Deuteronomy 29 - WEB (Kannada)
1 These are the words of the covenant which Yahweh commanded Moses to make with the children of Israel in the land of Moab, besides the covenant which he made with them in Horeb.ಹೋರೇಬಿನಲ್ಲಿ ಅವರ ಸಂಗಡ ಮಾಡಿದ ಒಡಂಬಡಿಕೆಯ ಹೊರತಾಗಿ ಇಸ್ರಾ ಯೇಲ್ ಮಕ್ಕಳ ಸಂಗಡ ಮಾಡಬೇಕೆಂದು ಕರ್ತನು ಮೋಶೆಗೆ ಮೋವಾಬಿನ ದೇಶದಲ್ಲಿ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ;
2 Moses called to all Israel, and said to them, You have seen all that Yahweh did before your eyes in the land of Egypt to Pharaoh, and to all his servants, and to all his land;ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ನಿಮ್ಮ ಕಣ್ಣುಗಳ ಮುಂದೆ ಫರೋಹನಿಗೂ ಅವನ ಎಲ್ಲಾ ಸೇವಕ ರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
3 the great trials which your eyes saw, the signs, and those great wonders:ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಗುರುತುಗಳನ್ನೂ ಅದ್ಭುತಗಳನ್ನೂ ನಿನ್ನ ಕಣ್ಣುಗಳು ನೋಡಿದವಲ್ಲಾ?
4 but Yahweh has not given you a heart to know, and eyes to see, and ears to hear, to this day.ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
5 I have led you forty years in the wilderness: your clothes have not grown old on you, and your shoe has not grown old on your foot.ನಾನು ನಾಲ್ವತ್ತು ವರುಷ ನಿಮ್ಮನ್ನು ಅರಣ್ಯದಲ್ಲಿ ನಡಿಸಿದೆನು; ನಿಮ್ಮ ಮೇಲಿರುವ ವಸ್ತ್ರ ಗಳು ಹಳೇವಾಗಲಿಲ್ಲ; ನಿಮ್ಮ ಪಾದಗಳಲ್ಲಿರುವ ಕೆರಗಳು ಹಳೇವಾಗಲಿಲ್ಲ.
6 You have not eaten bread, neither have you drunk wine or strong drink; that you may know that I am Yahweh your God.ನಾನೇ ನಿಮ್ಮ ದೇವರಾದ ಕರ್ತನೆಂದು ನೀವು ತಿಳಿದುಕೊಳ್ಳುವ ಹಾಗೆ ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸ ಇಲ್ಲವೆ ಮದ್ಯಗಳನ್ನು ಕುಡಿಯಲಿಲ್ಲ.
7 When you came to this place, Sihon the king of Heshbon, and Og the king of Bashan, came out against us to battle, and we struck them:ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸನಾದ ಸೀಹೋನನೂ ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಬರಲಾಗಿ ನಾವು ಅವರನ್ನು ಹೊಡೆದು
8 and we took their land, and gave it for an inheritance to the Reubenites, and to the Gadites, and to the half-tribe of the Manassites.ಅವರ ದೇಶವನ್ನು ತಕ್ಕೊಂಡು ರೂಬೇನ್ಯರಿಗೂ ಗಾದನವರಿಗೂ ಮನಸ್ಸೆಯ ಅರ್ಧ ಗೋತ್ರಕ್ಕೂ ಸ್ವಾಸ್ತ್ಯವಾಗಿ ಕೊಟ್ಟೆವು.
9 Keep therefore the words of this covenant, and do them, that you may prosper in all that you do.ಹೀಗಿರುವ ದರಿಂದ ನೀವು ಮಾಡುವದೆಲ್ಲಾದರಲ್ಲಿ ಸಫಲವಾಗುವ ಹಾಗೆ ಈ ಒಡಂಬಡಿಕೆಯ ಮಾತುಗಳನ್ನು ಕೇಳಿ ನಡೆಯಬೇಕು.
10 You stand this day all of you before Yahweh your God; your heads, your tribes, your elders, and your officers, even all the men of Israel,ನೀವೆಲ್ಲರು ಈಹೊತ್ತು ನಿಮ್ಮ ದೇವರಾದ ಕರ್ತನ ಮುಂದೆ ನಿಂತಿದ್ದೀರಿ;
11 your little ones, your wives, and your foreigner who is in the midst of your camps, from the one who cuts your wood to the one who draws your water;ನಿನ್ನ ದೇವರಾದ ಕರ್ತನು ಈಹೊತ್ತು ನಿನ್ನ ಸಂಗಡ ಮಾಡುವ ಒಡಂಬಡಿಕೆಯ ಲ್ಲಿಯೂ ಆಣೆಯಲ್ಲಿಯೂ ಸೇರುವದಕ್ಕೆ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಮನುಷ್ಯರೆಲ್ಲರೂ
12 that you may enter into the covenant of Yahweh your God, and into his oath, which Yahweh your God makes with you this day;ನಿಮ್ಮ ಚಿಕ್ಕವರೂ ಪತ್ನಿಯರೂ ನಿನ್ನ ಪಾಳೆಯದಲ್ಲಿರುವ ಪರವಾಸಿಯರೂ ನಿನಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವ ವರೂ ಇದ್ದೀರಿ.
13 that he may establish you this day to himself for a people, and that he may be to you a God, as he spoke to you, and as he swore to your fathers, to Abraham, to Isaac, and to Jacob.ಆ ಒಡಂಬಡಿಕೆ ಯಾವದಂದರೆ, ಆತನು ನಿನಗೆ ಹೇಳಿದಂತೆಯೂ ನಿನ್ನ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದಂತೆಯೂ ಈಹೊತ್ತು ನಿನ್ನನ್ನು ತನಗೆ ಜನಾಂಗವಾಗಿ ಸ್ಥಾಪಿಸಿ ನಿನಗೆ ದೇವರಾಗ ಬೇಕೆಂಬದೇ.
14 Neither with you only do I make this covenant and this oath,ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆ ಯನ್ನೂ ಈ ಆಣೆಯನ್ನೂ ನಾನು ಮಾಡುವದಿಲ್ಲ;
15 but with him who stands here with us this day before Yahweh our God, and also with him who is not here with us this dayಈಹೊತ್ತು ಇಲ್ಲಿ ನಮ್ಮ ಸಂಗಡ ನಮ್ಮ ದೇವರಾದ ಕರ್ತನ ಮುಂದೆ ನಿಂತವನ ಸಂಗಡವೂ ಈಹೊತ್ತು ಇಲ್ಲಿ ನಮ್ಮ ಸಂಗಡ ಇರದವನ ಸಂಗಡವೂ ಮಾಡು ತ್ತೇನೆ.
16 (for you know how we lived in the land of Egypt, and how we came through the midst of the nations through which you passed;ಯಾಕಂದರೆ ನಾವು ಐಗುಪ್ತದೇಶದಲ್ಲಿ ಹೇಗೆ ವಾಸವಾಗಿದ್ದೇವೆಂದೂ ನೀವು ದಾಟಿಬಂದ ಜನಾಂಗಗಳನ್ನು ನಾವು ಹೇಗೆ ದಾಟಿಬಂದೆವೆಂದೂ ನಿಮಗೆ ತಿಳಿಯಿತಲ್ಲಾ?
17 and you have seen their abominations, and their idols, wood and stone, silver and gold, which were among them);ಅವರ ಬಳಿಯಲ್ಲಿರುವ ಮರ, ಕಲ್ಲು, ಬೆಳ್ಳಿ, ಬಂಗಾರಗಳ ಅಸಹ್ಯವಾದವು ಗಳನ್ನೂ ಬೊಂಬೆಗಳನ್ನೂ ನೀವು ನೋಡಿದಿರಲ್ಲಾ?
18 lest there should be among you man, or woman, or family, or tribe, whose heart turns away this day from Yahweh our God, to go to serve the gods of those nations; lest there should be among you a root that bears gall and wormwood;ಈಹೊತ್ತು ನಮ್ಮ ದೇವರಾದ ಕರ್ತನನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆಮಾಡುವದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ವಿಷವನ್ನೂ ಮಾಚಿಪತ್ರೆಯನ್ನೂ ಬೆಳೆ ಸುವ ಬೇರು ನಿಮ್ಮಲ್ಲಿ ಇರಬಾರದು.
19 and it happen, when he hears the words of this curse, that he bless himself in his heart, saying, I shall have peace, though I walk in the stubbornness of my heart, to destroy the moist with the dry.ಈ ಶಾಪದ ಮಾತುಗಳನ್ನು ಕೇಳಿ ಅವನು--ನನ್ನ ಹೃದಯದ ಕಲ್ಪನೆ ಯಲ್ಲಿ ನಡೆದುಕೊಂಡು ದಾಹಕ್ಕೆ ಅಮಲನ್ನು ಕುಡಿಸಿ ದರೂ ನನಗೆ ಸಮಾಧಾನವಿರುವದೆಂದು ಹೇಳಿಕೊಂಡು ತನ್ನ ಹೃದಯದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವವ ನಾದರೆ
20 Yahweh will not pardon him, but then the anger of Yahweh and his jealousy will smoke against that man, and all the curse that is written in this book shall lie on him, and Yahweh will blot out his name from under the sky.ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು.
21 Yahweh will set him apart to evil out of all the tribes of Israel, according to all the curses of the covenant that is written in this book of the law.ಈ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಕರ್ತನು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವನು.
22 The generation to come, your children who shall rise up after you, and the foreigner who shall come from a far land, shall say, when they see the plagues of that land, and the sicknesses with which Yahweh has made it sick;ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ
23 [and that] the whole land of it is sulfur, and salt, [and] a burning, [that] it is not sown, nor bears, nor any grass grows therein, like the overthrow of Sodom and Gomorrah, Admah and Zeboiim, which Yahweh overthrew in his anger, and in his wrath:ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
24 even all the nations shall say, Why has Yahweh done thus to this land? what means the heat of this great anger?ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು.
25 Then men shall say, Because they forsook the covenant of Yahweh, the God of their fathers, which he made with them when he brought them forth out of the land of Egypt,ಆಗ ಜನರು--ಅವರು ತಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ತರುವಾಗ ತಮ್ಮ ಪಿತೃಗಳ ದೇವರಾದ ಕರ್ತನು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟು,
26 and went and served other gods, and worshiped them, gods that they didn't know, and that he had not given to them:ಹೋಗಿ ಬೇರೆ ದೇವರುಗಳನ್ನೂ ತಮಗೆ ತಿಳಿಯದಂಥ, ಆತನು ತಮಗೆ ನೇಮಿಸದಂಥ ದೇವರುಗಳನ್ನೂ ಸೇವಿಸಿ ಅಡ್ಡಬಿದ್ದ ದರಿಂದ
27 therefore the anger of Yahweh was kindled against this land, to bring on it all the curse that is written in this book;ಕರ್ತನ ಕೋಪವು ಈ ದೇಶದ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನೆಲ್ಲಾ ಅವರ ಮೇಲೆ ತರುವ ಹಾಗೆ ಉರಿಯಿತು.
28 and Yahweh rooted them out of their land in anger, and in wrath, and in great indignation, and cast them into another land, as at this day.ಕರ್ತನು ಅವ ರನ್ನು ಕೋಪದಲ್ಲಿಯೂ ಸಿಟ್ಟಿನಲ್ಲಿಯೂ ಮಹಾರೌದ್ರ ದಲ್ಲಿಯೂ ದೇಶದಲ್ಲಿಂದ ಕಿತ್ತುಹಾಕಿ ಇಂದು ಇರುವ ಪ್ರಕಾರ ಬೇರೆ ದೇಶಕ್ಕೆ ಕಳುಹಿಸಿದ್ದಾನೆ.
29 The secret things belong to Yahweh our God; but the things that are revealed belong to us and to our children forever, that we may do all the words of this law.ರಹಸ್ಯಗಳು ನಮ್ಮ ದೇವರಾದ ಕರ್ತನಿಗೆ ಸೇರಿದ್ದು; ಆದರೆ ಪ್ರಕಟವಾದ ಈ ನ್ಯಾಯಪ್ರಮಾಣದ ಮಾತು ಗಳನ್ನೆಲ್ಲಾ ನಾವು ಮಾಡುವಹಾಗೆ ನಮಗೂ ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.
Kannada Bible