Genesis 18 - WEB (Kannada)
1 Yahweh appeared to him by the oaks of Mamre, as he sat in the tent door in the heat of the day.ಕರ್ತನು ಮಮ್ರೇಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡನು. ಅವನು ಮಧ್ಯಾಹ್ನದ ವೇಳೆ ಗುಡಾರದ ಬಾಗಲಿನಲ್ಲಿ ಕೂತುಕೊಂಡಿದ್ದನು.
2 He lifted up his eyes and looked, and saw that three men stood opposite him. When he saw them, he ran to meet them from the tent door, and bowed himself to the earth,ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು ಅಗೋ, ಮೂವರು ಪುರುಷರು ಅವನ ಪಕ್ಕದಲ್ಲಿ ನಿಂತಿದ್ದರು. ಅವನು ಅವರನ್ನು ನೋಡಿ ಅವರಿಗೆ ಎದುರಾಗಿ ಗುಡಾರದ ಬಾಗಲಿನಿಂದ ಓಡಿಬಂದು ನೆಲದ ವರೆಗೂ ಬೊಗ್ಗಿ--
3 and said, "My lord, if now I have found favor in your sight, please don't go away from your servant.ನನ್ನ ಕರ್ತನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರೆತಿದ್ದರೆ ನಿನ್ನ ದಾಸನ ಬಳಿಯಿಂದ ಹೊರಟುಹೋಗಬೇಡ.
4 Now let a little water be fetched, wash your feet, and rest yourselves under the tree.ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ: ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ.
5 I will get a morsel of bread so you can refresh your heart. After that you may go your way, now that you have come to your servant." They said, "Very well, do as you have said."ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.
6 Abraham hurried into the tent to Sarah, and said, "Quickly make ready three measures of fine meal, knead it, and make cakes."ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ--ತ್ವರೆಪಟ್ಟು ಮೂರು ಸೇರು ನಯವಾದ ಹಿಟ್ಟು ನಾದಿ ಒಲೆಯ ಮೇಲೆ ರೊಟ್ಟಿಗಳನ್ನು ಮಾಡು ಅಂದನು.
7 Abraham ran to the herd, and fetched a tender and good calf, and gave it to the servant. He hurried to dress it.ಅಬ್ರಹಾ ಮನು ದನದ ಮಂದೆಯ ಬಳಿಗೆ ಓಡಿಹೋಗಿ ಎಳೇದಾದ ಒಳ್ಳೇ ಕರುವನ್ನು ತೆಗೆದುಕೊಂಡು ಒಬ್ಬ ಯೌವನಸ್ಥನಿಗೆ ಕೊಟ್ಟಾಗ ಅವನು ಅದನ್ನು ಸಿದ್ಧಮಾಡುವದಕ್ಕೆ ತ್ವರೆಪಟ್ಟನು.
8 He took butter, milk, and the calf which he had dressed, and set it before them. He stood by them under the tree, and they ate.ತರುವಾಯ ಬೆಣ್ಣೆಯನ್ನೂ ಹಾಲನ್ನೂ ಪಕ್ವಮಾಡಿದ ಕರುವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು; ಅವನು ಮರದ ಕೆಳಗೆ ಅವರ ಬಳಿಯಲ್ಲಿ ನಿಂತುಕೊಂಡನು; ಅವರು ಊಟಮಾಡಿದರು.
9 They said to him, "Where is Sarah, your wife? He said, "See, in the tent."ಆಗ ಅವರು ಅವನಿಗೆ--ನಿನ್ನ ಹೆಂಡತಿಯಾದ ಸಾರಳು ಎಲ್ಲಿ ಎಂದು ಅವನನ್ನು ಕೇಳಲು ಅವನು-- ಇಗೋ, ಗುಡಾರದಲ್ಲಿದ್ದಾಳೆ ಅಂದನು.
10 He said, "I will certainly return to you when the season comes round. Behold, Sarah your wife will have a son." Sarah heard in the tent door, which was behind him.ಆಗ ಆತನು--ಬರುವ ವರುಷ ಇದೇ ಸಮಯಕ್ಕೆ ನಿಶ್ಚಯ ವಾಗಿ ತಿರಿಗಿ ನಿನ್ನ ಬಳಿಗೆ ಬರುತ್ತೇನೆ. ಆಗ ಇಗೋ, ನಿನ್ನ ಹೆಂಡತಿಯಾದ ಸಾರಳಿಗೆ ಮಗನು ಇರುವನು ಅಂದನು. ಸಾರಳು ಆತನ ಹಿಂದೆ ಇದ್ದ ಗುಡಾರದ ಬಾಗಲಲ್ಲಿದ್ದು ಅದನ್ನು ಕೇಳಿಸಿಕೊಂಡಳು.
11 Now Abraham and Sarah were old, well advanced in age. It had ceased to be with Sarah after the manner of women.ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು.
12 Sarah laughed within herself, saying, "After I have grown old will I have pleasure, my lord being old also?"ಆದದರಿಂದ ಸಾರಳು ತನ್ನೊಳಗೆ ನಕ್ಕು--ನಾನು ವೃದ್ಧಳಾಗಿದ್ದೇನೆ. ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರು ವಲ್ಲಿ ನನಗೆ ಸಂತೋಷವಾದೀತೇ? ಅಂದಳು.
13 Yahweh said to Abraham, "Why did Sarah laugh, saying, 'Will I really bear a child, yet I am old?'ಆಗ ಕರ್ತನು ಅಬ್ರಹಾಮನಿಗೆ--ನಾನು ಮುದಿಪ್ರಾಯದ ವಳಾಗಿ ಮಗುವನ್ನು ಹೆರುವದು ನಿಜವೋ ಎಂದು ಅಂದುಕೊಂಡು ಯಾಕೆ ಸಾರಳು ನಕ್ಕಳು?
14 Is anything too hard for Yahweh? At the set time I will return to you, when the season comes round, and Sarah will have a son."ಕರ್ತನಿಗೆ ಅಸಾಧ್ಯವಾದದ್ದು ಯಾವದಾದರೂ ಇದೆಯೋ? ಬರುವ ವರುಷ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ತಿರಿಗಿ ಬರುವೆನು; ಆಗ ಸಾರಳಿಗೆ ಮಗನು ಇರುವನು ಅಂದನು.
15 Then Sarah denied, saying, "I didn't laugh," for she was afraid." He said, "No, but you did laugh."ಆದರೆ ಸಾರಳು ಭಯ ಪಟ್ಟು--ನಾನು ನಗಲಿಲ್ಲ ಎಂದು ಹೇಳಿ ಬೊಂಕಿದಾಗ ಆತನು--ಹಾಗಲ್ಲ, ನೀನು ನಕ್ಕದ್ದುಂಟು ಅಂದನು.
16 The men rose up from there, and looked toward Sodom. Abraham went with them to see them on their way.ತರುವಾಯ ಆ ಮನುಷ್ಯರು ಎದ್ದು ಅಲ್ಲಿಂದ ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಸಾಗಕಳುಹಿಸುವದಕ್ಕೆ ಅವರ ಸಂಗಡ ಹೋದನು.
17 Yahweh said, "Will I hide from Abraham what I do,ಆಗ ಕರ್ತನು--ನಾನು ಮಾಡುವದನ್ನು ಅಬ್ರಹಾಮನಿಗೆ ಮರೆಮಾಡಲೋ?
18 seeing that Abraham has surely become a great and mighty nation, and all the nations of the earth will be blessed in him?ಅಬ್ರಹಾ ಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗ ವಾಗುವನು, ಭೂಲೋಕದ ಜನಾಂಗಗಳೆಲ್ಲಾ ಅವನಲ್ಲಿ ಆಶೀರ್ವದಿಸಲ್ಪಡುವವು.
19 For I have known him, to the end that he may command his children and his household after him, that they may keep the way of Yahweh, to do righteousness and justice; to the end that Yahweh may bring on Abraham that which he has spoken of him."ಕರ್ತನು ಅಬ್ರಹಾಮ ನಿಗೆ ಹೇಳಿದ್ದು ನೆರವೇರುವಂತೆ ಅವನು ತನ್ನ ಮಕ್ಕಳಿಗೂ ತರುವಾಯ ಅವನ ಮನೆಯವರಿಗೂ ಆತನ ಮಾರ್ಗವನ್ನು ಕೈಕೊಂಡು ನೀತಿನ್ಯಾಯಗಳನ್ನು ಅನುಸರಿಸಬೇಕೆಂದು ಅಪ್ಪಣೆಕೊಡುವನು ಎಂದು ನನಗೆ ತಿಳಿದದೆ ಎಂದು ಅಂದುಕೊಂಡನು.
20 Yahweh said, "Because the cry of Sodom and Gomorrah is great, and because their sin is very grievous,ಕರ್ತನು--ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ
21 I will go down now, and see whether they have done altogether according to the cry of it, which is come to me. If not, I will know."ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಅದರ ಕೂಗಿನ ಪ್ರಕಾರವೇ ಅವರು ಮಾಡಿದ್ದಾರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುವೆನು ಅಂದನು.
22 The men turned from there, and went toward Sodom, but Abraham stood yet before Yahweh.ಆ ಮನುಷ್ಯರು ಅಲ್ಲಿಂದ ತಮ್ಮ ಮುಖಗಳನ್ನು ತಿರುಗಿಸಿಕೊಂಡು ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಇನ್ನೂ ಕರ್ತನ ಮುಂದೆ ನಿಂತುಕೊಂಡಿದ್ದನು.
23 Abraham drew near, and said, "Will you consume the righteous with the wicked?ಆಗ ಅಬ್ರಹಾಮನು ಹತ್ತಿರ ಬಂದು--ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡು ವಿಯಾ?
24 What if there are fifty righteous within the city? Will you consume and not spare the place for the fifty righteous who are therein?ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯೋ?
25 Be it far from you to do things like that, to kill the righteous with the wicked, that so the righteous should be as the wicked. May that be far from you. Shouldn't the Judge of all the earth do right?"ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.
26 Yahweh said, "If I find in Sodom fifty righteous within the city, then I will spare all the place for their sake."ಅದಕ್ಕೆ ಕರ್ತನು--ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ ಅವರಿಗೊಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು ಅಂದನು.
27 Abraham answered, "See now, I have taken it on myself to speak to the Lord, who am but dust and ashes.ಆಗ ಅಬ್ರಹಾಮನು--ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಕರ್ತನ ಸಂಗಡ ಮಾತನಾಡುವದಕ್ಕೆ ಮುಂಗೊಂಡಿದ್ದೇನೆ.
28 What if there will lack five of the fifty righteous? Will you destroy all the city for lack of five?" He said, "I will not destroy it, if I find forty-five there."ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಕಡಿಮೆ ಇದ್ದರೆ ಆ ಐದು ಮಂದಿ ಇಲ್ಲದ್ದರಿಂದ ಆ ಪಟ್ಟಣವನ್ನು ನಾಶಮಾಡುವಿಯೋ ಎಂದು ಪ್ರತ್ಯುತ್ತರವಾಗಿ ಅಂದನು. ಆದಕ್ಕೆ ಆತನು--ನಾಲ್ವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವದಿಲ್ಲ ಅಂದನು.
29 He spoke to him yet again, and said, "What if there are forty found there?" He said, "I will not do it for the forty's sake."ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ--ಒಂದು ವೇಳೆ ಅಲ್ಲಿ ನಾಲ್ವತ್ತು ಮಂದಿ ಸಿಕ್ಕಾರು ಅಂದನು. ಅದಕ್ಕೆ ಆತನು--ನಾಲ್ವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವದಿಲ್ಲ ಅಂದನು.
30 He said, "Oh don't let the Lord be angry, and I will speak. What if there are thirty found there?" He said, "I will not do it, if I find thirty there."ಅವನು-- ಕರ್ತನಿಗೆ ಕೋಪಬಾರದೆ ಇರಲಿ; ನಾನು ಮಾತನಾ ಡುತ್ತೇನೆ--ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಸಿಕ್ಕಾರು ಅಂದಾಗ ಆತನು--ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ನಾಶಮಾಡುವದಿಲ್ಲ ಅಂದನು.
31 He said, "See now, I have taken it on myself to speak to the Lord. What if there are twenty found there?" He said, "I will not destroy it for the twenty's sake."ಅವನು--ಇಗೋ, ಕರ್ತನ ಸಂಗಡ ಮಾತನಾಡು ವದಕ್ಕೆ ಮುಂಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು ಅಂದಾಗ ಆತನು-- ಆ ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವದಿಲ್ಲ ಅಂದನು.
32 He said, "Oh don't let the Lord be angry, and I will speak yet but this once. What if ten are found there?" He said, "I will not destroy it for the ten's sake."ಅವನು--ಹಾ, ಕರ್ತನೇ, ನಿನಗೆ ಕೋಪಬಾರದೆ ಇರಲಿ; ಇನ್ನು ಒಂದೇ ಸಾರಿ ಮಾತನಾಡುತ್ತೇನೆ--ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಾರು ಅಂದಾಗ ಆತನು--ಹತ್ತು ಮಂದಿಗೋಸ್ಕರ ನಾಶಮಾಡೆನು ಅಂದನು.
33 Yahweh went his way, as soon as he had finished communing with Abraham, and Abraham returned to his place.ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.
Kannada Bible