Ecclesiastes 12 - WEB (Kannada)
1 Remember also your Creator in the days of your youth, Before the evil days come, and the years draw near, When you will say, "I have no pleasure in them;"ಕಷ್ಟದ ದಿನಗಳು ಬರುವದಕ್ಕೆ ಮೊದಲು, ಇವುಗಳಲ್ಲಿ ನನಗೆ ಸಂತೋಷವಿಲ್ಲವೆಂದು ನೀನು ಹೇಳುವ ವರ್ಷಗಳು ಸವಿಾಪಿಸುವದಕ್ಕೆ ಮೊದಲು ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ನನ್ನು ಸ್ಮರಿಸಿಕೋ.
2 Before the sun, the light, the moon, and the stars are darkened, And the clouds return after the rain;ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಕತ್ತಲಾಗದಿರುವಾಗಲೇ ಮಳೆಯ ಮೋಡ ಗಳು ತಿರಿಗಿ ಬರುವದಕ್ಕಿಂತ ಮುಂಚೆಯೇ ಆತನನ್ನು ಸ್ಮರಿಸು.
3 In the day when the keepers of the house shall tremble, And the strong men shall bow themselves, And the grinders cease because they are few, And those who look out of the windows are darkened,ಆ ದಿನದಲ್ಲಿ ಮನೆ ಕಾಯುವವರು ನಡುಗು ವರು; ಬಲವಾದ ಮನುಷ್ಯರು ತಾವಾಗಿಯೇ ಬೊಗ್ಗು ವರು; ಅರೆಯುವವರು ಸ್ವಲ್ಪ ಇರುವದರಿಂದ ಸುಮ್ಮನಿ ರುವರು; ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು.
4 And the doors shall be shut in the street; When the sound of the grinding is low, And one shall rise up at the voice of a bird, And all the daughters of music shall be brought low;ಅರೆಯುವ ಶಬ್ದವು ಕಡಿಮೆಯಾ ದಾಗ ಬೀದಿಯಲ್ಲಿ ಬಾಗಲುಗಳು ಮುಚ್ಚಿರುವವು. ಅವನು ಪಕ್ಷಿಯ ಶಬ್ದವಾದಾಗ ಎದ್ದೇಳುವನು. ಗಾನದ ಕುಮಾರ್ತೆಯರೆಲ್ಲಾ ಕುಗ್ಗುವರು.
5 Yes, they shall be afraid of heights, And terrors will be in the way; And the almond tree shall blossom, And the grasshopper shall be a burden, And desire shall fail; Because man goes to his everlasting home, And the mourners go about the streets:ಅಲ್ಲದೆ ಅವರು ದಿನ್ನೆಗೆ ಹೆದರುವರು; ದಾರಿಯಲ್ಲಿ ಹೆದರಿಕೆಗಳಿರುವವು. ಬಾದಾಮಿಯ ಮರ ಹೂವು ಬಿಡುವದು; ಮಿಡತೆಯು ಭಾರವಾಗಿರುವದು. ಆಶೆ ಬಿದ್ದುಹೋಗುವದು. ಮನು ಷ್ಯನು ತನ್ನ ನಿತ್ಯ ಗೃಹಕ್ಕೆ ಹೋಗುವನು. ಗೋಳಾಡು ವವರು ಬೀದಿಯಲ್ಲಿ ತಿರುಗಾಡುವರು.
6 Before the silver cord is severed, Or the golden bowl is broken, Or the pitcher is broken at the spring, Or the wheel broken at the cistern,ಬೆಳ್ಳಿಯ ಸರಿಗೆ ಬಿಚ್ಚಲ್ಪಡುವದು; ಇಲ್ಲವೆ ಬಂಗಾರದ ಬಟ್ಟಲು ಒಡೆದು ಹೋಗುವದು. ಮಣ್ಣಿನ ಮಡಿಕೆಯು ಬುಗ್ಗೆಯ ಬಳಿಯಲ್ಲಿ ಒಡೆದು ಹೋಗುವದು. ಇಲ್ಲವೆ ಕೊಳದ ಹತ್ತಿರ ರಾಟೆ ಮುರಿಯುವದು.
7 And the dust returns to the earth as it was, And the spirit returns to God who gave it.ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗು ವದು.
8 Vanity of vanities, says the Preacher; All is vanity!ವ್ಯರ್ಥದ ವ್ಯರ್ಥಗಳೂ ಎಲ್ಲವೂ ವ್ಯರ್ಥವೇ ಎಂದು ಪ್ರಸಂಗಿ ಹೇಳುವನು.
9 Further, because the Preacher was wise, he still taught the people knowledge. Yes, he pondered, sought out, and set in order many proverbs.ಇದಲ್ಲದೆ ಪ್ರಸಂಗಿಯು ಜ್ಞಾನಿಯಾಗಿದ್ದು ಇನ್ನೂ ಜನಗಳಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು; ಹೌದು, ಅವನು ಪರೀಕ್ಷಿಸಿ, ವಿಚಾರಿಸಿ ಅನೇಕ ಜ್ಞಾನೋ ಕ್ತಿಗಳನ್ನು ಕ್ರಮವಾಗಿ ಹೊಂದಿಸಿದನು.
10 The Preacher sought to find out acceptable words, and that which was written blamelessly, words of truth.ಪ್ರಸಂಗಿಯು ಒಪ್ಪಿಕೊಳ್ಳುವಂತಹ ವಾಕ್ಯಗಳನ್ನು ಕಂಡುಹಿಡಿಯಲು ಹುಡುಕಿದನು: ಆ ಬರೆದವುಗಳು ಒಪ್ಪಿದ ಸತ್ಯವಾದ ಮಾತುಗಳು.
11 The words of the wise are like goads; and like nails well fastened are words from the masters of assemblies, which are given from one shepherd.ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗೆಯೂ ಮತ್ತು ಸಭೆಗಳ ಯಜಮಾನರು ನೆಟ್ಟ ಮೊಳೆಗಳ ಹಾಗೆಯೂ ಒಬ್ಬ ಕುರುಬನಿಂದ ಕೊಡಲ್ಪ ಟ್ಟಿವೆ.
12 Furthermore, my son, be admonished: of making many books there is no end; and much study is a weariness of the flesh.ಕೊನೆಗೆ ನನ್ನ ಮಗನೇ, ಇವುಗಳಿಂದ ಎಚ್ಚರಿಕೆ ಯಾಗಿರು. ಬಹಳ ಪುಸ್ತಕಗಳನ್ನು ಮಾಡುವದಕ್ಕೆ ಅಂತ್ಯ ವಿಲ್ಲ; ಹೆಚ್ಚು ಅಭ್ಯಾಸವು ಶರೀರಕ್ಕೆ ಆಯಾಸವಾಗಿದೆ.
13 This is the end of the matter. All has been heard. Fear God, and keep his commandments; for this is the whole duty of man.ಸಮಸ್ತ ವಿಷಯವನ್ನು ನಾವು ಕೇಳಿ ಮುಗಿಸೋಣ; ದೇವರಿಗೆ ಭಯಪಡು; ಆತನ ಆಜ್ಞೆಗಳನ್ನು ಪಾಲಿಸು; ಇದೇ ಮನುಷ್ಯನ ಪ್ರಮುಖ ಕರ್ತವ್ಯ.
14 For God will bring every work into judgment, with every hidden thing, whether it is good, or whether it is evil.ಒಳ್ಳೇದಾಗಲಿ, ಕೆಟ್ಟದ್ದಾಗಲಿ, ಪ್ರತಿಯೊಂದು ರಹಸ್ಯದ ಸಂಗತಿಗೂ ದೇವರು ಪ್ರತಿಯೊಂದು ಕೆಲಸ ವನ್ನು ಕುರಿತು ನ್ಯಾಯವಿಚಾರಣೆಗೆ ತರುವನು.
Kannada Bible