Genesis 40 - BBE (Kannada)
1 Now after these things the chief servant who had the care of the wine, and the chief bread-maker in Pharaoh's house, did something against Pharaoh's orders;ಇವುಗಳಾದ ಮೇಲೆ ಐಗುಪ್ತದ ಅರಸನ ಪಾನದಾಯಕನೂ ರೊಟ್ಟಿಗಾರನೂ ಐಗು ಪ್ತದ ಅರಸನಾದ ತಮ್ಮ ಪ್ರಭುವಿಗೆ ಅಪರಾಧ ಮಾಡಿದರು.
2 And Pharaoh was angry with his two servants, with the chief wine-servant and the chief bread-maker;ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿ ಕೊಂಡು
3 And he put them in prison under the care of the captain of the army, in the same prison where Joseph himself was shut up.ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಸಲ್ಪಟ್ಟ ಸ್ಥಳವಾಗಿತ್ತು.
4 And the captain put them in Joseph's care, and he did what was needed for them; and they were kept in prison for some time.ಮೈಗಾವಲಿನ ಅಧಿ ಪತಿಯು ಅವರನ್ನು ನೋಡಿಕೊಳ್ಳುವದಕ್ಕೆ ಯೋಸೇಫ ನನ್ನು ನೇಮಿಸಿದ್ದರಿಂದ ಅವನು ಅವರಿಗೆ ಸೇವೆಮಾಡು ತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು.
5 And these two had a dream on the same night; the chief wine-servant and the chief bread-maker of the king of Egypt, who were in prison, the two of them had dreams with a special sense.ಅವರಿಬ್ಬರಿಗೂ ಅಂದರೆ ಐಗುಪ್ತದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ ರೊಟ್ಟಿ ಗಾರನಿಗೂ ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿನ ಪ್ರಕಾರ ಅರ್ಥವಿತ್ತು.
6 And in the morning when Joseph came to them he saw that they were looking sad.ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ ಇಗೋ, ಅವರು ವ್ಯಸನವುಳ್ಳವರಾಗಿದ್ದರು.
7 And he said to the servants of Pharaoh who were in prison with him, Why are you looking so sad?ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು--ನಿಮ್ಮ ಮುಖಗಳು ಇಂದು ವ್ಯಸನವುಳ್ಳವುಗಳಾಗಿರುವದು ಯಾಕೆ ಎಂದು ಕೇಳಿದನು.
8 Then they said to him, We have had a dream, and no one is able to give us the sense. And Joseph said, Does not the sense of dreams come from God? what was your dream?ಅವರು ಯೋಸೇಫನಿಗೆ--ನಾವು ಕನಸನ್ನು ಕಂಡಿದ್ದೇವೆ; ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ ಅಂದರು. ಯೋಸೇಫನು ಅವರಿಗೆ ಅರ್ಥ ಹೇಳುವದು ದೇವರದಲ್ಲವೋ ಎಂದು ಹೇಳಿ ಅವುಗಳನ್ನು ನನಗೆ ಹೇಳಿರಿ ಅಂದನು.
9 Then the chief wine-servant gave Joseph an account of his dream, and said, In my dream I saw a vine before me;ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುವವನಾಗಿ ಅವನಿಗೆ--ನನ್ನ ಕನಸಿನಲ್ಲಿ ಇಗೋ, ನನ್ನ ಮುಂದೆ ಒಂದು ದ್ರಾಕ್ಷೇ ಬಳ್ಳಿಯಿತ್ತು.
10 And on the vine were three branches; and it seemed as if it put out buds and flowers, and from them came grapes ready for cutting.ಆ ದ್ರಾಕ್ಷೇ ಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ ಹೂವು ಅರಳಿ ಅದರ ಗೊಂಚಲುಗಳು ಹಣ್ಣಾದವು.
11 And Pharaoh's cup was in my hand, and I took the grapes and crushing them into Pharaoh's cup, gave the cup into Pharaoh's hand.ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ ನಾನು ಆ ದ್ರಾಕ್ಷೇ ಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು ಅಂದನು.
12 Then Joseph said, This is the sense of your dream: the three branches are three days;ಅದಕ್ಕೆ ಯೋಸೇಫನು--ಅದರ ಅರ್ಥ ಏನಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.
13 After three days Pharaoh will give you honour, and put you back into your place, and you will give him his cup as you did before, when you were his wine-servant.ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ಎತ್ತಿ ನಿನ್ನನ್ನು ತಿರಿಗಿ ನಿನ್ನ ಸ್ಥಳದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವಿ.
14 But keep me in mind when things go well for you, and be good to me and say a good word for me to Pharaoh and get me out of this prison:ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಸಿಕೊಂಡು ನನಗೆ ದಯೆತೋರಿಸಿ ಫರೋಹನ ಮುಂದೆ ನನ್ನ ವಿಷಯ ತಿಳಿಸಿ ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರಮಾಡಬೇಕು.
15 For truly I was taken by force from the land of the Hebrews; and I have done nothing for which I might be put in prison.ನಾನು ನಿಜವಾಗಿಯೂ ಇಬ್ರಿ ಯರ ದೇಶದೊಳಗಿಂದ ಕದಿಯಲ್ಪಟ್ಟೆನು. ಇಲ್ಲಿಯೂ ಸಹ ನನ್ನನ್ನು ಸೆರೆಯಲ್ಲಿ ಹಾಕುವದಕ್ಕೆ ನಾನು ಏನೂ ಮಾಡಲಿಲ್ಲ ಅಂದನು.
16 Now when the chief bread-maker saw that the first dream had a good sense, he said to Joseph, I had a dream; and in my dream there were three baskets of white bread on my head;ಯೋಸೇಫನು ಒಳ್ಳೇ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ನೋಡಿದಾಗ ಅವನು ಯೋಸೇಫನಿಗೆ--ನನ್ನ ಕನಸಿನಲ್ಲಿಯೂ ಇಗೋ, ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು;
17 And in the top basket were all sorts of cooked meats for Pharaoh; and the birds were taking them out of the baskets on my head.ಮೇಲಿನ ಪುಟ್ಟಿಯಲ್ಲಿ ಫರೋಹನಿ ಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊ ಳಗಿಂದ ಪಕ್ಷಿಗಳು ಅದನ್ನು ತಿಂದವು ಅಂದನು.
18 Then Joseph said, This is the sense of your dream: the three baskets are three days;ಅದಕ್ಕೆ ಯೋಸೇಫನು ಪ್ರತ್ಯುತ್ತರವಾಗಿ--ಅದರ ಅರ್ಥವು ಇದೇ--ಆ ಮೂರು ಪುಟ್ಟಿಗಳು ಮೂರು ದಿನಗಳು.
19 After three days Pharaoh will take you out of prison, hanging you on a tree, so that your flesh will be food for birds.ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ ನಿನ್ನನ್ನು ಮರದ ಮೇಲೆ ತೂಗಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವವು ಅಂದನು.
20 Now the third day was Pharaoh's birthday, and he gave a feast for all his servants; and he gave honour to the chief wine-servant and the chief bread-maker among the others.ಮೂರನೆಯ ದಿನದಲ್ಲಿ ಫರೋಹನ ಜನನದ ದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯ ರೊಟ್ಟಿಗಾರನನ್ನೂ ತನ್ನ ಸೇವಕರ ಮುಂದೆ ನಿಲ್ಲಿಸಿದನು.
21 And he put the chief wine-servant back in his old place; and he gave the cup into Pharaoh's hand.ಯೋಸೇಫನು ಅವರಿಗೆ ಅವರ ಕನಸಿನ ಅರ್ಥ ಹೇಳಿದಂತೆ ಮುಖ್ಯಪಾನದಾಯಕನನ್ನು ತಿರಿಗಿ ಉದ್ಯೋಗದಲ್ಲಿ ಇರಿಸಿದ್ದರಿಂದ ಅವನು ಫರೋ ಹನ ಕೈಗೆ ಪಾತ್ರೆಯನ್ನು ಕೊಡುವವನಾದನು.
22 But the chief bread-maker was put to death by hanging, as Joseph had said.ಆದರೆ ಮುಖ್ಯ ರೊಟ್ಟಿಗಾರನನ್ನು ತೂಗಹಾಕಿಸಿದನು.
23 But the wine-servant did not keep Joseph in mind or give a thought to him.ಆದಾ ಗ್ಯೂ ಪಾನದಾಯಕಾರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.
Kannada Bible