Bible

Ecclesiastes 1 - DBY (Kannada)

1 The words of the Preacher, the son of David, king in Jerusalem.ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು.

2 Vanity of vanities, saith the Preacher, vanity of vanities! all is vanity.ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥಗಳಲ್ಲಿ ವ್ಯರ್ಥ ಎಂದು ಪ್ರಸಂಗಿ ಹೇಳುತ್ತಾನೆ; ಎಲ್ಲವೂ ವ್ಯರ್ಥ.

3 What profit hath man of all his labour wherewith he laboureth under the sun?ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸದಲ್ಲಿ ಅವನಿಗೆ ಲಾಭವೇನು?

4 [One] generation passeth away, and [another] generation cometh, but the earth standeth for ever.ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ.

5 The sun also riseth, and the sun goeth down, and hasteth to its place where it ariseth.ಸೂರ್ಯನು ಏರುತ್ತಾನೆ, ಸೂರ್ಯನು ಇಳಿಯುತ್ತಾನೆ; ತಾನು ಏರಿದ ಸ್ಥಳಕ್ಕೆ ಆತುರಪಡುತ್ತಾನೆ.

6 The wind goeth towards the south, and turneth about towards the north: it turneth about continually, and the wind returneth again to its circuits.ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ; ಅದು ಬಿಡದೆ ಗುಂಡಾಗಿ ಸುತ್ತುತ್ತದೆ; ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರು ಗುತ್ತದೆ.

7 All the rivers run into the sea, yet the sea is not full: unto the place whither the rivers go, thither they go again.ನದಿಗಳೆಲ್ಲಾ ಹರಿದು ಸಮುದ್ರಕ್ಕೆ ಹೋಗುತ್ತವೆ, ಆದರೂ ಸಮುದ್ರವು ತುಂಬುವದಿಲ್ಲ; ನದಿ ಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರು ಗುತ್ತವೆ.

8 All things are full of toil; none can express it. The eye is not satisfied with seeing, nor the ear filled with hearing.ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು.

9 That which hath been is that which shall be; and that which hath been done is that which will be done: and there is nothing new under the sun.ಇದ್ದದ್ದೇ ಇರು ವದು, ನಡೆದದ್ದೇ ನಡೆಯುವದು; ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.

10 Is there a thing whereof it may be said, See, this is new? It hath been already in the ages which were before us.ನೋಡು, ಇದು ಹೊಸದು ಎಂದು ಯಾವ ವಿಷಯವಾಗಿ ಹೇಳ ಬಹುದೋ ಅದು ನಮಗಿಂತ ಮುಂಚೆ ಪುರಾತನ ಕಾಲದಿಂದ ಇದ್ದದ್ದೇ.

11 There is no remembrance of former things; neither shall there be remembrance of things that are to come with those who shall live afterwards.ಮೊದಲಿನ ಸಂಗತಿಗಳ ಜ್ಞಾಪ ಕವು ಇಲ್ಲ; ಮುಂದಿನ ಸಂಗತಿಗಳ ಜ್ಞಾಪಕವು ಅವುಗಳ ಮುಂದಿನವರಿಗೆ ಇರುವದಿಲ್ಲ.

12 I, the Preacher, was king over Israel in Jerusalem.ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದೆನು.

13 And I applied my heart to seek and search out by wisdom concerning all that is done under the heavens: this grievous occupation hath God given to the children of men to weary themselves therewith.ಆಕಾಶದ ಕೆಳಗೆ ನಡೆಯುವ ಎಲ್ಲವುಗಳ ವಿಷಯವಾಗಿ ಜ್ಞಾನ ದಿಂದ ವಿಚಾರಿಸಿ ವಿಮರ್ಶಿಸುವದಕ್ಕೆ ನಾನು ನನ್ನ ಮನಸ್ಸು ಇಟ್ಟೆನು; ಇದರ ವಿಷಯವಾದ ಪ್ರಯಾಸವು ಮನಸ್ಸಿನಲ್ಲಿ ಯೋಚಿಸುವಂತೆ ದೇವರು ಮನುಷ್ಯ ಮಕ್ಕಳಿಗೆ ಈ ಕಷ್ಟಕರವಾದ ಪ್ರಯಾಸವನ್ನು ಕೊಟ್ಟಿ ದ್ದಾನೆ.

14 I have seen all the works that are done under the sun, and behold, all is vanity and pursuit of the wind.ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.

15 That which is crooked cannot be made straight; and that which is wanting cannot be numbered.ವಕ್ರ ವಾದದ್ದು ಸರಿಮಾಡುವದಕ್ಕೆ ಆಗುವದಿಲ್ಲ; ಇಲ್ಲದ್ದನ್ನು ಲೆಕ್ಕಿಸುವದು ಅಸಾಧ್ಯ.

16 I communed with mine own heart, saying, Lo, I have become great and have acquired wisdom more than all they that have been before me over Jerusalem; and my heart hath seen much of wisdom and knowledge.ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು.

17 And I applied my heart to the knowledge of wisdom, and to the knowledge of madness and folly: I perceived that this also is a striving after the wind.ಜ್ಞಾನ ವನ್ನೂ ಹುಚ್ಚುತನವನ್ನೂ ಬುದ್ಧಿಹೀನತೆಯನ್ನೂ ತಿಳು ಕೊಳ್ಳುವಂತೆ ನಾನು ಮನಸ್ಸಿಟ್ಟೆನು; ಇದು ಸಹ ಮನಸ್ಸಿಗೆ ಆಯಾಸವೆಂದು ನಾನು ಅರಿತುಕೊಂಡೆನು.

18 For in much wisdom is much vexation, and he that increaseth knowledge increaseth sorrow.ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.

Kannada Bible