1ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶದ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ಕಡಿದುಬಿಟ್ಟ ತರುವಾಯ ನೀನು ಅವುಗಳನ್ನು ಸ್ವಾಧೀನಮಾಡಿಕೊಂಡು ಅವುಗಳ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಾಗWhen the LORD thy God hath cut off the nations, whose land the LORD thy God giveth thee, and thou succeedest them, and dwellest in their cities, and in their houses;
2ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ಕೊಡುವ ನಿನ್ನ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.Thou shalt separate three cities for thee in the midst of thy land, which the LORD thy God giveth thee to possess it.
3ನರಹತ್ಯೆ ಮಾಡುವವ ರೆಲ್ಲರೂ ಅಲ್ಲಿಗೆ ಓಡಿಹೋಗುವ ಹಾಗೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶದ ಮೇರೆ ಯನ್ನು ಮೂರು ಭಾಗಮಾಡಿ ನಿನಗಾಗಿ ಮಾರ್ಗವನ್ನು ಸಿದ್ಧಮಾಡಿಕೊಳ್ಳಬೇಕು.Thou shalt prepare thee a way, and divide the coasts of thy land, which the LORD thy God giveth thee to inherit, into three parts, that every slayer may flee thither.
4ಬದುಕುವ ಹಾಗೆ ಅಲ್ಲಿಗೆ ಓಡಿಹೋಗತಕ್ಕ ಕೊಲೆ ಪಾತಕನ ವಿವರವೇನಂದರೆ -- ತಿಳಿಯದೆ ಇಲ್ಲವೆ ಪೂರ್ವಕಾಲದಲ್ಲಿ ಹಗೆಮಾಡದೆ ತನ್ನ ನೆರೆಯವನನ್ನು ಹೊಡೆದವನೇ.And this is the case of the slayer, which shall flee thither, that he may live: Whoso killeth his neighbor ignorantly, whom he hated not in time past;
5ಹೇಗಂದರೆ--ಒಬ್ಬನು ತನ್ನ ನೆರೆಯ ವನ ಸಂಗಡ ಕಟ್ಟಿಗೆ ಕಡಿಯುವದಕ್ಕೆ ಅಡವಿಗೆ ಹೋಗ ಲಾಗಿ, ಕೊಡಲಿ ಹಿಡಿದ ಅವನ ಕೈ ಮರವನ್ನು ಕಡಿಯುವದಕ್ಕೆ ಚಾಚಿರುವಲ್ಲಿ ಆ ಕಬ್ಬಿಣವು ಕಾವನ್ನು ಬಿಟ್ಟು ಅವನ ನೆರೆಯವನು ಸಾಯುವಹಾಗೆ ತಗಲಿದರೆ,As when a man goeth into the wood with his neighbor to hew wood, and his hand fetcheth a stroke with the axe to cut down the tree, and the head slippeth from the helve, and lighteth upon his neighbor, that he die; he shall flee unto one of those cities, and live:
6ರಕ್ತ ವಿಚಾರಕನು ತನ್ನ ಹೃದಯದಲ್ಲಿ ಕೋಪ ಉರಿಯುತ್ತಿರುವಾಗ ಕೊಲೆಪಾತಕನನ್ನು ಹಿಂದಟ್ಟಿ, ಮಾರ್ಗ ದೂರವಾಗಿರುವ ಕಾರಣ ಅವನನ್ನು ಹಿಡಿದು ಪೂರ್ವಕಾಲದಲ್ಲಿ ಹಗೆಮಾಡದೆ ಇದ್ದದರಿಂದ ಮರ ಣಕ್ಕೆ ಪಾತ್ರನಾಗದ ಇವನನ್ನು ಕೊಂದುಹಾಕದ ಹಾಗೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಬೇಕು.Lest the avenger of the blood pursue the slayer, while his heart is hot, and overtake him, because the way is long, and slay him; whereas he was not worthy of death, inasmuch as he hated him not in time past.
7ಆದಕಾರಣ ನಾನು ನಿನಗೆ ಆಜ್ಞಾಪಿಸು ವದೇನಂದರೆ--ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.Wherefore I command thee, saying, Thou shalt separate three cities for thee.
8ಇದಲ್ಲದೆ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀನು ಕಾಪಾಡಿ ಕೈಕೊಳ್ಳಬೇಕು. ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಎಂದೆಂದಿಗೂ ಆತನ ಮಾರ್ಗದಲ್ಲಿ ನಡೆಯಲಾಗಿAnd if the LORD thy God enlarge thy coast, as he hath sworn unto thy fathers, and give thee all the land which he promised to give unto thy fathers;
9ಕರ್ತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನ ಮೇರೆಯನ್ನು ವಿಸ್ತಾರಮಾಡಿ ನಿನ್ನ ಪಿತೃಗಳಿಗೆ ಕೊಡುತ್ತೇನೆಂದು ಹೇಳಿದ ದೇಶವನ್ನೆಲ್ಲಾ ನಿನಗೆ ಕೊಟ್ಟರೆIf thou shalt keep all these commandments to do them, which I command thee this day, to love the LORD thy God, and to walk ever in his ways; then shalt thou add three cities more for thee, beside these three:
10ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ನಿನ್ನ ದೇಶದಲ್ಲಿ ಅಪರಾಧವಿಲ್ಲದ ರಕ್ತವು ಚೆಲ್ಲಲ್ಪಟ್ಟದ್ದರಿಂದ ರಕ್ತಾಪ ರಾಧವು ನಿನ್ನ ಮೇಲೆ ಬಾರದ ಹಾಗೆ ನೀನು ಈ ಮೂರು ಪಟ್ಟಣಗಳಿಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು.That innocent blood be not shed in thy land, which the LORD thy God giveth thee for an inheritance, and so blood be upon thee.
11ಆದರೆ ಒಬ್ಬನು ತನ್ನ ನೆರೆಯವನನ್ನು ಹಗೆಮಾಡಿ ಅವನಿಗಾಗಿ ಹೊಂಚಿಕೊಂಡು ಅವನಿಗೆ ವಿರೋಧ ವಾಗಿ ಎದ್ದು ಅವನನ್ನು ಸಾಯುವ ವರೆಗೂ ಹೊಡೆದು ಅವನು ಸತ್ತದ್ದರಿಂದ ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಹೋದರೆBut if any man hate his neighbor, and lie in wait for him, and rise up against him, and smite him mortally that he die, and fleeth into one of these cities:
12ಅವನ ಪಟ್ಟಣದ ಹಿರಿಯರು ಅವ ನನ್ನು ಅಲ್ಲಿಂದ ಹಿಡತರಿಸಿ ಅವನು ಸಾಯುವ ಹಾಗೆ ರಕ್ತ ವಿಚಾರಕನ ಕೈಗೆ ಒಪ್ಪಿಸಬೇಕು.Then the elders of his city shall send and fetch him thence, and deliver him into the hand of the avenger of blood, that he may die.
13ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನಿನಗೆ ಒಳ್ಳೆದಾಗುವ ಹಾಗೆ ಅಪರಾಧವಿಲ್ಲದ ರಕ್ತದ ದೋಷವನ್ನು ಇಸ್ರಾ ಯೇಲಿನಿಂದ ತೆಗೆದುಹಾಕಬೇಕು.Thine eye shall not pity him, but thou shalt put away the guilt of innocent blood from Israel, that it may go well with thee.
14ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನ ಮಾಡಿ ಕೊಳ್ಳುವದಕ್ಕೆ ಕೊಡುವ ದೇಶದೊಳಗೆ ನೀನು ಹೊಂದುವ ಸ್ವಾಸ್ತ್ಯದಲ್ಲಿ ಹಿರಿಯರು ಇಟ್ಟಂಥ ನಿನ್ನ ನೆರೆಯವನ ಮೇರೆಯನ್ನು ತಪ್ಪಿಸಬಾರದು.Thou shalt not remove thy neighbor's landmark, which they of old time have set in thine inheritance, which thou shalt inherit in the land that the LORD thy God giveth thee to possess it.
15ಒಬ್ಬನ ಅಕ್ರಮದ ನಿಮಿತ್ತವೂ ಅವನು ಮಾಡುವ ಎಲ್ಲಾ ಪಾಪದ ನಿಮಿತ್ತವೂ ಅವನಿಗೆ ವಿರೋಧವಾಗಿ ಒಬ್ಬನು ಸಾಕ್ಷಿಯಾಗಿ ನಿಂತುಕೊಳ್ಳಬಾರದು; ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಕಾರ್ಯವೆಲ್ಲಾ ಸ್ಥಿರವಾಗುವದು.One witness shall not rise up against a man for any iniquity, or for any sin, in any sin that he sinneth: at the mouth of two witnesses, or at the mouth of three witnesses, shall the matter be established.
16ತಪ್ಪಾದ ಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವದಕ್ಕೆ ಎದ್ದರೆIf a false witness rise up against any man to testify against him that which is wrong;
17ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಕರ್ತನ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು.Then both the men, between whom the controversy is, shall stand before the LORD, before the priests and the judges, which shall be in those days;
18ನ್ಯಾಯಾಧಿಪತಿಗಳು ಒಳ್ಳೆ ವಿಚಾರಣೆಮಾಡಬೇಕು; ಆಗ ಇಗೋ, ಆ ಸಾಕ್ಷಿ ಸುಳ್ಳುಸಾಕ್ಷಿಯಾಗಿದ್ದರೆ,ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆAnd the judges shall make diligent inquisition: and, behold, if the witness be a false witness, and hath testified falsely against his brother;
19ಅವನು ತನ್ನ ಸಹೋದರನಿಗೆ ಮಾಡುವದಕ್ಕೆ ಯೋಚಿಸಿದ ಪ್ರಕಾರ ಅವನಿಗೆ ಮಾಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.Then shall ye do unto him, as he had thought to have done unto his brother: so shalt thou put the evil away from among you.
20ಉಳಿದವರು ಕೇಳಿ ಭಯಪಟ್ಟು ಆ ಕೆಟ್ಟಕೃತ್ಯವನ್ನು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಮಾಡುವದಿಲ್ಲ.And those which remain shall hear, and fear, and shall henceforth commit no more any such evil among you.
21ನಿನ್ನ ಕಣ್ಣು ಕರುಣಿಸಬಾರದು; ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಕೊಡಬೇಕು.And thine eye shall not pity; but life shall go for life, eye for eye, tooth for tooth, hand for hand, foot for foot.