Genesis 5 - BBE (Kannada)
1 This is the book of the generations of Adam. In the day when God made man, he made him in the image of God;ಆದಾಮನ ವಂಶಾವಳಿಯ ಪುಸ್ತಕವು ಇದೇ. ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ತನ್ನ ಹೋಲಿಕೆಯಲ್ಲಿ ಆತನು ಅವನನ್ನು ಉಂಟುಮಾಡಿದನು.
2 Male and female he made them, naming them Man, and giving them his blessing on the day when they were made.ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು; ಅವರು ಸೃಷ್ಟಿಸಲ್ಪಟ್ಟ ದಿನದಲ್ಲಿ ಆತನು ಅವರನ್ನು ಆಶೀರ್ವದಿಸಿ ಅವರನ್ನು ಆದಾಮ ನೆಂದು ಕರೆದನು (ಹೆಸರಿಟ್ಟನು).
3 Adam had been living for a hundred and thirty years when he had a son like himself, after his image, and gave him the name of Seth:ಆದಾಮನಿಗೆ ನೂರಮೂವತ್ತು ವರುಷವಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.
4 And after the birth of Seth, Adam went on living for eight hundred years, and had sons and daughters:ಸೇತನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
5 And all the years of Adam's life were nine hundred and thirty: and he came to his end.ಆದಾಮನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಮೂವತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
6 And Seth was a hundred and five years old when he became the father of Enosh:ಸೇತನು ನೂರ ಐದು ವರುಷದವನಾಗಿದ್ದಾಗ ಅವನಿಂದ ಎನೋಷನು ಹುಟ್ಟಿದನು.
7 And he went on living after the birth of Enosh for eight hundred and seven years, and had sons and daughters:ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
8 And all the years of Seth's life were nine hundred and twelve: and he came to his end.ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
9 And Enosh was ninety years old when he became the father of Kenan:ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.
10 And after the birth of Kenan, Enosh went on living for eight hundred and fifteen years, and had sons and daughters:ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
11 And all the years of Enosh were nine hundred and five: and he came to his end.ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
12 And Kenan was seventy years old when he became the father of Mahalalel:ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು.
13 And after the birth of Mahalalel, Kenan went on living for eight hundred and forty years, and had sons and daughters:ಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
14 And all the years of Kenan's life were nine hundred and ten; and he came to his end.ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
15 And Mahalalel was sixty-five years old when he became the father of Jared:ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು.
16 And after the birth of Jared, Mahalalel went on living for eight hundred and thirty years, and had sons and daughters:ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು.
17 And all the years of Mahalalel's life were eight hundred and ninety-five: and he came to his end.ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
18 And Jared was a hundred and sixty-two years old when he became the father of Enoch:ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು.
19 And Jared went on living after the birth of Enoch for eight hundred years, and had sons and daughters:ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
20 And all the years of Jared's life were nine hundred and sixty-two: and he came to his end.ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
21 And Enoch was sixty-five years old when he became the father of Methuselah:ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.
22 And after the birth of Methuselah, Enoch went on in God's ways for three hundred years, and had sons and daughters:ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
23 And all the years of Enoch's life were three hundred and sixty-five:ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.
24 And Enoch went on in God's ways: and he was not seen again, for God took him.ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು.
25 And Methuselah was a hundred and eighty-seven years old when he became the father of Lamech:ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು.
26 And after the birth of Lamech, Methuselah went on living for seven hundred and eighty-two years, and had sons and daughters:ಮೆತೂಷೆಲಹನಿಂದ ಲೆಮೆಕನು ಹುಟ್ಟಿದ ಮೇಲೆ ಅವನ ದಿನಗಳು ಏಳುನೂರ ಎಂಭತ್ತೆರಡು ವರುಷ ಗಳಾಗಿದ್ದವು. ಅವನಿಂದ ಕುಮಾರರೂ ಕುಮಾರ್ತೆ ಯರೂ ಹುಟ್ಟಿದರು.
27 And all the years of Methuselah's life were nine hundred and sixty-nine: and he came to his end.ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
28 And Lamech was a hundred and eighty-two years old when he had a son:ಲೆಮೆಕನು ನೂರ ಎಂಭತ್ತೆರಡು ವರುಷದವ ನಾಗಿದ್ದಾಗ ಅವನಿಂದ ಒಬ್ಬ ಮಗನು ಹುಟ್ಟಿದನು.
29 And he gave him the name of Noah, saying, Truly, he will give us rest from our trouble and the hard work of our hands, because of the earth which was cursed by God.ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.
30 And after the birth of Noah, Lamech went on living for five hundred and ninety-five years, and had sons and daughters:ಲೆಮೆಕನಿಂದ ನೋಹನು ಹುಟ್ಟಿದ ಮೇಲೆ ಅವನ ದಿನಗಳು ಐನೂರ ತೊಂಭತೈದು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
31 And all the years of Lamech's life were seven hundred and seventy-seven: and he came to his end.ಲೆಮೆಕನ ದಿನಗಳೆಲ್ಲಾ ಒಟ್ಟು ಏಳುನೂರ ಎಪ್ಪತ್ತೇಳು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
32 And when Noah was five hundred years old, he became the father of Shem, Ham, and Japheth.ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.
Kannada Bible