Exodus 37 - YLT (Kannada)
1 And Bezaleel maketh the ark of shittim wood, two cubits and a half its length, and a cubit and a half its breadth, and a cubit and a half its height;ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
2 and he overlayeth it with pure gold within and without, and maketh for it a wreath of gold round about;ಅದನ್ನು ಚೊಕ್ಕ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ ಅದರ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.
3 and he casteth for it four rings of gold, on its four feet, even two rings on its one side, and two rings on its second side;ಅವನು ಅದರ ನಾಲ್ಕು ಮೂಲೆಗಳಿಗೆ ನಾಲ್ಕು ಉಂಗುರಗಳನ್ನು ಎರಕ ಹೊಯ್ದನು; ಇದಲ್ಲದೆ ಅದರ ಒಂದು ಮಗ್ಗಲಿಗೆ ಎರಡು ಇನ್ನೊಂದು ಮಗ್ಗಲಿಗೆ ಎರಡು ಉಂಗುರಗಳನ್ನು ಎರಕ ಹೊಯ್ದನು.
4 and he maketh staves of shittim wood, and overlayeth them with gold,ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿ ಸಿದನು.
5 and he bringeth in the staves into the rings, by the sides of the ark, to bear the ark.ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು.
6 And he maketh a mercy-seat of pure gold, two cubits and a half its length, and a cubit and a half its breadth;ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು.
7 and he maketh two cherubs of gold, of beaten work he hath made them, at the two ends of the mercy-seat;ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಚಿನ್ನದ ಕೆರೂಬಿಗಳನ್ನು ಮಾಡಿದನು. ಅವು ಒಂದೇ ತುಂಡಿನಲ್ಲಿ ಹೊಡೆದು ಮಾಡಿದ್ದಾಗಿದ್ದವು.
8 one cherub at the end on this `side', and one cherub at the end on that, out of the mercy-seat he hath made the cherubs, at its two ends;ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನು ಇನ್ನೊಂದು ಬದಿಯ ಕೊನೆಯಲ್ಲಿ ಇನ್ನೊಂದು ಕೆರೂಬಿ ಯನ್ನು ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯರನ್ನು ಮಾಡಿದನು.
9 and the cherubs are spreading out wings on high, covering over the mercy-seat with their wings, and their faces `are' one towards another; towards the mercy-seat have the faces of the cherubs been.ಆ ಕೆರೂಬಿ ಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಹರಡಿಕೊಂಡು ಕರುಣಾಸನವನ್ನು ಮುಚ್ಚಿದಂತಿದ್ದವು, ಆ ಕೆರೂಬಿಯರ ಮುಖಗಳು ಒಂದನ್ನೊಂದು ನೋಡುತ್ತಿರುವಂತೆಯೂ ಕರುಣಾಸನವನ್ನು ನೋಡುತ್ತಿರುವಂತೆಯೂ ಇದ್ದವು.
10 And he maketh the table of shittim wood; two cubits its length, and a cubit its breadth, and a cubit and a half its height,ಅವನು ಜಾಲೀ ಮರದಿಂದ ಒಂದು ಮೇಜನ್ನು ಮಾಡಿದನು; ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
11 and overlayeth it with pure gold, and maketh for it a wreath of gold round about.ಅವನು ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿ ಅದರ ಸುತ್ತಲೂ ಚಿನ್ನದ ಕೀರೀಟವನ್ನು ಮಾಡಿದನು.
12 And he maketh for it a border of a handbreadth round about, and maketh a wreath of gold for its border round about;ಅವನು ಅದರ ಸುತ್ತಲೂ ಗೇಣಗಲವಾದ ಅಂಚನ್ನು ಮಾಡಿದನು; ಆ ಅಂಚಿನ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.
13 and he casteth for it four rings of gold, and putteth the rings on the four corners which `are' to its four feet;ಅವನು ಅದಕ್ಕೆ ನಾಲ್ಕು ಚಿನ್ನದ ಉಂಗುರಗಳನ್ನು ಎರಕಹೊಯ್ದು ಆ ಉಂಗುರಗಳನ್ನು ಅದರ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿಟ್ಟನು.
14 over-against the border have the rings been, places for staves to bear the table.ಮೇಜನ್ನು ಹೊರುವದಕ್ಕೆ ಕೋಲನ್ನು ಸಿಕ್ಕಿಸುವ ಸ್ಥಳಗಳಲ್ಲಿ ಆ ಉಂಗುರಗಳು ಮೇಜಿನ ಅಂಚಿನ ಮೇಲಿದ್ದವು.
15 And he maketh the staves of shittim wood, and overlayeth them with gold, to bear the table;ಮೇಜನ್ನು ಹೊರು ವದಕ್ಕೆ ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.
16 and he maketh the vessels which `are' upon the table, its dishes, and its bowls, and its cups, and the cups by which they pour out, of pure gold.ಅನಂತರ ಅವನು ಮೇಜಿನ ಮೇಲಿರುವ ಪಾತ್ರೆಗಳನ್ನು ಮಾಡಿ ದನು. ಅದರ ಹರಿವಾಣಗಳು, ಅದರ ಚಮಚಗಳು, ಅದರ ಬಟ್ಟಲುಗಳು ಅದೇ ರೀತಿಯಲ್ಲಿ ಅವುಗಳ ಮುಚ್ಚಳಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.
17 And he maketh the candlestick of pure gold; of beaten work he hath made the candlestick, its base, and its branch, its calyxes, its knops, and its flowers, have been of the same;ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು.
18 and six branches are coming out of its sides, three branches of the candlestick out of its one side, and three branches of the candlestick out of its second side;ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು.
19 three calyxes, made like almonds, in the one branch, a knop and a flower; and three calyxes, made like almonds, in another branch, a knop and a flower; so to the six branches which are coming out of the candlestick.ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ; ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು.
20 And in the candlestick `are' four calyxes, made like almonds, its knops, and its flowers,ದೀಪಸ್ತಂಭದಲ್ಲಿ ಗೂಡುಗಳೂ ಹೂವುಗಳೂ ಕೂಡಿದ ಬಾದಾವಿ ಹೂವುಳ್ಳ ನಾಲ್ಕು ಹಣತೆಗಳು.
21 and a knop under the two branches of the same, and a knop under the two branches of the same, and a knop under the two branches of the same, `are' to the six branches which are coming out of it;ದೀಪಸ್ತಂಭದೊಳ ಗಿಂದ ಹೊರಗೆ ಬರುವ ಆರು ಕೊಂಬೆಗಳಿಗೆ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗೂಡು.
22 their knops and their branches have been of the same; all of it one beaten work of pure gold.ಅದರ ಗೂಡುಗಳೂ ಕೊಂಬೆಗಳೂ ಅದರಿಂದಲೇ ಉಂಟಾಗಿದ್ದವು; ಅದೆಲ್ಲಾ ಚೊಕ್ಕ ಬಂಗಾರದ ಒಂದೇ ಕಲಾಕೃತಿಯಾಗಿತ್ತು.
23 And he maketh its seven lamps, and its snuffers, and its snuff-dishes, of pure gold;ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು.
24 of a talent of pure gold he hath made it, and all its vessels.ಇವೆಲ್ಲವುಗಳನ್ನೂ ಸಮಸ್ತ ಪಾತ್ರೆಗಳನ್ನೂ ಅವನು ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಿದನು.
25 And he maketh the perfume-altar of shittim wood; a cubit its length, and a cubit its breadth (square), and two cubits its height; its horns have been of the same;ಅವನು ಜಾಲೀ ಮರದಿಂದ ಧೂಪಪೀಠವನ್ನು ಮಾಡಿದನು; ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲವಾಗಿ ಚಚ್ಚೌಕವಾಗಿತ್ತು; ಅದು ಎರಡು ಮೊಳ ಎತ್ತರವಾಗಿತ್ತು. ಅದರ ಕೊಂಬುಗಳು ಸಹ ಜಾಲೀ ಮರದಿಂದಲೇ ಮಾಡಲ್ಪಟ್ಟಿದ್ದವು.
26 and he overlayeth it with pure gold, its top and its sides round about, and its horns; and he maketh for it a wreath of gold round about;ಅವನು ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಅದರ ಕೊಂಬುಗಳನ್ನೂ ಚೊಕ್ಕ ಬಂಗಾರದಿಂದ ಹೊದಿಸಿದನು; ಅದರ ಸುತ್ತಲೂ ಬಂಗಾರದ ಕಿರೀಟ ವನ್ನಿಟ್ಟನು.
27 and two rings of gold he hath made for it under its wreath, at its two corners, at its two sides, for places for staves to bear it with them.ಅದನ್ನು ಹೊರುವದಕ್ಕೆ ಕೋಲುಗಳನ್ನು ಸಿಕ್ಕಿಸುವದಕ್ಕೋಸ್ಕರ ಅದರ ಕಿರೀಟದ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಚಿನ್ನದ ಎರಡು ಉಂಗುರಗಳನ್ನು ಮಾಡಿದನು.
28 And he maketh the staves of shittim wood, and overlayeth them with gold;ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.
29 and he maketh the holy anointing oil, and the pure spice-perfume -- work of a compounder.ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.
Kannada Bible