1ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿಗೈಯಿರಿ.Sing aloud unto God our strength: make a joyful noise unto the God of Jacob.
2ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ.Take a psalm, and bring hither the timbrel, the pleasant harp with the psaltery.
3ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ.Blow up the trumpet in the new moon, in the time appointed, on our solemn feast day.
4ಅದು ಇಸ್ರಾಯೇಲಿಗೆ ಕಟ್ಟಳೆಯೇ; ಯಾಕೋಬನ ದೇವರ ನ್ಯಾಯಪ್ರಮಾಣವೇ;For this was a statute for Israel, and a law of the God of Jacob.
5ನಾನು ತಿಳಿಯದ ಭಾಷೆಯನ್ನು ಕೇಳಿದ ಐಗುಪ್ತದೇಶದಲ್ಲೆಲ್ಲಾ ಆತನು ಹೊರಟಾಗ ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು.This he ordained in Joseph for a testimony, when he went out through the land of Egypt: where I heard a language that I understood not.
6ಅವನ ಹೆಗಲಿನಿಂದ ಹೊರೆಯನ್ನು ತೊಲಗಿಸಿದನು; ಅವನ ಕೈಗಳು ಪುಟ್ಟಿಗಳಿಂದ ಬಿಡುಗಡೆ ಹೊಂದಿದವು.I removed his shoulder from the burden: his hands were delivered from the pots.
7ಇಕ್ಕಟ್ಟಿನಲ್ಲಿ ಕರೆದಿ; ಆಗ ನಾನು ನಿನ್ನನ್ನು ತಪ್ಪಿಸಿಬಿಟ್ಟೆನು; ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟು ಮೆರಿಬಾ ನೀರುಗಳ ಬಳಿಯಲ್ಲಿ ನಿನ್ನನ್ನು ಶೋಧಿಸಿದೆನು ಸೆಲಾ.Thou calledst in trouble, and I delivered thee; I answered thee in the secret place of thunder: I proved thee at the waters of Meribah. Selah.
8ಓ ನನ್ನ ಜನರೇ, ಕೇಳಿರಿ; ಓ ಇಸ್ರಾಯೇಲೇ, ನೀನು ನನ್ನನ್ನು ಕೇಳಿದರೆ ನಾನು ನಿನಗೆ ಸಾಕ್ಷಿ ಕೊಡು ವೆನು.Hear, O my people, and I will testify unto thee: O Israel, if thou wilt hearken unto me;
9ನಿನ್ನಲ್ಲಿ ಅನ್ಯದೇವರು ಇರಬಾರದು; ಪರ ದೇವರಿಗೆ ಅಡ್ಡಬೀಳಬಾರದು.There shall no strange god be in thee; neither shalt thou worship any strange god.
10ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.I am the LORD thy God, which brought thee out of the land of Egypt: open thy mouth wide, and I will fill it.
11ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.But my people would not hearken to my voice; and Israel would none of me.
12ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.So I gave them up unto their own hearts' lust: and they walked in their own counsels.
13ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,Oh that my people had hearkened unto me, and Israel had walked in my ways!
14ತೀವ್ರವಾಗಿ ಅವರ ಶತ್ರುಗಳನ್ನು ಅಣಗಿಸುವೆನು; ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.I should soon have subdued their enemies, and turned my hand against their adversaries.
15ಕರ್ತನನ್ನು ಹಗೆಮಾಡುವವರು ಆತನಿಗೆ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಿದ್ದರೆ ಅವರ ಕಾಲವು ಎಂದೆಂದಿಗೂ ಇರುತ್ತಿತ್ತು.The haters of the LORD should have submitted themselves unto him: but their time should have endured for ever.
16ಇದಲ್ಲದೆ ಆತನು ಉತ್ತಮವಾದ ಗೋಧಿ ಯಿಂದ ಅವರಿಗೆ ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವನು.He should have fed them also with the finest of the wheat: and with honey out of the rock should I have satisfied thee.