Ezekiel 27 - WEB (Kannada)
1 The word of Yahweh came again to me, saying,ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2 You, son of man, take up a lamentation over Tyre;ಮನುಷ್ಯಪುತ್ರನೇ, ಈಗ ತೂರಿನ ಬಗ್ಗೆ ನೀನು ಗೋಳಾಟವನ್ನೆತ್ತು;
3 and tell Tyre, you who dwell at the entry of the sea, who are the merchant of the peoples to many isles, thus says the Lord Yahweh: You, Tyre, have said, I am perfect in beauty.ತೂರಿಗೆ ಹೇಳು--ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳಿಗೆ ಜನರ ವ್ಯಾಪಾರವನ್ನು ನಡಿಸುವ ವಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಓ ತೂರೇ, ನಾನು ಪೂರ್ಣ ಸೌಂದರ್ಯವಂತಳೆಂದು ನೀನು ಹೇಳಿದ್ದೀ.
4 Your borders are in the heart of the seas; your builders have perfected your beauty.ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ, ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯ ವನ್ನು ಸಂಪೂರ್ಣಪಡಿಸಿದ್ದಾರೆ.
5 They have made all your planks of fir trees from Senir; they have taken a cedar from Lebanon to make a mast for you.ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿ ದ್ದಾರೆ, ನಿನಗೆ ಪಠಸ್ತಂಭಗಳನ್ನು ಮಾಡುವದಕ್ಕೆ ಲೆಬ ನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
6 Of the oaks of Bashan have they made your oars; they have made your benches of ivory inlaid in boxwood, from the isles of Kittim.ನಿನ್ನ ಹುಟ್ಟು ಗೋಲನ್ನು ಬಾಷಾನಿನ ಓಕ್ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಯರ ದ್ವೀಪಗಳಿಂದ ತಂದ ದಂತದ ಹಲಗೆಗಳಿಂದ ಅಶ್ಶೂರ್ಯರ ಗುಂಪಿನವರು ಕೆತ್ತಿದ್ದಾರೆ.
7 Of fine linen with embroidered work from Egypt was your sail, that it might be to you for an ensign; blue and purple from the isles of Elishah was your awning.ನಿನ್ನ ಹಾಯಿಯು ನಿನಗೆ ಧ್ವಜವು ಆಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರುಬಟ್ಟೆಯಿಂದ ಮಾಡಿ ದ್ದಾರೆ. ಎಲೀಷದ ದ್ವೀಪಗಳಿಂದ ತಂದ ನೀಲಿಯೂ ನೇರಳೆ ಬಣ್ಣವೂ ನಿನಗೆ ಮುಚ್ಚಳವಾಯಿತು.
8 The inhabitants of Sidon and Arvad were your rowers: your wise men, Tyre, were in you, they were your pilots.ಚೀದೋ ನಿನ ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವ ವರಾಗಿದ್ದಾರೆ; ತೂರೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.
9 The old men of Gebal and the wise men of it were in you your repairers of ship seams: all the ships of the sea with their mariners were in you to deal in your merchandise.ಗೆಬಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸು ತ್ತಿದ್ದವು.
10 Persia and Lud and Put were in your army, your men of war: they hanged the shield and helmet in you; they set forth your comeliness.ಪಾರಸೀಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು; ಗುರಾಣಿ ಯನ್ನೂ ಶಿರಸ್ತ್ರಾಣವನ್ನೂ ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
11 The men of Arvad with your army were on your walls round about, and valorous men were in your towers; they hanged their shields on your walls round about; they have perfected your beauty.ಅರ್ವಾದಿನವರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಮೇಲೆ ಇದ್ದರು; ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತ ಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪೂರ್ತಿಗೊಳಿಸಿದರು.
12 Tarshish was your merchant by reason of the multitude of all kinds of riches; with silver, iron, tin, and lead, they traded for your wares.ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ, ಸೀಸಗಳಿಂದ ನಿನ್ನ ಸಂತೆಗಳಲ್ಲಿ ವ್ಯಾಪಾರ ಮಾಡಿದರು; ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು.
13 Javan, Tubal, and Meshech, they were your traffickers; they traded the persons of men and vessels of brass for your merchandise.ಯಾವಾನ್, ತೂಬಲ್, ಮೇಷೆಕ್ ಇವರು ನಿನ್ನ ವರ್ತಕರಾಗಿದ್ದರು; ಮನುಷ್ಯರ ಪ್ರಾಣಗಳಿಂದಲೂ (ವ್ಯಕ್ತಿ) ಹಿತ್ತಾಳೆಯ ಪಾತ್ರೆ ಗಳಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡಿಸಿದರು.
14 They of the house of Togarmah traded for your wares with horses and war-horses and mules.ತೋಗರ್ಮದ ಮನೆತನದವರು ಕುದುರೆಗಳಿಂ ದಲೂ ಕುದುರೆ ಸವಾರಿಗಳಿಂದಲೂ ಹೇಸರ ಕತ್ತೆ ಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡಿಸಿದರು.
15 The men of Dedan were your traffickers; many isles were the market of your hand: they brought you in exchange horns of ivory and ebony.ದೇದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು.
16 Syria was your merchant by reason of the multitude of your handiworks: they traded for your wares with emeralds, purple, and embroidered work, and fine linen, and coral, and rubies.ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದದರಿಂದ ಅರಾಮಿನವರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
17 Judah, and the land of Israel, they were your traffickers: they traded for your merchandise wheat of Minnith, and confections, and honey, and oil, and balm.ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಕಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧ ತೈಲ ದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು.
18 Damascus was your merchant for the multitude of your handiworks, by reason of the multitude of all kinds of riches, with the wine of Helbon, and white wool.ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿ ದ್ದದರಿಂದಲೂ ಅಪರಿಮಿತವಾದ ಬಗೆ ಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದರಿಂದಲೂ
19 Vedan and Javan traded with yarn for your wares: bright iron, cassia, and calamus, were among your merchandise.ದಾನ್ ಮತ್ತು ಯಾವಾನ್ ಸಹ ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಸಂತೆಯಲ್ಲಿ ಇದ್ದವು.
20 Dedan was your trafficker in precious cloths for riding.ದೇದಾನು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.
21 Arabia, and all the princes of Kedar, they were the merchants of your hand; in lambs, and rams, and goats, in these were they your merchants.ಅರಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ವ್ಯಾಪಾರಿಗಳಾಗಿದ್ದರು; ಕುರಿಮರಿಗಳಿಂದಲೂ ಟಗರುಗಳಿಂದಲೂ ಹೋತಗ ಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು.
22 The traffickers of Sheba and Raamah, they were your traffickers; they traded for your wares with the chief of all spices, and with all precious stones, and gold.ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
23 Haran and Canneh and Eden, the traffickers of Sheba, Asshur [and] Chilmad, were your traffickers.ಹಾರಾನ್, ಕನ್ನೆ, ಏದೆನ್, ಶೆಬ, ಅಶ್ಶೂರ್ ಮತ್ತು ಕಿಲ್ಮದ್‌ವರು ನಿನ್ನ ವ್ಯಾಪಾರಿಗಳಾಗಿದ್ದರು.
24 These were your traffickers in choice wares, in wrappings of blue and embroidered work, and in chests of rich clothing, bound with cords and made of cedar, among your merchandise.ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಅಂದರೆ ನೀಲಿಬಟ್ಟೆಗಳು, ಕಸೂತಿಯ ಕೆಲಸ ದೇವ ದಾರುವಿನಿಂದ ಮಾಡಿ ಹಗ್ಗಗಳಿಂದ ಕಟ್ಟಿದಂತ, ರೇಷ್ಮೆ ತುಂಬಿಸಿದ ಪೆಟ್ಟಿಗೆಗಳನ್ನು ತಂದು ನಿನ್ನ ಪಟ್ಟಣಗಳಲ್ಲಿ ವರ್ತಕರಾಗಿದ್ದರು.
25 The ships of Tarshish were your caravans for your merchandise: and you were replenished, and made very glorious in the heart of the seas.ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಯಲ್ಲಿ ಸರಕುಗಳನ್ನು ತರುತ್ತಿದ್ದವು; ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದಿ.
26 Your rowers have brought you into great waters: the east wind has broken you in the heart of the seas.ಹುಟ್ಟುಹಾಕುವವರು ನಿನ್ನನ್ನು (ಮಹಾತರಂಗ ಗಳಿಗೆ) ಸಿಕ್ಕಿಸಿದ್ದಾರೆ. ಮೂಡಣ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
27 Your riches, and your wares, your merchandise, your mariners, and your pilots, your repairers of ship seams, and the dealers in your merchandise, and all your men of war, who are in you, with all your company which is in the midst of you, shall fall into the heart of the seas in the day of your ruin.ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಾವಿಕರೂ ಅಂಬಿಗರೂ ಒಡಕುಗಳನ್ನು ಮುಚ್ಚುವವರೂ ವ್ಯಾಪಾರಿ ಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.
28 At the sound of the cry of your pilots the suburbs shall shake.ನಿನ್ನ ನಾವಿಕರ ಕಿರಿಚಾಟಕ್ಕೆ ಉಪ ನಗರಗಳು, ಪ್ರದೇಶಗಳು, ನಡುಗುವವು.
29 All who handled the oar, the mariners, [and] all the pilots of the sea, shall come down from their ships; they shall stand on the land,ಹುಟ್ಟು ಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,
30 and shall cause their voice to be heard over you, and shall cry bitterly, and shall cast up dust on their heads, they shall wallow themselves in the ashes:ನಿನ್ನ ನಿಮಿತ್ತ ದುಃಖದಿಂದ ಅರಚಿ ತಲೆಗೆ ದೂಳೆರೆಚಿಕೊಂಡು ಬೂದಿಯಲ್ಲಿ ಬಿದ್ದು ಹೊರಳಾಡಿ;
31 and they shall make themselves bald for you, and gird them with sackcloth, and they shall weep for you in bitterness of soul with bitter mourning.ನಿನಗಾಗಿ ತಲೆಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆ ಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
32 In their wailing they shall take up a lamentation for you, and lament over you, [saying], Who is there like Tyre, like her who is brought to silence in the midst of the sea?ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು--ಸಮುದ್ರದ ನಡುವೆ ಹಾಳಾಗಿರುವ ತೂರಿನಂತ ಪಟ್ಟಣ ಯಾವದು?
33 When your wares went forth out of the seas, you filled many peoples; you did enrich the kings of the earth with the multitude of your riches and of your merchandise.ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ; ಅವುಗಳಿಂದ ಬಹು ಜನಾಂಗ ಗಳನ್ನು ತುಂಬಿಸಿದೆ; ನಿನ್ನ ಅಪಾರವಾದ ಐಶ್ವರ್ಯ ದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜ ರನ್ನು ಸಮೃದ್ಧಿಪಡಿಸಿದೆ.
34 In the time that you were broken by the seas in the depths of the waters, your merchandise and all your company did fall in the midst of you.ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಅಗಾಧ ಜಲದಲ್ಲಿ ಮುಳುಗಿ ಹೋದರು.
35 All the inhabitants of the isles are astonished at you, and their kings are horribly afraid; they are troubled in their face.ದ್ವೀಪದ ನಿವಾಸಿಗಳೆಲ್ಲಾ ನಿನ್ನ ಸ್ಥಿತಿಗೆ ಬೆಚ್ಚಿ ವಿಸ್ಮಯರಾಗಿದ್ದಾರೆ. ಅರಸರು ಬಹಳ ವಾಗಿ ಭಯಪಟ್ಟಿದ್ದಾರೆ. ರಾಜರುಗಳು ನಡುಗಿ ಭೀತಿ ಗೊಂಡರು.
36 The merchants among the peoples hiss at you; you are become a terror, and you shall nevermore have any being.ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸಿಳ್ಳುಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸ ವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.
Kannada Bible