗಳನ್ನೂ ಪ್ರಯಾಣಕ್ಕೋಸ್ಕರ ತನ್ನ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿರೊಟ್ಟಿ ಆಹಾರ ಗಳನ್ನೂ ಕಳುಹಿಸಿದನು.

24 So he sent his brothers away, and they departed. He said to them, "See that you don't quarrel on the way."ಅವನು ಅವರಿಗೆ--ಮಾರ್ಗದಲ್ಲಿ ಜಗಳವಾಡಬೇಡಿರಿ ಎಂದು ಅವರಿಗೆ ಹೇಳಿದ ಮೇಲೆ ಅವರು ಹೋದರು.

25 They went up out of Egypt, and came into the land of Canaan, to Jacob their father.ಅವರು ಐಗುಪ್ತದಿಂದ ಹೋರಟುಹೋಗಿ ಕಾನಾನಿನಲ್ಲಿದ್ದ ಅವರ ತಂದೆಯಾದ ಯಾಕೋಬನ ಬಳಿಗೆ ಬಂದು--

26 They told him, saying, "Joseph is still alive, and he is ruler over all the land of Egypt." His heart fainted, for he didn't believe them.ಯೋಸೇಫನು ಇನ್ನೂ ಜೀವದಿಂದ ಇದ್ದಾನೆ; ಅವನೇ ಐಗುಪ್ತದೇಶವನ್ನೆಲ್ಲಾ ಆಳುತಿದ್ದಾ ನೆಂದು ಅವನಿಗೆ ತಿಳಿಸಿದಾಗ ಅವನು ನಂಬದೆ ಇದ್ದದ್ದರಿಂದ ಹೃದಯವು ಕುಂದಿಹೋಯಿತು.

27 They told him all the words of Joseph, which he had said to them. When he saw the wagons which Joseph had sent to carry him, the spirit of Jacob, their father, revived.ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದ್ದಲ್ಲದೆ ಅವನನ್ನು ಕರಕೊಂಡು ಹೋಗುವದಕ್ಕೆ ಯೋಸೇಫನು ಕಳುಹಿಸಿದ ಬಂಡಿಗಳನ್ನು ಅವನು ನೋಡಿದಾಗ ಅವರ ತಂದೆಯಾದ ಯಾಕೋಬನ ಆತ್ಮವು ಉಜ್ಜೀ ವಿಸಿತು.

28 Israel said, "It is enough. Joseph my son is still alive. I will go and see him before I die."ಆಗ ಇಸ್ರಾಯೇಲನು--ನನ್ನ ಮಗನಾದ ಯೋಸೇಫನು ಇನ್ನೂ ಜೀವದಿಂದಿದ್ದಾನೆ, ಅದು ಸಾಕು; ನಾನು ಸಾಯುವದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುವೆನು ಅಂದನು.

Kannada Bible