Genesis 21 - ASV (Kannada)
1 And Jehovah visited Sarah as he had said, and Jehovah did unto Sarah as he had spoken.ಕರ್ತನು ತಾನು ಹೇಳಿದ ಹಾಗೆ ಸಾರಳನ್ನು ದರ್ಶಿಸಿ ತಾನು ಹೇಳಿದಂತೆ ಸಾರಳಿಗೆ ಮಾಡಿದನು.
2 And Sarah conceived, and bare Abraham a son in his old age, at the set time of which God had spoken to him.ದೇವರು ಅಬ್ರಹಾಮನಿಗೆ ಮುಂತಿ ಳಿಸಿದ ಹಾಗೆ ಸಾರಳು ಗರ್ಭಿಣಿಯಾಗಿ ಅವನು ಮುದುಕನಾಗಿದ್ದಾಗ ಅವನಿಗೆ ಮಗನನ್ನು ಹೆತ್ತಳು.
3 And Abraham called the name of his son that was born unto him, whom Sarah bare to him, Isaac.ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ ಇಸಾಕನೆಂದು ಹೆಸರಿಟ್ಟನು.
4 And Abraham circumcised his son Isaac when he was eight days old, as God had commanded him.ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿಮಾಡಿದನು.
5 And Abraham was a hundred years old, when his son Isaac was born unto him.ಅಬ್ರಹಾಮನ ಮಗನಾದ ಇಸಾಕನು ಅವನಿಗೆ ಹುಟ್ಟಿದಾಗ ಅವನು ನೂರು ವರುಷದವನಾಗಿದ್ದನು.
6 And Sarah said, God hath made me to laugh. Every one that heareth will laugh with me.ಆಗ ಸಾರಳು--ದೇವರು ನನ್ನನ್ನು ನಗುವಂತೆ ಮಾಡಿದ್ದಾನೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು ಎಂದು ಹೇಳಿ--
7 And she said, Who would have said unto Abraham, that Sarah should give children suck? For I have borne him a son in his old age.ಸಾರಳು ಮಕ್ಕಳಿಗೆ ಮೊಲೆ ಕುಡಿಸುವಳೆಂದು ಅಬ್ರಹಾಮನಿಗೆ ಯಾರಾ ದರೂ ಹೇಳುತ್ತಿದ್ದರೋ? ಆದರೂ ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು ಅಂದಳು.
8 And the child grew, and was weaned. And Abraham made a great feast on the day that Isaac was weaned.ಆ ಮಗುವು ಬೆಳೆದು ಮೊಲೆ ಬಿಟ್ಟಿತು; ಇಸಾಕನನ್ನು ಮೊಲೆ ಬಿಡಿಸಿದ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.
9 And Sarah saw the son of Hagar the Egyptian, whom she had borne unto Abraham, mocking.ಇದಲ್ಲದೆ ಐಗುಪ್ತ್ಯ ಳಾದ ಹಾಗರಳು ಅಬ್ರಹಾಮನಿಗೆ ಹೆತ್ತಿದ್ದ ಮಗನು ಹಾಸ್ಯಮಾಡುವದನ್ನು ಸಾರಳು ನೋಡಿ
10 Wherefore she said unto Abraham, Cast out this handmaid and her son. For the son of this handmaid shall not be heir with my son, even with Isaac.ಅಬ್ರ ಹಾಮನಿಗೆ--ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನ ಸಂಗಡ ಬಾಧ್ಯನಾಗಬಾರದು ಅಂದಳು.
11 And the thing was very grievous in Abraham's sight on account of his son.ಈ ಮಾತು ಅಬ್ರಹಾಮನಿಗೆ ಅವನ ಮಗನ ದೆಸೆಯಿಂದ ಬಹು ದುಃಖಕರವಾಗಿ ತೋಚಿತು.
12 And God said unto Abraham, Let it not be grievous in thy sight because of the lad, and because of thy handmaid. In all that Sarah saith unto thee, hearken unto her voice. For in Isaac shall thy seed be called.ಆಗ ದೇವರು ಅಬ್ರಹಾಮನಿಗೆ--ಹುಡುಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗದೆ ಇರಲಿ; ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು; ಯಾಕಂದರೆ ಇಸಾಕನಲ್ಲಿ ನಿನ್ನ ಸಂತತಿಯು ಕರೆಯಲ್ಪ ಡುವದು.
13 And also of the son of the handmaid will I make a nation, because he is thy seed.ದಾಸಿಯ ಮಗನು ಸಹ ನಿನ್ನ ಸಂತಾನವಾಗಿರುವದರಿಂದ ಅವನನ್ನು ನಾನು ಜನಾಂಗ ವಾಗ ಮಾಡುವೆನು ಅಂದನು.
14 And Abraham rose up early in the morning, and took bread and a bottle of water, and gave it unto Hagar, putting it on her shoulder, and `gave her' the child, and sent her away. And she departed, and wandered in the wilderness of Beer-sheba.ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಕಾಡಿನಲ್ಲಿ ಅಲೆದಾಡುವವ ಳಾದಳು.
15 And the water in the bottle was spent, and she cast the child under one of the shrubs.ತಿತ್ತಿಯೊಳಗಿನ ನೀರು ಮುಗಿದಾಗ ಆಕೆಯು ಮಗುವನ್ನು ಗಿಡಗಳಲ್ಲಿ ಒಂದರ ಕೆಳಗೆ ಮಲಗಿಸಿ
16 And she went, and sat her down over against him a good way off, as it were a bowshot. For she said, Let me not look upon the death of the child. And she sat over against him, and lifted up her voice, and wept.ಬಿಲ್ಲೆಸೆಯುವಷ್ಟು ದೂರ ಹೋಗಿ ಅವನಿಗೆ ಎದುರಾಗಿ ಕೂತುಕೊಂಡು--ಮಗುವಿನ ಸಾವನ್ನು ನಾನು ನೋಡಲಾರೆನು ಎಂದು ಹೇಳಿ ಆಕೆಯು ತನ್ನ ಸ್ವರವೆತ್ತಿ ಅತ್ತಳು.
17 And God heard the voice of the lad. And the angel of God called to Hagar out of heaven, and said unto her, What aileth thee, Hagar? Fear not. For God hath heard the voice of the lad where he is.ಆಗ ದೇವರು ಆ ಹುಡುಗನ ಸ್ವರವನ್ನು ಕೇಳಿದನು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು ಆಕೆಗೆ--ಹಾಗರಳೇ, ನಿನ್ನ ವ್ಯಥೆಯೇನು? ಅಂಜಬೇಡ; ದೇವರು ಹುಡುಗನ ಸ್ವರವನ್ನು ಅವನು ಇದ್ದಲ್ಲಿಂದ ಕೇಳಿದ್ದಾನೆ.
18 Arise, lift up the lad, and hold him in thy hand. For I will make him a great nation.ಎದ್ದು ಹುಡುಗನನ್ನು ಎತ್ತಿಕೊಂಡು ಅವನನ್ನು ನಿನ್ನ ಕೈಯಲ್ಲಿ ತಕ್ಕೋ; ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು ಅಂದನು.
19 And God opened her eyes, and she saw a well of water. And she went, and filled the bottle with water, and gave the lad drink.ಆಗ ದೇವರು ಆಕೆಯ ಕಣ್ಣುಗಳನ್ನು ತೆರೆದನು; ಆಕೆಯು ನೀರಿನ ಬಾವಿಯನ್ನು ನೋಡಿ ತಿತ್ತಿಯಲ್ಲಿ ನೀರನ್ನು ತುಂಬಿಸಿ ಹುಡುಗನಿಗೆ ಕುಡಿಯಲು ಕೊಟ್ಟಳು.
20 And God was with the lad, and he grew. And he dwelt in the wilderness, and became, as he grew up, an archer.ದೇವರು ಆ ಹುಡುಗನ ಸಂಗಡ ಇದ್ದನು. ಅವನು ಬೆಳೆದು ಅರಣ್ಯದಲ್ಲಿ ವಾಸಮಾಡಿ ಬಿಲ್ಲುಗಾರ ನಾದನು.
21 And he dwelt in the wilderness of Paran. And his mother took him a wife out of the land of Egypt.ಅವನು ಪಾರಾನಿನ ಅರಣ್ಯದಲ್ಲಿ ವಾಸಮಾಡಿದನು. ಅವನ ತಾಯಿಯು ಅವನಿಗೋಸ್ಕರ ಐಗುಪ್ತದೇಶದಿಂದ ಹೆಂಡತಿಯನ್ನು ತಕ್ಕೊಂಡಳು.
22 And it came to pass at that time, that Abimelech and Phicol the captain of his host spake unto Abraham, saying, God is with thee in all that thou doest.ಆ ಕಾಲದಲ್ಲಿ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮ ನಿಗೆ--ನೀನು ಮಾಡುವದೆಲ್ಲದರಲ್ಲಿ ದೇವರು ನಿನ್ನ ಸಂಗಡ ಇದ್ದಾನೆ.
23 Now therefore swear unto me here by God that thou wilt not deal falsely with me, nor with my son, nor with my son's son. But according to the kindness that I have done unto thee, thou shalt do unto me, and to the land wherein thou hast sojourned.ಆದದರಿಂದ ನನಗೂ ನನ್ನ ಮಗನಿಗೂ ನನ್ನ ಮೊಮ್ಮಗನಿಗೂ ವಂಚನೆಮಾಡುವ ದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣ ಮಾಡು. ನಾನು ನಿನಗೆ ಮಾಡಿದ ಪ್ರಕಾರ ನೀನು ನನಗೂ ನೀನು ಪ್ರವಾಸವಾಗಿರುವ ದೇಶಕ್ಕೂ ಮಾಡ ಬೇಕು ಅಂದನು.
24 And Abraham said, I will swear.ಅದಕ್ಕೆ ಅಬ್ರಹಾಮನು-- ನಾನು ಪ್ರಮಾಣಮಾಡುತ್ತೇನೆ ಅಂದನು.
25 And Abraham reproved Abimelech because of the well of water, which Abimelech's servants had violently taken away.ಅಬೀ ಮೆಲೆಕನ ಸೇವಕರು ಬಲಾತ್ಕಾರದಿಂದ ತಕ್ಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನನ್ನು ಗದರಿಸಿದಾಗ
26 And Abimelech said, I know not who hath done this thing. Neither didst thou tell me, neither yet heard I of it, but to-day.ಅಬೀಮೆಲೆಕನು--ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆನು; ನೀನೂ ನನಗೆ ತಿಳಿಸಲಿಲ್ಲ; ನಾನು ಇಂದಿನ ವರೆಗೆ ಅದನ್ನು ಕೇಳಲೂ ಇಲ್ಲ ಅಂದನು.
27 And Abraham took sheep and oxen, and gave them unto Abimelech. And they two made a covenant.ಆಗ ಅಬ್ರಹಾಮನು ಕುರಿಎತ್ತುಗಳನ್ನು ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು; ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.
28 And Abraham set seven ewe lambs of the flock by themselves.ಅಬ್ರಹಾಮನು ಹಿಂಡಿನ ಏಳು ಹೆಣ್ಣು ಕುರಿಮರಿಗಳನ್ನು ಬೇರೆಮಾಡಿ ನಿಲ್ಲಿಸಿದನು.
29 And Abimelech said unto Abraham, What mean these seven ewe lambs which thou hast set by themselves?ಅಬೀಮೆಲೆಕನು ಅಬ್ರಹಾಮನಿಗೆ--ನೀನು ಯಾಕೆ ಈ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ನಿಲ್ಲಿಸಿದ್ದೀ ಅಂದನು.
30 And he said, These seven ewe lambs shalt thou take of my hand, that it may be a witness unto me, that I have digged this well.ಅದಕ್ಕೆ ಅಬ್ರಹಾಮನುನಾನೇ ಈ ಬಾವಿಯನ್ನು ತೊಡಿಸಿದ್ದೇನೆಂಬದಕ್ಕೆ ಸಾಕ್ಷಿಗಾಗಿ ಈ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು ಅಂದನು.
31 Wherefore he called that place Beer-sheba. Because there they sware both of them.ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅವನು ಹೆಸರಿಟ್ಟನು.
32 So they made a covenant at Beer-sheba. And Abimelech rose up, and Phicol the captain of his host, and they returned into the land of the Philistines.ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿ ಪತಿಯಾದ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
33 And `Abraham' planted a tamarisk tree in Beer-sheba, and called there on the name of Jehovah, the Everlasting God.ಆಗ ಅಬ್ರಹಾಮನು ಬೇರ್ಷೆಬದಲ್ಲಿ ತೋಪನ್ನು ನೆಟ್ಟು (ಪಿಚುಲ ವೃಕ್ಷ) ನಿತ್ಯದೇವರಾದ ಕರ್ತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
34 And Abraham sojourned in the land of the Philistines many days.ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹು ದಿವಸ ಪ್ರವಾಸಿಯಾಗಿದ್ದನು.
Kannada Bible