Bible

Exodus 10 - YLT (Kannada)

1 And Jehovah saith unto Moses, `Go in unto Pharaoh, for I have declared hard his heart, and the heart of his servants, so that I set these My signs in their midst,ತರುವಾಯ ಕರ್ತನು ಮೋಶೆಗೆ-- ಫರೋಹನ ಬಳಿಗೆ ಹೋಗು. ನಾನು ನನ್ನ ಸೂಚಕಕಾರ್ಯಗಳನ್ನು ಅವನ ಮುಂದೆ ತೋರಿಸು ವದಕ್ಕಾಗಿ ಅವನ ಹೃದಯವನ್ನೂ ಅವನ ಸೇವಕರ ಹೃದಯಗಳನ್ನೂ ಕಠಿಣಮಾಡಿದ್ದೇನೆ.

2 and so that thou recountest in the ears of thy son, and of thy son's son, that which I have done in Egypt, and My signs which I have set among them, and ye have known that I `am' Jehovah.'ಇದಲ್ಲದೆ ನೀನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ನಾನು ಐಗುಪ್ತದಲ್ಲಿ ಏನು ಮಾಡಿದೆನೆಂದೂ ನಾನೇ ಕರ್ತನೆಂದೂ ನೀವು ತಿಳುಕೊಳ್ಳುವಂತೆ ನಾನು ಅವರ ಮಧ್ಯದಲ್ಲಿ ಮಾಡಿದ ಸೂಚಕಕಾರ್ಯಗಳನ್ನು ತಿಳಿಸ ಬೇಕು ಎಂದು ಹೇಳಿದನು.

3 And Moses cometh in -- Aaron also -- unto Pharaoh, and they say unto him, `Thus said Jehovah, God of the Hebrews, Until when hast thou refused to be humbled at My presence? send My people away, and they serve Me,ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ--ಇಬ್ರಿಯರ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳದೆ ಇರುವದು ಎಲ್ಲಿಯವರೆಗೇ? ನನ್ನನ್ನು ಸೇವಿಸುವಂತೆ ನನ್ನ ಜನರನ್ನು ಹೋಗಗೊಡಿಸು.

4 for if thou art refusing to send My people away, lo, I am bringing in to-morrow the locust into thy border,ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ ಇಗೋ, ನಾಳೆಯೇನಾನು ನಿನ್ನ ಮೇರೆಯಲ್ಲಿ ಮಿಡತೆಗಳನ್ನು ಬರಮಾಡು ವೆನು.

5 and it hath covered the eye of the land, and none is able to see the land, and it hath eaten the remnant of that which is escaped, which is left to you from the hail, and it hath eaten every tree which is springing for you out of the field;ಒಬ್ಬನು ಭೂಮಿಯನ್ನು ಕಾಣುವದಕ್ಕಾಗದಷ್ಟು ಅವು ಭೂಮುಖವನ್ನೆಲ್ಲಾ ಮುಚ್ಚಿಕೊಳ್ಳುವವು; ಇದ ಲ್ಲದೆ ಅವು ಆನೆಕಲ್ಲಿನ ಮಳೆಯಿಂದ ಹಾಳಾಗದೆ ನಿಮಗಾಗಿ ಉಳಿದಿರುವದೆಲ್ಲವನ್ನೂ ಹೊಲಗಳಲ್ಲಿ ಚಿಗುರಿರುವ ಪ್ರತಿಯೊಂದು ಮರವನ್ನೂ ತಿಂದುಬಿಡು ವವು.

6 and they have filled thy houses, and the houses of all thy servants, and the houses of all the Egyptians, which neither thy fathers nor thy father's fathers have seen, since the day of their being on the ground unto this day,' -- and he turneth and goeth out from Pharaoh.ಇದಲ್ಲದೆ ಅವು ನಿನ್ನ ಮನೆಗಳಲ್ಲಿಯೂ ನಿನ್ನ ಸೇವಕರ ಮನೆಗಳಲ್ಲಿಯೂ ಐಗುಪ್ತ್ಯರೆಲ್ಲರ ಮನೆ ಗಳಲ್ಲಿಯೂ ತುಂಬಿಕೊಳ್ಳುವವು. ನಿನ್ನ ತಂದೆಗಳಾಗಲಿ ನಿನ್ನ ತಂದೆಗಳ ತಂದೆಗಳಾಗಲಿ ಅವರು ಭೂಮಿಯ ಮೇಲೆ ಇದ್ದಂದಿನಿಂದ ಇಂದಿನ ವರೆಗೂ ಅಂಥದ್ದನ್ನು ಎಂದೂ ನೋಡಿರಲಿಲ್ಲ ಅಂದನು. ಮೋಶೆಯು ಹಿಂತಿರುಗಿ ಫರೋಹನ ಬಳಿಯಿಂದ ಹೊರಟು ಹೋದನು.

7 And the servants of Pharaoh say unto him, `Until when doth this `one' become a snare to us? send the men away, and they serve Jehovah their God; knowest thou not yet that Egypt hath perished?'ಆಗ ಫರೋಹನ ಸೇವಕರು ಅವನಿಗೆ--ಇವನು ಎಷ್ಟು ಕಾಲ ನಮಗೆ ಉರುಲಾಗಿರಬೇಕು. ಆ ಜನರು ತಮ್ಮ ದೇವರಾದ ಕರ್ತನಿಗೆ ಸೇವೆಮಾಡುವಂತೆ ಅವರನ್ನು ಕಳುಹಿಸಿಬಿಡು. ಐಗುಪ್ತವು ನಾಶವಾಯಿ ತೆಂದು ನಿನಗೆ ಇನ್ನೂ ತಿಳಿಯಲಿಲ್ಲವೋ ಅಂದರು.

8 And Moses is brought back -- Aaron also -- unto Pharaoh, and he saith unto them, `Go, serve Jehovah your God; -- who and who `are' those going?'ಮೋಶೆ ಆರೋನರು ಫರೋಹನ ಬಳಿಗೆ ಮತ್ತೆ ಕರೆಯಲ್ಪಟ್ಟರು. ಆಗ ಅವರಿಗೆ--ನೀವು ಹೋಗಿ ನಿಮ್ಮ ದೇವರಾದ ಕರ್ತನಿಗೆ ಸೇವೆಮಾಡಿರಿ; ಆದರೆ ಹೋಗು ವವರು ಯಾರಾರು ಅಂದನು.

9 And Moses saith, `With our young ones, and with our aged ones, we go, with our sons, and with our daughters, with our flock, and our herd, we go, for we have a festival to Jehovah.'ಅದಕ್ಕೆ ಮೋಶೆಯು ಅವನಿಗೆ--ನಮ್ಮ ಚಿಕ್ಕವರನ್ನೂ ಮುದುಕರನ್ನೂ ಕರ ಕೊಂಡು ಹೋಗುವದಲ್ಲದೆ ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ನಮ್ಮ ಕುರಿಗಳನ್ನೂ ದನಗಳನ್ನೂ ತಕ್ಕೊಂಡು ಹೋಗುತ್ತೇವೆ. ಯಾಕಂದರೆ ನಾವು ಕರ್ತ ನಿಗಾಗಿ ಹಬ್ಬವನ್ನು ಮಾಡಬೇಕು ಅಂದನು.

10 And he saith unto them, `Be it so, Jehovah `be' with you when I send you and your infants away; see -- for evil `is' before your faces;ಫರೋ ಹನು ಅವರಿಗೆ--ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಹೇಗೆ ಕಳುಹಿಸುವೆನೋ ಹಾಗೆಯೇ ಕರ್ತನು ನಿಮ್ಮ ಸಂಗಡ ಇರಲಿ. ನೋಡಿರಿ, ನಿಮ್ಮ ಮುಂದೆ ಕೇಡು ಇದೆ.

11 not so! go now, ye who `are' men, and serve Jehovah, for that ye are seeking;' and `one' casteth them out from the presence of Pharaoh.ಹಾಗೆ ಮಾಡದೆ ಈಗ ಗಂಡಸರಾದ ನೀವು ಹೋಗಿ ಕರ್ತನಿಗೆ ಸೇವೆಮಾಡಿರಿ; ಇದನ್ನೇ ನೀವು ಬಯಸಿದಿರಿ ಅಂದನು. ತರುವಾಯ ಅವರು ಫರೋಹನ ಎದುರಿನಿಂದ ಹೊರದೂಡಲ್ಪಟ್ಟರು.

12 And Jehovah saith unto Moses, `Stretch out thy hand against the land of Egypt for the locust, and it goeth up against the land of Egypt, and doth eat every herb of the land -- all that the hail hath left.'ಆಗ ಕರ್ತನು ಮೋಶೆಗೆ--ಮಿಡತೆಗಳಿಗಾಗಿ ನಿನ್ನ ಕೈಯನ್ನು ಐಗುಪ್ತದ ಮೇಲೆ ಚಾಚು. ಅವು ಐಗುಪ್ತದ ಮೇಲೆ ಬಂದು ಆ ದೇಶದಲ್ಲಿರುವ ಹಸುರಾದದ್ದನ್ನೆಲ್ಲಾ ಅಂದರೆ ಆನೆಕಲ್ಲಿನ ಮಳೆಯು ಉಳಿಸಿದ್ದದನ್ನೆಲ್ಲಾ ತಿಂದು ಬಿಡಲಿ ಅಂದನು.

13 And Moses stretcheth out his rod against the land of Egypt, and Jehovah hath led an east wind over the land all that day, and all the night; the morning hath been, and the east wind hath lifted up the locust.ಮೋಶೆಯು ತನ್ನ ಕೋಲನ್ನು ಐಗುಪ್ತದೇಶದ ಮೇಲೆ ಚಾಚಿದಾಗ ಕರ್ತನು ಹಗಲಿರುಳೂ ಮೂಡಣಗಾಳಿಯನ್ನು ಬರಮಾಡಿದನು. ಉದ ಯವಾದಾಗ ಆ ಮೂಡಣ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು.

14 And the locust goeth up against all the land of Egypt, and resteth in all the border of Egypt -- very grievous: before it there hath not been such a locust as it, and after it there is none such;ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು.

15 and it covereth the eye of all the land, and the land is darkened; and it eateth every herb of the land, and all the fruit of the trees which the hail hath left, and there hath not been left any green thing in the trees, or in the herb of the field, in all the land of Egypt.'ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.

16 And Pharaoh hasteth to call for Moses and for Aaron, and saith, `I have sinned against Jehovah your God, and against you,ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.

17 and now, bear with, I pray you, my sin, only this time, and make ye supplication to Jehovah your God, that He turn aside from off me only this death.'ಹೀಗಿರುವದರಿಂದ ಈಗ ಈ ಒಂದೇ ಸಾರಿ ನನ್ನ ಪಾಪವನ್ನು ಕ್ಷಮಿಸಬೇಕೆಂದು ನಾನು ನಿಮ್ಮನ್ನು ಬೇಡುತ್ತೇನೆ. ಈ ಮರಣವನ್ನು ಮಾತ್ರ ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಕರ್ತನನ್ನು ಬೇಡಿ ಕೊಳ್ಳಿರಿ ಅಂದನು.

18 And he goeth out from Pharaoh, and maketh supplication unto Jehovah,ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.

19 and Jehovah turneth a very strong sea wind, and it lifteth up the locust, and bloweth it into the Red Sea -- there hath not been left one locust in all the border of Egypt;ಕರ್ತನು ಮಹಾಬಲವಾದ ಪಶ್ಚಿಮಗಾಳಿಯನ್ನು ಬೀಸಮಾಡಿದನು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದಲ್ಲಿ ಹಾಕಿತು. ಐಗುಪ್ತದ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯ ಲಿಲ್ಲ.

20 and Jehovah strengtheneth the heart of Pharaoh, and he hath not sent the sons of Israel away.ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸದೆ ಹೋದನು.

21 And Jehovah saith unto Moses, `Stretch out thy hand towards the heavens, and there is darkness over the land of Egypt, and the darkness is felt.'ಆಗ ಕರ್ತನು ಮೋಶೆಗೆ--ಐಗುಪ್ತದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು ಅಂದನು.

22 And Moses stretcheth out his hand towards the heavens, and there is darkness -- thick darkness in all the land of Egypt three days;ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ ಐಗುಪ್ತದೇಶದಲ್ಲೆಲ್ಲಾ ಮೂರು ದಿನಗಳ ವರೆಗೆ ಘೋರವಾದ ಕತ್ತಲು ಕವಿಯಿತು.

23 they have not seen one another, and none hath risen from his place three days; and to all the sons of Israel there hath been light in their dwellings.'ಮೂರು ದಿನಗಳ ವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ, ಯಾರೂ ತಮ್ಮ ಸ್ಥಳ ವನ್ನು ಬಿಟ್ಟು ಏಳಲೂ ಇಲ್ಲ. ಆದರೆ ಇಸ್ರಾಯೇಲ್‌ ಮಕ್ಕಳಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.

24 And Pharaoh calleth unto Moses and saith, `Go ye, serve Jehovah, only your flock and your herd are stayed, your infants also go with you;'ಆಗ ಫರೋಹನು ಮೋಶೆಯನ್ನು ಕರೆ ಯಿಸಿ ಅವನಿಗೆ--ನೀವು ಹೋಗಿ ಕರ್ತನಿಗೆ ಸೇವೆ ಮಾಡಿರಿ, ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಕ್ಕಳೂ ನಿಮ್ಮ ಸಂಗಡ ಹೋಗಲಿ ಅಂದನು.

25 and Moses saith, `Thou also dost give in our hand sacrifices and burnt-offerings, and we have prepared for Jehovah our God;ಅದಕ್ಕೆ ಮೋಶೆಯು ಅವನಿಗೆ--ನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು.

26 and also our cattle doth go with us, there is not left a hoof, for from it we do take to serve Jehovah our God; and we -- we know not how we do serve Jehovah till our going thither.'ನಮ್ಮ ಪಶುಗಳನ್ನೂ ನಾವು ನಮ್ಮ ಸಂಗಡ ತೆಗೆದು ಕೊಂಡು ಹೋಗುವೆವು. ಒಂದು ಗೊರಸೆಯಾದರೂ ಬಿಡುವದಿಲ್ಲ. ಯಾಕಂದರೆ ನಮ್ಮ ದೇವರಾದ ಕರ್ತನಿಗೆ ಆರಾಧನೆ ಮಾಡುವದಕ್ಕೆ ಅವುಗಳಿಂದಲೇ ಆರಿಸ ಬೇಕು. ಕರ್ತನಿಗೆ ಯಾವ ಸೇವೆಮಾಡಬೇಕೆಂಬದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯುವದಿಲ್ಲ ಅಂದನು.

27 And Jehovah strengtheneth the heart of Pharaoh, and he hath not been willing to send them away;ಆದರೆ ಕರ್ತನು ಫರೋಹನ ಹೃದಯ ವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.

28 and Pharaoh saith to him, `Go from me, take heed to thyself, add not to see my face, for in the day thou seest my face thou diest;'ಆಗ ಫರೋಹನು ಅವನಿಗೆ--ನನ್ನನ್ನು ಬಿಟ್ಟು ಹೋಗು, ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು; ಯಾಕಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವಿ ಅಂದನು.

29 and Moses saith, `Rightly hast thou spoken, I add not any more to see thy face.'ಮೋಶೆಯು ಅವನಿಗೆ--ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವದಿಲ್ಲ ಅಂದನು.

Kannada Bible