11 ಆದದ್ದನ್ನೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಕೊಂಡು, ಗೋಣಿಯ ತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ವ್ಯಥೆ ಯಿಂದ ಗಟ್ಟಿಯಾಗಿ ಕೂಗಿದನು.When Mordecai perceived all that was done, Mordecai rent his clothes, and put on sackcloth with ashes, and went out into the midst of the city, and cried with a loud and a bitter cry;
2ಅವನು ಅರಸನ ಅರಮನೆಯ ಬಾಗಲಿನ ವರೆಗೆ ಬಂದನು. ಯಾಕಂದರೆ ಗೋಣಿಯತಟ್ಟನ್ನು ಉಟ್ಟುಕೊಂಡು ಅರಸನ ಅರ ಮನೆಯ ಬಾಗಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ.And came even before the king's gate: for none might enter into the king's gate clothed with sackcloth.
3ಇದಲ್ಲದೆ ಅರಸನ ಮಾತೂ ಅವನ ಕಟ್ಟ ಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾ ಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿಯ ತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಮಲಗಿ ಕೊಂಡರು.And in every province, whithersoever the king's commandment and his decree came, there was great mourning among the Jews, and fasting, and weeping, and wailing; and many lay in sackcloth and ashes.
4ಆಗ ಎಸ್ತೇರಳ ದಾಸಿಯರೂ ಅವಳ ಪ್ರತಿ ವಿಚಾ ರಕರೂ ಬಂದು ಅವಳಿಗೆ ತಿಳಿಸಿದರು. ಆದದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆ ಕೈಯು ಗೋಣಿಯ ತಟ್ಟನ್ನು ತೆಗೆದು ಹಾಕಿ ಧರಿಸಿ ಕೊಳ್ಳುವದಕ್ಕೆ ವಸ್ತ್ರವನ್ನು ಕಳುಹಿಸಿದಳು.So Esther's maids and her chamberlains came and told it her. Then was the queen exceedingly grieved; and she sent raiment to clothe Mordecai, and to take away his sackcloth from him: but he received it not.
5ಆದರೆ ಅವನು ತಕ್ಕೊಳ್ಳಲಿಲ್ಲ. ಆಗ ಎಸ್ತೇರಳು ತನ್ನ ಬಳಿಯಲ್ಲಿ ಇರಿಸಲ್ಪಟ್ಟ ಅರಸನ ಮನೆವಾರ್ತೆಯವರಲ್ಲಿ ಹತಾಕ ನನ್ನು ಕರೆದು--ಇದೇನೆಂದೂ ಯಾತಕ್ಕೆಂದೂ ಮೊರ್ದೆ ಕೈಯಿಂದ ತಿಳಿದುಕೊಳ್ಳಬೇಕೆಂದು ಅವನಿಗೆ ಆಜ್ಞಾ ಪಿಸಿದಳು.Then called Esther for Hatach, one of the king's chamberlains, whom he had appointed to attend upon her, and gave him a commandment to Mordecai, to know what it was, and why it was.
6ಹಾಗೆಯೇ ಹತಾಕನು ಅರಸನ ಅರ ಮನೆಯ ಬಾಗಲ ಮುಂದಿರುವ ಪಟ್ಟಣದ ಬೀದಿ ಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೊರಟುಹೋದನು.So Hatach went forth to Mordecai unto the street of the city, which was before the king's gate.
7ಆಗ ಮೊರ್ದೆಕೈ ತನಗೆ ಆದದ್ದನ್ನೂ ಹಾಮಾನನು ಯೆಹೂದ್ಯರನ್ನು ನಾಶಮಾಡುವ ನಿಮಿತ್ತ ಅರಸನ ಬೊಕ್ಕಸಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣ ವನ್ನೂ ಅವನಿಗೆ ತಿಳಿಸಿದನು.And Mordecai told him of all that had happened unto him, and of the sum of the money that Haman had promised to pay to the king's treasuries for the Jews, to destroy them.
8ಯೆಹೂದ್ಯರನ್ನು ನಾಶ ಮಾಡಲು ಶೂಷನಿನಲ್ಲಿ ಕೊಡಲ್ಪಟ್ಟ ಆಜ್ಞಾಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರ ಳಿಗೆ ತೋರಿಸಿ ತಿಳಿಸುವದಕ್ಕೂ ಅವಳು ತನ್ನ ಜನ ಕ್ಕೋಸ್ಕರ ಅರಸನ ಮುಂದೆ ಬಿನ್ನಹಮಾಡಿ ಬೇಡಿ ಕೊಳ್ಳುವದಕ್ಕೂ ಅವನ ಬಳಿಗೆ ಹೋಗಬೇಕೆಂದು ಅವಳಿಗೆ ಆಜ್ಞಾಪಿಸಲು ಹೇಳಿದನು.Also he gave him the copy of the writing of the decree that was given at Shushan to destroy them, to shew it unto Esther, and to declare it unto her, and to charge her that she should go in unto the king, to make supplication unto him, and to make request before him for her people.
9ಆಗ ಹತಾಕನು ಬಂದು ಮೊರ್ದೆಕೈಯ ಮಾತು ಗಳನ್ನು ಎಸ್ತೇರಳಿಗೆ ತಿಳಿಸಿದನು.And Hatach came and told Esther the words of Mordecai.
10ಎಸ್ತೇರಳು ಮೊರ್ದೆ ಕೈಗೆ ಹೇಳಲು ಹತಾಕನಿಗೆ ಆಜ್ಞಾಪಿಸಿದ್ದೇನಂದರೆ--Again Esther spake unto Hatach, and gave him commandment unto Mordecai;
11ಕರಿಸಲ್ಪಡದೆ ಅರಸನ ಬಳಿಗೆ ಒಳಮನೆಯಲ್ಲಿ ಪ್ರವೇಶಿಸುವ ಯಾವನಾದರೂ ಗಂಡಸಾದರೂ ಸರಿ ಹೆಂಗಸಾದರೂ ಸರಿ ಬದುಕುವ ಹಾಗೆ ಅರಸನು ಬಂಗಾರದ ಮುದ್ರೆ ಕೋಲನ್ನು ಅವನ ಬಳಿಗೆ ಚಾಚಿ ದರೆ ಹೊರತು ಅವನನ್ನು ಕೊಲ್ಲಬೇಕೆಂಬ ಅವನ ಆಜ್ಞೆ ಒಂದೇ ಉಂಟೆಂದು ಅರಸನ ಸಮಸ್ತ ಸೇವ ಕರೂ ಅರಸನ ಪ್ರಾಂತ್ಯಗಳ ಜನರೂ ತಿಳಿದಿದ್ದಾರೆ. ಆದರೆ ನಾನು ಈ ಮೂವತ್ತು ದಿವಸಗಳಿಂದ ಅರಸನ ಬಳಿಗೆ ಕರೆಯಲ್ಪಡಲಿಲ್ಲ ಎಂದು ಅಂದಾಗAll the king's servants, and the people of the king's provinces, do know, that whosoever, whether man or women, shall come unto the king into the inner court, who is not called, there is one law of his to put him to death, except such to whom the king shall hold out the golden sceptre, that he may live: but I have not been called to come in unto the king these thirty days.
12ಅವರು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದರು.And they told to Mordecai Esther's words.
13ಆಗ ಮೊರ್ದೆಕೈ ಎಸ್ತೇರಳಿಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ--ನೀನು ಅರಮನೆಯಲ್ಲಿರುವ ದರಿಂದ ಸಮಸ್ತ ಯೆಹೂದ್ಯರಲ್ಲಿ ತಪ್ಪಿಸಿಕೊಳ್ಳುವೆ ನೆಂದು ನೆನಸಬೇಡ.Then Mordecai commanded to answer Esther, Think not with thyself that thou shalt escape in the king's house, more than all the Jews.
14ನೀನು ಈ ಕಾಲದಲ್ಲಿ ಮೌನವಾಗಿಯೇ ಇದ್ದರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ವಿಶ್ರಾಂತಿಯೂ ಬಿಡುಗಡೆಯೂ ಉಂಟಾಗುವವು; ಆದರೆ ನೀನೂ ನಿನ್ನ ತಂದೆಯ ಮನೆಯೂ ನಾಶವಾಗಿ ಹೋಗುವಿರಿ. ಇಂಥಾ ಕಾಲ ಕ್ಕೋಸ್ಕರ ನೀನು ರಾಜತ್ವಕ್ಕೆ ಬಂದಿ ಏನೋ ತಿಳಿದ ವರು ಯಾರು ಅಂದನು.For if thou altogether holdest thy peace at this time, then shall there enlargement and deliverance arise to the Jews from another place; but thou and thy father's house shall be destroyed: and who knoweth whether thou art come to the kingdom for such a time as this?
15ಎಸ್ತೇರಳು ಮೊರ್ದೆಕೈಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ -- ನೀನು ಹೋಗಿ ಶೂಷನಿನಲ್ಲಿರುವ ಸಮಸ್ತ ಯೆಹೂದ್ಯರನ್ನು ಕೂಡಿಸಿ ನನಗೋಸ್ಕರ ರಾತ್ರಿ ಹಗಲೂ ಮೂರು ದಿವಸ ತಿನ್ನದೆಯೂ ಕುಡಿಯದೆಯೂ ಉಪವಾಸ ಮಾಡಿರಿ.Then Esther bade them return Mordecai this answer,
16ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.Go, gather together all the Jews that are present in Shushan, and fast ye for me, and neither eat nor drink three days, night or day: I also and my maidens will fast likewise; and so will I go in unto the king, which is not according to the law: and if I perish, I perish.
17ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.So Mordecai went his way, and did according to all that Esther had commanded him.