Bible

Ecclesiastes 5 - YLT (Kannada)

1 Keep thy feet when thou goest unto a house of God, and draw near to hear rather than to give of fools the sacrifice, for they do not know they do evil.ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು; ಬುದ್ಧಿಹೀನರು ಅರ್ಪಿಸುವ ಯಜ್ಞಕ್ಕಿಂತ, ಹೆಚ್ಚಾಗಿ ಕಿವಿಗೊಡುವದಕ್ಕೆ ಸಿದ್ಧನಾಗಿರು. ಅವರು ತಿಳಿಯದೆ ಕೆಟ್ಟದ್ದನ್ನೇ ಮಾಡು ತ್ತಾರೆ.

2 Cause not thy mouth to hasten, and let not thy heart hasten to bring out a word before God, for God is in the heavens, and thou on the earth, therefore let thy words be few.ನಿನ್ನ ಬಾಯಿಂದ ಆತುರಪಡದಿರು ಮತ್ತು ದೇವರ ಮುಂದೆ ಯಾವದನ್ನು ಉಚ್ಚರಿಸುವದಕ್ಕೆ ನಿನ್ನ ಹೃದಯವು ದುಡುಕದೇ ಇರಲಿ; ದೇವರು ಪರಲೋಕ ದಲ್ಲಿದ್ದಾನೆ; ನೀನು ಭೂಮಿಯ ಮೇಲೆ ಇದ್ದೀ; ಆದ ಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.

3 For the dream hath come by abundance of business, and the voice of a fool by abundance of words.ಬಹಳ ಕೆಲಸದ ಮೂಲಕ ಕನಸು ಉಂಟಾಗುತ್ತದೆ; ಬಹು ಮಾತುಗಳಿಂದ ಮೂಢನ ಧ್ವನಿಯು ಗೊತ್ತಾಗುತ್ತದೆ;

4 When thou vowest a vow to God, delay not to complete it, for there is no pleasure in fools; that which thou vowest -- complete.ದೇವರಿಗೆ ನೀನು ಪ್ರಮಾಣವನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ; ಮೂಢರಲ್ಲಿ ಆತನಿಗೆ ಸಂತೋಷವಿಲ್ಲ; ನೀನು ಪ್ರಮಾಣಮಾಡಿದ್ದನು ತೀರಿಸು.

5 Better that thou do not vow, than that thou dost vow and dost not complete.ಪ್ರಮಾಣಮಾಡಿ ತೀರಿಸದೆ ಇರುವದಕ್ಕಿಂತ ಪ್ರಮಾಣಮಾಡದೆ ಇರುವದು ಒಳ್ಳೇದು.

6 Suffer not thy mouth to cause thy flesh to sin, nor say before the messenger, that `it `is' an error,' why is God wroth because of thy voice, and hath destroyed the work of thy hands?ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು?

7 For, in the abundance of dreams both vanities and words abound; but fear thou God.ಬಹು ಕನಸುಗಳಲ್ಲಿ ಬಹಳ ಮಾತುಗಳಲ್ಲಿ ವಿಧವಿಧವಾದ ವ್ಯರ್ಥವಾದವುಗಳು ಇವೆ; ನೀನು ದೇವರಿಗೆ ಭಯಪಡು.

8 If oppression of the poor, and violent taking away of judgment and righteousness thou seest in a province, do not marvel at the matter, for a higher than the high is observing, and high ones `are' over them.ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.

9 And the abundance of a land is for all. A king for a field is served.ಇದಲ್ಲದೆ ಭೂಮಿಯ ಲಾಭವು ಎಲ್ಲರಿಗೂ ಇದೆ; ಭೂಮಿಯಿಂದಲೇ ಅರಸನಿಗೆ ಸೇವೆ ಯಾಗುತ್ತದೆ.

10 Whoso is loving silver is not satisfied `with' silver, nor he who is in love with stores `with' increase. Even this `is' vanity.ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ.

11 In the multiplying of good have its consumers been multiplied, and what benefit `is' to its possessor except the sight of his eyes?ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ?

12 Sweet `is' the sleep of the labourer whether he eat little or much; and the sufficiency of the wealthy is not suffering him to sleep.ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು.

13 There is a painful evil I have seen under the sun: wealth kept for its possessor, for his evil.ಸೂರ್ಯನ ಕೆಳಗೆ ವ್ಯಥೆಯಿಂದ ಕೂಡಿದ ಒಂದು ಕೆಟ್ಟತನವನ್ನು ನಾನು ನೋಡಿದ್ದೇನೆ; ಅದು ಯಾವ ದಂದರೆ, ತಮ್ಮ ವ್ಯಥೆಗಾಗಿ ಅವುಗಳ ಯಜ ಮಾನರು ಇಟ್ಟುಕೊಂಡಿದ್ದ ಐಶ್ವರ್ಯವೇ.

14 And that wealth hath been lost in an evil business, and he hath begotten a son and there is nothing in his hand!ಆದರೆ ಕೆಟ್ಟ ಪ್ರಯಾ ಸದಿಂದ ಆ ಆಸ್ತಿಯು ನಾಶವಾಗುತ್ತದೆ; ಅವನು ಒಬ್ಬ ಮಗನನ್ನು ಪಡೆದಿದ್ದರೆ ಅವನ ಕೈಯಲ್ಲಿ ಏನೂ ಇರದು.

15 As he came out from the belly of his mother, naked he turneth back to go as he came, and he taketh not away anything of his labour, that doth go in his hand.ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ.

16 And this also `is' a painful evil, just as he came, so he goeth, and what advantage `is' to him who laboureth for wind?ಇದೂ ಕೂಡ ವ್ಯಥೆಯಿಂದ ಕೂಡಿದ ಕೆಟ್ಟತನವೇ. ಅದು ಯಾವ ದಂದರೆ ಎಲ್ಲಾ ವಿಷಯಗಳಲ್ಲಿ ತಾನು ಹೇಗೆ ಬಂದನೋ ಹಾಗೆಯೇ ಹೋಗುವನು; ಗಾಳಿಗಾಗಿ ಪ್ರಯಾಸಪಟ್ಟ ವನಿಗೆ ಲಾಭವೇನಿದೆ?

17 Also all his days in darkness he consumeth, and sadness, and wrath, and sickness abound.ತನ್ನ ಜೀವಮಾನದಲ್ಲೆಲ್ಲಾ ಅವನು ಕತ್ತಲೆಯಲ್ಲಿ ತಿನ್ನುತ್ತಾನೆ; ತನ್ನ ವ್ಯಾಧಿಯೊಂದಿಗೆ ಅವನಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.

18 Lo, that which I have seen: `It is' good, because beautiful, to eat, and to drink, and to see good in all one's labour that he laboureth at under the sun, the number of the days of his life that God hath given to him, for it `is' his portion.ನಾನು ಕಂಡದ್ದನ್ನು ನೋಡು; ದೇವರು ತನಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ತಾನು ಕೈಕೊಂಡ ಪ್ರಯಾಸದ ಸುಖವನ್ನು ಅನುಭವಿಸಿ ತಿಂದು ಕುಡಿ ಯುವದು ಮನುಷ್ಯನಿಗೆ ಒಳ್ಳೆಯದೂ ಉಚಿತವಾದದ್ದೂ ಆಗಿದೆ; ಅದು ಅವನ ಪಾಲು.

19 Every man also to whom God hath given wealth and riches, and hath given him power to eat of it, and to accept his portion, and to rejoice in his labour, this is a gift of God.ಪ್ರತಿ ಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಆಸ್ತಿಪಾಸ್ತಿಗ ಳನ್ನೂ ಅವುಗಳನ್ನು ಅನುಭವಿಸುವದಕ್ಕೆ ಆತನು ಕೊಟ್ಟ ಸಾಮರ್ಥ್ಯವನ್ನೂ ಅವನು ತನ್ನ ಪಾಲನ್ನು ತೆಗೆದು ಕೊಂಡು ತನ್ನ ಪ್ರಯಾಸದಲ್ಲಿ ಆನಂದಿಸುವದೂ ದೇವರ ದಾನದಿಂದಲೇ.

20 For he doth not much remember the days of his life, for God is answering through the joy of his heart.ತನ್ನ ಜೀವಿತದ ದಿನಗಳನ್ನು ಅವನು ಹೆಚ್ಚಾಗಿ ಗಣನೆಗೆ ತಾರನು; ತನ್ನ ಹೃದಯದ ಸಂತೋಷ ದಲ್ಲಿ ದೇವರು ಅವನಿಗೆ ಉತ್ತರಕೊಡುತ್ತಾನೆ.

Kannada Bible